Search
  • Follow NativePlanet
Share
» »ಕುಲ್ಲು ಮನಾಲಿ ಸರ್ಕ್ಯೂಟ್

ಕುಲ್ಲು ಮನಾಲಿ ಸರ್ಕ್ಯೂಟ್

By Vijay

ಕುಲ್ಲು - ಮನಾಲಿ ಪ್ರವಾಸ ಅತಿ ಹೆಸರುವಾಸಿಯಾದ ಪ್ಯಾಕೇಜ್ ಪ್ರವಾಸವಾಗಿದೆ. ಮೂಲತಃ ಈ ರಸ್ತೆ ಜಾಲವನ್ನು ಕುಲ್ಲು-ಮನಾಲಿ ಸರ್ಕ್ಯೂಟ್ ಎಂದು ಕರೆಯಲಾಗಿದ್ದು, ಇದು ಚಂಡೀಗಡ್ ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 21 ರ ಮೂಲಕ ಸಾಗುತ್ತ ಮನಾಲಿಯಲ್ಲಿ ಕೊನೆಗೊಳ್ಳುತ್ತದೆ.

ಕುಲ್ಲು - ಮನಾಲಿ ಪರೀಧಿಯು ನಾಲ್ಕು ಪಥಗಳಲ್ಲಿ ವಿಂಗಡನೆಗೊಂಡಿದ್ದು ಪ್ರತಿಯೊಂದು ಪಥವು ಅದ್ಭುತವಾದ ಪ್ರವಾಸಿ ತಾಣಗಳ ಮೂಲಕ ಹಾದು ಹೋಗುತ್ತವೆ. ಆ ಪಥಗಳು ಯಾವುವೆಂದರೆ ಸಟ್ಲೆಜ್ ಪಥ, ಬಿಯಾಸ್ ಪಥ, ಕುಲ್ಲು ಕಣಿವೆ ಪಥ ಹಾಗೂ ಕೊನೆಯದಾಗಿ ರೊಹತಾಂಗ್ ಪಾಸ್ ಪಥ.

ಯಾವೆಲ್ಲ ಸ್ಥಳಗಳಿಗೆ ಈ ಸರ್ಕ್ಯೂಟ್ ಮೂಲಕ ಸಾಗುವಾಗ ಭೇಟಿ ನೀಡಬಹುದೆಂದು ಈ ಲೇಖನದ ಮೂಲಕ ತಿಳಿಯಿರಿ.

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಚಂಡೀಗಡ್ ನ ಮೂಲಕ ಸಾಗುತ್ತ ಸ್ವರಘಾಟ್ ನಲ್ಲಿನ ನೈನಾ ದೇವಿಯ ದೇವಸ್ಥಾನದ ದರುಶನ ಪಡೆದು ನೇರವಾಗಿ ಬಿಲಾಸಪುರಕ್ಕೆ ತೆರಳಬಹುದು. ಬಿಲಾಸಪುರ ಹಿಮಾಚಲ ಪ್ರದೇಶ ರಾಜ್ಯದ ಪ್ರಮುಖ ನಗರವಾಗಿದ್ದು ಇಲ್ಲಿನ ಪ್ರಕೃತಿ ಸೌಂದರ್ಯವು ಎಂಥವರಿಗೂ ಸಹ ಮುದ ನೀಡುತ್ತದೆ.

ಚಿತ್ರಕೃಪೆ: Rishbh Sharma

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಬಿಲಾಸಪುರದ ಗೋವಿಂದ ಸಾಗರ ಕೆರೆಯ ತುಂಬು ನೋಟ.

ಚಿತ್ರಕೃಪೆ: Jini.ee06b056

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ನಂತರ ಬಿಯಸ್ ಪಥಕ್ಕೆ ಪ್ರವೇಶಿಸಿ ಮುನ್ನಡೆದಾಗ ಸಿಗುವ ನಿಲುಗಡೆಯ ಪ್ರವಾಸಿ ತಾಣ ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯ ಮಂಡಿ ನಗರ. ಮಂಡಿಯ ಸುತ್ತ ಮುತ್ತ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Biswarup Ganguly

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಭೀಮಕಾಲಿ ದೇವಾಲಯವು ಮಂಡಿಯ ಹೃದಯ ಭಾಗದಲ್ಲಿ ನೆಲೆಸಿರುವ ಪ್ರಮುಖ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Mystic nishant99

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಪ್ರಶಾರ ಕೆರೆಯು ಮಂಡಿಯಿಂದ ಸುಮಾರು 50 ಕಿ.ಮೀ ದೂರವಿರುವ ಪಗೋಡಾ ರೀತಿಯ ದೇವಾಲಯ ಹೊಂದಿರುವ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Ritpr9

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ನಂತರ ಕುಲ್ಲು ಕಣಿವೆಯ ಪಥಕ್ಕೆ ಬಂದು ಕುಲ್ಲು ಆಕರ್ಷಣೆಯತ್ತ ಚಲಿಸಬಹುದು. ಕುಲ್ಲು ಸುಂದರ ಪ್ರಕೃತಿ ಸಿರಿಯುಳ್ಳ ಮಧುರ ಪ್ರವಾಸಿ ಆಕರ್ಷಣೆಯಾಗಿ ಪ್ರವಾಸಿಗರನ್ನು ಅದರಲ್ಲೂ ವಿಶೇಷವಾಗಿ ನವ ದಂಪತಿಗಳನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Ekabhishek

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಸುಂದರ ಕುಲ್ಲು ಪಟ್ಟಣ.

ಚಿತ್ರಕೃಪೆ: Biswarup Ganguly

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲುವಿನಿಂದ ಪ್ರಯಾಣ ಬೆಳೆಸಿ ಕೇವಲ 45 ಕಿ.ಮೀ ಕ್ರಮಿಸುವುದರ ಮೂಲಕ ಮನಾಲಿ ಪಟ್ಟಣವನ್ನು ತಲುಪಬಹುದು.

ಚಿತ್ರಕೃಪೆ: _paVan_

ಕುಲ್ಲು ಮನಾಲಿ ಸರ್ಕ್ಯೂಟ್:

ಕುಲ್ಲು ಮನಾಲಿ ಸರ್ಕ್ಯೂಟ್:

ಮನಾಲಿಯ ಸೊಬಗು.

ಚಿತ್ರಕೃಪೆ: Raman Virdi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X