Search
  • Follow NativePlanet
Share
» »ಇಲ್ಲೆಲ್ಲಾ ಇಡ್ಲಿ ಸಖತ್ ಫೇಮಸ್

ಇಲ್ಲೆಲ್ಲಾ ಇಡ್ಲಿ ಸಖತ್ ಫೇಮಸ್

ದಕ್ಷಿಣ ಭಾರತದ ಮನೆಗಳಲ್ಲಿ ಇಡ್ಲಿ ಬೆಳಗ್ಗಿನ ಉಪಹಾರದ ಪ್ರಧಾನ ಭಕ್ಷ್ಯವಾಗಿದೆ. ಇದು ಸರಳ, ಟೇಸ್ಟಿ ಮತ್ತು ಆರೋಗ್ಯಕರವಾದ ಒಂದು ತಿನಿಸಾಗಿದೆ. ದಕ್ಷಿಣ ಭಾರತದ ಮನೆಗಳಲ್ಲಷ್ಟೇ ಅಲ್ಲ ಹೋಟೇಲ್‌ಗಳಲ್ಲಿ, ಟಿಫಿನ್ ಸೆಂಟರ್‌ಗಳಲ್ಲಿ ಇಡ್ಲಿ- ಸಾಂಬಾರ್‌ ಅಂದ್ರೆ ಫೇಮಸ್‌. ಇಡ್ಲಿ-ಸಾಂಬಾರ್ ಮುಂದೆ ಬೇರೆ ಯಾವುದೇ ತಿಂಡಿ ನಿಲ್ಲೋದಿಲ್ಲ. ಹೊಟ್ಟೆ ತುಂಬುವಂತಹ ತಿಂಡಿ ಇದಾಗಿದೆ. ಇಡ್ಲಿ, ಸಾಂಬಾರ್‌, ಚಟ್ನಿಗೆ ಬೇರೆ ಸಾಟಿನೇ ಇಲ್ಲ ಎನ್ನಬಹುದು.

 ದಕ್ಷಿಣ ಭಾರತದಲ್ಲಿ ಫೇಮಸ್ ಇಡ್ಲಿ

ದಕ್ಷಿಣ ಭಾರತದಲ್ಲಿ ಫೇಮಸ್ ಇಡ್ಲಿ

ಇನ್ನು ಇಡ್ಲಿಗಳಲ್ಲಿ ಅನೇಕ ವಿಧಗಳನ್ನು ಕಾಣಬಹುದು. ಭಾರತದ ವಿವಿಧ ಭಾಗಗಳಲ್ಲಿ ಇಡ್ಲಿಯನ್ನು ಮಾಡಲಾಗುತ್ತದೆ. ಆದರೂ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುಷ್ಟು ಬೇರೆ ಯಾವ ಭಾಗದಲ್ಲೂ ಇಡ್ಲಿ ಫೇಮಸ್ ಆಗಿಲ್ಲ. ಇಡ್ಲಿಗಾಗಿಯೇ ಹೆಚ್ಚು ಪ್ರಸಿದ್ಧವಾದ ಕೆಲವು ಅತ್ಯುತ್ತಮ ಸ್ಥಳಗಳಿವೆ. ಅಂತಹ ಇಡ್ಲಿಗಳನ್ನು ಸವಿಯಬೇಕಾದ್ರೆ ನೀವೂ ಕೂಡಾ ಆ ಸ್ಥಳಗಳಿಗೇ ಹೋಗಬೇಕು.
ಈ ಇಡ್ಲಿಯ ಕುರಿತಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಜನರಿಗೆ ಚರ್ಚೆಗಳು ನಡೆಯುತ್ತಲೇ ಇವೆ. ಕನ್ನಡಿಗರು ಇಡ್ಲಿ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದು ಎಂದರೆ, ತಮಿಳಿಗರು ತಮಿಳುನಾಡಿನಲ್ಲಿ ಹುಟ್ಟಿಕೊಂಡಿದ್ದು ಎನ್ನುತ್ತಾರೆ.

ತಟ್ಟೆ ಇಡ್ಲಿ , ಬಿಡದಿ, ತುಮಕೂರು

ತಟ್ಟೆ ಇಡ್ಲಿ , ಬಿಡದಿ, ತುಮಕೂರು

ತಟ್ಟೆ ಇಡ್ಲಿಯನ್ನು ಪ್ಲೇಟ್ ಇಡ್ಲಿ ಎಂದೂ ಕರೆಯುತ್ತಾರೆ. ಇದು ಗಾತ್ರದಲ್ಲಿ ದೊಡ್ಡದಾಗಿರುತ್ತದೆ ಮತ್ತು ಸಣ್ಣ ಪ್ಲೇಟ್‌ನ ಗಾತ್ರದಲ್ಲಿರುತ್ತದೆ. ಸಾಮಾನ್ಯವಾಗಿ ಇಡ್ಲಿ ಸಣ್ಣದಾಗಿರುತ್ತದೆ. ಆದರೆ ಈ ತಟ್ಟೆ ಇಡ್ಲಿ ಮಾತ್ರ ದೊಡ್ಡದಾಗಿರುತ್ತದೆ. ಬಿಡದಿ ಹಾಗೂ ತುಮಕೂರು ತಟ್ಟೆ ಇಡ್ಲಿಗೆ ಬಹಳ ಪ್ರಸಿದ್ಧವಾಗಿವೆ. ಬಿಡದಿ ರಸ್ತೆಗಳಲ್ಲಿ ಪ್ರಯಾಣಿಸುವವರು ತಮ್ಮ ವಾಹನವನ್ನು ನಿಲ್ಲಿಸಿ ತಟ್ಟೆ ಇಡ್ಲಿಯನ್ನು ಸವಿಯುವವರೇ ಹೆಚ್ಚು.

ಚೆಟ್ಟಿನಾಡ್‌ ಇಡ್ಲಿ

ಚೆಟ್ಟಿನಾಡ್‌ ಇಡ್ಲಿ

ಈ ಇಡ್ಲಿ ಬಹಳ ಮೃದುವಾಗಿರುತ್ತದೆ. ಇದು ಚೆನ್ನೈನ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ನೀವು ಈ ಇಡ್ಲಿಯನ್ನು ಕಾಣಬಹುದು. ಪ್ರತಿಯೊಂದು ಇಡ್ಲಿಗೂ ಅದಕ್ಕೆ ಹಾಕುವ ಅಕ್ಕಿ ಹಾಗೂ ಉದ್ದಿನ ಬೇಳೆಯ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಚೆಟ್ಟಿನಾಡ್‌ ಇಡ್ಲಿ ತಮಿಳುನಾಡಿನಾದ್ಯಂತ ಕಾಣ ಸಿಗುತ್ತದೆ. ಇದರೊಂದಿಗೆ ಸಾಂಬಾರ್ ಅಥವಾ ಕೋಳಿ ಪದಾರ್ಥ ಸವಿಯಲು ಸೂಪರ್ ಆಗಿರುತ್ತದೆ.

ರಾಮಸ್ಸೆರಿ ಇಡ್ಲಿ, ಪಾಲಕ್ಕಾಡ್‌

ರಾಮಸ್ಸೆರಿ ಇಡ್ಲಿ, ಪಾಲಕ್ಕಾಡ್‌

ರಾಮಸ್ಸೆರಿ ಎಂಬುದು ಪಾಲಕ್ಕಾಡ್‌ನ ಒಂದು ಹಳ್ಳಿಯಾಗಿದ್ದು, ಇದು ವಿಶಿಷ್ಟವಾದ ಇಡ್ಲಿಗೆ ಜನಪ್ರಿಯವಾಗಿದೆ. ರಾಮಸ್ಸೆರಿ ಇಡ್ಲಿಯ ಸಾಂಪ್ರದಾಯಿಕ ಪಾಕವಿಧಾನ ಕಾಂಚೀಪುರಂನಿಂದ ಹುಟ್ಟಿಕೊಂಡಿತು ಎನ್ನಲಾಗುತ್ತದೆ. ವಲಸಿಗರು ಪಾಲಕ್ಕಾಡ್‌ನಲ್ಲಿ ವ್ಯವಹಾರ ನಡೆಸಿದ ಕಾರಣ ಇದು ಇಲ್ಲಿ ಪ್ರಸಿದ್ಧವಾಯಿತು . ಇಂದು ಕೆಲವು ಕುಟುಂಬಗಳು ಮಾತ್ರ ಈ ಸಾಂಪ್ರದಾಯಿಕ ರಾಮಸ್ಸೆರಿ ಇಡ್ಲಿಯನ್ನು ತಯಾರಿಸುವ ಕೌಶಲವನ್ನು ಹೊಂದಿವೆ.

ರವಾ ಇಡ್ಲಿ , ಬೆಂಗಳೂರು

ರವಾ ಇಡ್ಲಿ , ಬೆಂಗಳೂರು

ಮಾವಲ್ಲಿ ಟಿಫಿನ್ ರೂಮ್ಸ್ (MTR) ಅನ್ನು ರವಾ ಇಡ್ಲಿ ಸಂಶೋಧಕರು ಎಂದು ಹೇಳಲಾಗುತ್ತದೆ. ಈ ಇಡ್ಲಿ ಅನ್ನು ರವೆಯಿಂದ ತಯಾರಿಸಲಾಗುತ್ತದೆ. ರವಾ ಇಡ್ಲಿಯನ್ನು ಸಾಗು ಮತ್ತು ತೆಂಗಿನಕಾಯಿ ಚಟ್ನಿಗಳೊಂದಿಗೆ ಸೇವಿಸಲಾಗುತ್ತದೆ. ಎಂಟಿಆರ್‌ನ ರವಾ ಇಡ್ಲಿಯನ್ನು ನೀವು ಇನ್ನೂ ಸವಿಯದಿದ್ದರೆ, ಈಗಲೇ ಟೇಸ್ಟ್ ಮಾಡಿ ನೋಡಿ. ಈಗಂತೂ ಹೆಚ್ಚಿನ ಮನೆಯಲ್ಲಿ ಈ ರವಾ ಇಡ್ಲಿಯನ್ನು ಮಾಡುತ್ತಾರೆ. ತಯಾರಿಸಲು ಬಹಳ ಸುಲಭವಾಗಿದೆ ಜೊತೆಗೆ ರುಚಿಕರವೂ ಆಗಿದೆ.

ಸ್ಪಂಜು ಇಡ್ಲಿ, ಗೋವಾ

ಸ್ಪಂಜು ಇಡ್ಲಿ, ಗೋವಾ

ಸಣ್ಣ ಇಡ್ಲಿಯು ಕರ್ನಾಟಕ, ಗೋವಾದ ಕರಾವಳಿ ಭಾಗದಲ್ಲಿ ಬಹಳ ಫೇಮಸ್. ಇದೊಂದು ಸಣ್ಣ ಬಿಳಿಯ ಸ್ಪಂಜು ರೀತಿ ಇರುತ್ತದೆ. ಇದನ್ನು ಮಟನ್ ಕರಿ ಜೊತೆ ಸೇವಿಸಲು ಸೂಪರ್ ಆಗಿರುತ್ತದೆ. ಮಂಗಳೂರು ಕ್ಯಾಥೋಲಿಕ್ ಪಾಕಪದ್ಧತಿಯಲ್ಲಿಯೂ ಸಹ ಇದು ಪ್ರಸಿದ್ಧ ಭಕ್ಷ್ಯವಾಗಿದೆ. ಸಣ್ಣ ಇಡ್ಲಿಯು ಸಿಹಿಯನ್ನೂ ಹೊಂದಿರುತ್ತದೆ.

ಕಾಂಚೀಪುರಂ ಇಡ್ಲಿ

ಕಾಂಚೀಪುರಂ ಇಡ್ಲಿ

ಕಾಂಚೀಪುರಂ ಇಡ್ಲಿ ಮೂಲ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿದೆ.. ಈ ದೇವಾಲಯ ಪಟ್ಟಣದಲ್ಲಿರುವ ವರದರಾಜಸ್ವಾಮಿ ದೇವಸ್ಥಾನದಲ್ಲಿ ನಾವು ಅದರ ಮೂಲವನ್ನು ಪತ್ತೆ ಹಚ್ಚಬಹುದು, ಅದು ಇನ್ನೂ 'ದೇವಸ್ಥಾನ ಪ್ರಸಾದ ಆಗಿದೆ. ಇದು ಮೆಣಸು, ಜೀರಾ, ಶುಂಠಿ, ಇತ್ಯಾದಿಗಳನ್ನು ಒಳಗೊಂಡಿರುವ ಕಾರಣ ಅವುಗಳು ಮಸಾಲೆಯುಕ್ತವಾಗಿವೆ. ಆದ್ದರಿಂದ ನೀವು ಕಾಂಚೀಪುರಂಗೆ ಭೇಟಿ ನೀಡಿದಾಗ ಕೇವಲ ಸೀರೆ ಶಾಪಿಂಗ್ ಮಾಡುವುದಲ್ಲ ಅಲ್ಲಿನ ರುಚಿಯಾದ ಇಡ್ಲಿಯ ರುಚಿ ನೋಡುಲೇ ಬೇಕು.

ಮಲ್ಲಿಗೆ ಇಡ್ಲಿ, ಮೈಸೂರು

ಮಲ್ಲಿಗೆ ಇಡ್ಲಿ, ಮೈಸೂರು

ಮಲ್ಲಿಗೆ ಇಡ್ಲಿ ಅಕ್ಷರಶಃ 'ಜಾಸ್ಮಿನ್ ಇಡ್ಲಿ' ಎಂದು ಭಾಷಾಂತರಿಸಲಾಗುತ್ತದೆ. ಈ ಇಡ್ಲಿ ಮಲ್ಲಿಗೆಯಂತೆ ಮೃದುವಾಗಿದ್ದು, ಒಳ್ಳೆಯ ಪರಿಮಳವನ್ನು ಹೊಂದಿದೆ ಎಂದರ್ಥ. ಇದು ತಮಿಳುನಾಡಿನಲ್ಲಿ ಖುಷ್ಬೊ ಇಡ್ಲಿಗಳಂತೆಯೇ ಇದೆ. ಮೈಸೂರು, 'ಮಲ್ಲಿಗೆ ಇಡ್ಲಿ' ರುಚಿಗೆ ಉತ್ತಮ ಸ್ಥಳವೆಂದು ಹೆಸರುವಾಸಿಯಾಗಿದೆ. ಹಾಗಾಗಿ ಮೈಸೂರಿಗೆ ಹೋದಾಗ ನೀವು ಮಲ್ಲಿಗೆ ಇಡ್ಲಿಯನ್ನು ತಿನ್ನೋದನ್ನು ಮರೆಯದಿರಿ.

ಮೂಡೆ ಇಡ್ಲಿ, ಮಂಗಳೂರು

ಮೂಡೆ ಇಡ್ಲಿ, ಮಂಗಳೂರು

ಇದೊಂದು ರೀತಿಯ ವಿಭಿನ್ನ ಇಡ್ಲಿಯ ಕೆಟಗರಿಗೆ ಸೇರುತ್ತದೆ. ಇದನ್ನು ಮಂಗಳೂರು ಕಡೆಯಲ್ಲಿ ಮೂಡೆ ಎನ್ನುತ್ತಾರೆ. ಬಾಳೆಯ ಎಲೆಯಿಂದ ಈ ಇಡ್ಲಿಯನ್ನು ತಯಾರಿಸುತ್ತಾರೆ. ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ಪ್ರತಿಯೊಂfದು ಮನೆಯಲ್ಲಿ ಈ ಇಡ್ಲಿಯನ್ನು ತಯಾರಿಸುತ್ತಾರೆ. ಉದ್ದನೆ ಇರುತ್ತದೆ. ಅದನ್ನು ಕತ್ತರಿಸಿ ಸರ್ವ್ ಮಾಡಬೇಕು. ಮಂಗಳೂರಿನ ಎಲ್ಲಾ ಹೋಟೇಲ್‌ಗಳಲ್ಲಿ ಇದು ಲಭ್ಯವಿರುತ್ತದೆ.

ಎಂಡ್ಯೂರಿ ಪೀತ, ಒಡಿಶಾ

ಎಂಡ್ಯೂರಿ ಪೀತ, ಒಡಿಶಾ

ಎಂಡ್ಯೂರಿ ಪೀತವು ಹೆಚ್ಚಾಗಿ ಒಡಿಶಾದಲ್ಲಿ ಉತ್ತರ ಮತ್ತು ಮಧ್ಯ ಭಾಗದಲ್ಲಿ ತಯಾರಿಸಲಾಗುವ ವೈವಿಧ್ಯಮಯ ಆಹಾರವಾಗಿದೆ. ಈ ಆಹಾರವನ್ನು ಅರಿಶಿನ ಎಲೆಗಳು, ಅಕ್ಕಿ ಹಿಟ್ಟು,.ಕರಿ ಮೆಣಸು. ತೆಂಗಿನಕಾಯಿಯಿಂದ ತಯಾರಿಸಲಾಗುತ್ತದೆ. ನಿಮಗೆ ಸಿಹಿ ಬೇಕಾದರೆ ಬೆಲ್ಲ ಬಳಸಿ ತಯಾರಿಸಲಾಗುತ್ತದೆ ಒಡಿಶಾದಲ್ಲಿ ತಯಾರಿಸಲಾಗುವ ಇದನ್ನು ಪ್ರತಮಾಷ್ಠಮಿ ಸಮಯದಲ್ಲಿ ತಯಾರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X