Search
  • Follow NativePlanet
Share
» »ಇಂದಿಗೂ ಮಿನುಗುತ್ತಿರುವ ಮೀರ್ಜನ್ ಕೋಟೆ

ಇಂದಿಗೂ ಮಿನುಗುತ್ತಿರುವ ಮೀರ್ಜನ್ ಕೋಟೆ

ಗತಕಾಲದ ಇತಿಹಾಸದ ಕುರುಹುಗಳಾಗಿ ನಿಂತಿರುವ ಈ ಕೋಟೆಗಳು ಇಂದು ಪ್ರವಾಸ ತಾಣವಾಗಿವೆ. ಇಂದಿಗೂ ಸುಂದರವಾಗಿ ಕಂಗೊಳಿಸುವ ಕೋಟೆಗಳಲ್ಲಿ ಕುಮಟಾದ ಮೀರ್ಜನ್ ಕೋಟೆಯು ಒಂದು.

By Divya

ರಾಜ ಮಹರಾಜರ ಕಾಲದಲ್ಲಿ ಶತ್ರುಗಳ ರಕ್ಷಣೆಗಾಗಿ ಕೋಟೆಗಳ ನಿರ್ಮಾಣಮಾಡಲಾಗುತ್ತಿತ್ತು ಎನ್ನುವುದು ಒಂದು ವಿಚಾರ. ಬ್ರಿಟಿಷರು ತಮ್ಮ ವ್ಯಾಪಾರಗಳಿ ಅನುಕೂಲವಾಗಲು ಕೋಟೆಗಳ ನಿರ್ಮಾಣ ಮಾಡಿಕೊಳ್ಳುತಿದ್ದರು ಎನ್ನುವುದು ಇನ್ನೊಂದು ವಿಚಾರ. ಈ ಎರಡು ಉದ್ದೇಶಗಳಿಗಾಗಿ ಆಕಾಲದಲ್ಲಿ ನಿರ್ಮಿಸಲಾದ ಕೋಟೆಗಳು ಇಂದಿಗೂ ಜೀವಂತವಾಗಿವೆ. ಗತಕಾಲದ ಇತಿಹಾಸದ ಕುರುಹುಗಳಾಗಿ ನಿಂತಿರುವ ಈ ಕೋಟೆಗಳು ಇಂದು ಪ್ರವಾಸ ತಾಣವಾಗಿವೆ. ಸುಂದರವಾಗಿ ಕಂಗೊಳಿಸುವ ಕೋಟೆಗಳಲ್ಲಿ ಕುಮಟಾದ ಮೀರ್ಜನ್ ಕೋಟೆಯು ಒಂದು.

ಬೆಂಗಳೂರಿನಿಂದ 464.8 ಕಿ.ಮೀ. ವ್ಯಾಪ್ತಿಯಲ್ಲಿ ಇರುವ ಈ ಕೋಟೆ ಕುಮಟಾ-ಗೋಕರ್ಣ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಅಘನಾಶಿನಿ ನದಿಯ ದಂಡೆಯ ಮೇಲೆ ಕೋಟೆ ನಿಂತಿದೆ. ಕುಮಟಾದಲ್ಲಿ ಉತ್ತಮ ವಸತಿ ವ್ಯವಸ್ಥೆಯನ್ನು ಹೊಂದಬಹುದು.

ಕೋಟೆಯ ಹಿನ್ನೆಲೆ

ಕೋಟೆಯ ಹಿನ್ನೆಲೆ

ಮೀರ್ಜನ್ ಕೋಟೆಯನ್ನು ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರು, ಡಚ್ಚರು ಮತ್ತು ಫ್ರೆಂಚರು ಸಂಬಾರ ಪದಾರ್ಥಗಳ ಮಾರಾಟಕ್ಕೆ ವ್ಯಾಪಾರ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ನಂತರದ ದಿನದಲ್ಲಿ ಬ್ರಿಟಿಷರು ದೊಡ್ಡ ಗೋದಾಮವೊಂದನ್ನು ನಿರ್ಮಿಸಿದ್ದರು ಎನ್ನಲಾಗುತ್ತದೆ.

PC: en.wikipedia.org

ಮಾರಾಟ ಕೇಂದ್ರ

ಮಾರಾಟ ಕೇಂದ್ರ

ಯುರೋಪ್ ದೇಶಗಳಿಗೆ ಕೇರಳದ ವರ್ತಕರು ಬೆಲ್ಲ, ತೆಂಗಿನಕಾಯಿ, ಎಣ್ಣೆ, ದಾಲ್ಚಿನಿ, ಜಾಯಕಾಯಿ, ಅಡಿಕೆ ಹಾಗೂ ಅಕ್ಕಿಯನ್ನು ಇಲ್ಲಿಗೆ ತಂದು ವ್ಯಾಪಾರ ನಡೆಸುತ್ತಿದ್ದರು.

PC: en.wikipedia.org

ರಾಜರ ಆಳ್ವಿಕೆ

ರಾಜರ ಆಳ್ವಿಕೆ

1500ರ ದಶಕದಲ್ಲಿ ಮೀರ್ಜನ್‍ಅನ್ನು ವಿಜಯನಗರದ ಸಾಮಂತರು ಆಳುತ್ತಿದ್ದರು. ಗೇರುಸೊಪ್ಪದ ಚೆನ್ನಭೈರದೇವಿಯು ಅತ್ಯಂತ ಪ್ರಸಿದ್ಧ ರಾಣಿ. ಆಕೆಯ ರಾಜ್ಯವು ಮೆಣಸಿನ ಬೆಳೆ ಬೆಳೆಯಯುವುದರಲ್ಲಿ ಹೆಸರು ಮಾಡಿತ್ತು. ಹಾಗಾಗಿ ಪೋರ್ಚುಗೀಸರು ಮೆಣಸಿನ ರಾಣಿ ಎಂದೇ ಕರೆಯುತ್ತಿದ್ದರು. ವಿಜಯ ನಗರದ ಸಾಮ್ರಾಜ್ಯವು ಕ್ಷೀಣಿಸಿದಾಗ ಬಿಜಾಪುರದ ಆದಿಲ್ ಶಾಹಿಗಳ ಕೈ ಸೇರಿತು. ಆ ನಂತರ ಮರಾಠರು, ಹೈದರಾಲಿ, ಟಿಪ್ಪು ಸುಲ್ತಾನ್ ಹಾಗೂ ಕೊನೆಯಲ್ಲಿ ಬ್ರಿಟಿಷರು ಇದನ್ನು ವಶಪಡಿಸಿಕೊಂಡರು.

PC: commons.wikimedia.org

ಕೋಟೆಯ ಸುತ್ತಳತೆ

ಕೋಟೆಯ ಸುತ್ತಳತೆ

ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಮೀರ್ಜನ್ ಕೋಟೆಯು ಒಂದು. ಈ ಕೋಟೆಯು ಸುಮಾರು 11.5 ಎಕರೆಗಳಷ್ಟು ವೀಸ್ತೀರ್ಣವನ್ನು ಹೊಂದಿದೆ.

PC: en.wikipedia.org

ಕೋಟೆಯ ವಿನ್ಯಾಸ

ಕೋಟೆಯ ವಿನ್ಯಾಸ

ಕೆಂಪು ಕಲ್ಲುಗಳಿಂದ ನಿರ್ಮಿಸಲಾದ ಈ ಕೋಟೆ ನಾಲ್ಕು ದ್ವಾರಗಳನ್ನು ಹೊಂದಿದೆ. ಪ್ರತಿಯೊಂದು ದ್ವಾರದಲ್ಲೂ ಅಗಲವಾದ ಮೆಟ್ಟಿಲುಗಳ ಸಾಲುಗಳಿವೆ. ಕೋಟೆಯ ಒಳಗಡೆ ಒಂದು ಮುಖ್ಯ ದ್ವಾರ, ಗುಪ್ತ ದ್ವಾರ, ಬಾವಿ, ಹಾಳು ಬಿದ್ದ ದರ್ಬಾರ್ ಹಾಲ್, ವಿಸ್ತಾರವಾದ ಮಾರುಕಟ್ಟೆಯ ಪ್ರದೇಶ ಹಾಗೂ ಕೋಟೆಯ ಸುತ್ತ 12 ಬುರುಜುಗಳನ್ನು ನೋಡಬಹುದು.

PC: en.wikipedia.org

ಸುತ್ತ ಪರಿಸರ

ಸುತ್ತ ಪರಿಸರ

ಪ್ರಶಾಂತವಾದ ಸ್ಥಳವನ್ನು ಹೊಂದಿರುವ ಈ ಕೋಟೆಗೆ ಜನ ಸಂದಣಿ ಕಡಿಮೆ ಎಂದೇ ಹೇಳಬಹುದು. ಸುಂದರ ಪ್ರಕೃತಿ ಸೌಂದರ್ಯದ ಸೆರೆ ಹಿಡಿಯಲು ಇದೊಂದು ಸೂಕ್ತ ಸ್ಥಳ.

PC: en.wikipedia.org

ಹತ್ತಿರದ ಆಕರ್ಷಣೆ

ಹತ್ತಿರದ ಆಕರ್ಷಣೆ

ಕಡಲ ತೀರದ ಹತ್ತಿರ ಇರುವ ಈ ತಾಣಕ್ಕೆ ಬಂದರೆ ಕುಡ್ಲೆ ಕಡಲ ತೀರ, ಅರ್ಧ ಚಂದ್ರ ಕಡಲ ತೀರ, ಗೋಕರ್ಣ ಸಮುದ್ರ ಹಾಗೂ ಮುರುಡೇಶ್ವರ ಸಮುದ್ರ ತೀರಗಳನ್ನು ನೋಡಬಹುದು.

PC: en.wikipedia.org

Read more about: uttara kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X