Search
  • Follow NativePlanet
Share
» »ಭಾರತದ ಇತಿಹಾಸವನ್ನು ತಿಳಿಯಲು ಕರ್ನಾಟಕದಲ್ಲಿನ ನೋಡಲೇಬೇಕಾದ ಐತಿಹಾಸಿಕ ಸ್ಥಳಗಳು

ಭಾರತದ ಇತಿಹಾಸವನ್ನು ತಿಳಿಯಲು ಕರ್ನಾಟಕದಲ್ಲಿನ ನೋಡಲೇಬೇಕಾದ ಐತಿಹಾಸಿಕ ಸ್ಥಳಗಳು

By Manjula Balaraj Tantry

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿ ಕರ್ನಾಟಕವು ಒಂದು ಅತೀ ದೊಡ್ಡ ರಾಜಕೀಯ ಕೇಂದ್ರವೆನಿಸಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಮೈಸೂರು ರಾಜ್ಯವೆಂದು ಕರೆಯಲಾಗುತ್ತಿದ್ದರೂ ಕರ್ನಾಟಕದ ಶ್ರೀಮಂತ ಭೂಮಿಯು ಯಾವಾಗಲೂ ಪ್ರಾಚೀನ ಮತ್ತು ಮಧ್ಯಕಾಲೀನ ಅವಧಿಯಲ್ಲಿ ಅದರ ಸಾಮ್ರಾಜ್ಯದ ಅಭಿವೃದ್ಧಿ ಮತ್ತು ಉತ್ಕೃಷ್ಟತೆಗೆ ಕೊಡುಗೆ ನೀಡುತ್ತಾ ಬಂದಿದೆ.

ಇಂದು ಕರ್ನಾಟಕದಲ್ಲಿಯ ಐತಿಹಾಸಿಕ ಸ್ಥಳಗಳು ಬಯಲು ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳು ಇವೆಲ್ಲವೂ ಕರ್ನಾಟಕದ ಶ್ರೀಮಂತಿಕೆಯನ್ನು ಸಾಬೀತುಪಡಿಸುತ್ತವೆ. ಯಾವುದಾದರೂ ರಾಷ್ಟ್ರದ ಪ್ರಾಚೀನ ಇತಿಹಾಸವನ್ನು ಅನ್ವೇಷಿಸುವ ಆಸಕ್ತಿಹೊಂದಿದ ಪ್ರಯಾಣಿಕರಲ್ಲಿ ಒಬ್ಬರಾಗಿದ್ದಲ್ಲಿ ನೀವು ಸರಿಯಾದ ಲೇಖನವನ್ನೇ ಓದುತ್ತಿರುವಿರಿ . ಭಾರತದಲ್ಲಿಯ ಇತಿಹಾಸವನ್ನು ತಿಳಿಯಲು ಕರ್ನಾಟಕದಲ್ಲಿಯ ಭೇಟಿ ನೀಡಲೇ ಬೇಕಾದ ಐತಿಹಾಸಿಕ ಸ್ಥಳಗಳ ಬಗ್ಗೆ ಎಲ್ಲವನ್ನೂ ಓದಿ ತಿಳಿಯಿರಿ.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

PC- Spiros Vathis

ಪ್ರಸ್ತುತ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣವು ಟಿಪ್ಪು ಸುಲ್ತಾನನ ಆಳ್ವಿಕೆಯ ಅವಧಿಯಲ್ಲಿ ಮೈಸೂರಿನ ರಾಜಧಾನಿಯಾಗಿತ್ತು . ಅನೇಕ ಕಾಳಗ, ಯುದ್ದಗಳ ಮೂಲಕ ಪ್ರಗತಿ ಸಾಧಿಸುವುದರ ಮೂಲಕ ಶ್ರೀರಂಗಪಟ್ಟಣದ ಇತಿಹಾಸದ ಮಹಾಕಾವ್ಯವನ್ನು ಇಲ್ಲಿಯ ಐತಿಹಾಸಿಕ ಕಟ್ಟಡಗಳ ಮೂಲಕ ಗುರುತಿಸಬಹುದಾಗಿದೆ. ಇವುಗಳು ಇಂದಿಗೂ ಹಿಂದಿನ ಕಥೆಯನ್ನು ವರ್ಣಿಸುತ್ತವೆ. ಇಲ್ಲಿಯ ಪ್ರಮುಖ ಆಕರ್ಷಣೆಗಳಲ್ಲಿ ರಂಗನಾಥ ದೇವಾಲಯಯ, ದರಿಯಾ ದೌಲತ್ ಭಾಗ್, ಟಿಪ್ಪುವಿನ ಘೋರಿ ಇತ್ಯಾದಿಗಳನ್ನು ಒಳಗೊಂಡಿದೆ.

ಹಂಪೆ

ಹಂಪೆ

ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿರುವ ಹಂಪೆಯು ವಿಜಯನಗರ ಸಾಮ್ರಾಜ್ಯದಲ್ಲಿಯ ಭಾರತದ ಪೌರಾಣಿಕ ಕಾಲದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿರುವ ಅವಶೇಷಗಳು ಅಷ್ಟು ಸುಂದರವಾಗಿ ಕಾಣದಿದ್ದರೂ ಇವು ಇಂದಿಗೂ ಜಗತ್ತಿನ ಎಲ್ಲಾ ಭಾಗಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರವಾಸಿಗರು ಇಲ್ಲಿಗೆ ಇಲ್ಲಿಯ ವಾಸ್ತುಶಿಲ್ಪ ಚಾಣಕ್ಯತೆಯನ್ನು ಪರಿಶೀಲಿಸಲು ಮತ್ತು ಈ ಅವಶೇಷಗಳ ಹಿಂದೆ ಇರುವ ಮಹತ್ವವನ್ನು ತಿಳಿಯಲು ಬರುತ್ತಾರೆ. ನೀವು ಇಂತಹ ಅನ್ವೇಷಣೆ ಮಾಡುವವರಲ್ಲಿ ಒಬ್ಬರಾಗಿದ್ದಲ್ಲಿ, ಮತ್ತು ಇದರ ಇತಿಹಾಸದ ಆಳದಲ್ಲಿ ಮುಳುಗಲು ಇಷ್ಟ ಪಡುವವರಾಗಿದ್ದಲ್ಲಿ, ಹಂಪೆಯು ನಿಮಗೆ ಸೂಕ್ತ ಗಮ್ಯಸ್ಥಾನವಾಗಿದೆ.

ಮೈಸೂರು

ಮೈಸೂರು

PC- Spiros Vathis

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೂ ಕರೆಯಲಾಗುವ ಮೈಸೂರು ಇಲ್ಲಿಯ ಭವ್ಯವಾದ ಅರಮನೆಗಳು ಮತ್ತು ಮನಸೆಳೆಯುವ ಉದ್ಯಾನವನಗಳಿಂದಾಗಿ ದಕ್ಷಿಣ ಭಾರತದ ಅತೀ ಹೆಚ್ಚು ಭೇಟಿ ಕೊಡಲ್ಪಡುವ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.

ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಮೈಸೂರು ಅರಮನೆಯು ಸೇರಿದೆ. ಇಲ್ಲಿಯ ಅರಮನೆಗಳು ಮತ್ತು ಇತರ ಕಟ್ಟಡಗಳ ಮೇಲಿರುವ ಮಹಾನ್ ಕಲಾಕೃತಿಗಳ ಕೆಲಸದ ಆಳವನ್ನು ಅಳೆಯುವುದು ಅಸಾಧ್ಯವಾದರೂ ಇಲ್ಲಿ ಅಸಂಖ್ಯಾತ ಪ್ರವಾಸಿಗರು ಮತ್ತು ಇತಿಹಾಸಕಾರರನ್ನು ಈ ಪ್ರಾಚೀನ ವಾಸ್ತುಶಿಲ್ಪ ಅದ್ಬುತದ ಸುತ್ತ ಮುತ್ತ ಮತ್ತು ದೇಶದ ಭವ್ಯವಾದ ಇತಿಹಾಸದ ಮತ್ತು ಕಲಾಕೃತಿಗಳ ಬಗ್ಗೆ ತಿಳಿಯಲು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ.

ಹಳೆಬೀಡು

ಹಳೆಬೀಡು

ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಹಳೇಬೀಡು ಹಿಂದಿನಿಂದಲೂ ಇತಿಹಾಸ ಪ್ರಿಯರಿಗೆ ಒಂದು ಅತೀ ಪ್ರಾಮುಖ್ಯತೆಯ ಸ್ಥಳವಾಗಿದೆ. ದೇವಾಲಯದ ರೂಪದಲ್ಲಿ ಅಲಂಕರಿಸಲ್ಪಟ್ಟ ಹೊಯ್ಸಳರ ವಾಸ್ತುಶಿಲ್ಪ ಶೈಲಿಯನ್ನು ನೋಡ ಬಯಸಿದಲ್ಲಿ ಹಳೇಬೀಡು ನಿಮಗೆ ಒಂದು ಸೂಕ್ತವಾದ ತಾಣವಾಗಿದೆ.

ಇಲ್ಲಿಯ ದೇವಾಲಯಗಳಿಗೆ ಭೇಟಿ ಕೊಡುವುದರ ಹೊರತಾಗಿಯೂ ನೀವು ಜೈನರ ಪ್ರಮುಖ ಧಾರ್ಮಿಕ ಸ್ಥಳವಾದ ಪಾರ್ಶ್ವನಾಥ ಬಸದಿ, ಶಾಂತಿನಾಥ ಬಸದಿಗಳಲ್ಲಿ ನಿಮ್ಮ ಗೌರವನ್ನು ಸಲ್ಲಿಸಬಹುದು . ನಿಮಗೆ ಹಳೆಬೀಡಿನಲ್ಲಿ ಬಹಳಷ್ಟು ಅನ್ವೇಷಣೆ ಮಾಡಲು ಇರಬೇಕಾದರೆ ಇಂತಹ ಅದ್ಬುತವಾದ ಪಟ್ಟಣಕ್ಕೆ ಒಂದು ಪ್ರವಾಸವನ್ನು ಏಕೆ ಯೋಜಿಸಬಾರದು?

ಪಟ್ಟದಕಲ್

ಪಟ್ಟದಕಲ್

ರಾಷ್ಟ್ರದ ಜಾತ್ಯತೀತತೆಯನ್ನು ಉತ್ತಮವಾಗಿ ಚಿತ್ರಿಸುವ ಸಂಕೀರ್ಣಗಳನ್ನು ಭೇಟಿ ಮಾಡುವುದಕ್ಕಿಂತ ಉತ್ತಮವಾಗಿರುವುದು ಯಾವುದಿದೆ? ನೀವು ಹಿಂದು ಧರ್ಮದ ಹೊರತಾಗಿ ಬೇರೆ ಧರ್ಮಗಳ ವಿಕಸನಗಳನ್ನು ತಿಳಿಯ ಬಯಸಿದಲ್ಲಿ ಪಟ್ಟದಕಲ್ ನಿಮ್ಮ ಗಮ್ಯಸ್ಥಾನವಾಗಿದೆ. ಇದು ಸಾಮಾನ್ಯವಾಗಿ ಐತಿಹಾಸಿಕ ಸ್ಥಳವಾಗಿದ್ದರೂ ಹಿಂದು ಮತ್ತು ಜೈನ ಧರ್ಮಕ್ಕೆ ಸೇರಿದ ಅನೇಕ ದೇವಾಲಯಗಳು ಅಕ್ಕ ಪಕ್ಕದಲ್ಲಿರುವುದನ್ನು ಕಾಣಬಹುದಾಗಿದೆ.

ಭಾರತದ ಪುರಾತತ್ವ ಶಾಸ್ತ್ರದ ಆಡಳಿತಕ್ಕೆ ಒಳಪಟ್ಟಿರುವ ಪಟ್ಟದಕಲ್ ಅದರ ಇತಿಹಾಸಪೂರ್ವ ಯುಗ ಸೇರಿದಂತೆ ಭಾರತದ ಹಿಂದಿನ ಇತಿಹಾಸದ ಬಗ್ಗೆ ತಿಳಿಯಲು ಒಂದು ಅತ್ತ್ಯುತ್ತಮ ಸ್ಥಳವಾಗಿದೆ.

ಬೀದರ್

ಬೀದರ್

PC- Santosh3397

ಬೀದರ್ ಒಂದು ಅತಿ ಕಡಿಮೆ ಪ್ರಸಿದ್ದಿಗೊಳಗಾದ ಭಾರತದ ಐತಿಹಾಸಿಕ ಸ್ಥಳಗಳಲ್ಲೊಂದಾಗಿದೆ. ಮತ್ತು ಇಲ್ಲಿಯ ಜನರ ಇತಿಹಾಸದ ಬೇರುಗಳನ್ನು ಇಲ್ಲಿಯ ಇತಿಹಾಸದ ಆಳದಲ್ಲಿ ಕಾಣಬಹುದಾಗಿದೆ. ಮಹಾಕಾವ್ಯ ಮಹಾಭಾರತದಲ್ಲೂ ಕೂಡ ಇದರ ಉಲ್ಲೇಖವನ್ನು ಕಾಣಬಹುದಾಗಿದೆ.

ಅನೇಕ ಸ್ಮಾರಕಗಳು ಮತ್ತು ಘೋರಿಗಳನ್ನು ಹೊಂದಿರುವ ಬೀದರನ್ನು ವಿಸ್ಪರಿಂಗ್ ಸ್ಮಾರಕಗಳ ನಗರವೆಂದೂ ಕೂಡಾ ಕರೆಯಲಾಗುತ್ತದೆ ಮತ್ತು ಇದು ಕೆಲವು ವರ್ಷಗಳಿಂದ ಇತಿಹಾಸಕಾರರ ಕೇಂದ್ರವೆನಿಸಿದೆ. ಇತಿಹಾಸಗಳ ಚೌಕಟ್ಟನ್ನು ಹೊಂದಿರುವ ಬೀದರ್ ನ ಅನ್ವೇಷಣೆ ಮಾಡಿದರೆ ಹೇಗಿರಬಹುದು?

ಬಾದಾಮಿ

ಬಾದಾಮಿ

PC- Sanyam Bahga

ಬಾದಾಮಿಯು ಇದರ ಗುಹಾಂತರ ದೇವಾಲಯಗಳಿಂದ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಇದು ಚಾಲುಕ್ಯರ ಕಾಲದಿಂದಲೂ ಬಲಿಷ್ಠವಾಗಿ ನಿಂತಿದೆ. ಇಲ್ಲಿಯ ಕಲ್ಲಿನಿಂದ ಕೆತ್ತಲಾದ ಕಲಾಕೃತಿ ಯ ರಚನೆಗಳನ್ನು ಈ ಐತಿಹಾಸಿಕ ಪಟ್ಟಣ ಬಾದಾಮಿಯಲ್ಲಿ ಕಾಣಬಹುದಾಗಿದೆ.

ಒಮ್ಮೆ ನೀವು ಬಾದಾಮಿಗೆ ಪ್ರವೇಶಿಸಿದಲ್ಲಿ ನೀವು ಇಲ್ಲಿಯ ಗುಹಾಂತರ ದೇವಾಲಯಗಳ ಬೃಹತ್ ಕಲ್ಲಿನಿಂದ ಮಾಡಿರುವ ರಚನೆಗಳನ್ನು ನೋಡಿ ಖಚಿತವಾಗಿಯೂ ಅಚ್ಚರಿಗೊಳಗಾಗುವುದರಲ್ಲಿ ಸಂಶಯವಿಲ್ಲ. ನೀವು ಗುಹಾಂತರ ದೇವಾಲಯಗಳ ಕಡೆಗೆ ಎಂದಿಗೂ ಹೋಗದಿದ್ದಲ್ಲಿ, ನಿಮ್ಮ ಪ್ರಯಾಣವನ್ನು ಬಾದಾಮಿಯ ಕಡೆಗೆ ಬೆಳೆಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more