Search
  • Follow NativePlanet
Share
ಮುಖಪುಟ » ಸ್ಥಳಗಳು» ಶಿವಪುರಿ

ಶಿವಪುರಿ : ಭಾರತೀಯ ವನ್ಯಜೀವಿಗಳ ಹೃದಯಸ್ಥಳ

23

ಶಿವಪುರಿ, ಒಂದು ದಟ್ಟವಾದ ಅರಣ್ಯ ಪ್ರದೇಶ. ಒಂದು ಕಾಲದಲ್ಲಿ ಇದು ಮುಘಲ್ ದೊರೆಗಳು ಬೇಟೆಯಾಡುವ ಆಟದ ಮೈದಾನವಾಗಿತ್ತು. ಈ ದಟ್ಟವಾದ ಅರಣ್ಯ ಪ್ರದೇಶ ಇಂದು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕರೇರ ಪಕ್ಷಿಧಾಮ, ಮಾಧವ ನ್ಯಾಷನಲ್ ಪಾರ್ಕ್, ಬೃಹತ್ತಾದ ಜಾರ್ಜ್ ಕ್ಯಾಸಲ್ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಾನವ ಹಾಗು ಪ್ರಕೃತಿ ಶಾಂತಿಯುತ ಸಹಬಾಳ್ವೆಯ ಪ್ರತಿರೂಪದಂತಿದೆ ಶಿವಪುರಿ.

ಶಿವಪುರಿ : ಪ್ರಕೃತಿ ಅಧೀನದಲ್ಲಿರುವ ಸಮೃದ್ಧ ಪ್ರದೇಶ

ಮಾಧವ ನ್ಯಾಷನಲ್ ಪಾರ್ಕ್ : ಶ್ರೀಮಂತ ಜೀವವೈವಿಧ್ಯ, ಸುಂದರ ಗುಡ್ಡಗಾಡು, ಸಮತಟ್ಟಾದ ಹುಲ್ಲುಗಾವಲು, ಸುತ್ತಲ ಸೌಂದರ್ಯವನ್ನು ಪ್ರತಿಬಿಂಬಿಸುವ ಸರೋವರವಿರುವದ ಮಾಧವ ನ್ಯಾಷನಲ್ ಪಾರ್ಕ್ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತದೆ. ಪ್ರಾಕೃತಿಕ ಸೌಂದರ್ಯ ಶಿವಪುರಿಯಲ್ಲಿ ಕೇವಲ ರಾಷ್ಟ್ರೀಯ ವನಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಜೊತೆ ಸಖ್ಯ ಸಾಗರ ಕೆರೆ, ಭೂರ ಖೋನ್ ಜಲಪಾತ, ಪಾವಾ ಜಲಪಾತ, ಸನ್ ಚಿರೈಯ್ಯ ಪಕ್ಷಿಧಾಮ ಎಲ್ಲವೂ ಶಿವಪುರಿಯ ಸಮೃದ್ಧವಾದ ಅರಣ್ಯ ಪ್ರದೇಶಕ್ಕೆ ಮೆರಗು ಕೊಡುವಂತಿವೆ. ತಾಯಿ ಪ್ರಕೃತಿ ಮಾತೆಯ ಅರಮನೆಯಲ್ಲಿ ಮಾನವ ಕೇವಲ ಒಂದು ನಮ್ರ ಜೀವಿ. ಶಿವಪುರಿಯ ಪ್ರವಾಸ ದಿನನಿತ್ಯದ ನಗರ ಪಟ್ಟಣ ಜಂಜಾಟದ ಬದುಕಿನಿಂದ ಪ್ರಕೃತಿ ಮಾತೆಯ ಮಡಿಲಿಗೆ ಒಂದು ಸುಂದರ ಆಮಂತ್ರಣ.

ಶಿವಪುರಿ ಮತ್ತು ಸುತ್ತಲಿನ ಪ್ರವಾಸಿ ತಾಣಗಳು

ಶಿವಪುರಿಯ ದೀರ್ಘಕಾಲದ ಇತಿಹಾಸದ ಪ್ರಕಾರ ಇದು ರಾಜವಂಶರ 'ಬೇಸಿಗೆಯ ರಾಜಧಾನಿ' ಎಂದೆನಿಸಿತ್ತು. ಶಿವಪುರಿಯ ಕೋಟೆಗಳು, ಅರಮನೆಗಳು, ದೇಗುಲಗಳು ಹೆಮ್ಮೆಯ ಪ್ರವಾಸಿ ತಾಣಗಳಾಗಿವೆ. ನಾರವಾರ ಕೋಟೆ, ಮಾಧವ ವಿಲಾಸ ಅರಮನೆ, ಮಹುವ ಶಿವನ ದೇಗುಲ, ಮತ್ತು ಹಲವಾರು ಪ್ರವಾಸಿ ತಾಣಗಳಾದ ರಾಷ್ಟ್ರೀಯ ವನಧಾಮ, ಪಕ್ಷಿಧಾಮಗಳು, ಸ್ಮಾರಕಗಳು ಶಿವಪುರಿಯ ಪ್ರವಾಸೋದ್ಯಮವನ್ನು ಒಂದು ಸಮರ್ಥ ಉದ್ಯಮವನ್ನಾಗಿ ಮಾಡಿವೆ. ಇಂತಹ ಸುಂದರ ಪ್ರಕೃತಿ ತಾಣಗಳು ಸಹಜವಾಗಿ ಮಾನವನನ್ನು ತನ್ನತ್ತ ಆಕರ್ಷಿಸುತ್ತಿವೆ.

ಶಿವಪುರಿಯನ್ನು ತಲುಪುವ ಬಗೆ

ಶಿವಪುರಿಗೆ ಸಂಪರ್ಕ ಚೆನ್ನಾಗಿದ್ದು, ಎಲ್ಲಾ ಸಮೀಪದ ವಿಮಾನ ನಿಲ್ದಾಣಗಳಿಂದ ಮತ್ತು ರೈಲು ನಿಲ್ದಾಣಗಳಿಂದ ಸುಲಭವಾಗಿ ತಲುಪಬಹುದು. ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಇಲ್ಲಿ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಉಳಿದ ದಿನಗಳಲ್ಲಿಯೂ ಕೂಡ ಶಿವಪುರಿಯಲ್ಲಿ ಹಿತಕರವಾದ ವಾತಾವರಣವಿರುತ್ತದೆ.

ಶಿವಪುರಿ ಪ್ರಸಿದ್ಧವಾಗಿದೆ

ಶಿವಪುರಿ ಹವಾಮಾನ

ಉತ್ತಮ ಸಮಯ ಶಿವಪುರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಿವಪುರಿ

  • ರಸ್ತೆಯ ಮೂಲಕ
    ರಸ್ತೆ ಮೂಲಕ ತಲುಪುವುದು ಕಷ್ಟವೆನಿಸದಿದ್ದರೆ ಶಿವಪುರಿಯನ್ನು ರಸ್ತೆಯ ಮೂಲಕವೇ ತಲುಪುವುದು ಉತ್ತಮ. 100 ಕಿ.ಮೀ. ದೂರದಲ್ಲಿರುವ ಝಾನ್ಸಿ ಮತ್ತು 128 ಕಿ.ಮೀ. ದೂರದಲ್ಲಿರುವ ಗ್ವಾಲಿಯರ್ ಮೂಲಕ ಶಿವಪುರಿಯನ್ನು ಸುಲಭವಾಗಿ ಮುಟ್ಟಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಶಿವಪುರಿಗೆ ಹೋಗಬೇಕೆಂದರೆ ರೈಲಿನ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ದೇಶದ ಅನೇಕ ಭಾಗಗಳಿಂದ ನೇರವಾಗಿ ರೈಲು ಸಂಪರ್ಕವಿದೆ. ಪಟ್ಟಣದಿಂದ ರೈಲು ನಿಲ್ದಾಣ ಕೇವಲ 3 ಕಿ.ಮೀ. ದೂರದಲ್ಲಿದೆ. ರೈಲು ನಿಲ್ದಾಣದಿಂದ ಬಸ್ ಅಥವಾ ಟ್ಯಾಕ್ಸಿಗಳ ಮೂಲಕ ಪಟ್ಟಣ ತಲುಪಬಹುದು. ಆದರೆ, ಶಿವಪುರಿಯಲ್ಲಿ ಹೆಚ್ಚು ರೈಲುಗಳು ನಿಲ್ಲದಿರುವುದರಿಂದ 100 ಕಿ.ಮೀ. ದೂರದಲ್ಲಿರುವ ಝಾನ್ಸಿ ಮತ್ತು 128 ಕಿ.ಮೀ. ದೂರದಲ್ಲಿರುವ ಗ್ವಾಲಿಯರ್ ಮೂಲಕ ಶಿವಪುರಿಗೆ ಹೋಗುವುದು ಉತ್ತಮ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಐತಿಹಾಸಿಕ ಪಟ್ಟಣವಾದ ಶಿವಪುರಿಗೆ ಭಾರತದ ಎಲ್ಲಾ ದೊಡ್ಡ ಪಟ್ಟಣಗಳಿಂದ ಸಂಪರ್ಕ ಇದೆ. ಶಿವಪುರಿಗೆ ವಿಮಾನದ ಮುಖಾಂತರ ಅತಿವೇಗವಾಗಿ ತಲುಪಬಹುದಾಗಿದೆ. ಶಿವಪುರಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಎಂದರೆ 128 ಕಿ.ಮೀ. ದೂರದಲ್ಲಿರುವ ಗ್ವಾಲಿಯರ್ ಏರ್ಪೋರ್ಟ್.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City