Search
  • Follow NativePlanet
Share
» »ಉದಕಮಂಡಲ : ಹರ್ಷ ತುಂಬುವ ಗಿರಿಧಾಮಗಳ ರಾಣಿ

ಉದಕಮಂಡಲ : ಹರ್ಷ ತುಂಬುವ ಗಿರಿಧಾಮಗಳ ರಾಣಿ

By Vijay

ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಸಾಕಷ್ಟು ಬೇರೆ ಬೇರೆ ಭಾಷೆಗಳ ಚಲನಚಿತ್ರಗಳು ಇದರ ಮನಮೋಹಕತೆಗೆ ತಲೆ ಬಾಗಿ ಇಲ್ಲಿ ಚಿತ್ರೀಕರಣಗೊಂಡಿವೆ. ಶಾಂತ ಪರಿಸರ, ಹಿತಕರವಾದ ವಾತಾವರಣ, ಪರಿಶುದ್ಧವಾದ ಗಾಳಿ, ತಾಜಾ ತನದ ಅನುಭವ ಎಲ್ಲವೂ ಇರುವ ಈ ಗಿರಿಧಾಮ ತಾಣವು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಮೂಲವಾಗಿ ಊಟಿ ಗಿರಿಧಾಮ ಪಟ್ಟಣವು ನೀಲಗಿರಿ ಜಿಲ್ಲೆಯಲ್ಲಿ ನೆಲೆಸಿದ್ದು ವಾಣಿಜ್ಯ ನಗರ ಕೋಯಮತ್ತೂರಿನ ಉತ್ತರಕ್ಕೆ ಸುಮಾರು 80 ಕಿ.ಮೀ ದೂರದಲ್ಲಿದೆ. ಪ್ರಸ್ತುತ ಊಟಿ ಪಟ್ಟಣದ ಆರ್ಥಿಕತೆಯು ಕ್ಷೇತ್ರದ ಪ್ರವಾಸೋದ್ಯಮ ಹಾಗು ಕೃಷಿಯ ಮೇಲೆ ಅವಲಂಬಿತವಾಗಿದೆ. ಅಲ್ಲದೆ ಭಾವಚಿತ್ರ ತಯಾರಿಕೆ ಹಾಗು ಔಷಧ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳಿ ಇಲ್ಲಿವೆ. ಊಟಿಯ ಕುರಿತು ಕೊಂಚ ಮಾಹಿತಿ ನಿಮಗಾಗಿ ಈ ಲೇಖನದ ಮೂಲಕ ತಿಳಿಸಲಾಗಿದೆ. ಸಮಯ ಸಿಕ್ಕಾಗ ಈ ತಾಣಕ್ಕೊಮ್ಮೆ ಖಂಡಿತವಾಗಿಯೂ ಭೇಟಿ ನೀಡಿ.

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಎಲ್ಲೆಡೆ ಹಸಿರು ಸಂಪತ್ತಿನಿಂದ ಕಂಗೊಳಿಸುವ ಊಟಿ ಪಟ್ಟಣದ ಒಂದು ಪಾಕ್ಷಿಕ ನೋಟ.

ಚಿತ್ರಕೃಪೆ: Ghost Particle

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಇದಕ್ಕೆ ಉದಕಮಂಡಲಂ ಎಂಬ ಹೆಸರು ಬಂದ ಹಿನ್ನಿಲೆಯು ಅಸ್ಪಷ್ಟವಾಗಿದೆ. ಆದರೆ ಹಿಂದೆ ಅಜ್ಞಾತ ವ್ಯಕ್ತಿಯೊಬ್ಬನಿಂದ 1821 ರಲ್ಲಿ ಮದ್ರಾಸ್ ಗ್ಯಾಜೇಟ್ ಗೆ ಬರೆಯಲಾದ ಪತ್ರದಲ್ಲಿ ಈ ತಾಣವನ್ನು ಕುರಿತು ಮೊದಲ ಬಾರಿ ವೊಟೊಕಿಮುಂಡ್ ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಹಿಂದೆ ಈ ತಾಣವನ್ನು ವೊಟೈಕಾಮುಂಡ್ ಎಂದು ಸಂಭೋದಿಸಲಾಗುತ್ತಿತ್ತು.

ಚಿತ್ರಕೃಪೆ: Hemant meena

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಇನ್ನೊಂದು ಮೂಲದ ಪ್ರಕಾರ, ಇದಕ್ಕೆ ಸ್ಥಳೀಯವಾಗಿ ಬಳಸಲ್ಪಡುತ್ತಿದ್ದ ಒತ್ತಕ್ಕಲ್ (ಅಂದರೆ ಒಂದೆ ಕಲ್ಲು ಎಂದರ್ಥ) ಎಂಬ ಹೆಸರಿನಿಂದ ಬಂದಿತೆನ್ನಲಾಗಿದೆ. ಇದಕ್ಕೆ ಕುರುಹಾಗಿ ಇಂದಿಗೂ ತೋಡರ್ ಜನಾಂಗದವರು ಪವಿತ್ರವಾದ ಒಂದೆ ಕಲ್ಲನ್ನು ಪೂಜಿಸುತ್ತಾರೆ.

ಚಿತ್ರಕೃಪೆ: irvin calicut

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ನಂತರ ಬ್ರಿಟೀಷ್ ಆಡಳಿತದಲ್ಲಿ ಇದನ್ನು ಉದಕಮಂಡಲಕ್ಕೆ ಬದಲಾಗಿ ಉಟಕಮುಂಡ್ ಎಂದು ಕರೆಯಲಾಯಿತು. ಕ್ರಮೇಣವಾಗಿ ಈ ಪದವೆ ಪ್ರಸ್ತುತ ಹೆಸರಾದ ಊಟಿ ಎಂದು ಸಂಭೋದಿಸಲ್ಪಡತೊಡಗಿತು.

ಚಿತ್ರಕೃಪೆ: irumge

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಭವ್ಯವಾದ ನೀಲಗಿರಿ ಬೆಟ್ಟಗಳ ದಟ್ಟವಾದ ಪ್ರದೇಶದಲ್ಲಿ ನೆಲೆಸಿರುವ ಊಟಿ ಗಿರಿಧಾಮವು ಒಂದು ಪ್ರಬುದ್ಧವಾದ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಬೆಟ್ಟಗಳು ನೀಲಿ ಬಣ್ಣದ ಪ್ರಭಾವಳಿಯನ್ನು ಹೊಂದಿರುವುದರಿಂದ ಇದನ್ನು ನೀಲಗಿರಿ ಎಂದು ಕರೆಯಲಾಗಿದೆ ಎಂದು ಹೇಳುತ್ತದೆ ಒಂದು ನಂಬಿಕೆ. ಈ ತಾಣವು ಪ್ರತಿ 12 ವರ್ಷಕ್ಕೊಮ್ಮೆ ಅರಳುವ ಕುರುಂಜಿ ಹೂ ಬಿಡುವ ಸಸ್ಯಗಳಿಂದ ಸಂಪದ್ಭರಿತವಾಗಿದೆ.

ಚಿತ್ರಕೃಪೆ: Ananth BS

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಈ ಕುರುಂಜಿ ಹೂವುಗಳು ನೀಲಿ ಬಣ್ಣದ್ದಾಗಿದ್ದು ಅರಳಿದಾಗ ಸುತ್ತಲ ಪ್ರದೇಶವು ನೀಲಮಯವಾಗಿ ಕಂಡುಬರುವುದರಿಂದ ಬಹುಶಃ ಈ ಬೆಟ್ಟಗಳನ್ನು ನೀಲಗಿರಿಗಳು ಎಂದು ಕರೆಯಲಾಗಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಪ್ರದೇಶವು ನೀಲ್ಗಿರಿ ಮರಗಳಿಂದ ತುಂಬಿದೆ.

ಚಿತ್ರಕೃಪೆ: Gauri Wur Sem

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ನೀಲಗಿರಿ ಪ್ರದೇಶವು ಮೊದಲಿಗೆ ಗಂಗರಿಂದ ಆಳಲ್ಪಡುತ್ತಿತ್ತು. ನಂತರ ಹನ್ನೊಂದನೇಯ ಶತಮಾನದಲ್ಲಿ ಹೊಯ್ಸಳರ ಕೈಸೇರಿತು. ಪ್ರಮುಖವಾಗಿ ಹೊಯ್ಸಳ ದೊರೆ ವಿಷ್ಣುವರ್ಧನನು ವಯನಾಡ್ ಸೇರಿದಂತೆ ಈ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ದನು. ಚಿತ್ರದಲ್ಲಿ ಕಾಣುತ್ತಿರುವುದು ದೊಡ್ಡ ಬೆಟ್ಟದ ತುದಿಯಿಂದ ಕಾಣುವ ರುದ್ರಮಯ ನೋಟ.

ಚಿತ್ರಕೃಪೆ: Edukeralam

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಪ್ರಸ್ತುತ ಊಟಿ ನಗರವನ್ನು ಸುರುಳಿಯಾಕಾರದ ರಸ್ತೆಗಳು ಇಲ್ಲವೆ ಸಂಕೀರ್ಣವಾದ ನೀಲಗಿರಿ ಮೌಂಟೇನ್ ರೈಲು ವ್ಯವಸ್ಥೆಯ ಮೂಲಕ ತಲುಪಬಹುದಾಗಿದೆ. ದಶಕಗಳ ಹಿಂದೆ ಚಾಲ್ತಿಯಲ್ಲಿದ್ದ ಉಗಿಬಂಡಿಯನ್ನು ಇಂದಿಗೂ ಕೂಡ ನೋಡಬಹುದಾಗಿದ್ದು ಇದರಲ್ಲಿ ಪಯಣಿಸುವ ಆನಂದವನ್ನು ಮೆಟ್ಟುಪಾಳ್ಯಂ ರೈಲು ನಿಲ್ದಾಣದಿಂದ ಪಡೆಯ ಬಹುದಾಗಿದೆ.

ಚಿತ್ರಕೃಪೆ: AHEMSLTD

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಮೊದಲಿಗೆ ರೈಲು ಸಂಚಾರವು 1899 ರಲ್ಲಿ ಮೆಟ್ಟುಪಾಳ್ಯಂ ನಿಂದ ಕುಣ್ಣೂರಿನ ವರೆಗೆ ಪ್ರಾರಂಭವಾಯಿತು. ನಂತರ 1903 ರಲ್ಲಿ ಭಾರತ ಸರ್ಕಾರವು ಈ ರೈಲು ಪಥವನ್ನು ಖರಿದಿಸಿ ಕುಣ್ಣೂರಿನಿಂದ ಊಟಿಯವರೆಗೆ ರೈಲು ಸಂಚಾರವನ್ನು ವಿಸ್ತರಿಸಲು ಪ್ರಾರಂಭಿಸಿತು. ಕೊನೆಗೆ 15 ಸೆಪ್ಟಂಬರ್ 1908 ರಲ್ಲಿ ಊಟಿಯವರೆಗಿನ ರೈಲು ಪ್ರಾರಂಭಗೊಂಡಿತು.

ಚಿತ್ರಕೃಪೆ: Stephan Niewolik

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಮೆಟ್ಟುಪಾಳ್ಯಂ ನಿಂದ ಊಟಿಯವೆರೆಗಿರುವ ದೂರ ಕೇವಲ 46 ಕಿ.ಮೀ ಆದರೂ ಸಹ ನೀಲಗಿರಿ ಮೌಂಟೇನ್ ಟಾಯ್ ಟ್ರೈನ್ ಮೂಲಕ ಸುಮಾರು ಐದು ಘಂಟೆಯಷ್ಟು ಸಮಯ ತಗಲುತ್ತದೆ. ಏಕೆಂದರೆ ಊಟಿಯು ಅತಿ ಎತ್ತರದ ಸ್ಥಳದಲ್ಲಿ ನೆಲೆಸಿರುವುದರಿಂದ ರೈಲು ಬೆಟ್ಟವನ್ನು ಏರುತ್ತಾ ಚಲಿಸಬೇಕಾಗುತ್ತದೆ. ವೇಗವು ಹೆಚ್ಚುಕಡಿಮೆ 12 ಕಿ.ಮೀ ಪ್ರತಿ ಘಂಟೆಯಷ್ಟಿರುತ್ತದೆ.

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಊಟಿಯು ಸಮಶೀತೋಷ್ಣದ ವಾತಾವರಣವನ್ನು ಹೊಂದಿದ್ದು, ಬೇಸಿಗೆಯಲ್ಲಿ ಹೆಚ್ಚು ಉಷ್ಣವಿರದೆ ಚಳಿಗಾಲದಲ್ಲಿ ಅತಿ ಹೆಚ್ಚು ಶೀತವಿರದೆ ಹಿತಕರವಾಗಿರುತ್ತದೆ.

ಚಿತ್ರಕೃಪೆ: ಚಿತ್ರಕೃಪೆ: Pankaj Dhande

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಆದರೆ ನಿರ್ದಿಷ್ಟವಾಗಿ ಜನವರಿ ಹಾಗು ಫೆಬ್ರುವರಿ ತಿಂಗಳುಗಳಲ್ಲಿ ರಾತ್ರಿ ಸಮಯವು ಅತಿ ಹೆಚ್ಚಾದ ಚಳಿಯನ್ನು ಹೊಂದಿರುತ್ತದೆ.

ಚಿತ್ರಕೃಪೆ: irvin calicut

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ವರ್ಷಪೂರ್ತಿ ಊಟಿಯಲ್ಲಿ ಒಂದೆ ತೆರನಾದ ಉಷ್ಣತೆಯನ್ನು ಕಾಣಬಹುದು. ಸಾಮಾನ್ಯವಾಗಿ ಇಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ 17 ರಿಂದ 20 ಡಿಗ್ರಿ ಸೆಲ್ಶಿಯಸ್ ಆಗಿದ್ದು ಕನಿಷ್ಠ ಉಷ್ಣಾಂಶ 5 ರಿಂದ 12 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ.

ಚಿತ್ರಕೃಪೆ: Rojypala

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಇಲ್ಲಿ ವಾಸಿಸುವ ಜನರಲ್ಲಿ ಹೆಚ್ಚಿನವರು ತೋಡರ್ ಬುಡಕ್ಜಟ್ಟು ಜನಾಂಗಕ್ಕೆ ಸೇರಿದವಾರಾಗಿದ್ದು ಹೆಚ್ಚಾಗಿ ಬಡಗ, ಪಾನಿಯ ಹಾಗು ತಮಿಳು ಭಾಷೆಗಳು ಬಳಸಲ್ಪಡುತ್ತವೆ.

ಚಿತ್ರಕೃಪೆ: NatarajanA

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಅಲ್ಲದೆ ಈ ತಾಣವು ಅಕ್ಕ ಪಕ್ಕದ ರಾಜ್ಯಗಳಿಗೆ ಹತ್ತಿರವಿರುವುದರಿಂದ ಇಂಗ್ಲೀಷ್, ಕನ್ನಡ ಹಾಗು ಮಲಯಾಳಂ ಭಾಷೆಗಳನ್ನೂ ಸಹ ಸ್ವಲ್ಪ ಮಟ್ಟಿಗೆ ಬಳಕೆಯಾಗುವುದನ್ನು ಕಾಣಬಹುದು. ಇಲ್ಲಿ ಬೆಳೆಯುವ ಬೆಳೆಗಳೂ ಕೂಡ ಸಾಕಷ್ಟು ರುಚಿಭರಿತವಾಗಿರುತ್ತದೆ. ಇಲ್ಲಿ ದೊರೆಯುವ ಗಜ್ಜರಿಗಳ ರುಚಿ ಅಬ್ಬಾ...ಸವಿದವನೆ ಬಲ್ಲ.

ಚಿತ್ರಕೃಪೆ: Navaneeth Krishnan S

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಸುಂದರವಾಗಿ ಕಂಗೊಳಿಸುವ ಊಟಿ ನಗರ.

ಚಿತ್ರಕೃಪೆ: irvin calicut

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಭವ್ಯವಾದ ನೀಲ್ಗಿರಿ ಬೆಟ್ಟಗಳ ಮಧ್ಯದಲ್ಲಿ ಮದುವಣಗಿತ್ತಿಯಂತೆ ಸಿಂಗರಿಸಲ್ಪಟ್ಟ ಊಟಿಯು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತದೆ.

ಚಿತ್ರಕೃಪೆ: Swaminathan

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಹಸಿರು ಹಸಿರಾದ ಬೆಟ್ಟ ಗುಡ್ಡಗಳು, ಸುಂದರವಾದ ಕೆರೆಗಳು, ದಟ್ಟವಾದ ಅರಣ್ಯ, ಕಲ್ಮಶರಹಿತ ವಾತವರಣ, ಹಿತಕರವಾದ ಉಷ್ಣಾಂಶ ಎಲ್ಲವೂ ಸೇರಿ ಈ ತಾಣವನ್ನು ಹೆಸರುವಾಸಿ ಮಾಡಿರುವುದು ಅಲ್ಲದೆ ನವದಂಪತಿಗಳು ಹೊರಡಲು ಬಯಸುವ ಹನಿಮೂನ್ ತಾಣವಾಗಿಯೂ ಪ್ರಸಿದ್ಧವಾಗಿದೆ.

ಚಿತ್ರಕೃಪೆ: irvin calicut

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಊಟಿಯ ಚಹಾ ತೋಟಗಳು, ನೀಲಗಿರಿ ಮರಗಳು, ಕೃಷಿ ಬೆಳೆಗಳೂ ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಗಳಗಿವೆ. ಅಲ್ಲದೆ ಸಾಕಷ್ಟು ಹೂಗಳಿಂದ ತುಂಬಿ ಸುಂದರವಾಗಿ ಕಾಣುವ ಉದ್ಯಾನಗಳು ಗಮನ ಸೆಳೆಯುತ್ತವೆ.

ಚಿತ್ರಕೃಪೆ: Adam Jones

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಊಟಿಯ ಬೊಟಾನಿಕಲ್ ಉದ್ಯಾನ ನಗರದ ಮತ್ತೊಂದು ಪ್ರಮುಖವಾದ ಪ್ರವಾಸಿ ಆಕರ್ಷಣೆ. 22 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಆವರಿಸಿರುವ ಈ ಉದ್ಯಾನವು ತಮಿಳುನಾಡು ಸರಕಾರದಿಂದ ನಿರ್ವಹಿಸಲ್ಪಡುತ್ತದೆ.

ಚಿತ್ರಕೃಪೆ: Ghost Particle

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಈ ಉದ್ಯಾನದಲ್ಲಿ ಪ್ರತಿ ವರ್ಷ ಮೇ ತಿಂಗಳಿನ ಸಂದರ್ಭದಲ್ಲಿ ಪುಷ್ಪ ಪ್ರದರ್ಶನದ ಜೊತೆಗೆ ಅಪರೂಪ ಎನ್ನಬಹುದಾದ ಸಸ್ಯ ತಳಿಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗುತ್ತದೆ.

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಬೊಟಾನಿಕಲ್ ಉದ್ಯಾನದೊಳಗೆ ಸಾವಿರಾರು ಸಂಖ್ಯೆಯಲ್ಲಿ ಹೂಬಳ್ಳಿಗಳು, ಅಪರೂಪದ ಸಸ್ಯಗಳು, ಜರಿ ಗಿಡಗಳು ಹಾಗು ಬೊನ್ಸಾಯಿ ಮರಗಳನ್ನು ಕಾಣಬಹುದು.

ಚಿತ್ರಕೃಪೆ: Marselectronics

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಸರ್ಕಾರಿ ಗುಲಾಬಿ ತೋಟ ಊಟಿಯ ಮತ್ತೊಂದು ಗುರುತರವಾದ ಪ್ರವಾಸಿ ತಾಣ. ಗಮನಾರ್ಹ ಸಂಗತಿಯೆಂದರೆ ಭಾರತದಲ್ಲೆ ಅತಿ ದೊಡ್ಡದಾದ ಗುಲಾಬಿ ತೋಟ ಇದಾಗಿದೆ.

ಚಿತ್ರಕೃಪೆ: Sreejithk2000

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಸಮುದ್ರ ಮಟ್ಟದಿಂದ 2200 ಮೀ. ಎತ್ತರದಲ್ಲಿ ಊಟಿಯ ಎಲ್ಕ್ ಬೆಟ್ಟದ ಮೇಲೆ ನೆಲೆಸಿರುವ ಈ ಉದ್ಯಾನವು ಪ್ರಸ್ತುತ ಭಾರತದಲ್ಲೆ ಅತಿ ಹೆಚ್ಚು ಗುಲಾಬಿ ಹೂವುಗಳ ಸಂಗ್ರಹ ಹೊಂದಿದ್ದು ಸುಮಾರು 20000 ಕ್ಕೂ ಅಧಿಕ ವಿವಿಧ ಬಗೆಯ ಗುಲಾಬಿ ಹೂವುಗಳನ್ನು ಒಳಗೊಂಡಿದೆ.

ಚಿತ್ರಕೃಪೆ: K.kulkarni97

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ದೋಣಿ ವಿಹಾರಕ್ಕೆ ಊಟಿ ಕೆರೆಯು ಆದರ್ಶಪ್ರಾಯವಾದ ತಾಣವಾಗಿದೆ. 65 ಎಕರೆ ಪ್ರದೇಶದಷ್ಟು ವಿಶಾಲವಾಗಿ ಹರಡಿರುವ ಈ ಕೆರೆಯು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Gauri Wur Sem

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಈ ಸುಂದರವಾದ ಕೃತಕ ಕೆರೆಯನ್ನು 1824 ರಲ್ಲಿ ಅಂದಿನ ಊಟಿ ಮೊದಲ ಕಲೇಕ್ಟರ್ ಆಗಿದ್ದ ಜಾನ್ ಸುಲ್ಲಿವನ್ ಎಂಬುವವರು ನಿರ್ಮಿಸಿದರು. ಈ ಕೆರೆಯನ್ನು ಊಟಿಯ ಕಂದಕದಲ್ಲಿ ಬೀಳುತ್ತಿದ್ದ ನೀರಿನ ತೊರೆಗಳನ್ನು ತಡೆಗಟ್ಟಿ ನಿರ್ಮಿಸಲಾಗಿದೆ.

ಚಿತ್ರಕೃಪೆ: Gauri Wur Sem

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ತೋಡ ಗುಡಿಸಲುಗಳು ಒಂದು ರೀತಿಯ ವಿಶೇಷ ಗುಡಿಸಲುಗಳಾಗಿದ್ದು ಇಂದಿಗೂ ಸಹ ತೋಡರ್ ಬುಡಕಟ್ಟಿನ ಜನಾಂಗದವರು ಇಲ್ಲಿ ವಾಸಿಸುವುದನ್ನು ಕಾಣಬಹುದು. ಬೊಟಾನಿಕಲ್ ಉದ್ಯಾನದ ಮೇಲಿರುವ ಗುಡ್ಡದ ಮೇಲೆ ಈ ಗುಡಿಸಲುಗಳನ್ನು ಕಾಣಬಹುದು.

ಚಿತ್ರಕೃಪೆ: Pratheepps

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಸಂತ ಸ್ಟಿಫನ್ ಚರ್ಚ್ ಊಟಿಯ ಮತ್ತೊಂದು ಆಕರ್ಷಣೆ. ಈ ಚರ್ಚ್ ಊಟಿಯಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ಸ್ಥಿತವಿದೆ. ಇದು ನೀಲಗಿರಿ ಜಿಲ್ಲೆಯ ಪುರಾತನ ಚರ್ಚುಗಳಲ್ಲಿ ಒಂದಾಗಿದೆ.

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಊಟಿ ಕೆರೆಯ ಅಂಚಿನಲ್ಲಿ ಕಂಡುಬರುವ ಜಿಂಕೆ ಉದ್ಯಾನವು ಮತ್ತೊಂದು ಕುತೂಹಲ ಕೆರಳಿಸುವ ನಗರದ ಪ್ರವಾಸಿ ಆಕರ್ಷಣೆಯಾಗಿದೆ. ನೈನಿತಾಲ್ ಝೂ ದ ಹೊರತಾಗಿ ಅತಿ ಎತ್ತರದಲ್ಲಿ ನೆಲೆಸಿರುವ ಜಿಂಕೆ ಉದ್ಯಾನವು ಇದಾಗಿದೆ.

ಚಿತ್ರಕೃಪೆ: Amol.Gaitonde

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ತಮಿಳುನಾಡು ಪ್ರವಾಸೋದ್ಯಮ ಇಲಾಖೆಯಿಂದ ಸ್ಥಾಪಿಸಲಾದ ಎರಡು ದೂರದರ್ಶಕಗಳನ್ನು (ಟೆಲಿಸ್ಕೋಪ್) ಪ್ರವಾಸಿ ಆಕರ್ಷಣೆಯಾದ ದೊಡ್ಡ ಬೆಟ್ಟದ ಮೇಲೆ ನೋಡಬಹುದು. ಈ ದೂರದರ್ಶಕಗಳ ಮುಖಾಂತರ ನೀಲ್ಗಿರಿ ಬೆಟ್ಟಗಳ ಅತಿ ರಮಣೀಯವಾದ ನೋಟಗಳನ್ನು ಸವಿಯಬಹುದು.

ಚಿತ್ರಕೃಪೆ: AMALAN619

ಊಟಿ ಗಿರಿಧಾಮ:

ಊಟಿ ಗಿರಿಧಾಮ:

ಊಟಿಯು ಸುತ್ತ ಮುತ್ತಲ ಪ್ರಮುಖ ನಗರಗಳಿಗೆ ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ಪ್ರವಾಸಿ ತಾಣವು, ಚೆನ್ನೈ, ಕೋಯಮತ್ತೂರು, ಕುಣ್ಣೂರು ಹಾಗು ಮೈಸೂರುಗಳಿಂದ ಕ್ರಮವಾಗಿ 535ಕಿ.ಮೀ, 80ಕಿ.ಮೀ, 18ಕಿ.ಮೀ, 155 ಕಿ.ಮೀ ಗಳ ದೂರದಲ್ಲಿದೆ. ಊಟಿಯು ತನ್ನದೆ ಆದ ಉದಕಮಂಡಲಂ ರೈಲು ನಿಲ್ದಾಣವನ್ನು ಹೊಂದಿದ್ದು ಮೆಟ್ಟುಪಾಳ್ಯಂ ನಿಂದ ಕುಣ್ಣೂರು ಮಾರ್ಗವಾಗಿ ರೈಲು ಲಭ್ಯವಿದೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣಗಳೆಂದರೆ ಕೋಯಮತ್ತೂರು, ಕೊಳಿಕೋಡ್ ಹಾಗು ಬೆಂಗಳೂರು. ಇವು ಕ್ರಮವಾಗಿ 96ಕಿ.ಮೀ, 141ಕಿ.ಮೀ ಹಾಗು 309 ಕಿ.ಮೀ ದೂರದಲ್ಲಿವೆ.

ಚಿತ್ರಕೃಪೆ: irvin calicut

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X