ಅಹ್ಮದ್ ನಗರದ ಭೇಟಿಗೆ ವರ್ಷದ ಅತ್ಯುತ್ತಮ ಸಮಯ ಚಳಿಗಾಲದ ಅವಧಿಯಾದ ಅಕ್ಟೋಬರ್ ತಿಂಗಳಿಂದ ಮಾರ್ಚ್ ವರೆಗಿನ ಕಾಲ.
ಅಹ್ಮದ್ ನಗರವು ಬೇಸಿಗೆಯಲ್ಲಿ ಗಣನೀಯವಾಗಿ ಬಿಸಿಯಾಗಿರುತ್ತದೆ. ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಬೇಸಿಗೆಗಾಲ ವಿಸ್ತರಿಸುತ್ತಿದ್ದು, ಉಷ್ಣಾಂಶವು ಅಸಹನೀಯವಾದ 40 ° ಸಿ ವರೆಗೂ ಏರಬಲ್ಲದು.
ಅಹ್ಮದ್ನಗರದಲ್ಲಿ ಮಳೆಗಾಲವು ಬೇಸಿಗೆಯಲ್ಲಿ ಅನುಭವಿಸಿದ ತೀವ್ರತರವಾದ ತಾಪಮಾನಗಳಲ್ಲಿ ಕುಸಿದವರಿಗೆ ಒಂದಷ್ಟು ಸ್ವಾಗತಾರ್ಹವಾಗಿದ್ದು ಸಾಕಷ್ಟು ಆನಂದ ನೀಡುತ್ತದೆ. ಅಹ್ಮದ್ ನಗರದ ಸಂಪೂರ್ಣ ಪ್ರದೇಶವು ವರ್ಷದ ಈ ಅವಧಿಯಲ್ಲಿ ಬೆರಗುಗೊಳಿಸುವಂತೆ ತೋರುತ್ತಿದ್ದು ವೃಷ್ಠಿ-ಪ್ರಿಯರು ಇಂತಹ ಚಮತ್ಕಾರೀ ಸಮಯದಲ್ಲಿ ನಗರಕ್ಕೆ ಭೇಟಿ ನೀಡಬೇಕು.
ಚಳಿಗಾಲವು ಅಹ್ಮದ್ನಗರದಲ್ಲಿ ಅಕ್ಟೋಬರ್ ನಿಂದ ಮೇ ವರೆಗಿನ ದೀರ್ಘಾವದಿಯವರೆಗೆ ಇರುತ್ತದೆ. ಹವಾಮಾನ ಈ ಸಮಯದಲ್ಲಿ ಮಧ್ಯಮ ಶೀತ ಮತ್ತು ಪ್ರಧಾನವಾಗಿ ಶುಷ್ಕವಾಗಿರುತ್ತದೆ. ಈ ಋತುವಿನಲ್ಲಿ ಉಷ್ಣಾಂಶ ಸುಮಾರು 22 ° C ಇರುತ್ತದೆ. ಇಲ್ಲಿ ಹಗಲುಗಳು ತಂಪಾಗಿರುತ್ತಿದ್ದು ರಾತ್ರಿಗಳು ಸ್ವಲ್ಪಕಡಿಮೆ ತಂಪಾಗಿರುತ್ತವೆ.