Search
  • Follow NativePlanet
Share
» »ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸೌಂದರ್ಯ

ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸೌಂದರ್ಯ

By Vijay

ಮ್ಯಾಂಗ್ರೋವ್ ಗಿಡಗಳು ಉಷ್ಣವಲಯದ ಪೊದೆಗಳಾಗಿವೆ. ಇವು ಸಾಮಾನ್ಯವಾಗಿ ಕೆಸರು ಪ್ರದೇಶಗಳಲ್ಲಿ ಭೂಮಿಯ ಮೇಲಿನ ಭಾಗದಲ್ಲಿ ದಟ್ಟವಾಗಿ ಹರಡಿದ ಬೇರುಗಳಿಂದ ಕೂಡಿರುವ ಗಿಡಗಳಾಗಿವೆ. ಮ್ಯಾಂಗ್ರೋವ್ ಕಾಡುಗಳು ಇತರ ಕಾಡಿನಂತೆ ಎಲ್ಲೆಅಂದರಲ್ಲಿ ಕಂಡುಬರುವುದಿಲ್ಲವಾದ್ದರಿಂದ ವಿಶೇಷ ರೀತಿಯ ಆಸಕ್ತಿಯನ್ನು ಇವು ಕೆರಳಿಸುತ್ತವೆ.

ವಿಶೇಷ ಲೇಖನ : ಸುಂದರ್ ಬನ್ಸ್ ಮ್ಯಾಂಗ್ರೋವ್

ಭಾರತದಲ್ಲೆ ಬೆರಳಣಿಕೆಯಷ್ಟು ಮಾತ್ರವೆ ಮ್ಯಾಂಗ್ರೋವ್ ಕಾಡುಗಳನ್ನು ನೋಡಬಹುದಾಗಿದೆ. ಅವುಗಳಲ್ಲಿ ತಮಿಳುನಾಡಿನ ಚಿದಂಬರಂ ಪಟ್ಟಣದ ಬಳಿಯಿರುವ ಪಿಚಾವರಂ ಮ್ಯಾಂಗ್ರೋವ್ ಕಾಡು ಕೂಡ ಒಂದು. ಈ ಪ್ರದೇಶವು ಸುಂದರವಾದ ಮ್ಯಾಂಗ್ರೋವ್ ಗಿಡಗಳು, ಶುದ್ಧ ಕಲ್ಮಶರಹಿತ ಪರಿಸರ, ಶಾಂತಮಯ ನೀರು ಹಾಗೂ ವಿವಿಧ ಹಕ್ಕಿಗಳಿಂದಾಗಿ ಪ್ರಸಿದ್ಧವಾಗಿದೆ.

ವಿಶೇಷ ಲೇಖನ : ಚಿದಂಬರ ರಹಸ್ಯದ ಚಿದಂಬರಂ

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಬಂಗಾಳ ಕೊಲ್ಲಿ ಸಮುದ್ರಕ್ಕಂಟಿಕೊಂಡಂತಿರುವ ಪಿಚಾವರಂ ಮ್ಯಾಂಗ್ರೋವ್ ಕಾಡು ಜಗತ್ತಿನ ಎರಡನೆಯ ದೊಡ್ಡ ಈ ರೀತಿಯ ಕಾಡಾಗಿದೆ ಎಂಬುದು ನಾವು ಹೆಮ್ಮೆ ಪಡಬೇಕಾದ ವಿಚಾರವಾಗಿದೆ.

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಕಾಡು ಉತ್ತರದಲ್ಲಿ ವೆಲ್ಲಾರ್ ಹಾಗೂ ದಕ್ಷಿಣದಲ್ಲಿ ಕೊಲೆರೂನ್ ಎಂಬ ಎರಡು ನದಿ ಮುಖಜ ಭೂಮಿಗಳ ಮಧ್ಯೆ ಸ್ಥಿತವಿದೆ.

ಚಿತ್ರಕೃಪೆ: Nagarjun Kandukuru

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ವೆಲ್ಲಾರ್ ಮತ್ತು ಕೊಲೆರೂನ್ ನ ಜೌಗು ಪ್ರದೇಶಗಳು ಪಿಚಾವರಂ ಹಾಗೂ ಕಿಲ್ಲೈ ಹಿನ್ನೀರಿನ ಪ್ರದೇಶವನ್ನು ಸೃಷ್ಟಿಸಿವೆ. ಈ ಹಿನ್ನೀರಿನ ಪ್ರದೇಶವು ಕಾಯಾಕಿಂಗ್, ರೋವಿಂಗ್ ನಂತಹ ಅದ್ಭುತ ಜಲ ಕ್ರೀಡೆಗಳಿಗೆ ವಿಫುಲವಾದ ಅವಕಾಶವನ್ನು ಒದಗಿಸುತ್ತದೆ.

ಚಿತ್ರಕೃಪೆ: Vijay S

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಹಿನ್ನೀರು ಕೇವಲ ದೋಣಿ ಸವಾರಿಯ ಮಹದಾನಂದ ಕರುಣಿಸುವುದಲ್ಲದೆ, ನೀರಿನ ಮೆಲ್ಮೈ ಮೇಲೆ ರೂಪಗೊಂಡಂತಹ ಮ್ಯಾಂಗ್ರೋವ್ ಗಿಡಗಳ ಅದ್ಭುತ ಹಾಗೂ ಅಪರೂಪದ ದೃಶ್ಯಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ.

ಚಿತ್ರಕೃಪೆ: Ashwin Kumar

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಹಿನ್ನೀರು ಪ್ರದೇಶವು ಅಲ್ಲಲ್ಲಿ ನಡುಗಡ್ಡೆಗಳನ್ನು ಹೊಂದಿದ್ದು ಪ್ರತಿ ನಡುಗಡ್ಡೆಗಳು ಹಚ್ಚ ಹಸಿರಿನಿಂದ ಆವೃತವಾಗಿರುವುದನ್ನು ನೋಡುವುದೆ ಸಂತಸದ ಅನುಭವನ್ನುಂಟು ಮಾಡುತ್ತದೆ. ಅಲ್ಲದೆ ಬಂಗಾಳ ಕೊಲ್ಲಿ ಸಮುದ್ರದಿಂದ ಈ ಹಿನ್ನೀರು ಒಂದು ಮರಳಿನ ಪಟ್ಟಿಯಿಂದ ಬೇರ್ಪಟ್ಟಿದೆ.

ಚಿತ್ರಕೃಪೆ: Nagarjun Kandukuru

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಇಲ್ಲಿ ವಿಶಿಷ್ಟ ಬಗೆಯ ಮ್ಯಾಂಗ್ರೋವ್ ಗಿಡಗಳನ್ನು ಕಾಣಬಹುದಾಗಿದೆ. ಅಲ್ಲದೆ ಈ ರೀತಿಯ ವಿಶೇಷ ಗಿಡಗಳ ಬುಡಗಳಲ್ಲಿ ಕಂಡುಬರುವ ಚಿಕ್ಕ ಚಿಕ್ಕ ಬಣ್ಣ ಬಣ್ಣದ ಮೀನುಗಳಿಗು ಕೂಡ ಇದು ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Nagarjun Kandukuru

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಕೇವಲ ವಿಶಿಷ್ಟ ಜಲಚರಗಳಲ್ಲದೆ ಪಿಚಾವರಂ ಮ್ಯಾಂಗ್ರೋವ್ ಕಾಡು ವಲಸೆ ಬರುವ ಹಕ್ಕಿಗಳಿಗೂ ಸಹ ಆಶ್ರಯ ತಾಣವಾಗಿದೆ. ಪೆಲಿಕನ್, ಎಗ್ರೆಟ್, ಸ್ಪೂನ್ ಬಿಲ್, ಸ್ಟಾರ್ಕ್, ಹೆರಾನ್ಸ್ ನಂತಹ ಬಗೆ ಬಗೆಯ ಹಕ್ಕಿಗಳನ್ನು ಇಲ್ಲಿ ಕಾಣಬಹುದು. ಸೆಪ್ಟಂಬರ್ ನಿಂದ ಎಪ್ರಿಲ್ ವರೆಗಿನ ಸಮಯವು ಹಕ್ಕಿಗಳ ವೀಕ್ಷಣೆಗೆ ಪ್ರಶಸ್ತಮಯವಾಗಿರುತ್ತದೆ.

ಚಿತ್ರಕೃಪೆ: Srikrishna Narasimhan

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂಗೆ ತಲುಪಲು 15 ಕಿ.ಮೀ ದೂರದಲ್ಲಿರುವ ಚಿದಂಬರಂ ಹತ್ತಿರದ ಪ್ರಮುಖ ಪಟ್ಟಣವಾಗಿದೆ. ಇಲ್ಲಿಂದ ಪಿಚಾವರಂಗೆ ಬಾಡಿಗೆ ಟ್ಯಾಕ್ಸಿಗಳು ದೊರೆಯುತ್ತವೆ. ಇನ್ನು ಚಿದಂಬರಂ ಅನ್ನು ಬೆಂಗಳೂರು ಹಾಗೂ ಚೆನ್ನೈನಿಂದ ಸುಲಭವಾಗಿ ತಲುಪಬಹುದು.

ಚಿತ್ರಕೃಪೆ: Nagarjun Kandukuru

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಬೆಂಗಳೂರಿನಿಂದ 390 ಕಿ.ಮೀ ದೂರವಿರುವ ಚಿದಂಬರಂ, ಚೆನ್ನೈನಿಂದ 242 ಕಿ.ಮೀ ಗಳಷ್ಟು ದೂರವಿದೆ. ಚೆನ್ನೈನಿಂದ ಬಸ್ಸುಗಳು ಲಭ್ಯವಿದ್ದು ಬೆಂಗಳೂರಿನಿಂದ ಚಿದಂಬರಂಗೆ ತೆರಳಲು ರೈಲಿನ ವ್ಯವಸ್ಥೆಯಿದೆ.

ಚಿತ್ರಕೃಪೆ: Ashwin Kumar

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸಮ್ಮೋಹನಗೊಳಿಸುವ ಸೌಂದರ್ಯ.

ಚಿತ್ರಕೃಪೆ: Balaji.B

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸಮ್ಮೋಹನಗೊಳಿಸುವ ಸೌಂದರ್ಯ.

ಚಿತ್ರಕೃಪೆ: Ashwin Kumar

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಸೌಂದರ್ಯ:

ಪಿಚಾವರಂ ಮ್ಯಾಂಗ್ರೋವ್ ಕಾಡಿನ ಸಮ್ಮೋಹನಗೊಳಿಸುವ ಸೌಂದರ್ಯ.

ಚಿತ್ರಕೃಪೆ: Srikrishna Narasimhan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X