Search
  • Follow NativePlanet
Share
» »ಮಥುರಾ ಎಂಬ ಕೃಷ್ಣನ ಮಧುರ ನಿವಾಸ

ಮಥುರಾ ಎಂಬ ಕೃಷ್ಣನ ಮಧುರ ನಿವಾಸ

By Vijay

ಮಥುರಾ ಪಟ್ಟಣವನ್ನು ಮೂಲತಃವಾಗಿ 'ಬ್ರಿಜ್ ಭೂಮಿ' ಅಥವಾ ಲ್ಯಾಂಡ್ ಆಫ್ ಎಟರ್ನಲ್ ಲವ್ (ಚಿರಂತನ ಪ್ರೀತಿಯ ತವರೂರು) ಎಂದೇ ಕರೆಯುತ್ತಾರೆ. ಇಂದಿಗೂ ಸಹ ಜನರಲ್ಲಿ ಈ ಪಟ್ಟಣದ ಬಗ್ಗೆ ಪೂಜ್ಯಭಾವನೆಯು ಅಚ್ಚಳಿಯದೆ ನಿಂತಿದೆ. ಕಾರಣ ಈ ಸ್ಥಳವು ಶ್ರೀಕೃಷ್ಣ ಭಗವಾನನ ಜನ್ಮ ಸ್ಥಳವಾಗಿರುವುದರಿಂದ ಸಾಕಷ್ಟು ಪಾವಿತ್ರ್ಯತೆ ಪಡೆದಿದೆ.

ಕ್ಲಿಕ್ ಮಾಡಿ ಯಾತ್ರಾ ಕೂಪನ್ ಗಳನ್ನು ಉಚಿತವಾಗಿ ಪಡೆಯಿರಿ

ಈ ಹೆಸರು ಬರಲು ಕಾರಣವೇನೆಂದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನು ಇಲ್ಲೆ ತನ್ನ ಬಾಲ್ಯದ ದಿನಗಳನ್ನು ಗೋಪಿಕಾ ಸ್ತ್ರೀಯರ ಜೊತೆ ತುಂಟಾಟವಾಡುತ್ತ, ನಕ್ಕು ನಲಿಯುತ್ತ ಮಧುರವಾಗಿ ಕಳೆದಿದ್ದರಿಂದಲೆ. ಶ್ರೀಕೃಷ್ಣನ ರಾಸಲೀಲೆಗಳು ಹಿಂದೂ ಭಕ್ತರ ಮನದಲ್ಲಿ ಇಂದಿಗೂ ಅಚ್ಚಳಿಯದೆ ಶಾಶ್ವತವಾಗಿ ನೆಲೆಸಿವೆ. ಶ್ರೀಕೃಷ್ಣನ ಲೀಲೆಗಳು ಇಂದಿಗೂ ಸಹ ಭಜನೆಗಳಲ್ಲಿ, ಚಿತ್ರಕಲೆಗಳಲ್ಲಿ ಎದ್ದು ಕಾಣುವುದನ್ನು ನೋಡಬಹುದು.

ವಿಶೇಷ ಲೇಖನ : ಭಾರತದ ಆಧ್ಯಾತ್ಮಿಕ ರಾಜಧಾನಿ

ಹಿಂದೂಗಳ ಹಲವಾರು ಬಗೆಯ ಕಲೆಗಳು ಇದರಿಂದಲೇ ಜನ್ಮತಾಳಿದ್ದು ಎಂದರೆ ತಪ್ಪಾಗಲಾರದು. 16ನೇ ಶತಮಾನದಲ್ಲಿ ಈ ಪಟ್ಟಣವನ್ನು ಮರುಶೋಧಿಸುವವರೆಗೆ ಕಾಲ್ಪನಿಕ ಕಥೆಯ ಭಾಗವೆಂದೇ ಪರಿಗಣಿಸಲಾಗುತ್ತಿತ್ತು. ಮಥುರಾದ ಬೀದಿ ಬೀದಿಗಳು ಸಾಕಷ್ಟು ವೈವಿಧ್ಯತೆಯಿಂದ ಕೂಡಿದ್ದು ಭೇಟಿ ನೀಡುವವರಿಗೆ ಮನ ಪುಳಕಿತಗೊಳ್ಳುವಂತಹ ಅನುಭವವನ್ನು ಕರುಣಿಸುತ್ತದೆ.

ವಿಶೇಷ ಲೇಖನ : ಜೆಜುರಿಯ ಖಂಡೋಬ

ಪ್ರಸ್ತುತ ಲೇಖನದ ಮೂಲಕ ಮಥುರಾ ಕುರಿತು ಸಂಕ್ಷೀಪ್ತವಾಗಿ ತಿಳಿಯಿರಿ ಹಾಗೂ ಚಿತ್ರಗಳ ಮೂಲಕ ಮಥುರೆಯ ದರುಶನ ಮಾಡಿ. ಮಥುರಾ ಆಗ್ರಾ ಹಾಗೂ ದೆಹಲಿಗಳಿಂದ ಕ್ರಮವಾಗಿ 57 ಮತ್ತು 162 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಈ ಎರಡೂ ನಗರಗಳಿಂದ ಬಸ್ಸುಗಳ ಸಾಕಷ್ಟು ಅನುಕೂಲವಿದೆ.

ಉಪಯುಕ್ತ ಕೊಂಡಿಗಳು : ಆಗ್ರಾ ಹೋಟೆಲುಗಳು ದೆಹಲಿ ಹೋಟೆಲುಗಳು

ಮಥುರಾ ಮೈಮಾಟ:

ಮಥುರಾ ಮೈಮಾಟ:

ಇಂದು ಮಥುರಾ ಪಟ್ಟಣ ಹಿಂದೂಳ ಹಲವಾರು ಪವಿತ್ರ ಕ್ಷೇತ್ರಗಳಲ್ಲಿ ಅತ್ಯಂತ ಮುಖ್ಯವಾದದ್ದಾಗಿದೆ. ಇಲ್ಲಿ ಭಗವಾನ್ ಶ್ರೀಕೃಷ್ಣನ ಹಾಗು ರಾಧೆಯ ಅನೇಕ ಮಂದಿರಗಳಿವೆ. 8ನೇ ಶತಮಾನಕ್ಕೂ ಮುನ್ನ ಈ ಪಟ್ಟಣವು ಬೌದ್ಧ ಧರ್ಮದ ನೆಲೆಯಾಗಿತ್ತು. ಮಥುರಾ ನಗರದ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ.

ಚಿತ್ರಕೃಪೆ: Poco a poco

ಮಥುರಾ ಮೈಮಾಟ:

ಮಥುರಾ ಮೈಮಾಟ:

ಸುಮಾರು 3,000ಕ್ಕೂ ಅಧಿಕ ಬೌದ್ಧ ಧರ್ಮಿಯರಿಗೆ ಈ ಪಟ್ಟಣ ಮನೆಯಾಗಿತ್ತು. ಅಫ್ಘನ್ ದೊರೆ ಮುಹಮ್ಮದ್ ಘಜನಿಯ ದಾಳಿಗೆ ಅನೇಕ ಬೌದ್ಧ ಧಾಮಗಳು ನಾಶವಾದವು. ಚಿತ್ರದಲ್ಲಿರುವುದು ಮಥುರಾದ ಬಾಂಕೇ ಬಿಹಾರಿ ಮಂದಿರ.

ಚಿತ್ರಕೃಪೆ: Rajatdesiboy

ಮಥುರಾ ಮೈಮಾಟ:

ಮಥುರಾ ಮೈಮಾಟ:

ಇವನ ತರುವಾಯ 16ನೇ ಶತಮಾನದಲ್ಲಿ ಔರಂಗಜೇಬ್‌ ಅನೇಕ ಮಂದಿರಗಳನ್ನು ನೆಲಸಮ ಮಾಡಿ, ಮಸೀದಿಗಳನ್ನು ಕಟ್ಟಿಸಿದ. ಇಂತಹ ನಾಶವಾದ ಮಂದಿರಗಳಲ್ಲಿ ಕೇಶವ ದೇವ್ ಮಂದಿರವೂ ಸಹ ಒಂದಾಗಿತ್ತು. ಕೇಶವ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: Maria Kamptner

ಮಥುರಾ ಮೈಮಾಟ:

ಮಥುರಾ ಮೈಮಾಟ:

ಈ ಪವಿತ್ರ ಪಟ್ಟಣಕ್ಕೆ ವರ್ಷದಾದ್ಯಂತ ಭಕ್ತ ಸಾಗರವೇ ಹರಿದು ಬರುತ್ತದೆ. ವಿಶೇಷವಾಗಿ ಹೋಳಿ ಹಬ್ಬ ಹಾಗು ಕೃಷ್ಣ ಜನ್ಮಾಷ್ಟಮಿಯ ಹಬ್ಬಗಳ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಅತಿ ಹೆಚ್ಚಾಗಿರುತ್ತದೆ. ಕೃಷ್ಣಾಷ್ಟಮಿಯ ದಿನ ಶ್ರೀಕೃಷ್ಣನು ಜನ್ಮತಾಳಿದ್ದ ದಿನ. ಇದು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.

ಚಿತ್ರಕೃಪೆ: Sreeram Nambiar

ಮಥುರಾ ಮೈಮಾಟ:

ಮಥುರಾ ಮೈಮಾಟ:

ಯಮುನಾ ನದಿಯ ತಟದಲ್ಲಿ ನೆಲೆಸಿರುವ ಮಥುರಾ ಪಟ್ಟಣ ಭಾರತೀಯ ಸಂಸ್ಕೃತಿ ಹಾಗು ನಾಗರಿಕ ಸಮಾಜದ ಸ್ಥಾಪನೆಗೆ ಮಥುರಾ ಪಟ್ಟಣವು ತವರೂರು ಎಂದರೆ ತಪ್ಪಾಗಲಾರದು. ಆಧ್ಯಾತ್ಮಿಕ ಸಾಧಕರಿಗೆ ಭಾರತ ದೇಶ ಒಂದು ಗಮ್ಯಸ್ಥಾನವಾಗಿದೆ. ಚಿತ್ರದಲ್ಲಿರುವುದು ವಿಶ್ರಾಮ್ ಘಾಟ್.

ಚಿತ್ರಕೃಪೆ: Hemant Shesh

ಮಥುರಾ ಮೈಮಾಟ:

ಮಥುರಾ ಮೈಮಾಟ:

ಶಾಂತಿ ಮತ್ತು ಜ್ಞಾನೋದಯದ ಹುಡುಕಾಟದಲ್ಲಿರುವ ಭಕ್ತರು, ಆಧ್ಯಾತ್ಮ ಸಾಧಕರು ಈ ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಆಶ್ರಮಗಳಲ್ಲಿ ಹಾಗು ಮಂದಿರಗಳಲ್ಲಿ ಕಾಲ ಕಳೆಯುತ್ತಾರೆ. ಬೌದ್ಧ, ಜೈನ ಹಾಗು ಹಿಂದೂಗಳು ಈ ಮಥುರಾ ಪಟ್ಟಣವನ್ನು ಒಂದು ಪವಿತ್ರ ಸ್ಥಳ ಎಂದೇ ಪರಿಗಣಿಸುತ್ತಾರೆ. ಮಥುರಾದಲ್ಲಿರುವ ಜೈ ಗುರುದೇವ ಮಂದಿರ.

ಚಿತ್ರಕೃಪೆ: Steve Jurvetson

ಮಥುರಾ ಮೈಮಾಟ:

ಮಥುರಾ ಮೈಮಾಟ:

ಶ್ರೀಕೃಷ್ಣ ಜನ್ಮಭೂಮಿ ಮಂದಿರ, ಇಲ್ಲಿ ಉಪಸ್ಥಿತವಿರುವ ಅನೇಕ ಪವಿತ್ರ ಮಂದಿರಗಳಲ್ಲಿ ಮುಖ್ಯವಾದದ್ದು. ನಿಜ ಹೇಳಬೇಕೆಂದರೆ, ಮಥುರಾ ಪಟ್ಟಣದಲ್ಲಿರುವ ಪ್ರತಿಯೊಂದು ಆಕರ್ಷಣೆಯೂ ಶ್ರೀಕೃಷ್ಣನಿಗೆ ಸಂಬಂಧ ಪಟ್ಟಿದ್ದಾಗಿರುತ್ತದೆ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ವಿಶ್ರಾಮ್ ಘಾಟ್, ಶ್ರೀಕೃಷ್ಣನು ತನ್ನ ಕ್ರೂರ ಮಾವನಾದ ಕಂಸನನ್ನು ಸದೆಬಡೆಯುವ ಮುನ್ನ ಇದೇ ಸ್ಥಳದಲ್ಲಿ ವಿಶ್ರಮಿಸಿಕೊಂಡಿದ್ದ ಎಂಬ ಪ್ರತೀತಿಯಿದೆ. ದ್ವಾರಕಾಧೀಶ ಮಂದಿರ ಮತ್ತೊಂದು ಮುಖ್ಯ ತಾಣವಾಗಿದ್ದು, ಹಬ್ಬಹರಿದಿನಗಳಲ್ಲಿ ಅಂದರೆ ವಿಶೇಷವಾಗಿ ಜನ್ಮಾಷ್ಟಮಿಯ ದಿನಗಳಲ್ಲಿ ಅತ್ಯಂತ ವೈಭವದಿಂದ ಅಲಂಕೃತಗೊಂಡಿರುತ್ತದೆ. ಮಥುರಾದ ಗೋಕುಲದಲ್ಲಿರುವ ದೇವಾಲಯ.

ಚಿತ್ರಕೃಪೆ: Hidden_macy

ಮಥುರಾ ಮೈಮಾಟ:

ಮಥುರಾ ಮೈಮಾಟ:

ಪಟ್ಟಣದ ಹೊರವಲಯದಲ್ಲಿರುವ ಗೀತಾಮಂದಿರ ಶಿಲ್ಪಕಲೆ ಮತ್ತು ಚಿತ್ರಕಲೆಯ ಮೆರಗನ್ನು ಪ್ರದರ್ಶಿಸುತ್ತದೆ. 1661ನೇ ಇಸ್ವಿಯಲ್ಲಿ ಕಟ್ಟಿಸಿದ ಜಾಮಾ ಮಸೀದಿ ಮುಸ್ಲಿಂ ಬಂಧುಗಳ ಇರುವಿಕೆಯ ಕುರುಹಾಗಿದೆ. ಚಿತ್ರದಲ್ಲಿರುವುದು ವರ್ಸಾನಾದಲ್ಲಿರುವ ರಾಧಾ-ಕೃಷ್ಣರ ಪೂಜೆಗೆ ಮುಡಿಪಾದ ದೇವಾಲಯ.

ಚಿತ್ರಕೃಪೆ: GourangaUK

ಮಥುರಾ ಮೈಮಾಟ:

ಮಥುರಾ ಮೈಮಾಟ:

ಡ್ಯಾಂಪಿಯರ್ ಪಾರ್ಕ್ ಬಳಿ ಇರುವ ಸರಕಾರಿ ಮ್ಯೂಸಿಯಂನಲ್ಲಿ ಕುಶಾನರ ಹಾಗು ಗುಪ್ತರ ಕಾಲದಿಂದಲೂ (ಕ್ರಿ.ಪೂ. 400ರಿಂದ ಕ್ರಿ.ಶ. 1200) ಕಲೆ ಹಾಕಿರುವ ಅನೇಕ ಪ್ರಾಚೀನ ವಸ್ತುಗಳು ಪ್ರದರ್ಶನಕ್ಕಿವೆ. ಇದರ ಜೊತೆಗೆ ಮಥುರೆಯ ಉಳಿದ ಆಕರ್ಷಣೆಗಳೆಂದರೆ, ಕಂಸ ಕಿಲ್ಲಾ, ಪೋಟರ ಕುಂಡ್, ಘಾಟ್ಸ್ ಆಫ್ ಮಥುರಾ. ಮಥುರಾ ಪಟ್ಟಣಕ್ಕೆ ಭೇಟಿ ನೀಡಿದರೆ ಸಮೀಪದಲ್ಲಿರುವ ವೃಂದಾವನದ ಪ್ರವಾಸಕ್ಕೂ ಎಣೆ ಮಾಡಿಕೊಡುತ್ತದೆ.

ಚಿತ್ರಕೃಪೆ: Biswarup Ganguly

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾ ಪಟ್ಟಣವನ್ನು ತಲುಪಲು ಬಸ್, ರೈಲು ಹಾಗು ವಾಯುಯಾನದ ಉತ್ತಮ ಸಂಪರ್ಕವಿದೆ. ಈ ಪಟ್ಟಣಕ್ಕೆ ಅತ್ಯಂತ ಕನಿಷ್ಠ ಅಂತರವಿರುವ ಪ್ರಮುಖ ಸ್ಥಳವೆಂದರೆ ದೆಹಲಿ. ಮಥುರಾ ದೆಹಲಿಯಿಂದ ಸುಮಾರು 162 ಕಿ.ಮೀ ಗಳಷ್ಟು ದೂರವಿದ್ದು ಸಾಕಷ್ಟು ಬಸ್ಸುಗಳು ಮಥುರಾಗೆ ತೆರಳಲು ದೊರೆಯುತ್ತವೆ. ಅಲ್ಲದೆ ರೈಲಿನ ಮೂಲಕ ಮಥುರಾ ಭಾರತದ ಸಾಕಷ್ಟು ಮಹಾನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದ ವೃಂದಾವನದಲ್ಲಿರುವ ತಿಜಾರಾ ಮಹಾವೀರಜಿ ಜೈನ ದೇವಾಲಯ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದ ವೃಂದಾವನದಲ್ಲಿರುವ ಕುಸುಮ ಸರೋವರ ಘಾಟ್.

ಚಿತ್ರಕೃಪೆ: Gaura

ಮಥುರಾ ಮೈಮಾಟ:

ಮಥುರಾ ಮೈಮಾಟ:

ಪೌರಾಣಿಕ ಕಥೆಯಲ್ಲಿ ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ತನ್ನ ಕಿರು ಬೆರಳಿನಲ್ಲಿ ಎತ್ತಿದ್ದ ಪ್ರಸಂಗ ಎಲ್ಲರಿಗೂ ತಿಳಿದೆ ಇರುತ್ತದೆ. ಮಥುರಾದಲ್ಲಿರುವ ಈ ಬೆಟ್ಟವೆ ಗೋವರ್ಧನ ಬೆಟ್ಟ ಎಂದು ನಂಬಲಾಗಿದೆ.

ಚಿತ್ರಕೃಪೆ: Atarax42

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದಲ್ಲಿರುವ ಪ್ರೇಮ ಮಂದಿರ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಪ್ರೇಮ ಮಂದಿರದ ಆವರಣದಲ್ಲಿ ಸುಂದರವಾಗಿ ನಿರ್ಮಿಸಲಾದ ಶ್ರೀಕೃಷ್ಣನು ಕಳಿಂಗ ಸರ್ಪದ ಹೆಡೆಯ ಮೇಲೆ ನರ್ತಿಸುತ್ತಿರುವ ಪ್ರಸಂಗ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದ ವೃಂದಾವನದಲ್ಲಿರುವ ಮದನಮೋಹನ ಮಂದಿರ.

ಚಿತ್ರಕೃಪೆ: Atarax42

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದಲ್ಲಿರುವ ಕೃಷ್ಣ ಬಲರಾಮ ಮಂದಿರದ ಕೃಷ್ಣ-ಬಲರಾಮರ ಜೋಡಿ ವಿಗ್ರಹಗಳು.

ಚಿತ್ರಕೃಪೆ: Gaura

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾ ನಗರದಲ್ಲೊಂದು ಸುತ್ತು. ಪ್ರಮುಖ ಬೀದಿ ಬಳಿಯ ಕಣ್ಮನ ಸೆಳೆಯುವ ಅಂಗಡಿ ಮುಗ್ಗಟ್ಟುಗಳು.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾ ರಸ್ತೆ ಬದಿಯ ವ್ಯಾಪಾರಿ ಮಳಿಗೆಗಳು.

ಚಿತ್ರಕೃಪೆ: Paul Swansen

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದಲ್ಲಿ ವಿದೇಶಿ ಪ್ರವಾಸಿಗರ ಮನ ತಣಿಸಲು ನಿರ್ಮಿತವಾಗಿರುವ ಮ್ಯಾಕ್ ಡೋನಾಲ್ಡ್ಸ್ ಉಪಹಾರ ಮಳಿಗೆ.

ಚಿತ್ರಕೃಪೆ: Koshy Koshy

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾ ರೈಲು ನಿಲ್ದಾಣದಲ್ಲೊಂದು ರಾತ್ರಿ. ತಮ್ಮ ರೈಲಿಗಾಗಿ ಕಾದು ಕುಳಿತಿರುವ ಪ್ರವಾಸಿಗ/ಪ್ರಯಾಣಿಕರು.

ಚಿತ್ರಕೃಪೆ: nborun

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದ ಗೋವಿಂದ ದೇವ ದೇವಾಲಯದ ಎದುರು ಬದಿಯಲ್ಲಿರುವ ಶ್ರೀ ರಂಗನಾಥ (ರಂಗಾಜಿ) ದೇವಾಲಯ. ಈ ಒಂದು ದೇವಾಲಯವು ಮಥುರಾ ಪಟ್ಟಣದಲ್ಲೆ ದಕ್ಷಿಣ ಭಾರತ ಶೈಲಿಯ ವಾಸ್ತುಶಿಲ್ಪ ಹೊಂದಿದ ದೇವಾಲಯವಾಗಿದೆ.

ಚಿತ್ರಕೃಪೆ: rajkumar1220

ಮಥುರಾ ಮೈಮಾಟ:

ಮಥುರಾ ಮೈಮಾಟ:

ಮಥುರಾದಲ್ಲಿರುವ ಶ್ರೀ ಗೋದಾ ದೇವಿ, ಶ್ರೀ ರಂಗಮನ್ನಾರ ಹಾಗೂ ಶ್ರೀ ಗರುಡರ ದೇವಸ್ಥಾನ.

ಚಿತ್ರಕೃಪೆ: rajkumar1220

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X