Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರವಾರ » ಆಕರ್ಷಣೆಗಳು » ಸದಾಶಿವಗಡ ಬೆಟ್ಟದ ಕೋಟೆ

ಸದಾಶಿವಗಡ ಬೆಟ್ಟದ ಕೋಟೆ, ಕಾರವಾರ

2

ಕಾಳಿ ನದಿಯ ದಡದ ಮೇಲಿರುವ ಜನಪ್ರಿಯವಾದ ಸದಾಶಿವಗಡ ಬೆಟ್ಟದ ಕೋಟೆಯು ಕಾರವಾರ ನಗರದಿಂದ 5 ಕಿ.ಮೀ ದೂರದಲ್ಲಿದೆ. 200 ಅಡಿ ಎತ್ತರದ ಬೆಟ್ಟದ ಮೇಲಿರುವ ಈ ಕೋಟೆಯು ಸೊಂದೆ ರಾಜನಿಂದ 1698 ರಲ್ಲಿ ನಿರ್ಮಿಸಲ್ಪಟ್ಟಿದೆ. ತದನಂತರ ಬಸವಲಿಂಗರಾಜನು ತನ್ನ ತಂದೆಯಾದ ಸದಾಶಿವಲಿಂಗರಾಜನ ಗೌರವಾರ್ಥವಾಗಿ ಇದಕ್ಕೆ 'ಸದಾಶಿವಗಡ' ಎಂಬ ನಾಮಕರಣ ಮಾಡಿದನು.ಈ ಕೋಟೆಯಲ್ಲಿ ದುರ್ಗಾ ದೇವಿಯ ದೇವಸ್ಥಾನ ಹಾಗು 17ನೇ ಶತಮಾನದ ಕರೀಮುದ್ದೀನ ಘೌಸೆ ಜಿಲಾನಿ ದರ್ಗಾವನ್ನು ಕಾಣಬಹುದಾಗಿದೆ. ಈ ಕೋಟೆಯು ಪೋರ್ಚುಗೀಸರು, ಮರಾಠರು ಮತ್ತು ಬ್ರಿಟೀಷರು ಹಿಗೆ ಮುಂತಾದ ಹಲವು ಆಡಳಿತಗಾರರನ್ನು ಕಂಡಿದೆ.ಕೋಟೆಯ ಮೇಲೆ ನಿಂತಾಗ ಪ್ರಾಕೃತಿಕ ಸೊಬಗಿನ ಅತ್ಯದ್ಭುತ ದೃಶ್ಯಗಳನ್ನು ಸವಿಯಬಹುದಾಗಿದ್ದು, ಕಾಳಿ ನದಿಯು ಅರೇಬಿಯನ್ ಸಮುದ್ರದಲ್ಲಿ ಸೇರುವುದನ್ನು ಕೂಡ ಕಾಣಬಹುದು. 1783 ರಲ್ಲಿ ಈಸ್ಟ ಇಂಡಿಯಾ ಕಂಪನಿಯ ಜನರಲನಾದ ಮ್ಯಾಥಿವನು ಈ ಕೋಟೆಯ ಬಹುಪ್ರಮಾಣವನ್ನು ನಾಶ ಮಾಡಿದ್ದರಿಂದ ಸದ್ಯ ಇದು ಅವಶೇಷಗಳ ತಾಣವಾಗಿದೆ. ಕಾರವಾರಿನಿಂದ ಸ್ಥಳೀಯ ಬಸ್ಸುಗಳು, ಟ್ಯಾಕ್ಸಿಗಳು ಇಲ್ಲಿಗೆ ತಲುಪಲು ಲಭ್ಯವಿದೆ.

One Way
Return
From (Departure City)
To (Destination City)
Depart On
27 Aug,Thu
Return On
28 Aug,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Aug,Thu
Check Out
28 Aug,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Aug,Thu
Return On
28 Aug,Fri