Search
  • Follow NativePlanet
Share
» »ಅನೇಕ ರಹಸ್ಯಗಳಿಂದ ಕೂಡಿದೆ ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರ

ಅನೇಕ ರಹಸ್ಯಗಳಿಂದ ಕೂಡಿದೆ ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರ

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿರುವ ಲೋನಾರ್ ಸರೋವರವು ಅನೇಕ ರಹಸ್ಯಗಳಿಂದ ಕೂಡಿದೆ. ಬುಲ್ದಾನ ಜಿಲ್ಲೆ ಹಿಂದೆ ಅಶೋಕನ ಸಾಮ್ರಾಜ್ಯದ ಭಾಗವಾಗಿತ್ತು. ಸುಮಾರು 5 ಲಕ್ಷ 70 ಸಾವಿರ ವರ್ಷಗಳಷ್ಟು ಹಳೆಯದಾದ ಈ ಸರೋವರವ ಬಗ್ಗೆ ನೀವು ಪುರಾಣಗಳು, ವೇದಗಳು ಮತ್ತು ದಂತಕಥೆಗಳಲ್ಲಿ ಕೇಳಿರಬಹುದು. ನಾಸಾದಿಂದ ಹಿಡಿದು ಜಗತ್ತಿನ ಹಲವು ಏಜೆನ್ಸಿಗಳು ಈ ಸರೋವರದ ಬಗ್ಗೆ ಸಂಶೋಧನೆ ನಡೆಸಿವೆ.

ಉಲ್ಕಾಶಿಲೆಯ ಪ್ರಭಾವದಿಂದ ಈ ಸರೋವರವು ರೂಪುಗೊಂಡಿತು ಎಂದು ಸಂಶೋಧನೆ ತೋರಿಸುತ್ತದೆ. ಆದರೆ ಉಲ್ಕಾಶಿಲೆ ಎಲ್ಲಿಗೆ ಹೋಯಿತು, ಅದರ ಬಗ್ಗೆ ಇನ್ನೂ ತಿಳಿದಿಲ್ಲ. ಬನ್ನಿ ಹಾಗಾದರೆ ಈ ಸರೋವರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ಉಲ್ಕಾಶಿಲೆಯಿಂದಾಗಿ ರೂಪುಗೊಂಡ ಸರೋವರ

ಉಲ್ಕಾಶಿಲೆಯಿಂದಾಗಿ ರೂಪುಗೊಂಡ ಸರೋವರ

70 ರ ದಶಕದಲ್ಲಿ, ಜ್ವಾಲಾಮುಖಿಗಳ ಕಾರಣದಿಂದಾಗಿ ಈ ಸರೋವರವು ರೂಪುಗೊಂಡಿದೆ ಎಂದು ವಿಜ್ಞಾನಿಗಳು ನಂಬಿದ್ದರು. ಆದರೆ ಈ ಸಿದ್ಧಾಂತವು ತಪ್ಪಾಗಿದೆ ಎಂದು ಸಾಬೀತಾಯಿತು. ಏಕೆಂದರೆ ಈ ಸರೋವರವು ಜ್ವಾಲಾಮುಖಿಯಿಂದ ಮಾಡಲ್ಪಟ್ಟಿದ್ದರೆ, ಅದು 150 ಮೀಟರ್ ಆಳವಾಗಿರುವುದಿಲ್ಲ. ಈ ಸರೋವರವು ಉಲ್ಕಾಶಿಲೆಯ ಪ್ರಭಾವದಿಂದ ರೂಪುಗೊಂಡಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ. 2010 ರ ಮೊದಲು, ಈ ಸರೋವರವು 52 ಸಾವಿರ ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿತ್ತು, ಆದರೆ ಸಂಶೋಧನೆಯ ಪ್ರಕಾರ ಇದು 5 ಲಕ್ಷ, 70 ಸಾವಿರ ವರ್ಷಗಳಷ್ಟು ಹಳೆಯದು.

ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳು

ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳು

ಋಗ್ವೇದ ಮತ್ತು ಸ್ಕಂದ ಪುರಾಣದಲ್ಲಿಯೂ ಲೋನಾರ್ ಸರೋವರದ ಬಗ್ಗೆ ನೀವು ಕಾಣಬಹುದು. ಇದನ್ನು ಪದ್ಮ ಪುರಾಣ ಮತ್ತು ಐನ್-ಎ-ಅಕ್ಬರಿಯಲ್ಲಿಯೂ ಉಲ್ಲೇಖಿಸಲಾಗಿದೆ. ಅಕ್ಬರ್ ಈ ಸರೋವರದ ನೀರನ್ನು ಸೂಪ್ ಗೆ ಸೇರಿಸಿ ಕುಡಿಯುತ್ತಿದ್ದರು ಎಂದು ಹೇಳಲಾಗುತ್ತದೆ. ಅಂದಹಾಗೆ, 1823 ರಲ್ಲಿ ಬ್ರಿಟಿಷ್ ಅಧಿಕಾರಿ ಜೆಇ ಅಲೆಕ್ಸಾಂಡರ್ ಈ ಸ್ಥಳಕ್ಕೆ ಬಂದಾಗ ಈ ಸರೋವರಕ್ಕೆ ಮಾನ್ಯತೆ ಸಿಕ್ಕಿತು. ಸರೋವರದ ಬಗ್ಗೆ ಅನೇಕ ಕಥೆಗಳಿವೆ. ಒಂದಾನೊಂದು ಕಾಲದಲ್ಲಿ ಲೋನಾಸುರ ಎಂಬ ರಾಕ್ಷಸನು ಇದ್ದನು. ಅವನು ವಿಷ್ಣುವಿನಿಂದ ಕೊಲ್ಲಲ್ಪಟ್ಟನು. ಅವನ ರಕ್ತವು ಭಗವಂತನ ಪಾದದ ಹೆಬ್ಬೆರಳಿಗೆ ತಗುಲಿತ್ತು. ಅದನ್ನು ತೆಗೆದುಹಾಕಲು, ಭಗವಂತನು ತನ್ನ ಹೆಬ್ಬೆರಳನ್ನು ಮಣ್ಣಿನೊಳಗೆ ಹಾಕಿದಾಗ, ಅಲ್ಲಿ ಆಳವಾದ ಗುಂಡಿಯು ರೂಪುಗೊಂಡಿತು ಎನ್ನಲಾಗಿದೆ.

ಸರೋವರದ ಬಳಿಯಿರುವ ದೇವಾಲಯಗಳು

ಸರೋವರದ ಬಳಿಯಿರುವ ದೇವಾಲಯಗಳು

ಲೋನಾರ್ ಸರೋವರದ ಬಳಿ ನೀವು ಅನೇಕ ಪ್ರಾಚೀನ ದೇವಾಲಯಗಳನ್ನು ಸಹ ನೋಡಬಹುದು. ಇಲ್ಲಿ ದೈತ್ಯಸೂದನ ದೇವಾಲಯವೂ ಇದೆ. ಈ ದೇವಾಲಯವು ವಿಷ್ಣು ದುರ್ಗ, ಸೂರ್ಯ ಮತ್ತು ನರಸಿಂಹನಿಗೆ ಸಮರ್ಪಿತವಾಗಿದೆ. ಇದರ ರಚನೆಯು ನಿಮಗೆ ಖಜುರಾಹೋದಂತೆ ಕಾಣುತ್ತದೆ. ಲೋನರ್ಧರ್ ದೇವಸ್ಥಾನ, ಕಮಲಜಾ ದೇವಸ್ಥಾನ, ಮೋತಾ ಮಾರುತಿ ದೇವಸ್ಥಾನಗಳೂ ಇಲ್ಲಿವೆ. ಇದನ್ನು ಸುಮಾರು ಸಾವಿರ ವರ್ಷಗಳ ಹಿಂದೆ ಯಾದವ ವಂಶದ ರಾಜನು ನಿರ್ಮಿಸಿದನು.

ಕಣ್ಮರೆಯಾದ ಎರಡು ಸರೋವರಗಳು

ಕಣ್ಮರೆಯಾದ ಎರಡು ಸರೋವರಗಳು

ಸರೋವರದ ಮೇಲ್ಭಾಗವು ಸುಮಾರು 7 ಕಿ.ಮೀ. ನಷ್ಟಿದೆ. ಸರೋವರವು ಸುಮಾರು 150 ಮೀಟರ್ ಆಳದಲ್ಲಿದೆ. ಉಲ್ಕಾಶಿಲೆಯು ಭೂಮಿಗೆ ಡಿಕ್ಕಿ ಹೊಡೆದಿದೆ ಎಂದು ನಂಬಲಾಗಿದೆ, ಅದು ಒಂದು ಮಿಲಿಯನ್ ಟನ್ ನಷ್ಟಿದೆ. ಇದು 22 ಕಿಮೀಗಳ ವೇಗದಲ್ಲಿ ಭೂಮಿಗೆ ಡಿಕ್ಕಿ ಹೊಡೆದಿದೆ. ಆಗ ತಾಪಮಾನವು 1800 ಡಿಗ್ರಿಗಳಷ್ಟಿದೆ. ಇದರಿಂದಾಗಿ ಉಲ್ಕಾಶಿಲೆ ಕರಗಿರಬೇಕು. ಲೋನಾರ್ ಸರೋವರದ ಬಳಿ ಉಲ್ಕಾಶಿಲೆಯ ಡಿಕ್ಕಿಯಿಂದ ಎರಡು ಸರೋವರಗಳು ರೂಪುಗೊಂಡವು. ಆದರೆ ಈಗ ಸರೋವರಗಳೂ ನಾಪತ್ತೆಯಾಗಿವೆ. 2006ರಲ್ಲಿ ಈ ಸರೋವರ ಬತ್ತಿ ಹೋಗಿತ್ತು. ಮಳೆ ನಂತರ ಸರೋವರ ಮತ್ತೆ ತುಂಬಿತು.

ಪ್ರವಾಸವನ್ನು ಹೀಗೆ ಆಯೋಜಿಸಿ

ಪ್ರವಾಸವನ್ನು ಹೀಗೆ ಆಯೋಜಿಸಿ

ಮೊದಲನೆಯ ದಿನ ಬೆಳಗ್ಗೆ ಲೋನಾರ್ ತಲುಪಿದ ಕೂಡಲೇ ಲೋನಾರ್ ಕ್ರೇಟರ್‌ಗೆ ಮತ್ತು ಅದರ ಸುತ್ತ ಮುತ್ತಲಿನ ಸ್ಥಳಗಳನ್ನು ನೋಡಲು ಹೈಕಿಂಗ್ ಮತ್ತು ಟ್ರೆಕ್ಕಿಂಗ್ ಹಮ್ಮಿಕೊಳ್ಳಿ. ಎರಡನೆಯ ದಿನ ದೈತ್ಯಸೂದನ ದೇವಾಲಯ ಮತ್ತು ಇತರ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ. ಊಟದ ನಂತರ ಬೇಕಾದರೆ ನೀವು ಅಜಂತಾ ಗುಹೆಗಳಂತಹ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ಸಹ ಕೊಡಬಹುದು.

ಸರೋವರ ತಲುಪಲು ಸಮೀಪದ ಮಾರ್ಗಗಳು

ಸರೋವರ ತಲುಪಲು ಸಮೀಪದ ಮಾರ್ಗಗಳು

ವಿಮಾನ: ಔರಂಗಾಬಾದ್ ಲೋನಾರ್‌ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ರೈಲು: ಮುಂಬೈ ಮತ್ತು ಔರಂಗಾಬಾದ್ ನಡುವೆ ಮನ್ಮಾಡ್ ಜಂಕ್ಷನ್ ಮೂಲಕ 20 ಕ್ಕೂ ಹೆಚ್ಚು ರೈಲುಗಳು ಚಲಿಸುತ್ತವೆ. ಈ ಮಾರ್ಗದಲ್ಲಿ ಮಂಜಿನ ಪರ್ವತಗಳು, ಹಚ್ಚ ಹಸಿರಿನ ಹೊಲಗಳು ಮತ್ತು ಜಲಪಾತಗಳ ಸುಂದರ ನೋಟಗಳನ್ನು ವೀಕ್ಷಿಸಬಹುದು.

ರಸ್ತೆ: ಔರಂಗಾಬಾದ್‌ನ ಕೇಂದ್ರ ಬಸ್ ನಿಲ್ದಾಣವು ರೈಲು ನಿಲ್ದಾಣದಿಂದ ಸುಮಾರು 1 ಕಿ.ಮೀ.ದೂರದಲ್ಲಿದೆ. ಲೋನಾರ್‌ಗೆ ಬಸ್‌ಗಳು ಜಲ್ನಾ ಮೂಲಕ ಚಲಿಸಲಿದ್ದು, ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X