» »11 ತೋರು ಬೆರಳಿನಿಂದ ಮೇಲಕ್ಕೆ ಹಾರುತ್ತಂತೆ 200 ಕೆ.ಜಿ ತೂಕದ ಕಲ್ಲು!

11 ತೋರು ಬೆರಳಿನಿಂದ ಮೇಲಕ್ಕೆ ಹಾರುತ್ತಂತೆ 200 ಕೆ.ಜಿ ತೂಕದ ಕಲ್ಲು!

Written By: Rajatha

ಮಹಾರಾಷ್ಟ್ರದಿಂದ 180ಕಿ.ಮೀ ದೂರದಲ್ಲಿರುವ ಪುಣೆಯಯಲ್ಲಿನ ಶಿವಪುರ ಎನ್ನುವ ಸಣ್ಣ ಪ್ರದೇಶವು ಹಾರುವ ಕಲ್ಲಿಗೆ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಕುಸ್ತಿಪಟುಗಳು ಬಳಸುವ ಕಲ್ಲು ಪವಾಡದ ಮೂಲಕ ಮೇಲಕ್ಕೆ ಹಾರುತ್ತದಂತೆ.

ಇಲ್ಲಿ ಬುಲೆಟ್‌ ಬೈಕೇ ದೇವರು...ರಾಜಸ್ತಾನದಲ್ಲಿದೆ ಬುಲೆಟ್ ಬಾಬಾ ಮಂದಿರ !

ತೋರು ಬೆರಳಿನಿಂದ ಹಾರುತ್ತೆ ಕಲ್ಲು

ತೋರು ಬೆರಳಿನಿಂದ ಹಾರುತ್ತೆ ಕಲ್ಲು

PC:youtube
ಈ ಕಲ್ಲಿನ ಬಗ್ಗೆ ಕುತೂಹಲಕರ ಸಂಗತಿ ಎಂದರೆ, 11 ಜನರು ತಮ್ಮ ತೋರುಬೆರಳಿನಿಂದ ಆ ಕಲ್ಲನ್ನು ಎತ್ತಿ ಖಮರ್ ಅಲಿ ಧರ್ವೇಶ್ ಹೆಸರನ್ನು ಹೇಳಿದರೆ ಸಾಕು ಆ ಕಲ್ಲು ಆ ಹನ್ನೊಂದು ಜನರ ತಲೆಗಿಂತಲೂ ಮೇಲಕ್ಕೆ ಹಾರುತ್ತದೆ. ಸುಮಾರು 200 ಕಿ.ಲೋ ಇರುವ ಈ ಕಲ್ಲು ಅಷ್ಟೊಂದು ಎತ್ತರಕ್ಕೆ ಹಾರೋದು ಎಂದರೆ ವಿಚಿತ್ರವೇ ಸರಿ.

ಸೂಫಿ ಸಂತ ಖಮರ್ ಅಲಿ ಪವಾಡ

ಸೂಫಿ ಸಂತ ಖಮರ್ ಅಲಿ ಪವಾಡ

PC: Youtube

ಖಮರ್ ಅಲಿ ಎನ್ನುವ ಓರ್ವ ಪ್ರಸಿದ್ಧ ಸೂಫಿ ಸಂತ ಶಿವಪುರದಲ್ಲಿದ್ದರಂತೆ. ಆತ ಪವಾಡಗಳಿಗೆ ಹೆಸರುವಾಸಿಯಾಗಿದ್ದ. ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಜನಿಸಿದಾತ ಖಮರುಲ್ . ಆತನ ಕುಟುಂಬದವರು ತಮ್ಮ ತೋಳ್ಬಲದ ಮೇಲೆ ಹೆಮ್ಮೆ ಪಡುತ್ತಿದ್ದರು. ಆದರೆ ಖಮರ್ ಮಾತ್ರ ತನ್ನ ಇತರ ಸಹೋದರರಂತೆ ಶಕ್ತಿ ಪ್ರದರ್ಶನದಲ್ಲಿ ಆಸಕ್ತಿ ಹೊಂದಿರಲಿಲ್ಲ. ಖಮರ್ ಅಲಿ ಆರನೇ ವಯಸ್ಸಿನವರಾಗಿದ್ದಾಗಲೇ ಸೂಫಿಯ ಅನುಯಾಯಿಯಾಗಿದ್ದರು.

ಧ್ಯಾನದಲ್ಲೇ ಮುಳುಗಿದ್ದ ಸಂತ

ಧ್ಯಾನದಲ್ಲೇ ಮುಳುಗಿದ್ದ ಸಂತ

PC: youtube

ತನ್ನ ದಿನಗಳನ್ನು ಧ್ಯಾನ, ಆಧ್ಯಾತ್ಮ, ಉಪವಾಸದಲ್ಲೇ ಕಳೆಯುತ್ತಿದ್ದರು. ಇವರ ಪವಾಡದ ಬಗ್ಗೆ ತಿಳಿದ ಭಕ್ತರು ಇವರ ಮನೆ ಬಾಗಿಲಿಗೆ ಧಾವಿಸುತ್ತಿದ್ದರು. ಈಗ ಸಮಾಧಿ ಇರುವ ಜಾಗದಲ್ಲಿ ಸುಮಾರು 800 ವರ್ಷಗಳ ಹಿಂದೆ ಅಲ್ಲಿ ಒಬ್ಬ ಕುಸ್ತಿಪಟು ಇದ್ದ. ಎರಡು ದೊಡ್ಡ ಕಲ್ಲುಗಳನ್ನು ವ್ಯಾಯಾಮ ಮಾಡುವ ಸಲುವಾಗಿ ಬಳಸಲಾಗುತ್ತಿತ್ತು.

ಸಮಾಧಿಯ ಪಕ್ಕದಲ್ಲೇ ಕಲ್ಲು

ಸಮಾಧಿಯ ಪಕ್ಕದಲ್ಲೇ ಕಲ್ಲು

PC: youtube
ವಿವೇಚನಾ ರಹಿತ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ಹೆಚ್ಚು ಎನ್ನುವುದನ್ನು ತಿಳಿಯಪಡಿಸಲು ಈ ಕಲ್ಲು ಒಂದು ಉದಾಹರಣೆ ಎನ್ನುತ್ತಾರೆ ಇಲ್ಲಿಯ ಜನ. ಖಮರ್ ಅಲಿ ತನ್ನ ಯೌವನದಲ್ಲೇ ಸಾವನ್ನಪ್ಪಿದ್ದರು. ಸಾವಿನ ಕೊನೆಯ ಕ್ಷಣದಲ್ಲಿ ಖಮರ್ ಆ ೨೦೦ ಕೆಜಿ ತೂಗುವ ಕಲ್ಲನ್ನು ತನ್ನ ಸಮಾಧಿಯ ಪಕ್ಕದಲ್ಲೇ ಇಡುವಂತೆ ಕೋರಿಕೊಂಡಿದ್ದರು.

ಮಹಿಳೆಯರಿಗಿಲ್ಲ ಪ್ರವೇಶ

ಮಹಿಳೆಯರಿಗಿಲ್ಲ ಪ್ರವೇಶ

11 ಜನರು ತಮ್ಮ ಬಲಗೈಯ ತೋರು ಬೆರಳನ್ನು ಆ ಕಲ್ಲಿನ ಕೆಳಗೆ ಇಟ್ಟು ನನ್ನ ಹೆಸರನ್ನು ಹೇಳುತ್ತ ಮೇಲಕ್ಕೆ ಎತ್ತಿದರೆ ಆ ಕಲ್ಲು ಮೇಲಕ್ಕೆ ಹಾರುವಂತೆ ನಾನು ಮಾಡುತ್ತೇನೆ. ಇಲ್ಲವಾದಲ್ಲಿ ಒಬ್ಬರೋ ಇಬ್ಬರಿಂದಲೋ ಆ ಕಲ್ಲನ್ನು ಭೂಮಿಯಿಂದ ೨ ಫೀಟ್ ಎತ್ತರಕ್ಕೂ ಅಲ್ಲಾಡಿಲು ಸಾಧ್ಯವಾಗೋದಿಲ್ಲ ಎಂದಿದ್ದರಂತೆ. ಆಗಿನಿಂದ ಈಗಿನವರೆಗೆ ಆ ಕಲ್ಲನ್ನು ಅದೇ ರೀತಿ ಎತ್ತಲಾಗುತ್ತಿದೆ. ಖಮರುಲ್ ಸಮಾಧಿಯ ಬಳಿ ಮಹಿಳೆಯರಿಗೆ ಪ್ರವೇಶವಿಲ್ಲ.

Read more about: maharashtra