Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂದೀಗಢ್ » ತಲುಪುವ ಬಗೆ

ತಲುಪುವ ಬಗೆ

ದೆಹಲಿ, ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಿಂದ ಚಂದೀಗಢ್ ಗೆ ರಸ್ತೆ ಮೂಲಕ ಪ್ರಯಾಣಿಸುವುದು ಸರಿಯಾದ ಮಾರ್ಗ. ಸೆಕ್ಟರ್ 17 ಮತ್ತು 43ರಲ್ಲಿರುವ ಅಂತರ್ ರಾಜ್ಯ ಬಸ್ ಟರ್ಮಿನಸ್ ನಲ್ಲಿ ಸರ್ಕಾರಿ ಮತ್ತು ವೋಲ್ವೊ ಬಸ್ ಗಳಿವೆ. ಬಾಡಿಗೆ ಕಾರಿನ ಮೂಲಕವೂ ಚಂದೀಗಢ್ ಸುತ್ತಬಹುದು. ಅಂಬಾಲ-ಕಲ್ಕಾ-ಶಿಮ್ಲಾ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 22ರ ಮೂಲಕ ಮತ್ತು ಚಂದೀಗಢ್-ಲೇಹ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 21ರಿಂದ ಚಂದೀಗಢ್ ಗೆ ಪ್ರಯಾಣಿಸಬಹುದು.