Search
  • Follow NativePlanet
Share
» »ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?

ಭಕ್ತರನ್ನು ಮಾತ್ರವಲ್ಲದೆ, ಇತಿಹಾಸ ಪ್ರಿಯರನ್ನು ಆಕರ್ಷಿಸುವ ಮೈಸೂರಿನ ಈ ದೇವಾಲಯಗಳನ್ನು ನೋಡಿದ್ದೀರಾ?

ಪಾರಂಪರಿಕ ನಗರ ಮೈಸೂರು ಭವ್ಯವಾದ ಅರಮನೆಗಳು, ಉದ್ಯಾನಗಳು, ಪುರಾತನ ದೇವಾಲಯಗಳು ಮತ್ತು ಸ್ಮಾರಕಗಳಿಂದ ಕೂಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಗರಗಳಲ್ಲಿ ಒಂದಾಗಿರುವ ಮೈಸೂರು, ಪ್ರಕೃತಿ ಪ್ರಿಯರನ್ನು ಮಾತ್ರವಲ್ಲದೆ, ಎಲ್ಲಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಏಕೆಂದರೆ ಇಲ್ಲಿ ಸಾಕಷ್ಟು ದೇವಾಲಯಗಳಿದ್ದು, ಅವುಗಳ ವಾಸ್ತುಶಿಲ್ಪವು ಸಾಮಾನ್ಯವಾಗಿ ಎಲ್ಲಾ ತರಹದ ಜನರನ್ನು ಆಕರ್ಷಿಸುತ್ತದೆ.

ಈಗ ನೀವೂ ಮೈಸೂರಿಗೆ ಹೋಗಬೇಕೆಂದು ಯೋಚಿಸುತ್ತಿದ್ದರೆ, ಈ ಲೇಖನದ ಮೂಲಕ ಮೈಸೂರಿನಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳ ಒಂದು ನೋಟವನ್ನು ನೋಡೋಣ ಬನ್ನಿ...

ಚಾಮುಂಡೇಶ್ವರಿ ದೇವಾಲಯ

ಚಾಮುಂಡೇಶ್ವರಿ ದೇವಾಲಯ

ಮೈಸೂರಿಗೆ ಬಂದವರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯದಿದ್ದರೆ ಹೇಗೆ?. ಚಾಮುಂಡೇಶ್ವರಿ ದೇವಾಲಯದ ವಿಶೇಷತೆಯೆಂದರೆ ಸುಂದರವಾದ ಕೆತ್ತನೆಗಳು. ಇದು ಮೈಸೂರಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಈ ಪೂಜ್ಯ ದೇವಾಲಯವು ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಇದು ಚಾಮುಂಡಿ ಬೆಟ್ಟದ ತುದಿಯಲ್ಲಿದ್ದು, ಅತ್ಯಂತ ಹಳೆಯ ಮತ್ತು ಪೂಜ್ಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. 17 ನೇ ಶತಮಾನದಲ್ಲಿ ನಿರ್ಮಿಸಲಾದ ನಂದಿಯ ವಿಗ್ರಹವು ಈ ದೇವಾಲಯದ ದೊಡ್ಡ ಆಕರ್ಷಣೆಯಾಗಿದೆ. ದೇವಾಲಯದ ಗೋಡೆಗಳು, ಛಾವಣಿಗಳು ಮತ್ತು ಕಂಬಗಳ ಮೇಲೆ ಅದ್ಭುತವಾದ ಕೆತ್ತನೆಗಳನ್ನು ನೀವು ನೋಡಬಹುದು.

ಭುವನೇಶ್ವರಿ ದೇವಸ್ಥಾನ

ಭುವನೇಶ್ವರಿ ದೇವಸ್ಥಾನ

ಭುವನೇಶ್ವರಿ ದೇವಸ್ಥಾನವನ್ನು 1951 ರಲ್ಲಿ ಜಯಚಾಮರಾಜ ಒಡೆಯರ್ ಅವರು ನಿರ್ಮಿಸಿದರು. ಈ ದೇವಾಲಯವನ್ನು ಭುವನೇಶ್ವರಿ ದೇವಿಗೆ ಸಮರ್ಪಿಸಲಾಗಿದೆ. ದೇವಾಲಯದಲ್ಲಿ ನೀವು ದ್ರಾವಿಡ ಶೈಲಿಯ ವಾಸ್ತುಶಿಲ್ಪ ನೋಡಬಹುದು. ಮೈಸೂರಿನ ಖ್ಯಾತ ಶಿಲ್ಪಿ ಶಿಲ್ಪಿ ಸಿದ್ದಲಿಂಗಸ್ವಾಮಿ ಭುವನೇಶ್ವರಿಯ ಮುಖ್ಯ ವಿಗ್ರಹವನ್ನು ಕೆತ್ತಿದ್ದಾರೆ. ದೇವಾಲಯವು ಸೂರ್ಯ, ಮಹಾ ವಿಷ್ಣು, ಮಹೇಶ್ವರ, ರಾಜರಾಜೇಶ್ವರಿ, ಗಣಪತಿ ಮತ್ತು ಚಾಮುಂಡೇಶ್ವರಿಯ ಪ್ರತಿಮೆಗಳನ್ನು ಸಹ ಹೊಂದಿದೆ. ದೇವಾಲಯವು ದೊಡ್ಡ ತಾಮ್ರದ ಸೂರ್ಯ ಮಂಡಲವನ್ನು ಹೊಂದಿದೆ. ಈ ತಾಮ್ರದ ತಟ್ಟೆಯು ಮೊದಲು ರಾಜಮನೆತನದವರ ಬಳಿ ಇತ್ತು.

ಇದನ್ನು ಜಯಚಾಮರಾಜ ಒಡೆಯರ್ ಅವರು ದೇವಾಲಯಕ್ಕೆ ಹಸ್ತಾಂತರಿಸಿದರು. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಆಚರಿಸಲಾಗುವ ರಥಸಪ್ತಮಿ ಹಬ್ಬದಂದು ಈ ತಟ್ಟೆಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಭುವನೇಶ್ವರಿ ದೇವಸ್ಥಾನದಲ್ಲಿನ ಪೂಜೆಯು ಪ್ರವಾಸಿಗರನ್ನು ಮತ್ತು ಸ್ಥಳೀಯ ಜನರನ್ನು ತುಂಬಾ ಆಕರ್ಷಿಸುತ್ತದೆ. ದೇವಾಲಯವು ಮೈಸೂರು ರೈಲು ನಿಲ್ದಾಣದಿಂದ 3 ಕಿಮೀ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 2 ಕಿಮೀ ದೂರದಲ್ಲಿದ್ದು, ಮೈಸೂರು ಅರಮನೆಯ ಉತ್ತರ ಭಾಗದಲ್ಲಿ ನೆಲೆಗೊಂಡಿದೆ.

ಇಸ್ಕಾನ್ ಟೆಂಪಲ್

ಇಸ್ಕಾನ್ ಟೆಂಪಲ್

ಇಸ್ಕಾನ್ ಟೆಂಪಲ್ ಅಂದ ಕೂಡಲೇ ಪ್ರತಿಯೊಬ್ಬರಿಗೂ ನೆನಪಾಗುವುದು ಬೆಂಗಳೂರಿನ ಇಸ್ಕಾನ್ ಟೆಂಪಲ್. ಆದರೆ ಮೈಸೂರಿನಲ್ಲಿಯೂ ಇಸ್ಕಾನ್ ಟೆಂಪಲ್ ಇದೆ. ಈ ದೇವಾಲಯವು ಕೃಷ್ಣ ಮತ್ತು ರಾಧೆಗೆ ಸಮರ್ಪಿತವಾಗಿದೆ. ಜನರು ಹೆಚ್ಚಾಗಿ ದೇವಾಲಯದಲ್ಲಿ ಸ್ವಲ್ಪ ಸಮಯ ಶಾಂತಿಯನ್ನು ಕಳೆಯಲು ಇಲ್ಲಿಗೆ ಬರುತ್ತಾರೆ. ಇದರೊಂದಿಗೆ ದಿನನಿತ್ಯದ ಪೂಜೆಗಳು, ಕೀರ್ತನೆಗಳು ಮತ್ತು ಕೆಲವು ಧಾರ್ಮಿಕ ಆಚರಣೆಗಳನ್ನು ಸಹ ಇಲ್ಲಿ ನಡೆಸಲಾಗುತ್ತದೆ.

ನೀವು ಭಾನುವಾರ ಇಲ್ಲಿಗೆ ಬರುತ್ತಿದ್ದರೆ, ಇಲ್ಲಿನ ರುಚಿಕರವಾದ ಪ್ರಸಾದವನ್ನು ಸವಿಯದೆ ಹಿಂತಿರುಗಬೇಡಿ. ಭಕ್ತರು ಇಲ್ಲಿ ಸ್ವಲ್ಪ ಹೊತ್ತು ಕುಳಿತು ದೇವರ ಧ್ಯಾನ ಮಾಡುತ್ತಾರೆ, ಜೊತೆಗೆ ಇಸ್ಕಾನ್ ಪ್ರಸ್ತುತಪಡಿಸುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರವಚನಗಳಲ್ಲಿ ಭಾಗವಹಿಸುತ್ತಾರೆ. ಜನ್ಮಾಷ್ಟಮಿ, ಹೋಳಿ, ಏಕಾದಶಿ, ಗೌರ್ ಪೂರ್ಣಿಮಾ ಮತ್ತು ರಾಧಾ ಅಷ್ಟಮಿಯನ್ನು ಇಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನ

ಮುಡುಕುತೊರೆ ಮಲ್ಲಿಕಾರ್ಜುನ ದೇವಸ್ಥಾನ

ಐತಿಹಾಸಿಕ ಕ್ಷೇತ್ರ ತಲಕಾಡು ಬಳಿಯಿರುವ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಂಗಳೂರಿನಿಂದ ಸುಮಾರು 125 ಕಿಮೀ ದೂರದಲ್ಲಿದೆ. ಕನ್ನಡದಲ್ಲಿ ಮುಡುಕುತೊರೆ ಎಂದರೆ ತಿರುಗುವುದು ಮತ್ತು ಹರಿಯುವುದು ಎಂದರ್ಥ. ಕಾವೇರಿ ನದಿಯು ಈ ಸ್ಥಳದಲ್ಲಿ ತಿರುವು ಪಡೆದು ಶ್ರೀರಂಗಪಟ್ಟಣದ ಕಡೆಗೆ ಹರಿಯುತ್ತದೆ. ಶಿವಲಿಂಗದ ರೂಪದಲ್ಲಿರುವ ಶಿವನನ್ನು ಇಲ್ಲಿ ಮಲ್ಲಿಕಾರ್ಜುನೇಶ್ವರ ಎಂದು ಪೂಜಿಸಲಾಗುತ್ತದೆ. ದೇವಾಲಯವು 200 ಅಡಿ ಎತ್ತರದ ಬೆಟ್ಟದ ಮೇಲಿದೆ.

ದೇವಾಲಯದ ನಿರ್ಮಾಣವು ದ್ರಾವಿಡ ಶೈಲಿಯನ್ನು ಹೋಲುತ್ತದೆಯಾದರೂ ಇತ್ತೀಚೆಗೆ ನವೀಕರಿಸಲಾಗಿದೆ. ದೇವಸ್ಥಾನಕ್ಕೆ ಒಂದೋ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು ಅಥವಾ 500 ಮೀ ವರೆಗೆ ವಾಹನವನ್ನು ತೆಗೆದುಕೊಂಡು ಹೋಗಿ ಒಂದು ಕಡೆ ನಿಲ್ಲಿಸಬೇಕಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಈ ಸ್ಥಳಕ್ಕೆ ಸಾಂದರ್ಭಿಕವಾಗಿ ಭೇಟಿ ನೀಡುತ್ತಾರೆ. ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಪೂಜೆ ಸಲ್ಲಿಸುತ್ತಾರೆ. ನದಿಯ ಬದಿಯಲ್ಲಿ ಊಟವನ್ನು ತಯಾರಿಸುತ್ತಾರೆ. ವಾರಾಂತ್ಯದಲ್ಲಿ ಇಲ್ಲಿಗೆ ಬಂದು ದೇವರ ದರ್ಶನ ಪಡೆದು, ಪ್ರಶಾಂತ ವಾತವರಣದಲ್ಲಿ ಕಾಲ ಕಳೆಯಲು ಅದ್ಭುತವಾದ ಸ್ಥಳವಾಗಿದೆ.

ಶ್ರೀ ಶ್ವೇತ ವರಾಹ ಸ್ವಾಮಿ ದೇವಸ್ಥಾನ

ಶ್ರೀ ಶ್ವೇತ ವರಾಹ ಸ್ವಾಮಿ ದೇವಸ್ಥಾನ

ಶ್ರೀ ಶ್ವೇತ ವರಾಹ ಸ್ವಾಮಿ ದೇವಸ್ಥಾನವನ್ನು ವರಾಹಸ್ವಾಮಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇದು ವರಾಹ ದೇವರಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಮೈಸೂರು ಅರಮನೆ ಬಳಿ ಇದೆ. ಈ ದೇವಾಲಯವು ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ದೇವಾಲಯವು ಸುಮಾರು 17 ನೇ ಶತಮಾನದ ರಾಮಾಯಣದ ಕಥೆಗಳನ್ನು ಚಿತ್ರಿಸುವ ವಿವಿಧ ಗ್ರಂಥಗಳು ಮತ್ತು ಚಿತ್ರಗಳನ್ನು ಹೊಂದಿದೆ.

ದೇವಾಲಯದ ಮುಖ್ಯ ದೇವತೆಯಾದ ವರಾಹವು ಶುದ್ಧ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ದೇವಾಲಯದ ಗೋಡೆಗಳು ವಿಶಿಷ್ಟವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿವೆ. ದೇವಾಲಯದ ಕಂಬಗಳು, ಬಾಗಿಲುಗಳು ಮತ್ತು ಗೋಡೆಗಳ ಮೇಲೆ ಮಹಾಭಾರತದ ಕಥೆಗಳನ್ನು ವಿವರಿಸಲಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಸಮಯ: ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ

ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ

ಮೈಸೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಾಲಯವು ನಂಬಿನಾರಾಯಣ ದೇವರಿಗೆ ನೆಲೆಯಾಗಿದ್ದು, ಇದು ವಿಷ್ಣು ದೇವರ ಅವತಾರಗಳಲ್ಲಿ ಒಂದಾಗಿದೆ. ಲಕ್ಷ್ಮೀ ದೇವಿ ಮತ್ತು ವೇಣುಗೋಪಾಲ ದೇವರುಗಳೂ ಕೂಡಾ ಈ ದೇವಾಲಯದಲ್ಲಿ ನೆಲೆಸಿದೆ. ದೇವಾಲಯದಲ್ಲಿನ ಒಂದು ಶಾಸನವು 1851 ರ ಹಿಂದಿನದ್ದಾಗಿದ್ದು, ಇದು IIIನೆ ಕೃಷ್ಣರಾಜ ಒಡೆಯರ್ ರ ಆಳ್ವಿಕೆಯಲ್ಲಿ ದೇವಾಲಯದ ನವೀಕರಣದ ಅವಧಿಯನ್ನು ಕೇಂದ್ರೀಕರಿಸುತ್ತದೆ. ಈ ದೇವಾಲಯವನ್ನು ಸುತ್ತುವರೆದಿರುವ ಆಸಕ್ತಿದಾಯಕ ದಂತಕಥೆಗಳು ಮೈಸೂರಿನಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ

ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ

ಈ ದೇವಾಲಯವು 1829ರಲ್ಲಿ ನಿರ್ಮಿತವಾದುದಾಗಿದ್ದು ಕೃಷ್ಣದೇವರಿಗೆ ಅರ್ಪಿತವಾದುದಾಗಿದೆ. ಮೂರನೇ ಕೃಷ್ಣರಾಜ ಒಡೆಯರ್ ಅವರು ಕಂಚಿನ 40 ದೇವರುಗಳು, ದೇವತೆಗಳು ಮತ್ತು ಸಂತರ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿದ್ದರು. ದೇವಾಲಯವು ಮಹಾರಾಜನ ಪ್ರತಿಮೆಯನ್ನು ಸಹ ಹೊಂದಿದ್ದು ಆತನನ್ನು ಸಹ ದೇವತೆಗಳೊಂದಿಗೆ ಪೂಜಿಸಲಾಗುತ್ತದೆ. ಕಲಾಭಿಮಾನಿಗಳು ಅದರ ಗೋಡೆಗಳ ಮೇಲಿನ 19ನೇ ಶತಮಾನದ ಸುಂದರವಾದ ವರ್ಣಚಿತ್ರಗಳನ್ನು ಅನ್ವೇಷಿಸಲು ಅದ್ಭುತ ಸಮಯವನ್ನು ಹೊಂದುತ್ತಾರೆ.

ಮಹಾಬಲೇಶ್ವರ ದೇವಾಲಯ

ಮಹಾಬಲೇಶ್ವರ ದೇವಾಲಯ

ಈ ಪುರಾತನ ದೇವಾಲಯವು ಚಾಮುಂಡಿ ಬೆಟ್ಟದ ತುದಿಯಲ್ಲಿದೆ. ಚಾಮುಂಡಿ ದೇವಾಲಯವು ಪ್ರಾಮುಖ್ಯತೆಯನ್ನು ಪಡೆಯುವ ಮೊದಲು ಇದು ಹೆಚ್ಚು ಮಹತ್ವವನ್ನು ಪಡೆದಿತ್ತು. ಮಹಾಬಲಾದ್ರಿ ಅಥವಾ ಮಹಾಬಲ ತೀರ್ಥವು ಚಾಮುಂಡಿ ಬೆಟ್ಟದ ಮತ್ತೊಂದು ಹೆಸರಾಗಿದ್ದು, ಇದನ್ನು ದೇವಾಲಯದ ಅಧಿದೇವತೆಯ ಹೆಸರಿನಿಂದ ರಚಿಸಲಾಗಿದೆ. ಕ್ರಿ.ಶ. 950 ರ ಹಿಂದಿನದ, ಇದು ಹೊಯ್ಸಳರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿತ್ತು. ಸಪ್ತಮಾತೃಕರು, ಭೈರವ, ನಟರಾಜ ಮತ್ತು ಪಾರ್ವತಿ ದೇವತೆಗಳು, ಅವರ ವಿಗ್ರಹಗಳು ಈ ದೇವಾಲಯದಲ್ಲಿ ಕಂಡುಬರುತ್ತವೆ.

ಶ್ವೇತ ವರಾಹಸ್ವಾಮಿ ದೇವಾಲಯ

ಶ್ವೇತ ವರಾಹಸ್ವಾಮಿ ದೇವಾಲಯ

ವರಾಹಸ್ವಾಮಿ ದೇವಾಲಯವು ಈ ದೇವಾಲಯದ ಇನ್ನೊಂದು ಹೆಸರಾಗಿದ್ದು, ಇದು ಹೊಯ್ಸಳ ವಾಸ್ತುಶಿಲ್ಪವನ್ನು ಅನುಸರಿಸುತ್ತದೆ. ಇದರ ಸಂಕೀರ್ಣ ಮತ್ತು ಕಲಾತ್ಮಕ ದ್ವಾರಗಳು, ಕಂಬಗಳು ಮತ್ತು ಗೋಪುರಗಳು ಅನೇಕ ಪ್ರವಾಸಿಗರು ಮತ್ತು ಛಾಯಾಗ್ರಾಹಕರನ್ನು ಆಕರ್ಷಿಸುತ್ತವೆ. ಗೋಡೆಗಳ ಮೇಲಿನ ವರ್ಣಚಿತ್ರಗಳು ರಾಮಾಯಣ ಮತ್ತು ಭಾಗವತಕ್ಕೆ ಸಮರ್ಪಿತವಾಗಿವೆ. ಚಿಕ್ಕ ದೇವರಾಜ ಒಡೆಯರ್ ಯಾರ ಆಳ್ವಿಕೆಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. 12-13 ನೇ ಶತಮಾನದ ಶಾಸನಗಳು ದೇವಾಲಯದ ಹೊರಗೋಡೆಗಳಲ್ಲಿ ಕಂಡುಬರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X