Search
  • Follow NativePlanet
Share
» »ರಜಾದಿನಗಳಲ್ಲಿ ವಿಶ್ರಾಂತಿ ಪಡೆಯಲು ಕಾರವಾರದ ಈ ಸ್ಥಳಗಳಿಗೆ ಭೇಟಿ ನೀಡಿ

ರಜಾದಿನಗಳಲ್ಲಿ ವಿಶ್ರಾಂತಿ ಪಡೆಯಲು ಕಾರವಾರದ ಈ ಸ್ಥಳಗಳಿಗೆ ಭೇಟಿ ನೀಡಿ

ಕಾರವಾರವು ನೈಸರ್ಗಿಕ ಬಂದರನ್ನು ಹೊಂದಿದ್ದು, ಪ್ರಾಚೀನ ಬೀಚ್ ಗಳು, ತೆಂಗಿನ ತೋಪುಗಳು, ಹತ್ತಿರದ ದ್ವೀಪಗಳು ಮತ್ತು ನದಿಗಳನ್ನು ಹೊಂದಿರುವ ಕಾರವಾರವು ರಜಾದಿನಗಳನ್ನು ಆರಾಮದಾಯಕವಾಗಿ ಕಳೆಯಲು ಸೂಕ್ತವಾದ ಕರ್ನಾಟಕದ ಸ್ಥಳವಾಗಿದೆ. ಪಶ್ಚಿಮ ಭಾರತದ ರಮಣೀಯ ಹಾದಿಗಳ ನಡುವೆ ನೆಲೆಗೊಂಡಿರುವ ಕಾರವಾರ ನಗರವು ತನ್ನ ಕೃಷಿ ಉತ್ಪನ್ನಗಳಿಗೆ ಈ ಪ್ರದೇಶದಲ್ಲಿ ಜನಪ್ರಿಯವಾಗಿದೆ. ಕಾಳಿ ನದಿಯ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ಸುತ್ತ ಮುತ್ತಲಿನ ಪ್ರದೇಶಗಳು ನಿಜವಾಗಿಯೂ ಅತ್ಯದ್ಬುತವಾಗಿದೆ.

ಕಾರವಾರವು ಮೀನುಗಾರಿಕೆ ಮತ್ತು ಕೈಗಾರಿಕಾ ಕೇಂದ್ರವಾಗಿ ಜನಪ್ರಿಯತೆಯನ್ನು ಗಳಿಸಿರುವುದು ಮಾತ್ರವಲ್ಲದೆ ನಗರವು ನೀಡುವ ಪ್ರವಾಸೋದ್ಯಮ ಅವಕಾಶಗಳಿಗಾಗಿಯೂ ಹೆಸರು ಗಳಿಸಿದೆ. ಕಾರವಾರದಲ್ಲಿ ವಿಶ್ರಾಂತಿ ಪಡೆಯಲು ಅಥವಾ ಸಂಜೆ ಸಮಯವನ್ನು ಆರಾಮದಾಯಕವಾಗಿ ಕಳೆಯಲು ಹಲವಾರು ಸ್ಥಳಗಳಿವೆ. ಇಲ್ಲಿಯ ಹಚ್ಚ ಹಸುರಿನ ಪರಿಸರದಲ್ಲಿ ಅಡ್ಡಾಡಬಹುದು ಅಲ್ಲದೆ ಇಲ್ಲಿಯ ಭತ್ತದ ಗದ್ದೆಯ ಪೊದೆಗಳ ದೃಶ್ಯಗಳನ್ನು ಆನಂದಿಸಬಹುದಾಗಿದೆ ಅಥವಾ ಹತ್ತಿರದ ಬಂದರಿಗೆ ಭೇಟಿಕೊಡಬಹುದು ಅಲ್ಲದೆ ಇಲ್ಲಿನ ಸಮುದ್ರ ದಡದಲ್ಲಿ ಕುಳಿತು ಸಂಜೆ ಸಮಯದಲ್ಲಿ ಸೂರ್ಯಾಸ್ತಗಳನ್ನು ವೀಕ್ಷಿಸಬಹುದಾಗಿದೆ. ಅಷ್ಟೇ ಅಲ್ಲದೆ ಇಲ್ಲಿರುವ ಜನಪ್ರಿಯ ಹೋಟೇಲುಗಳಲ್ಲಿ ಸ್ವಾದಿಷ್ಟ ರಾತ್ರಿಯ ಊಟವನ್ನೂ ಸವಿಯಬಹುದಾಗಿದೆ. ಇವೆಲ್ಲವನ್ನೂ ಹೊಂದಿರುವ ಕಾರವಾರವು ಒಮ್ಮೆ ಭೇಟಿ ಕೊಡಲೇ ಬೇಕು ಅಲ್ಲವೆ?

ದೇವಭಾಗ್ ಬೀಚ್

ದೇವಭಾಗ್ ಬೀಚ್

ಕರಾವಳಿಯ ಪುಟ್ಟ ದ್ವೀಪವು ಕಾರವಾರದಲ್ಲಿ ಭೇಟಿ ನೀಡಲು ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಸುಂದರವಾದ ಕಡಲತೀರಗಳಲ್ಲಿ ಒಂದಾದ ದೇವಭಾಗ್ ಬೀಚ್ ಅನ್ನು ಹೊಂದಿದೆ. ಕೊಡಿಭಾಗ್ ಜೆಟ್ಟಿಯಿಂದ ಇಲ್ಲಿಗೆ ದೋಣಿಗಳು ಲಭ್ಯವಿದೆ. ಈ ಬೀಚ್ ಸ್ವಚ್ಚವಾಗಿದ್ದು, ಕಡಿಮೆ ಜನದಟ್ಟಣೆಯಿಂದ ಕೂಡಿದೆ. ಈ ಬೀಚ್ ಸ್ವಚ್ಛ ಹಾಗೂ ಕಡಿಮೆ ಜನಸಂದಣಿಯನ್ನು ಹೊಂದಿರುವುದರಿಂದ ಈ ಸ್ಥಳವನ್ನು ವಿಶ್ರಾಂತಿ ಪಡೆಯಲೂ ಯೋಗ್ಯವಾಗಿಸುತ್ತದೆ. ದ್ವೀಪದ ಅಕ್ಕ ಪಕ್ಕದ ಭಾಗಗಳೂ ಕೂಡಾ ಅನ್ವೇಷಣೆಗೆ ಯೋಗ್ಯವಾದುದಾಗಿದೆ. ದ್ವೀಪದಾದ್ಯಂತ ಮಾರ್ಗದರ್ಶಿ ಪ್ರವಾಸವನ್ನು ಕೈಗೊಳ್ಳುವುದನ್ನು ತಪ್ಪಿಸಿಕೊಳ್ಳಬೇಡಿ ಮತ್ತು ಮ್ಯಾಂಗ್ರೋವ್‌ಗಳು, ಡಾಲ್ಫಿನ್ ವೀಕ್ಷಣೆಗಳು, ಜಲ ಕ್ರೀಡೆಗಳು, ಪಕ್ಷಿ ವೀಕ್ಷಣೆ ಮತ್ತು ಆಕರ್ಷಕವಾಗಿ ಕಾಣುವ ಸೂರ್ಯಾಸ್ತಗಳಂತಹ ಅನೇಕ ಆಕರ್ಷಣೆಗಳನ್ನು ಆನಂದಿಸಿ!

ಯುದ್ಧನೌಕೆ ವಸ್ತುಸಂಗ್ರಹಾಲಯ

ಯುದ್ಧನೌಕೆ ವಸ್ತುಸಂಗ್ರಹಾಲಯ

ರಕ್ಷಣೆ ಮತ್ತು ಕಡಲ ಕಾರ್ಯಾಚರಣೆಗಳನ್ನೊಳಗೊಂಡ ಭಾರತದ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಎಲ್ಲರಿಗೂ ಆಸಕ್ತಿದಾಯಕ ಸ್ಥಳವಾಗಿರುವ ಯುದ್ದ ನೌಕಾ ವಸ್ತು ಸಂಗ್ರಹಾಲಯವು ಕಡಲತೀರದುದ್ದಕ್ಕೂ ಇರುವ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಿರುವ ರಬೀಂದ್ರನಾಥ ಟಾಗೋರ್ ಬೀಚ್ ಸಮೀಪದಲ್ಲಿದೆ. ಹಿಂದಿನ ಕ್ಷಿಪಣಿ ಯುದ್ಧದ ನೌಕೆಯು ಈಗ ವಸ್ತುಸಂಗ್ರಹಾಲಯವಾಗಿದೆ ಇಲ್ಲಿ ಸಂದರ್ಶಕರು ಯಂತ್ರೋಪಕರಣಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದ್ದು, ಅಲ್ಲಿ ನೌಕಾ ಸಿಬ್ಬಂದಿ ಹಡಗಿನ ಮೇಲೆ ಹೇಗೆ ಉಳಿಯುತ್ತಿದ್ದರು ಮತ್ತು ಯುದ್ಧದ ತೊಂದರೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು ಎನ್ನುವ ಕುರಿತಾದ ಭಾರತೀಯ ಸೇನೆಯ ಕುರಿತು ಸಾಮಾನ್ಯ ವೀಡಿಯೊವನ್ನು ಸಹ ತೋರಿಸಲಾಗುತ್ತದೆ. ಈ ವಸ್ತುಸಂಗ್ರಹಾಲಯವು ಇದು ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ.

ರಬೀಂದ್ರನಾಥ ಟಾಗೋರ್ ಬೀಚ್

ರಬೀಂದ್ರನಾಥ ಟಾಗೋರ್ ಬೀಚ್

ಕಾರವಾರದಲ್ಲಿ ಭೇಟಿ ಕೊಡಬಹುದಾದ ಹೆಸರುವಾಸಿಯಾದ ಸ್ಥಳಗಳಲ್ಲಿ ರಬೀಂದ್ರನಾಥ ಟಾಗೋರ್ ಬೀಚ್ ಒಂದಾಗಿದ್ದು, ಇದು ಅತ್ಯಂತ ಸುಂದರ ಹಾಗೂ ಮನಮೋಹಕವಾದ ಕಡಲಾಗಿದ್ದು ಈ ಪ್ರಶಾಂತವಾದ ಕಡಲತೀಗಕ್ಕೆ ಪ್ರಸಿದ್ದ ಕವಿ ರಬೀಂದ್ರನಾಥ ಟಾಗೋರರ ಹೆಸರನ್ನಿಡಲಾಗಿದೆ. ಈ ಸ್ಥಳವು ಅಗಾಧವಾಗಿ ಸುಂದರವಾಗಿದೆ ಎಂದು ಯಾರು ವಿವರಿಸುತ್ತಾರೆ. ಮುಂಜಾನೆ ಮತ್ತು ಸಂಜೆಯ ನಡಿಗೆಗೆ ಇದು ಉತ್ತಮವಾಗಿದೆ ಇಲ್ಲಿ ತಾಪಮಾನವು ಹೆಚ್ಚಾಗುವುದರಿಂದ ಮಧ್ಯಾಹ್ನದ ಸಮಯದಲ್ಲಿ ತಪ್ಪಿಸುವುದು ಉತ್ತಮ. ಇಲ್ಲಿಯ ಹತ್ತಿರದ ಐ ಎನ್ ಎಸ್ ಚಾಪೆಲ್ ಮತ್ತು ಯುದ್ಧನೌಕೆ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ.

ಕುರುಂಘಡ್ ದ್ವೀಪ

ಕುರುಂಘಡ್ ದ್ವೀಪ

ದೇವ್ ಭಾಗ್ ದ್ವೀಪದಂತೆ ಕುರುಂಘಡ್ ಕಾರವಾರದಲ್ಲಿ ಭೇಟಿ ಕೊಡಬಹುದಾದ ಅತ್ಯಂತ ರೋಚಕ ದ್ವೀಪವಾಗಿದ್ದು, ಇಲ್ಲಿ ನಿಮಗಾಗಿ ತಂಗಬಹುದಾದ ಆಯ್ಕೆಗಳಿವೆ. ಈ ಸ್ಥಳವು ಕಡಿಮೆ ವೆಚ್ಚದ್ದೆಂದು ಪರಿಗಣಿಸಲಾಗಿದ್ದು ಇಲ್ಲಿ ಟೆಂಟ್ ಗಳನ್ನು ಹಾಕಿ ಉಳಿಯುವಂತಹ ಸಾಹಸಮಯ ಚಟುವಟಿಕೆಗಳ ಆಯ್ಕೆಯಿದೆ. ಪ್ರಕೃತಿಯಲ್ಲಿ ನಡೆದಾಡಬಹುದಾಗಿದೆ, ಡಾಲ್ಫಿನ್ ವೀಕ್ಷಣೆ, ಜಲ ಕ್ರೀಡೆಗಳು ಮತ್ತು ಸೂರ್ಯ ಮುಳುಗುತ್ತಿದ್ದಂತೆ ಬೀಚ್ ಅನ್ನು ಆನಂದಿಸುವುದು ಇತ್ಯಾದಿಗಳನ್ನು ಇಲ್ಲಿರುವಾಗ ನೀವು ಪ್ರಯತ್ನಿಸಬಹುದಾದ ಚಟುವಟಿಕೆಗಳಾಗಿವೆ.

ಮಾರುತಿ ದೇವಾಲಯ

ಮಾರುತಿ ದೇವಾಲಯ

ಕಾರವಾರಕ್ಕೆ ಭೇಟಿ ಕೊಡುವ ಪ್ರವಾಸಿಗರು ಇಲ್ಲಿಯ ಹನುಮಾನ್ ಅಥವಾ ಮಾರುತಿ ದೇವಾಲಯಕ್ಕೆ ಭೇಟಿ ಕೊಡುವುದನ್ನು ಮರೆಯಬಾರದು. ಈ ಬಿಳಿಯ ಬಣ್ಣದ ದೇವಾಲಯವು ಪ್ರಶಾಂತತೆ ಮತ್ತು ಶಾಂತಿಯುತವಾದ ವಾತಾವರಣಕ್ಕೆ ಜನಪ್ರಿಯವಾಗಿದೆ. ಭಗವಾನ್ ಹನುಮಂತನ ಮುಖ್ಯ ವಿಗ್ರಹವು ವಿವಿಧ ಸಂದರ್ಭಗಳಲ್ಲಿ ಮತ್ತು ಆಚರಣೆಗಳಿಗಾಗಿ ಆಸಕ್ತಿದಾಯಕವಾಗಿ ಅಲಂಕರಿಸಲಾಗುತ್ತದೆ., ಇದು 'ದರ್ಶನ'ವನ್ನು ಮತ್ತಷ್ಟು ಸುಂದರವಾಗಿಸುತ್ತದೆ.

ಒಯ್ಸ್ಟರ್ ರಾಕ್ ದೀಪಸ್ತಂಭ(ಲೈಟ್ ಹೌಸ್)

ಒಯ್ಸ್ಟರ್ ರಾಕ್ ದೀಪಸ್ತಂಭ(ಲೈಟ್ ಹೌಸ್)

ಒಯ್ಸ್ಟರ್ ರಾಕ್ ದ್ವೀಪ ಮತ್ತು ದೀಪಸ್ತಂಭವು ಕಾರವಾರದ ಕಡಿಮೆ ಅನ್ವೇಶಿತ ಪ್ರವಾಸಿ ಸ್ಥಳವಾಗಿದೆ. ಇಲ್ಲಿಯ ದ್ವೀಪ ಪ್ರದೇಶಗಳಲ್ಲಿ ಹೇರಳ ಪ್ರಮಾಣದ ಒಯ್ಸ್ಟರ್ ಗಳು (ಸಿಂಪಿ) ಕಾಣಸಿಗುತ್ತಿದ್ದುದರಿಂದ ಬ್ರಿಟೀಷರು ಈ ಸ್ಥಳಕ್ಕೆ ಒಯ್ಸ್ಟರ್ ರಾಕ್ ಎಂದು ಹೆಸರಿಸಿದರೆನ್ನಲಾಗುತ್ತದೆ. ಈ ಸ್ಥಳವನ್ನು ಮೋಟರ್‌ಬೋಟ್‌ಗಳು ಮಾತ್ರ ಸಂಪರ್ಕಿಸಬಹುದು ಮತ್ತು ಒಂದು ದಿನದ ಪ್ರವಾಸ ಮತ್ತು ಪಿಕ್‌ನಿಕ್‌ಗಾಗಿ ಅತ್ಯಾಕರ್ಷಕ ಆಯ್ಕೆಯನ್ನು ನೀಡುತ್ತದೆ. ಉಳಿದುಕೊಳ್ಳಲು ಮತ್ತು ಆಹಾರದ ಆಯ್ಕೆಗಳು ಸೀಮಿತವಾಗಿರುವುದರಿಂದ ಇಲ್ಲಿಗೆ ಹೋಗುವ ಮುನ್ನ ನಗರದಿಂದ ತಿನ್ನಬಹುದಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳಿ.

ಸದಾಶಿವಘಡ ಕೋಟೆ

ಸದಾಶಿವಘಡ ಕೋಟೆ

ಕಾಳಿ ನದಿ ದಡದಲ್ಲಿ ನೆಲೆಸಿರುವ ಈ ಹಳೆಯ ಕೋಟೆಯ ತಾಣವನ್ನು ಸದಾಶಿವ ಘಟ್ ಕೋಟೆಯೆಂದು ಕರೆಯಲಾಗುತ್ತದೆ. ಇದನ್ನು ಸೋಂದಾ ರಾಜವಂಶದ ರಾಜರುಗಳಿಂದ ನಿರ್ಮಿಸಲಾಗಿದ್ದು, ನಂತರ ಹಲವಾರು ಆಡಳಿತಗಾರರ ಕೈ ಕೆಳಗೆ ಬದಲಾಗುತ್ತಾ ಹೋಯಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಕೋಟೆಯು ಪೋರ್ಚುಗೀಸರು, ಮರಾಠರ ಆಳ್ವಿಕೆ ಮತ್ತು ಬ್ರಿಟಿಷರ ನಿಯಂತ್ರಣದಲ್ಲಿತ್ತು. ಇದಕ್ಕೆ ಸಾಕ್ಷಿಯಾಗಿ ಕೋಟೆಯ ಬಹುಪಾಲು ಅವಶೇಷಗಳಳ್ಳಿ ಕಾಣಬಹುದಾಗಿದೆ. ಕಲ್ಲಿನ ಬೆಟ್ಟವು ಅದರ ಮೂಲಕ ಹಾದುಹೋಗುವ ಸೇತುವೆಯನ್ನು ಹೊಂದಿದ್ದು, ಸೇತುವೆಯ ಕಡೆಗೆ ನೀವು ಪ್ರಯಾಣ ಮಾಡುವಾಗ, ಎರಡೂ ಬದಿಯಲ್ಲಿರುವ ದೊಡ್ಡ ಬಂಡೆಯ ಮುಖವು ಕಾರವಾರ ನಗರಕ್ಕೆ ಭವ್ಯವಾದ ಪ್ರವೇಶವನ್ನು ಒದಗಿಸುತ್ತದೆ.

ಕಾಳಿ ನದಿ

ಕಾಳಿ ನದಿ

ಕಾರವಾರದ ಜನಪ್ರಿಯ ಹಾಗೂ ಪ್ರೇಕ್ಷಣೀಯ ಸ್ಥಳವೆಂದರೆ ಕಾಳಿ ನದಿಯ ಮುಖಜ ಭೂಮಿ. ಈ ಆಕರ್ಷಕ ನದಿಯ ಮೇಲೆ ಹಾದುಹೋಗುವ ಸೇತುವೆಯು ರಮಣೀಯ ನೋಟಗಳನ್ನು ಒದಗಿಸುತ್ತದೆ, ಮತ್ತು ನೀವು ಕೆಳಗೆ ಹೋಗಬಹುದಾದ ನೀರಿನ ಸಣ್ಣ ಪಾಕೆಟ್‌ಗಳನ್ನು ಹೊಂದಿದೆ. ಈ ನದಿಯು ಕಾರವಾರದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಆಹಾರ ಮತ್ತು ಕಾರವಾರದಲ್ಲಿ ವಾಸ್ತವ್ಯ

ಆಹಾರ ಮತ್ತು ಕಾರವಾರದಲ್ಲಿ ವಾಸ್ತವ್ಯ

ಕಾರವಾರದಲ್ಲಿ ಶಾಖಾಹಾರಿ ಮತ್ತು ಮಾಂಸಹಾರಿ ಎರಡೂ ತರಹದ ವೈವಿದ್ಯಮಯವಾದ ಆಹಾರಗಳನ್ನು ಒದಗಿಸುವಂತಹ ಹಲವಾರು ಹೋಟೇಲುಗಳನ್ನು ಹೊಂದಿದೆ. ನೀವು ಸಮುದ್ರಾಹಾರವನ್ನು ಮೆಚ್ಚುವವರಾದಲ್ಲಿ ಕಾರವಾರವು ನಿಮಗಾಗಿದೆ! ಸ್ಥಳೀಯ ರೆಸ್ಟೊರೆಂಟ್ ಅಮೃತ್ ಏಡಿಗಳಿಂದ ಹಿಡಿದು ಚಿಪ್ಪುಮೀನುಗಳವರೆಗೆ ವಿವಿಧ ರೀತಿಯ ಸಮುದ್ರಾಹಾರ ಭಕ್ಷ್ಯಗಳನ್ನು ಹೊಂದಿದೆ. ಕಪ್ಪು ಸಾಲ್ಮನ್ ಮಸಾಲಾ ಫ್ರೈ ಮತ್ತು ಏಡಿ ಮಸಾಲಾ ಫ್ರೈ ಅನ್ನು ಪ್ರಯತ್ನಿಸಿ ಇವುಗಳು ನಿಮ್ಮಲ್ಲಿ ಇನ್ನಷ್ಟು ಸವಿಯಬೇಕೆನ್ನುವ ಹಂಬಲವನ್ನು ಹೆಚ್ಚಿಸುತ್ತವೆ.

ಕಾರವಾರವನ್ನು ತಲುಪುವುದು ಹೇಗೆ

ರಸ್ತೆಯ ಮೂಲಕ

ಕಾರವಾರವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಾದ ರಾ.ಹೆ-4 ಮತ್ತು ರಾಜ್ಯ ಹೆದ್ದಾರಿ-94 ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಗೋವಾದಿಂದ ನೀವು ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಗೋವಾದ ಹತ್ತಿರದ ಸ್ಥಳವೆಂದರೆ 38 ಕಿಮೀ ದೂರದಲ್ಲಿರುವ ಕೆನಕೋನಾ. ಇತರ ಹತ್ತಿರದ ಸ್ಥಳಗಳೆಂದರೆ ಮಂಗಳೂರು (269 ಕಿಮೀ), ಶಿವಮೊಗ್ಗ (249 ಕಿಮೀ) ಮತ್ತು ಬೆಂಗಳೂರು (546 ಕಿಮೀ). ನಿಯಮಿತ ಬಸ್ಸುಗಳು, ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಎರಡೂ ರಾಜ್ಯ ಮತ್ತು ನೆರೆಯ ಪ್ರದೇಶಗಳಾದ್ಯಂತ ಪ್ರಮುಖ ಪಟ್ಟಣಗಳಿಂದ ಲಭ್ಯವಿದೆ.

ರೈಲಿನ ಮೂಲಕ

ಕಾರವಾರ ರೈಲು ನಿಲ್ದಾಣವು ಕರ್ನಾಟಕದ ಎಲ್ಲಾ ಪ್ರದೇಶಗಳಿಗೆ ಸಂಪರ್ಕ ಹೊಂದಿದೆ. ಇದು ದೆಹಲಿ, ಮುಂಬೈ, ಚೆನ್ನೈ ಮುಂತಾದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳನ್ನು ಸಹ ಹೊಂದಿದೆ. ಕೊಯಮತ್ತೂರು, ಅಹಮದಾಬಾದ್, ಜೈಪುರ, ಇತ್ಯಾದಿಗಳಿಗೂ ಸಂಪರ್ಕ ಹೊಂದಿದೆ.

ವಿಮಾನದ ಮೂಲಕ

ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಗೋವಾದ ದಬೋಲಿಮ್‌ನಲ್ಲಿ 97 ಕಿಮೀ ದೂರದಲ್ಲಿದೆ. ಇದು ಎಲ್ಲಾ ಪ್ರಮುಖ ಸ್ಥಳಗಳಿಗೆ ನಿಯಮಿತ ವಿಮಾನಗಳನ್ನು ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X