Search
  • Follow NativePlanet
Share
» »ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳದ ಬಗ್ಗೆ ಗೊತ್ತೇ?

ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳದ ಬಗ್ಗೆ ಗೊತ್ತೇ?

ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜ್ ಅವರ ಜನ್ಮಸ್ಥಳ ಜುನ್ನಾರ್ ಎಂದು ಕರೆಯಲ್ಪಡುವ ನಗರ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿದೆ. ರಸ್ತೆ ಪ್ರವಾಸಗಳು ಯಾವಾಗಲೂ ರೋಮಾಂಚನಕಾರಿ ಸಂಗತಿಗಳನ್ನು ಹೊಂದಿರುತ್ತವೆ? ನೀವು ಸಹ ಮುಂಬೈನಿಂದ ಜುನ್ನಾರ್ ವರೆಗೆ ಸುಮಾರು 166 ಕಿ.ಮೀ ರಸ್ತೆ ಪ್ರವಾಸವನ್ನು ಕೈಕೊಳ್ಳಬಹುದು! ಆದರೆ ಜುನ್ನಾರ್‌ಗೆ ಪ್ರಯಾಣಿಸಲು ಜನರು ಏಕೆ ಬಯಸುತ್ತಾರೆ?

ಜುನ್ನಾರ್ ಕಡಿಮೆ ಮಾಲಿನ್ಯದಿಂದಾಗಿ ಬ್ರಿಟಿಷ್ ಕಾಲದಿಂದಲೇ 'ಸ್ಯಾನಿಟೋರಿಯಂ ಆಫ್ ಇಂಡಿಯಾ' ಎಂದು ಕರೆಯಲ್ಪಡುವ ಮೂಲಕ ಉಸಿರಾಟದ ಸಮಸ್ಯೆಗಳನ್ನು ಗುಣಪಡಿಸುವ ಪವಾಡದ ಸ್ಥಳವೆಂದು ನಿಮ್ಮನ್ನು ಆಕರ್ಷಿಸುತ್ತದೆ. ಇದು 3000 ವರ್ಷಗಳ ರೋಮಾಂಚಕ ಇತಿಹಾಸವನ್ನು ಹೊಂದಿದ್ದು ಇದರ ಮೊಟ್ಟಮೊದಲ ರಾಜ, ಸತ್ವಾಹನ್ ರಾಜ. ಇದು ಕೃಷಿ ಪ್ರವಾಸೋದ್ಯಮ ಮತ್ತು ಸಾಕಷ್ಟು ಪ್ರಾಚೀನ ಗುಹೆ ದೇವಾಲಯಗಳನ್ನು ಸಹ ಹೊಂದಿದೆ. ಜುನ್ನಾರ್‌ ನನೆಘಾಟ್‌ನಂತಹ ಪ್ರಾಚೀನ ಘಟ್ಟಗಳಿಂದ ಹಿಡಿದು ಸಂಕೀರ್ಣವಾದ ಕೋಟೆಗಳು ಮತ್ತು ಅದ್ಭುತ ನೀರಿನ ಜಲಾಶಯಗಳು ಮತ್ತು ಅದರ ಅದ್ಭುತ ಸಂಸ್ಕೃತಿಯನ್ನು ಹೊಂದಿದೆ.

ಜುನ್ನಾರ್ ತಲುಪುವುದು ಹೇಗೆ?

ರಸ್ತೆಯ ಮೂಲಕ: ನೀವು ಯಾವಾಗದರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಾರಿನಲ್ಲಿ ಸಹ ಹೋಗಬಹುದು ಅಥವಾ ಬೈಕ್‌ನಲ್ಲಿ ಮುಂಬೈನಿಂದ ಜುನ್ನಾರ್‌ಗೆ ರೈಡ್ ಮಾಡಬಹುದು ಇದು ಸುಮಾರು 4 ಗಂಟೆ ತೆಗೆದುಕೊಳ್ಳುತ್ತದೆ. ಪುಣೆಯಿಂದ ಜುನ್ನಾರ್‌ಗೆ ಪ್ರತಿ ಗಂಟೆಗೆ ನಿಯಮಿತ ಬಸ್ಸುಗಳಿವೆ.

ರೈಲು ಮೂಲಕ: ಪುಣೆ ರೈಲ್ವೆ ನಿಲ್ದಾಣವು ನಾಗ್ಪುರ ಮತ್ತು ಮುಂಬೈನಂತಹ ಪ್ರಮುಖ ನಗರಗಳಿಗೆ ನಿಯಮಿತ ರೈಲುಗಳ ಮೂಲಕ ಹೊಂದಿಕೊಂಡಿದ್ದು ಮತ್ತು ಇದು ಜುನ್ನಾರ್ ನಗರಕ್ಕೆ ಹತ್ತಿರದಲ್ಲಿದೆ.

ವಿಮಾನದ ಮೂಲಕ: ಸುಮಾರು 154 ಕಿ.ಮೀ ದೂರದಲ್ಲಿರುವ ಚತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಜುನ್ನಾರ್‌ಗೆ ಪ್ರಯಾಣಿಸಲು ಹತ್ತಿರದಲ್ಲಿದೆ. ಇದು ಮಹಾರಾಷ್ಟ್ರದ ಒಳಗಿನ ಮತ್ತು ಹೊರಗಿನ ಎಲ್ಲಾ ಪ್ರಮುಖ ಪಟ್ಟಣಗಳು ​​ಮತ್ತು ನಗರಗಳನ್ನು ಒಳಗೊಳ್ಳುತ್ತದೆ ಮತ್ತು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆಯು ಜುನ್ನಾರ್‌ಗೆ ಹೋಗುವ ಮಾರ್ಗವನ್ನು ಇನ್ನಷ್ಟು ಸರಳಗೊಳಿಸುತ್ತದೆ.

ಜುನ್ನಾರ್ನಲ್ಲಿನ ಪ್ರವಾಸಿ ಆಕರ್ಷಣೆಯ ಕೆಲವು ಸ್ಥಳಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣವೇ.

1) ಶಿವನೇರಿ ಕೋಟೆ

1) ಶಿವನೇರಿ ಕೋಟೆ

PC: Nkunal

ಪ್ರಸಿದ್ಧ ಶಿವನೇರಿ ಕೋಟೆಯ ವಿನ್ಯಾಸವು ಪ್ರಶಂಸನೀಯವಾಗಿದ್ದು ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ ಮತ್ತು ಪ್ರಸಿದ್ಧ ಮರಾಠಾ ಯೋಧ 1630 ರಲ್ಲಿ ಇಲ್ಲಿ ಜನಿಸಿದ್ದರಂತೆ. ಮುಖ್ಯ ಕೋಟೆಯು ಸಾಕಷ್ಟು ಅಡೆತಡೆಗಳನ್ನು ಹೊಂದಿದ್ದು ಏಳು ದ್ವಾರಗಳ ರೂಪದಲ್ಲಿ ಕೇಂದ್ರ ಪ್ರದೇಶ ಬಾದಾಮಿ ತಲವಿ ಎಂಬ ಸಣ್ಣ ನೀರಿನ ಕೊಳವನ್ನು ಹೊಂದಿದೆ .

ಕೊಳದ ಸಮೀಪದಲ್ಲಿ ನೀವು ಶಿವಾಜಿಯ ವಿಗ್ರಹವನ್ನು ಅವರ ತಾಯಿ ಜಿಜಾಬಾಯಿಯೊಂದಿಗೆ ಗುರುತಿಸಬಹುದು. ಶಿವಾಜಿಯ ಬಾಲ್ಯದ ನೆನಪುಗಳನ್ನು ಈ ಕೋಟೆಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಈ ಅರಮನೆಯಲ್ಲಿಯೂ ಅವನು ತನ್ನ ಮಿಲಿಟರಿ ಕೌಶಲ್ಯವನ್ನು ಮೆರುಗುಗೊಳಿಸಿದ್ದಾನೆಂದು ನಿಮಗೆ ತಿಳಿದಿದೆಯೇ?

ನಿಮ್ಮ ಗಮನವನ್ನು ಸೆಳೆಯುವ ಕೋಟೆಯೊಳಗೆ ಇನ್ನೇನು ಇದೆ ಎಂದು ನೀವು ಆಶ್ಚರ್ಯಪಡುತ್ತಿರಬೇಕು? ಅಲ್ಲವೇ, ನೀವು ಡೊಂಗರ್ಮಾಥಾ, ಕಡೇಲೂಟ್ ಟೋಕ್ ಮತ್ತು ಕಮನ್ ಟೇಕ್ ಅನ್ನು ಒಳಭಾಗದಲ್ಲಿ ಹಾಗೂ ಅಂಬರ್ಖಾನಾ, ಕಾಡೆಲೋಟ್ ಪಾಯಿಂಟ್, ಗಂಗಾ ಜಮುನಾ ಮತ್ತು ನಾನೆಘಾಟ್ ಅನ್ನು ಕೋಟೆಯ ಸುತ್ತಲೂ ವೀಕ್ಷಿಸಬಹುದು.

2) ನಾನೆಘಾಟ್ ಚಾರಣ

2) ನಾನೆಘಾಟ್ ಚಾರಣ

PC: Reflectionsbyprajakta

ನೆಲದಿಂದ 2600 ಅಡಿ ಎತ್ತರದಲ್ಲಿ ಪರ್ವತದ ಹಾದುಹೋಗುತ್ತಿರುವುದನ್ನು ಕಲ್ಪಿಸಿಕೊಳ್ಳಿ, ಇದು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಇದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಜುನ್ನಾರ್ ಬಳಿಯ ಪಶ್ಚಿಮ ಘಟ್ಟದ ​​ವ್ಯಾಪ್ತಿಯಲ್ಲಿದೆ.

ಕಲ್ಯಾಣ ಮತ್ತು ಜುನ್ನಾರ್ ನಡುವಿನ ವ್ಯಾಪಾರ ಉದ್ದೇಶಗಳಿಗಾಗಿ ಈ ಪಾಸ್ ಉತ್ತಮವಾಗಿ ಸೇವೆ ಸಲ್ಲಿಸಿದೆ. ಇದು ಸೊಪಾರಾ ಮತ್ತು ಕಲ್ಯಾಣ್ ಬಂದರಿಗೆ ನೇರವಾಗಿ ಜುನ್ನಾರ್ ಮತ್ತು ಪೈಥಾನ್‌ಗೆ ಸೇರಿಕೊಂಡ ಕಾರಣ ಇದನ್ನು ನಿರ್ಣಾಯಕ ವ್ಯಾಪಾರ ಮಾರ್ಗವೆಂದು ಪರಿಗಣಿಸಲಾಗಿದೆ.

'ನಾನೆಘಾಟ್' ಎಂಬ ಹೆಸರು ಏಕೆ ಎಂದು ಆಶ್ಚರ್ಯ ಪಡುತ್ತೀರಾ? ನಾನೆ ಎಂದರೆ "ನಾಣ್ಯ" ಮತ್ತು ಘಾಟ್ ಎಂದರೆ "ಪಾಸ್". ಬೆಟ್ಟದ ಉದ್ದಕ್ಕೂ ಹೋಗುವ ವ್ಯಾಪಾರಿಗಳಿಂದ ಟೋಲ್ ತೆರಿಗೆ ಸಂಗ್ರಹಿಸಲು ಈ ಚಾರಣವು ಅತ್ಯುತ್ತಮ ಟೋಲ್ ಬೂತ್ ಆಗಿ ಕಾರ್ಯನಿರ್ವಹಿಸಿದಂತೆ.

3) ಜುನ್ನಾರ್ ಗುಹೆಗಳು

3) ಜುನ್ನಾರ್ ಗುಹೆಗಳು

PC: Kevin Standage

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಜುನ್ನಾರ್ ಗುಹೆಗಳು ಮುಂಬೈನಿಂದ 177 ಕಿ.ಮೀ ಮತ್ತು ಪುಣೆಯಿಂದ 96 ಕಿ.ಮೀ ದೂರದಲ್ಲಿದೆ. ಬೌದ್ಧ ಯಾತ್ರಿಕರು ಈ ಸ್ಥಳಕ್ಕೆ ಸಾಕಷ್ಟು ಬಾರಿ ಬರುತ್ತಾರೆ ಏಕೆಂದರೆ ಇದು ಅವರಿಗೆ ತೀರ್ಥಯಾತ್ರೆಯ ಪ್ರಮುಖ ತಾಣವಾಗಿದೆ.

ಪುರಾತತ್ತ್ವ ಶಾಸ್ತ್ರದ ದೃಷ್ಟಿಕೋನದಿಂದ ನೋಡಿದರೆ, ಜುನ್ನಾರ್ ಗುಹೆಗಳನ್ನು ತುಲ್ಜಾ ಗುಹೆಗಳು, ಮನಮೋಡಿ ಗುಂಪು ಗುಹೆಗಳು, ಶಿವನೇರಿ ಗುಂಪು ಗುಹೆಗಳು ಮತ್ತು ಗಣೇಶ್ ಲೆನಾ ಗುಹೆಗಳು ಎಂದು ವಿವಿಧ ಗುಂಪುಗಳಾಗಿ ಗುರುತಿಸಲಾಗಿದೆ. ಗುಹೆಗಳ ಗುಂಪುಗಳಲ್ಲಿ ಅತಿ ಪ್ರಾಮುಖ್ಯತೆ ಹೊಂದಿದ ಗುಹೆಗಳು ಯಾವುದು ಎಂದು ನೀವು ಕೇಳಿದರೆ, ಅದು ಕುನ್ನ್ದಿ ನದಿಗೆ ಅಡ್ಡಲಾಗಿ ಜುನ್ನಾರ್‌ನಿಂದ ಉತ್ತರಕ್ಕೆ 6 ಕಿ.ಮೀ ದೂರದಲ್ಲಿರುವ ಲೆನ್ಯಾದ್ರಿ ಅಥವಾ ಗಣೇಶ್ ಲೆನಾ ಗುಹೆಗಳು. ಇವುಗಳು ಸುಮಾರು 30 ಗುಹೆಗಳೊಂದಿಗೆ ಪೂರ್ವದಿಂದ ಪಶ್ಚಿಮಕ್ಕೆ ವಿಸ್ತರಿಸಿರುವ, ದಕ್ಷಿಣ ದಿಕ್ಕಿಗೆ ಎದುರಾಗಿ ಮತ್ತು ಕುಕ್ಡಿ ನದಿ ಕಣಿವೆಯನ್ನು ಒಳಗೊಂಡಿವೆ.

4) ಲೆನ್ಯಾದ್ರಿ ಗುಹೆಗಳು

4) ಲೆನ್ಯಾದ್ರಿ ಗುಹೆಗಳು

PC: Pratikbuttepatil52

ಬಂಡೆ ಒಳಗಿನ 30 ಬೌದ್ಧ ಗುಹೆಗಳನ್ನು ನೀವು ಏನು ಕರೆಯುತ್ತೀರಿ? ಅದು ಲೆನ್ಯಾದ್ರಿ. ನಮ್ಮ ಹಿಂದೂ ದೇವ ಗಣೇಶನು ಇವುಗಳಲ್ಲಿ 7 ನೇ ಗುಹೆ ಸಂಖ್ಯೆಯನ್ನು ಹೊಂದಿದ್ದಾನೆ. 'ಗಿರಿಜಾ' ಎಂಬ ಪದದ ಅರ್ಥ ನಮ್ಮ ಹಿಂದಿ ಭಾಷೆಯಲ್ಲಿ ಪಾರ್ವತಿ ಮತ್ತು 'ಆತ್ಮ' ಎಂದರೆ 'ಮಗ'. ಆದ್ದರಿಂದ, ಗಣೇಶನನ್ನು 'ಗಿರ್ಜಿಜತ್ಮಾಜ್' ಎಂದು ಕರೆಯಲಾಗುತ್ತದೆ ಅಂದರೆ ಪಾರ್ವತಿಯ ಮಗ ಗಣೇಶ ಎಂದು ಸೂಚಿಸುತ್ತದೆ. ಇದು ಪರ್ವತದ ಮೇಲೆ ನಿರ್ಮಿಸಲಾದ ವಿಶೇಷ ಗಣೇಶ ದೇವಾಲಯ ಮತ್ತು ಭಾಗಶಃ ಬೌದ್ಧ ಗುಹೆಗಳಿಗೆ ಸೇರಿದೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ.

ಜನರು ತಮ್ಮ ಅಷ್ಟವಿನಾಯಕ ತೀರ್ಥಯಾತ್ರೆಗೆ ಹೆಚ್ಚುವರಿಯಾಗಿ ಈ ದೇವಾಲಯಕ್ಕೆ ಪ್ರವಾಸವನ್ನು ಕೈಕೊಳ್ಳುತ್ತಾರೆ. ವಿಗ್ರಹದ ಮುಖವು ಉತ್ತರದ ಕಡೆಗೆ ಮತ್ತು ಅದರ ಕಾಂಡವು ಎಡಭಾಗದಲ್ಲಿದೆ. ದೇವಾಲಯದ ಒಳಗೆ ವಿದ್ಯುತ್ ಇಲ್ಲ ಎಂದು ನೀವು ನಂಬುವಿರಾ? ಸೂರ್ಯನ ಪ್ರಕಾಶಮಾನವಾದ ಕಿರಣಗಳಿಂದ ದೇವಾಲಯವು ಚಿನ್ನದಂತೆ ಹೊಳೆಯುತ್ತದೆ. ಆದ್ದರಿಂದ, ರಾತ್ರಿಯ ಮೊದಲು ದೇವಾಲಯಕ್ಕೆ ಭೇಟಿ ನೀಡುವುದು ಕಡ್ಡಾಯವಾಗಿದೆ.

ದೇವಾಲಯದ ಸಭಾಂಗಣವು ಸ್ತಂಭಗಳಿಲ್ಲದಿದ್ದು, ಭಕ್ತರು ಬಾಗಿಲು ತಲುಪಲು ಸುಮಾರು 283 ಮೆಟ್ಟಿಲುಗಳನ್ನು ಏರಬೇಕು. ದೇವಾಲಯದ ಬೆರಗುಗೊಳಿಸುವ ನೋಟ ಮತ್ತು ಕುಕಾಡಿ ನದಿಯ ಸುಂದರ ದೃಶ್ಯ ನಿಮ್ಮ ಕಣ್ಣುಗಳಿಗೆ ಮೋಡಿ ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X