Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ತಲುಪುವ ಬಗೆ

ತಲುಪುವ ಬಗೆ

ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬಸ್ಸುಗಳು ಎಲ್ಲಾ ನೆರೆಯ ನಗರಗಳಿಂದ ಶಿರಡಿಗೆ ಸಂಪರ್ಕ ಹೊಂದಿದೆ. ನೀವು ಆಯ್ಕೆ ಮಾಡುವ ಬಸ್ ಪ್ರಕಾರದ ಆಧಾರದಲ್ಲಿ ಅಂದಾಜು ಶುಲ್ಕದ ವಿವರ ಒಬ್ಬರಿಗೆ Rs.200 ನಿಂದ Rs.400 ಇರುತ್ತದೆ. ಮುಂಬೈ, ಪುಣೆ, ನಾಶಿಕ್ ಮತ್ತು ಹಲವಾರು ಪ್ರಮುಖ ನಗರಗಳಿಂದ ಖಾಸಗಿ ಐಷಾರಾಮಿ ಮತ್ತು ಡೀಲಕ್ಸ್ ಬಸ್ಸುಗಳನ್ನು ಬಳಸಿ ಶಿರಡಿಗೆ ತಲುಪಬಹುದು. ರಾಜ್ಯ ಸಾರಿಗೆ ಸಂಸ್ಥೆ ಮತ್ತು ಖಾಸಗಿ ನಿರ್ವಾಹಕರು ಮುಂಬೈ ನಿಂದ ಶಿರಡಿ ಗೆ ಕೋಚ್ ಗಳನ್ನು ಆಯೋಜಿಸುತ್ತಾರೆ. ರಾಜ್ಯ ಸಾರಿಗೆ ಬಸ್ಸುಗಳು ಸಹ ನಾಶಿಕ್, ಅಹ್ಮದ್ ನಗರ, ಔರಂಗಾಬಾದ್, ಪುಣೆ ಮತ್ತು ಕೋಪರ್ಗಾಂವ್ ನಿಂದ ಸತತವಾಗಿ ಸಂಚರಿಸುತ್ತವೆ. ಟ್ಯಾಕ್ಸಿಗಳು ಮುಂಬೈ ನಿಂದ ಶಿರಡಿಗೆ ಲಭ್ಯವಿದ್ದು ರೂ 6000 ವೆಚ್ಚ ತಗಲುತ್ತದೆ. ರಸ್ತೆ ಮೂಲಕ ಮುಂಬೈ ನಿಂದ ಶಿರಡಿಯು 296 ಕಿ.ಮೀ ನಷ್ಟು ದೂರದಲ್ಲಿದೆ ಮತ್ತು ನಾಶಿಕ್ ನಿಂದ ಶಿರಡಿಯು 112 ಕಿ.ಮೀ ದೂರದಲ್ಲಿದೆ. ಶಿರಡಿಯಿಂದ ಪುಣೆಯು183 ಕಿ.ಮೀ ಅಂತರದಲ್ಲಿದ್ದು ಅದೇ ಔರಂಗಾಬಾದ್ ನಿಂದ ಶಿರಡಿಯ ದೂರ 126 ಕಿ.ಮೀ.