Search
  • Follow NativePlanet
Share
» »ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ

ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ

ಇಲ್ಲೊಂದು ವಿಶೇಷ ಹಳ್ಳಿಯಿದೆ ಇಲ್ಲಿನ ಜನರ ಸಮಸ್ಯೆಗಳ ಬಗೆಹರಿಸಲು ಯಾವುದೇ ಕೋರ್ಟ್‌ನ ಅಗತ್ಯವಿಲ್ಲ. ಬದಲಾಗಿ ಇಲ್ಲಿ ಹಳ್ಳೀ ಪಂಚಾಯಿತಿ ನಡೆಯುತ್ತದೆ. ಕಾನಿಫ್‌ನಾಥ್‌ನ ಸಮ್ಮುಖದಲ್ಲೇ ಪಂಚಾಯಿತಿ ನಡೆಸಿ ನ್ಯಾಯ ಒದಗಿಸಲಾಗುತ್ತದೆ. ಇಲ್ಲಿಯ ಜನರು ಯಾರೊಬ್ಬರೂ ಇಲ್ಲಿನ ತೀರ್ಪಿನ ವಿರುದ್ಧ ಹೋಗುವುದಿಲ್ಲ.

ಕಾನಿಫ್‌ನಾಥ್ ಮಂದಿರ

ಕಾನಿಫ್‌ನಾಥ್ ಮಂದಿರ

ನಾಥ ಸಂಪ್ರದಾಯದ ಒಂಭತ್ತು ನಾಥರಲ್ಲಿ ಕಾನಿಫ್‌ನಾಥ್ ಮಹಾರಾಜ್‌ರ ಸಮಾಧಿ ಸ್ಥಳವೂ ಒಂದು. ಮಹಾರಾಷ್ಟ್ರದ ಸಹ್ಯಾದ್ರಿ ಪರ್ವತ ಶಿಖರಗಳಲ್ಲಿ ಗರ್ಭಗಿರಿ ಪರ್ವತದ ಸಮೀಪದಲ್ಲಿ ಹರಿಯುವ ಪೌನಾಗಿರಿ ನದಿಯ ಸಮೀಪದಲ್ಲಿರುವ ಕೋಟೆಯಲ್ಲಿ ಮಾಡಿ ಎನ್ನುವ ಹಳ್ಳಿಯಿದೆ. ಈ ಹಳ್ಳಿಯಲ್ಲೇ ಮಹಾನ್‌ ಸಂತ ಕಾನಿಫ್‌ನಾಥ್ ಮಹಾರಾಜ್‌ರ ಸಮಾಧಿ ಇದೆ.

ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ

ಮಂದಿರ ನಿರ್ಮಿಸಿದ ರಾಣಿ

ಮಂದಿರ ನಿರ್ಮಿಸಿದ ರಾಣಿ

PC: Vinodsatre

ಈ ಕೋಟೆಯಲ್ಲಿ ಕಾನಿಫ್‌ನಾಥ್ ಮಹಾರಾಜ್‌ 1710ರಲ್ಲಿ ಫಲ್ಗುನ ತಿಂಗಳಲ್ಲಿ ವೈದ್ಯ ಪಂಚಮಿಯ ದಿನ ಸಮಾಧಿಯಾಗಿದ್ದರು. ಇದು ಸಾಕಷ್ಟು ಜನರ ಭಕ್ತಿಯ ಕೇಂದ್ರವಾಗಿದೆ. ಇಲ್ಲಿ ರಾಣಿ ಯೇಸೂಬಾಯ್ ಕಾನಿಫ್‌ನಾಥ್‌ ಮಹಾರಾಜರಲ್ಲಿ ತನ್ನ ಪುತ್ರ ಶಾಹು ಮಹಾರಾಜನನ್ನು ಔರಂಗಜೇಬನ ಬಂಧನದಿಂದ ಬಿಡುಗಡೆ ಮಾಡುವಂತೆ ಕೋರಿಕೊಂಡಿದ್ದರು. ತನ್ನ ಬೇಡಿಕೆ ಈಡೇರಿದ ನಂತರ ರಾಣಿಯು ಅಲ್ಲಿ ದೇವಾಲುವನ್ನು ನಿರ್ಮಿಸಿದಳು.

ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದವರು

ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದವರು

ಈ ಮಂದಿರ ನಿರ್ಮಾಣದ ಕಾರ್ಯದಲ್ಲಿ ಯಾದವರು, ಕೈಕಾಡಿ, ಬೆಲ್‌ದಾರ್, ವೈದ್ಯ, ಗರೂಡಿ, ಲಾಮಣ, ಬಿಲ್ಲ , ಜೋಶಿ, ಕುಂಭಾರ ಹಾಗೂ ವಾಡಾರಿ ಸೇರಿದಂತೆ ಹಲವಾರು ಜಾತಿಗೆ ಸೇರಿದವರು ತನು, ಮನ, ಧನದಿಂದ ಸಹಕರಿಸಿದ್ದಾರೆ.

3 ದಿನದಲ್ಲಿ ಗೋವಾ ಸುತ್ತಾಡೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ಟಿಪ್ಸ್

ಇತರ ಸಮಾಧಿಗಳು

ಇತರ ಸಮಾಧಿಗಳು

ಮಾಡಿಯ ಗರ್ಭಗಿರಿ ಪರ್ವತದಲ್ಲಿರುವ ಕಾನಿಫ್‌ನಾಥ್ ಮಹಾರಾಜರ ಜೊತೆಗೆ ಗೋರಕ್ಷನಾಥ, ಮಚ್ಚೀಂದ್ರನಾಥ, ಗಹಿನಿನಾಥ ಹಾಗೂ ಜಲಿಂದರನಾಥ್ ಮಹಾರಾಜರ ಸಮಾಧಿ ಕೂಡಾ ಇದೆ.

 ಆನೆಯ ಕಿವಿಯಿಂದ ಪ್ರಕಟವಾದ ಕಾನಿಫ್‌ನಾಥ್‌

ಆನೆಯ ಕಿವಿಯಿಂದ ಪ್ರಕಟವಾದ ಕಾನಿಫ್‌ನಾಥ್‌

ಕಾನಿಫ್‌ನಾಥ್‌ ಹಿಮಾಲಯದಲ್ಲಿ ಆನೆಯ ಕಿವಿಯಿಂದ ಪ್ರಕಟವಾದವರು ಎನ್ನಲಾಗುತ್ತದೆ. ಕಾನಿಫ್‌ನಾಥ್‌ ಮಹಾರಾಜ ಭದ್ರಾವತಿಯಲ್ಲಿ ಭಗೀರಥಿ ನದಿ ತೀರದಲ್ಲಿ12 ವರ್ಷ ತಪಸ್ಸು ಮಾಡಿ ಹಲವಾರು ವರ್ಷ ಕಾಡಿನಲ್ಲಿ ಕಳೆದು ಯೋಗ ಸಾಧನೆಯನ್ನು ಮಾಡಿದರು. ದೀನ, ದಲಿತರನ್ನು ತನ್ನ ಉಪದೇಶಗಳ ಮುಖಾಂತರ ಭಕ್ತಿಮಾರ್ಗದ ಮೂಲಕ ಭಾವನೆಗಳನ್ನು ಜಾಗೃತಗೊಳಿಸಿದರು.

ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?

ಮನೋಕಾಮನೆ ಪೂರ್ಣವಾಗುತ್ತದೆ

ಮನೋಕಾಮನೆ ಪೂರ್ಣವಾಗುತ್ತದೆ

ಈ ಸಮಾಧಿಯಲ್ಲಿ ದಾಳಿಂಬೆಯ ಮರವೊಂದು ಬೆಳೆಯಿತು. ಈ ಮರಕ್ಕೆ ಕೆಂಪು ದಾರವನ್ನು ಕಟ್ಟಿದರೆ ಭಕ್ತರ ಎಲ್ಲಾ ಮನೋಕಾಮನೆ ಪೂರ್ಣಗೊಳ್ಳುತ್ತದೆ ಎನ್ನುವುದು ಜನರ ನಂಬಿಕೆ. ಇಂದಿಗೂ ಈ ಮಂದಿರ ಪರಿಸರದಲ್ಲಿ ಹಳ್ಳಿಯ ಪಂಚಾಯತಿ ನಡೆಯುತ್ತದೆ. ಇಲ್ಲಿ ಜನರ ಸಮಸ್ಯೆಗಳನ್ನು ನ್ಯಾಯೋಚಿತವಾಗಿ ಬಗೆಹರಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ವಿಮಾನದ ಮೂಲಕ: ಅಹಮದಾನಗರದಿಂದ ಸಮೀಪದ ವಿಮಾನ ನಿಲ್ದಾಣವೆಂದರೆ ಪುಣೆ ವಿಮಾನನಿಲ್ದಾಣ. ಇದು ಅಹಮದಾನಗರ್‌ನಿಂದ ಸುಮಾರು 121 ಕಿ.ಮಿ ದೂರದಲ್ಲಿದೆ.

ರೈಲು ಮಾರ್ಗ: ಅಹಮದಾನಗರ್‌ ತಲುಪಲು ಪುಣೆಯಿಂದ ಸಾಕಷ್ಟು ರೈಲುಗಳು ಲಭ್ಯವಿದೆ.

ರಸ್ತೆ ಮಾರ್ಗ: ಮಾಡಿ ಹಳ್ಳಿಯು ಅಹಮದಾನಗರ್‌ನಿಂದ 55 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ಸರಕಾರಿ ಬಸ್‌ ಅಥವಾ ಖಾಸಗಿ ವಾಹನಗಳು ಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more