Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನ್ನಾರ್ » ಹವಾಮಾನ

ಜುನ್ನಾರ್ ಹವಾಮಾನ

ಜುನ್ನಾರ್ ಸಾಮಾನ್ಯವಾಗಿ ಪುಣೆಯ ಹವಾಮಾನ ಹೋಲುವ ಉಷ್ಣವಲಯದ ಸ್ಥಿತಿಗಳನ್ನು ಅನುಭವಿಸುತ್ತದೆ. ಇದು ಚಳಿಗಾಲದಲ್ಲಿ, ಸಾಮಾನ್ಯವಾಗಿ ತಂಪಾದ ಮತ್ತು ಸೌಮ್ಯ ಹವಾಮಾನವನ್ನು ಹೊಂದಿದ್ದು ಈ ಸಮಯವು ನಗರವನ್ನು ಸುತ್ತಾಡಲು ಹೆಚ್ಚು ಸೂಕ್ತವಾಗಿದೆ ಎಂದು ಪರಿಗಣಿಸಲಾಗುವುದು.

ಬೇಸಿಗೆಗಾಲ

ಜುನ್ನಾರ್ ನಲ್ಲಿ ಬೇಸಿಗೆಯು ಮಾರ್ಚ್ ತಿಂಗಳಲ್ಲಿ ಆರಂಭಗೊಂಡು ಮೇ ನಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಹವಾಮಾನ ಶುಷ್ಕವಾಗಿದ್ದು,  ತಾಪಮಾನವು ಗರಿಷ್ಠ 38 ° C  ಮತ್ತು ಕನಿಷ್ಠ 30  ° C ಆಗಿರುತ್ತದೆ . ಅಲ್ಲದೆ ಏಪ್ರಿಲ್ ಮತ್ತು ಮೇ ತಿಂಗಳುಗಳನ್ನು ವರ್ಷದ ಅತ್ಯಂತ ಬಿಸಿ ತಿಂಗಳುಗಳೆಂದು ಪರಿಗಣಿಸಲಾಗುವುದು. ಆದ್ದರಿಂದ ಇಲ್ಲಿನ ಬೇಸಿಗೆಗಾಲವು ಪ್ರಯಾಣಕ್ಕೆ ಅಹಿತಕರವಾಗಿರುತ್ತದೆ.

ಮಳೆಗಾಲ

ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗಿರುವ ಮಳೆಗಾಲವು ನಗರಕ್ಕೆ ಮಧ್ಯಮಗತಿಯ ಮಳೆಯನ್ನು ತರುತ್ತದೆ. ಇದಕ್ಕೆ ನಗರವು ಪಶ್ಚಿಮ ಘಟ್ಟಗಳ ಗಾಳಿಮರೆಯ ಪ್ರದೇಶದಲ್ಲಿರುವುದೇ ಕಾರಣ. ಈ ಸಮಯದಲ್ಲಿ ಉಷ್ಣಾಂಶ ಗರಿಷ್ಠ 28 ° C ಮತ್ತು ಕನಿಷ್ಠ 10 ° C ಆಗಿರುತ್ತದೆ. ಜೂನ್ ತಿಂಗಳು ವರ್ಷದ ಅತೀ ಒದ್ದೆಯ ಕಾಲವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿಂದ ಫೆಬ್ರುವರಿವರೆಗೆ ಇರುವ ಚಳಿಗಾಲದಲ್ಲಿ ತಾಪಮಾನ ಸುಮಾರು 28° C ನಿಂದ 6 ° C ವರೆಗೆ ವ್ಯತ್ಯಯಗೊಳ್ಳುತ್ತಿರುತ್ತದೆ. ಇಲ್ಲಿ ಹಗಲುಗಳು ತಂಪಾಗಿರುತ್ತಿದ್ದು ರಾತ್ರಿಯಾದಂತೆ ಚಳಿ ಹೆಚ್ಚುತ್ತಾ ಹೋಗುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವವರು ಬೆಚ್ಚನೆಯ ಬಟ್ಟೆಗಳನ್ನು ಒಯ್ಯುವದು ಅವಶ್ಯಕ.