Search
  • Follow NativePlanet
Share
ಮುಖಪುಟ » ಸ್ಥಳಗಳು » ಲೋನಾರ್ » ಹವಾಮಾನ

ಲೋನಾರ್ ಹವಾಮಾನ

ಲೋನಾರ್ ಅರೆ ಒಣ ಹವೆಯ ವಾತಾವರಣವನ್ನು ಹೊಂದಿದೆ. ಚಳಿಗಾಲ ಲೋನಾರ್ ಗೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಮೇವರೆಗೆ ಕಾಡುವ ಬೇಸಿಗೆ ಲೋನಾರ್ ನಲ್ಲಿ ಬಹಳ ಬಿಸಿ ಹಾಗೂ ಒಣಹವೆಯ ಅನುಭವ ನೀಡುತ್ತದೆ. ಫೆಬ್ರವರಿ ತಿಂಗಳ ಕೊನೆಯಿಂದ ಏರುತ್ತ ಹೋಗುವ ಉಷ್ಣಾಂಶ ಗರಿಷ್ಠ 38 ಡಿಗ್ರಿಗೆ ತಲುಪುತ್ತದೆ ಮತ್ತು ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯುತ್ತದೆ.

ಮಳೆಗಾಲ

ಮಾನ್ಸೂನ್ ಶುರುವಾಗುವುದು ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ. ಈ ಸಮಯದಲ್ಲಿ ಲೋನಾರ್ ಸಾಧಾರಣ ಮಳೆಯನ್ನು ಕಾಣುತ್ತದೆ. ಈ ಸಮಯದಲ್ಲಿ ನೀವು ಲೋನಾರ್ ನಲ್ಲಿದ್ದರೆ ಹಿತಕರವಾದ ವಾತಾವರಣವನ್ನು ಅನುಭವಿಸಬಹುದು.

ಚಳಿಗಾಲ

ನವೆಂಬರ್ ನಿಂದ ಜನವರಿ ತಿಂಗಳಲ್ಲಿ ಚಳಿಗಾಲವಿದ್ದು ಉಷ್ಣಾಂಶ ಗರಿಷ್ಠ 28 ಡಿಗ್ರಿಯಷ್ಟಿದ್ದು ಕನಿಷ್ಟ 12 ಡಿಗ್ರಿಗೆ ಕುಸಿಯುತ್ತದೆ. ಈ ಸೀಸನ್ ನಲ್ಲಿ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದು ಸೂಕ್ತ.