Search
  • Follow NativePlanet
Share
» »ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ

ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ

By Vijay

ಕಾರಿನಲ್ಲಿ ಸ್ನೇಹಿತರೋಡನೆ ಇಲ್ಲವೆ ಕುಟುಂಬ ಸಮೇತ ಪ್ರವಾಸ ಹೊರಡುವುದೆಂದರೆ ಎಲ್ಲರಿಗೂ ಸಂತಸದ ವಿಷಯವೆ. "ಕಾರಿನ ಮೂಲಕ" ಎಂಬ ನಮ್ಮ ಸರಣಿಯನ್ನು ಮುಂದುವರೆಸುತ್ತ ಇಂದಿನ ಲೇಖನದಲ್ಲಿ ಮಂಗಳೂರಿನಿಂದ ಕಾರವಾರದೆಡೆ ಪ್ರವಾಸ ಮಾಡೋಣ. ವಿಶೇಷವೆಂದರೆ ಈ ಪ್ರಯಾಣದಲ್ಲಿ ಎರಡು ಬಗೆಯ ದೃಶ್ಯಾವಳಿಗಳನ್ನು ಆನಂದಿಸಬಹುದಾಗಿದೆ.

ಪ್ರಯಾಣಿಸುವ ಮಾರ್ಗದ ಎಡ ಭಾಗವು ಸಂಪೂರ್ಣವಾಗಿ ಅರೇಬಿಯನ್ ಸಮುದ್ರಕ್ಕೆ ಸಮಾನಾಂತರವಾಗಿ ಸಾಗಿದರೆ ಬಲಭಾಗವು ಪಶ್ಚಿಮ ಘಟ್ಟಗಳ ದಟ್ಟ ಹಸಿರಿನ ಮಧ್ಯದಲ್ಲಿ ಸಾಗುತ್ತದೆ. ಪ್ರಯಾಣದ ಒಂದು ನಿರ್ದಿಷ್ಟ ಭಾಗದಲ್ಲಂತೂ ರಸ್ತೆಯ ಒಂದು ಬದಿ ಸಮುದ್ರವಿದ್ದರೆ ಇನ್ನೊಂದು ಬದಿಯಲ್ಲಿ ನದಿ ಹರಿಯುವುದನ್ನು ಕಾಣಬಹುದು. ಇಂತಹ ಅಪರೂಪದ ದೃಶ್ಯವು ಈ ಪ್ರಯಾಣ ಮಾರ್ಗದಲ್ಲಿದೆ.

ಹಾಗಾದರೆ ಬನ್ನಿ ಮೊದಲಿಗೆ ಮಂಗಳೂರಿನಿಂದ ಈ ಪ್ರವಾಸ ಆರಂಭಿಸೋಣ. ಪ್ರಮುಖ ಮಾರ್ಗದ ಸಮೇತ ಸಾಗುವಾಗ ಅಲ್ಲಲ್ಲಿ ಕೆಲ ಕಿ.ಮೀ ಗಳ ಅಂತರದಲ್ಲಿ ಸುತ್ತ ಮುತ್ತಲು ಕೆಲವು ಪ್ರವಾಸಿ ಆಕರ್ಷಣೆಗಳಿದ್ದು ಅವುಗಳನ್ನೂ ಸಹ ಈ ಲೇಖನದಲ್ಲಿ ಸೇರಿಸಲಾಗಿದೆ.

ವಿಶೇಷ ಲೇಖನ : ಉಡುಪಿ ಜಿಲ್ಲೆಯ ಸುಂದರ ಆಕರ್ಷಣೆಗಳು

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಮೊದಲಿಗೆ ಮಂಗಳೂರು ನಗರದಿಂದ ಎಡಪಲ್ಲಿ - ಪನ್ವೇಲ್ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17) ಹೆದ್ದಾರಿಯ ಮೂಲಕ ಕರಾವಳಿ ಕಾಲೇಜಿನ ಮಾರ್ಗವಾಗಿ ಪಣಂಬೂರು ಕಡಲ ತೀರಕ್ಕೆ ತಲುಪಬೇಕು. ಈ ಪ್ರಯಾಣವು ಪ್ರಮುಖವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರಲ್ಲೆ ಸಾಗುತ್ತದೆ. ಇದರ ಒಟ್ಟು ದೂರ 9 ಕಿ.ಮೀ ಗಳು ಮಾತ್ರ.

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಪಣಂಬೂರು ಒಂದು ಪ್ರಸಿದ್ಧ ಬಂದರು ಪ್ರದೇಶವಾಗಿದೆ. ಪ್ರವಾಸಿ ಆಕರ್ಷಣೆಯ ಕಡಲ ತೀರವನ್ನು ಪಣಂಬೂರು ಪ್ರದೇಶದಲ್ಲಿ ಕಾಣಬಹುದು. ರಾಷ್ಟ್ರೀಯ ಹೆದ್ದರಿಯಿಂದ ಎಡ ತಿರುವು ಪಡೆದು ಈ ಕಡಲ ತೀರವನ್ನು ಪ್ರವೇಶಿಸಬಹುದು.

ಚಿತ್ರಕೃಪೆ: Karunakar Rayker

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಪಣಂಬೂರಿನಿಂದ ಮತ್ತೆ ರಾಷ್ಟ್ರೀಯ ಹೆದ್ದಾರಿ 17 ಅನ್ನು ಹಿಡಿದು ಪ್ರಯಾಣ ಮುಂದುವರೆಸುತ್ತ ಸುರತ್ಕಲ್ ನೆಡೆ ತೆರಳಬೇಕು. ಸುರತ್ಕಲ್ ಒಂದು ಶೈಕ್ಷಣಿಕ ಕೇಂದ್ರವಾಗಿದ್ದು ಇಲ್ಲಿನ ಸುರತ್ಕಲ್ ಕಡಲ ತೀರವು ಸಾಕಷ್ಟು ಜನಪ್ರೀಯತೆಗಳಿಸಿದೆ. ಒಟ್ಟು ಪ್ರಯಾಣ ಪಣಂಬೂರಿನಿಂದ ಕೇವಲ ಎಂಟು ಕಿ.ಮೀ ಗಳು ಮಾತ್ರ.

ಚಿತ್ರಕೃಪೆ: Abhinaba Basu

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಸುರತ್ಕಲ್ ಕಡಲ ತೀರದಲ್ಲಿ ಸಂತಸಮಯ ಸಮಯ ಕಳೆದ ನಂತರ ಪ್ರಯಾಣ ಮುಂದುವರೆಸುತ್ತ ಶ್ರೀನಿವಾಸ ನಗರದ ಮೂಲಕ ಸಾಗುತ್ತ ಒಟ್ಟು ಏಳು ಕಿ.ಮೀ ಗಳಷ್ಟು ಕ್ರಮಿಸಿ ಪಾವಂಜೆಯನ್ನು ತಲುಪಬೇಕು. ಪಾವಂಜೆಯು ಒಂದು ಚಿಕ್ಕ ಹಸಿರಿನಿಂದ ಕಂಗೊಳಿಸುವ ಹಳ್ಳಿಯಾಗಿದ್ದು ವಿಶೇಷತೆಯೆಂದರೆ ಇಲ್ಲಿ ಶಿವನ ಕುಟುಂಬದವರೆಲ್ಲರ ದೇವಾಲಯಗಳಿವೆ. ಮಹಾಲಿಂಗೇಶ್ವರ, ಮಹಾದೇವಿ, ಗಣಪತಿ ಹಾಗೂ ಸುಬ್ರಹ್ಮಣ್ಯನ ದೇಗುಲಗಳಿಗೆ ಭೇಟಿ ನೀಡಬಹುದು.

ಚಿತ್ರಕೃಪೆ: Rajaramraok

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಪಾವಂಜೆಯಲ್ಲಿನ ದೇವಸ್ಥಾನಗಳ ದರುಶನದ ನಂತರ ನೇರವಾಗಿ ಮುಲ್ಕಿಯೆಡೆ ತೆರಳಬೇಕು. ಮುಲ್ಕಿಯು ಪಾವಂಜೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ ಐದು ಕಿ.ಮೀ ಗಳಷ್ಟು ದೂರದಲ್ಲಿದೆ. ಮುಲ್ಕಿಯು ಪಂಚಾಯಿತಿ ಪಟ್ಟಣವಾಗಿದ್ದು, ಶಾಂಭವಿ ನದಿ ತಟದ ಮೇಲೆ ನೆಲೆಸಿದೆ. ಮುಲ್ಕಿಯಲ್ಲಿ ಕೆಲ ಪ್ರಮುಖ ದೇವಸ್ಥಾನಗಳನ್ನು ನೋಡಬಹುದಾಗಿದ್ದು, ಮುಲ್ಕಿ ಆಂಜನೇಯನೂ ಸಹ ಸಾಕಷ್ಟು ಹೆಸರುವಾಸಿಯಾಗಿದ್ದಾನೆ.

ಚಿತ್ರಕೃಪೆ: AVINASH PRABHU M

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಮುಲ್ಕಿಯಿಂದ ರಾಷ್ಟ್ರೀಯ ಹೆದ್ದಾರಿ ಹಿಡಿದು ನಡಸಾಲ, ಬಾಡಾ ಮಾರ್ಗವಾಗಿ ಸುಮಾರು 20 ಕಿ.ಮೀ ಗಳಷ್ಟು ಪ್ರಯಾಣ ಮಾಡಿ ಉಡುಪಿ ಜಿಲ್ಲೆಯ ಕಾಪು (ಕೌಪ್) ಪ್ರದೇಶಕ್ಕೆ ತಲುಪಬೇಕು. ಇದೊಂದು ಕರಾವಳಿ ಹಳ್ಳಿಯಾಗಿದ್ದು ತನ್ನಲ್ಲಿರುವ ಸುಂದರ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Subhashish Panigrahi

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಕಾಪು ಕಡಲ ತೀರದಲ್ಲಿ ಬೇಕಾದಷ್ಟು ಸಮಯ ಕಳೆದ ನಂತರ ಮತ್ತೆ ಪ್ರಯಾಣ ಮುಂದುವರೆಸುತ್ತ ಸುಮಾರು 15 ಕಿ.ಮೀ ಗಳಷ್ಟು ಕ್ರಮಿಸಿ ಉಡುಪಿಯನ್ನು ತಲುಪಬೇಕು. ಉಡುಪಿಯು ಕರ್ನಾಟಕದ ಪ್ರಮುಖ ತೀರ್ಥ್ ಕ್ಷೇತ್ರಗಳ ಪೈಕಿ ಒಂದಾಗಿದೆ. ಇಲ್ಲಿನ ಉಡುಪಿ ಶ್ರೀಕೃಷಣ ಮಠವು ಸಾಕಷ್ಟು ಪ್ರಖ್ಯಾತವಾಗಿದ್ದು ದೇಶದೆಲ್ಲೆಡೆಯಿಂದ ಜನರು ಇಲ್ಲಿಗೆ ಬರುತ್ತಾರೆ. ಉಡುಪಿಯ ಸಮಗ್ರ ಆಕರ್ಷಣೆಗಳು

ಚಿತ್ರಕ್ರುಪೆ: Ashok Prabhakaran

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಪ್ರಯಾಣ ಮುಂದುವರೆಸುತ್ತ ಉಡುಪಿಯಿಂದ ಪಶ್ಚಿಮಕ್ಕೆ ಆರು ಕಿ.ಮೀ ದೂರದಲ್ಲಿದೆ ಮಲ್ಪೆ ಕಡಲ ತೀರಕ್ಕೆ ತೆರಳಬಹುದು. ಮಲ್ಪೆ ಎಂಬುದು ಒಂದು ಬಂದರು ಪ್ರದೇಶದ ಹೆಸರಾಗಿದ್ದು ಇಲ್ಲಿ ಸಾಕಷ್ಟು ಇತರೆ ಆಕರ್ಷಣೆಗಳನ್ನು ಕಾಣಬಹುದಾಗಿದೆ. ಉಡುಪಿ ನಗರದಿಂದ ಮಲ್ಪೆಗೆ ತೆರಳಲು ಬಸ್ಸುಗಳು ಹಾಗೂ ರಿಕ್ಷಾಗಳೂ ಸಹ ನಿರಾಯಾಸವಾಗಿ ದೊರೆಯುತ್ತವೆ.

ಚಿತ್ರಕೃಪೆ: Balaji.B

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಉಡುಪಿಯ ಮಲ್ಪೆ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಯ ದ್ವೀಪ ಸಮೂಹವು ಉಡೂಪಿಯ ಪ್ರೇಕ್ಷಣೀಯ ಸ್ಥಳವಾಗಿದೆ. ವಿಶೇಷವೆಂದರೆ ಇಲ್ಲಿ ಕಂಡುಬರುವ ಬಸಾಲ್ಟ್ ಶಿಲಾ ರಚನೆಗಳು ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳಾಗಿವೆ. ಈ ರಚನೆಗಳು ಮಡಗಾಸ್ಕರ್ ದೇಶವು ಭಾರತ ಉಪಖಂಡದೊಂದಿಗೆ ಹೊಂದಿಕೊಂಡಿದ್ದಾಗ ಉಂಟಾದವುಗಳು ಎಂದಿ ತಜ್ಞರು ವಿಶ್ಲೇಷಿಸುತ್ತಾರೆ. ಮಲ್ಪೆ ಕಡಲ ತೀರದಿಂದ ಆರು ಕಿ.ಮೀ ದೂರವಿರುವ ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ. ಇದನ್ನು ಕೋಕೋನಟ್ ದ್ವೀಪ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Arun Prabhu

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಸೇಂಟ್ ಮೇರಿಯ ದ್ವೀಪದ ಅಂದ ಚೆಂದಗಳನ್ನು ಸವಿದ ನಂತರ ಮತ್ತೆ ರಾಷ್ಟ್ರೀಯ ಹೆದ್ದಾರಿ ಹಿಡಿದು 50 ಕಿ.ಮೀ ಕ್ರಮಿಸಿ ಮರವಂತೆ ಎಂಬ ಕರಾವಳಿ ಗ್ರಾಮವನ್ನು ತಲುಪಬೇಕು. ಮರವಂತೆಯು ಶಾಂತಮಯ ಹಾಗೂ ಅಷ್ಟೆ ಮನಮೋಹಕ ಕಡಲ ತೀರದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಕಡಲ ತೀರವನ್ನು ಕರ್ನಾಟಕದಲ್ಲಿ ಕಂಡುಬರುವ ಸುಂದರ ಕಡಲ ತೀರಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. [ಸುಂದರ ಕಡಲ ತೀರದ ಮರವಂತೆ]

ಚಿತ್ರಕೃಪೆ: Ashwin Kumar

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಮರವಂತೆಯ ಸುಂದರ ಕಡಲ ತೀರದಲ್ಲಿ ವಿಹರಿಸಿದ ನಂತರ ಪ್ರಯಾಣ ಮುಂದುವರೆಸುತ್ತ 18 ಕಿ.ಮೀ ಸಾಗಿ ಬೈಂದೂರು ಪಟ್ಟಣವನ್ನು ತಲುಪಬೇಕು. ಉಡುಪಿ ಜಿಲ್ಲೆಯ ಬೈಂದೂರು ತನ್ನಲ್ಲಿರುವ ಸೋಮೇಶ್ವರ ಕಡಲ ತೀರ ಹಾಗೂ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಮಂಗಳೂರಿನಿಂದ ಕಾರವಾರ:

ಮಂಗಳೂರಿನಿಂದ ಕಾರವಾರ:

ಸಮಯಾವಕಾಶವಿದ್ದರೆ ಬೈಂದೂರಿನ ಪೂರ್ವಕ್ಕೆ ಸುಮಾರು 28 ಕಿ.ಮೀ ಗಳಷ್ಟು ದೂರದಲ್ಲಿರುವ ಕೊಲ್ಲೂರಿಗೆ ಭೇಟಿ ನೀಡಬಹುದು. ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದಿಂದಾಗಿ ರಾಜ್ಯದಲ್ಲೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: syam

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X