Search
  • Follow NativePlanet
Share
» »ಜೈಪುರದಿಂದ ಶ್ರೀಕೃಷ್ಣನ ನಗರ ಮಥುರಾಗೆ ಒಂದು ಪ್ರಯಾಣ

ಜೈಪುರದಿಂದ ಶ್ರೀಕೃಷ್ಣನ ನಗರ ಮಥುರಾಗೆ ಒಂದು ಪ್ರಯಾಣ

ನೀವೇನಾದರೂ ಜೈಪುರದಿಂದ ವಿಶ್ರಾಂತಿಗಾಗಿ ಯಾವುದಾದರೂ ಶಾಂತಿಯುತವಾದ ಸ್ಥಳಕ್ಕೆ ಪ್ರವಾಸ ಮಾಡ ಬಯಸುವಿರಾದಲ್ಲಿ ನೀವು ಖಂಡಿತವಾಗಿಯೂ ಮಥುರಾಗೆ ಪ್ರವಾಸ ಆಯೋಜಿಸಬೇಕು. ಶ್ರೀಕೃಷ್ಣನ ಜನ್ಮಸ್ಥಳವೆನಿಸಿರುವ ಮಥುರಾವು ಭಾರತದ ಅತ್ಯಂತ ಹೆಚ್ಚಿನ ಜನರಿಂದ ಭೇಟಿ ಕೊಡಲ್ಪಡುವ ಸ್ಥಳಗಳಲ್ಲೊಂದಾಗಿದೆ ಮತ್ತು ಹಿಂದೂಗಳಿಗೆ ಪೂಜ್ಯನೀಯವಾದ ಯಾತ್ರಾಸ್ಥಳವಾಗಿದೆ. ಇಂದಿಗೂ ಈ ಸುಂದರ ನಗರದ ಇತಿಹಾಸದ ಬಗ್ಗೆ ಸ್ಪಷ್ಟವಾಗಿ ಯಾರಿಗೂ ಮಾಹಿತಿ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಈ ಸ್ಥಳವು ಪ್ರವರ್ಧಮಾನಕ್ಕೆ ಬಂದಿದೆ ಎನ್ನಲಾಗುತ್ತದೆ. ಕೃಷ್ಣನೊಂದಿಗಿನ ಅದರ ಸಂಬಂಧದಿಂದಾಗಿ, ಇದು ಕಾಲಾನಂತರದಲ್ಲಿ ಧಾರ್ಮಿಕ ಕ್ಷೇತ್ರವಾಗಿದೆ. ಆದಾಗ್ಯೂ, ಇದು ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ, ಇದು ಅದರ ಅಸ್ತಿತ್ವ ಮತ್ತು ಉಳಿವಿನ ಇತಿಹಾಸವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಮಥುರೆಯ ಗಡಿಯೊಳಗಿರುವ ಪ್ರಶಾಂತವಾದ ವಾತಾವರಣ ಮತ್ತು ಭಕ್ತಿ ಭಾವಗಳ ಸೆಳೆತ ನಿಮ್ಮ ಮೈ ಮನಸ್ಸು ಮತ್ತು ಆತ್ಮವನ್ನು ಪುನಶ್ಚೇತನಗೊಳಿಸುತ್ತದೆ. ನೀವು ಇಲ್ಲಿಯ ಆಧ್ಯಾತ್ಮಿಕ ಪರಿಸರದ ಸೌಂದರ್ಯತೆಯನ್ನೂ ಆನಂದಿಸಬಹುದಾಗಿದೆ. ಮಥುರಾ ಮತ್ತು ಅದರ ಪ್ರವಾಸಿ ತಾಣಗಳ ಬಗ್ಗೆ ವಿವರವಾಗಿ ತಿಳಿಯಲು ಮುಂದೆ ಓದಿ.

ಮಥುರೆಗೆ ಭೇಟಿ ಕೊಡಲು ಉತ್ತಮ ಸಮಯ

ಹಿಂದು ಭಕ್ತರಿಗೆ ಮಥುರಾ ವರ್ಷಪೂರ್ತಿ ಭೇಟಿ ಕೊಡಲು ಯೋಗ್ಯವಾದಂತಹ ಸ್ಥಳವಾಗಿದ್ದೆ ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯು ಇಲ್ಲಿ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದ್ದು, ಈ ಸಮಯದಲ್ಲಿ ಅತ್ಯಂತ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ಈ ಹಬ್ಬವು ಹೆಚ್ಚಾಗಿ ಆಗಸ್ಟ್ ಮತ್ತು ಸೆಪ್ಟಂಬರ್ ಗಳಲ್ಲಿ ಬರುತ್ತದೆ.

ಈ ಹಬ್ಬದ ಸಮಯದಲ್ಲಿ, ಮಥುರಾ ಕೋಟ್ಯಾಂತರ ಹಿಂದೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಅಲ್ಲದೆ ಪ್ರವಾಸಿಗರು ಮತ್ತು ಛಾಯಾಗ್ರಾಹಕರಿಂದಲೂ ಭೇಟಿ ಕೊಡಲ್ಪಡುತ್ತದೆ. ಹವಾಮಾನವನ್ನು ಗಣನೆಗೆ ತೆಗೆದುಕೊಳ್ಳುವುದಾದಲ್ಲಿ, ಮಥುರಾಗೆ ಭೇಟಿ ಕೊಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಫ಼ೆಬ್ರವರಿ ತಿಂಗಳ ಕೊನೆಯವರೆಗೆ.

ಮಥುರೆಯಿಂದ ಜೈಪುರಕ್ಕೆ ತಲುಪುವುದು ಹೇಗೆ

ವಿಮಾನದ ಮೂಲಕ: ಆಗ್ರಾದಲ್ಲಿರುವ ಖೇರಿಯಾ ವಿಮಾನ ನಿಲ್ದಾಣವು ಮಥುರಾಕ್ಕೆ ಸುಮಾರು 58 ಕಿಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಆಗ್ರಾದಿಂದ, ನೀವು ನೇರ ರೈಲಿನ ಮೂಲಕ ಪ್ರಯಾಣ ಮಾಡಬಹುದು ಅಥವಾ ಮಥುರಾಗೆ ನೇರ ಬಸ್ಸು ಹಿಡಿಯಬಹುದು. ಆಗ್ರಾದಿಂದ ನಿಮ್ಮ ಗಮ್ಯಸ್ಥಾನವನ್ನು ತಲುಪಲು ಸರಾಸರಿ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ

ರೈಲಿನ ಮೂಲಕ: ಮಥುರಾ ಜೈಪುರ ಮತ್ತು ಇತರ ಪ್ರಮುಖ ನಗರಗಳಿಗೆ ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಆದ್ದರಿಂದ ನೀವು ಮಥುರಾ ಜಂಕ್ಷನ್‌ಗೆ ನೇರ ರೈಲನ್ನು ಹಿಡಿಯಬಹುದು. ರೈಲಿನ ಮೂಲಕ ಜೈಪುರದಿಂದ ಮಥುರಾ ತಲುಪಲು ನಿಮಗೆ ಅಂದಾಜು 4 ಗಂ 30 ನಿಮಿಷಗಳು ಬೇಕಾಗುತ್ತದೆ.

ರಸ್ತೆಯ ಮೂಲಕ: ಮಥುರಾ ರಸ್ತೆಗಳ ಉತ್ತಮ ವ್ಯವಸ್ಥೆಯನ್ನು ಹೊಂದಿದೆ ಮತ್ತು ಆದ್ದರಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ನೀವು ನೇರ ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು ಅಥವಾ ಜೈಪುರದಿಂದ ಮಥುರಾಗೆ ನೇರ ಬಸ್ ಹಿಡಿಯಬಹುದು.

ಮಾರ್ಗ: ಜೈಪುರ- ಭರತ್ ಪುರ್- ಮಥುರಾ

ನಿಮ್ಮ ದಾರಿಯಲ್ಲಿ, ನೀವು ಭರತ್‌ಪುರದಲ್ಲಿ ವಿರಾಮವನ್ನು ತೆಗೆದುಕೊಳ್ಳಬಹುದು ಮತ್ತು ಅದರ ನೈಸರ್ಗಿಕ ಮತ್ತು ಐತಿಹಾಸಿಕ ತಾಣಗಳನ್ನು ಅನ್ವೇಷಿಸಬಹುದು

ಭರತ್ ಪುರ್

ಭರತ್ ಪುರ್

ಭರತ್ ಪುರ್ ಜೈಪುರದಿಂದ ಸುಮಾರು 185ಕಿ.ಮೀ ದೂರದಲ್ಲಿದೆ ಮತ್ತು ಮಥುರೆಯಿಂದ ಸುಮಾರು 37ಕಿ.ಮೀ ದೂರದಲ್ಲಿದೆ. ಈ ಸ್ಥಳವು ಪ್ರವಾಸಿಗರಲ್ಲಿ ಅತ್ಯಂತ ಜನಪ್ರೀಯತೆಯನ್ನು ಪಡೆದಿದೆ ಏಕೆಂದರೆ ಈ ಸ್ಥಳವು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನವನ್ನ್ನು ಹೊಂದಿದ್ದು ಇದು ಯುನೆಸ್ಕೋ ವಿಶ್ವಪರಂಪರೆಯ ತಾಣಗಳಗಳ ಪಟ್ಟಿಯಲ್ಲಿದೆ ಹಾಗೂ ಇದರಿಂದಾಗಿ ವಿಶ್ವದಾದ್ಯಂತದ ಪ್ರವಾಸಿಗರಿಂದ ನಿರಂತರವಾಗಿ ಭೇಟಿ ನೀಡಲ್ಪಡುತ್ತದೆ.

ಭರತ್‌ಪುರವು ಪುರಾತನವಾದ ಪಟ್ಟಣವಾಗಿದ್ದು, ಜಾತ್ ಅರಸರ ಕಾಲಕ್ಕೆ ಸೇರಿರುವುದರಿಂದ ಇಲ್ಲಿ ಹಲವಾರು ಐತಿಹಾಸಿಕ ತಾಣಗಳನ್ನು ಕಾಣಬಹುದು. ಭರತ್‌ಪುರಕ್ಕೆ ನಿಮ್ಮ ಪ್ರವಾಸದಲ್ಲಿ ನಿರ್ಲಕ್ಷಿಸದಿರುವ ಪ್ರಮುಖ ಸ್ಥಳಗಳೆಂದರೆ ಭರತ್‌ಪುರ ಅರಮನೆ, ಲೋಹಗರ್ ಕೋಟೆ, ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯ.

ಅಂತಿಮ ಗಮ್ಯಸ್ಥಾನ- ಮಥುರಾ

ಅಂತಿಮ ಗಮ್ಯಸ್ಥಾನ- ಮಥುರಾ

ಮಥುರೆಯು ಜೈಪುರದಿಂದ ಸುಮಾರು 225 ಕಿ.ಮೀ ದೂರದಲ್ಲಿ ನೆಲೆಸಿದೆ ಮತ್ತು ಇದು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಪ್ರಶಾಂತವಾದ ವಾತಾವರಣದಲ್ಲಿ ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಒಂದೆಡೆ ಇಲ್ಲಿ ನೀವು ಇಲ್ಲಿರುವ ಸುಂದರವಾದ ದೇವಾಲಯಗಳಿಗೂ ಭೇಟಿಕೊಡಬಹುದಾದರೆ ಇನ್ನೊಂದೆಡೆ ಇಲ್ಲಿಯ ಐತಿಹಾಸಿಕ ತಾಣಗಳಿಗೆ ಭೇಟಿ ಕೊಡಬಹುದು ಮತ್ತು ಮಥುರೆಯ ಇತಿಹಾಸದ ಬಗ್ಗೆ ತಿಳಿಯಬಹುದಾಗಿದೆ. ಈ ಕೆಳಗಿನ ಕೆಲವು ಸ್ಥಳಗಳು ನೀವು ಮಥುರೆಯಲ್ಲಿರಬೇಕಾದರೆ ಭೇಟಿ ಕೊಡಲು ತಪ್ಪಿಸಲೇಬಾರದು ಎನ್ನುವಂತವುಗಳಾಗಿವೆ.

ಕೇಶವ್ ದೇವ ದೇವಾಲಯ

ಕೇಶವ್ ದೇವ ದೇವಾಲಯ

ನಿಸ್ಸಂದೇಹವಾಗಿಯೂ ಮಥುರೆಯ ಅತ್ಯಂತ ಪ್ರಮುಖವಾದ ತಾಣವೆಂದರೆ ಅದು ಕೇಶವ ದೇವ ದೇವಾಲಯ ಇದನ್ನು ಕೃಷ್ಣದೇವರ ಜನ್ಮಸ್ಥಳವೆಂದು ಹೇಳಲಾಗುತ್ತದೆ ಆದುದರಿಂದ ಹಿಂದುಗಳಲ್ಲಿ ಇದನ್ನು ಅತ್ಯಂತ ಪವಿತ್ರ ತಾಣವೆಂದು ಪರಿಗಣಿಸಲಾಗುತ್ತದೆ. ಈ ದೇವಾಲಯವು ಈ ಹಿಂದೆ ಹಲವಾರು ಬಾರಿ ವಿನಾಶ ಮತ್ತು ನವೀಕರಣದ ಮೂಲಕ ಹೋಗಿದ್ದರೂ ಸಹ, ಅದರ ದೈವಿಕ ಸೌಂದರ್ಯವು ಇನ್ನೂ ಅಸ್ಥಿರವಾಗಿದೆ, ಇದರಿಂದಾಗಿ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪ್ರೇಮ್ ಮಂದಿರ್

ಪ್ರೇಮ್ ಮಂದಿರ್

ಅವಳಿ ನಗರಗಳಾದ ಮಥುರೆ ವೃಂದಾವನದಲ್ಲಿ ನೆಲೆಸಿದ್ದು ಇಲ್ಲಿ ಶ್ರೀಕೃಷ್ಣನು ತನ್ನ ಬಾಲ್ಯವನ್ನು ಕಳೆದಿದ್ದನೆನ್ನಲಾಗುತ್ತದೆ. ಪ್ರೇಮ್ ಮಂದಿರವು ಒಂದು ಪ್ರೇಮದ ಸಂಕೇತವನ್ನು ಸೂಚಿಸಲ್ಪಡುವ ದೇವಾಲಯವಾಗಿದ್ದು ಇದು ಶ್ರೀಕೃಷ್ಣ ಮತ್ತು ರಾಧಾದೇವಿಗೆ ಮತ್ತು ರಾಮದೇವರು ಮತ್ತು ಸೀತಾದೇವಿಗೆ ಅರ್ಪಿತವಾದ ದೇವಾಲಯವಾಗಿದೆ. ದೇವಾಲಯವು ಹೊಸದಾಗಿ ನಿರ್ಮಿಸಲಾದ ರಚನೆಯಾಗಿದೆ ಮತ್ತು ಸುಮಾರು 54 ಎಕರೆ ಪ್ರದೇಶದಲ್ಲಿ ಹರಡಿದೆ. ವರ್ಣರಂಜಿತ ಉದ್ಯಾನದಿಂದ ಸುತ್ತುವರೆದಿರುವ ಈ ಸ್ವರ್ಗ ಸದೃಶವಾದ ತಾಣವು ಶಾಂತಿ ಮತ್ತು ಶಾಂತತೆಯ ನಡುವೆ ವಿರಾಮ ತೆಗೆದುಕೊಳ್ಳಲು ಸೂಕ್ತವಾದ ಸ್ಥಳವಾಗಿದೆ.

ದ್ವಾರಕಾದೀಶ್ ದೇವಾಲಯ

ದ್ವಾರಕಾದೀಶ್ ದೇವಾಲಯ

ಶ್ರೀಕೃಷ್ಣ ದೇವರಿಗೆ ಅರ್ಪಿತವಾದ ಮತ್ತೊಂದು ದೇವಾಲಯವೆಂದರೆ ಅದು ದ್ವಾರಕಾದೀಶ ದೇವಾಲಯ ಈ ದೇವಾಲಯವು ಅನ್ವೇಷಣೆಗೆ ಒಳಗಾಗಬೇಕಾಗಿದೆ. ದ್ವಾರಕಾದೀಶ್ ದೇವಾಲಯವು ಈ ಪ್ರದೇಶದ ಅತ್ಯಂತ ಹಳೆಯ ದೇವಾಲಯವಾಗಿದ್ದು ಇದನ್ನು 1814.ರಲ್ಲಿ ಸ್ಥಾಪಿಸಲಾಯಿತು ಎನ್ನಲಾಗುತ್ತದೆ. ಅಲ್ಲಿಂದ ಇಂದಿನವರೆಗೂ ಇದೂ ಕೂಡಾ ಮಥುರೆಯ ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವೆನಿಸಿದೆ. ಮತ್ತು ಪ್ರತೀವರ್ಷ ಮಿಲಿಯನ್ ಗಟ್ಟಲೆ ಭಕ್ತರುಗಳಿಂದ ಭೇಟಿ ನೀಡಲ್ಪಡುತ್ತದೆ.

ಮಥುರಾ ಮ್ಯೂಸಿಯಂ

ಮಥುರಾ ಮ್ಯೂಸಿಯಂ

ನೀವು ಮಥುರಾ ನಗರದ ಇತಿಹಾಸ ಮತ್ತು ಈ ಸ್ಥಳದ ಬಗ್ಗೆ ಹಾಗೂ ಈ ಸ್ಥಳದ ಭವ್ಯ ಯುಗದ ಬಗ್ಗೆ ಏನನ್ನಾದರೂ ತಿಳಿಯಬೇಕೆಂಬ ಕುತೂಹಲವನ್ನು ಹೊಂದಿರುವಿರಿ ಆದಲ್ಲಿ ನಿಮಗೆ ಮಥುರಾ ವಸ್ತುಸಂಗ್ರಹಾಲಯವು ಅತ್ಯಂತ ಸೂಕ್ತ ಸ್ಥಳವಾಗಿದ್ದು ಭೇಟಿ ಕೊಡಬಹುದಾಗಿದೆ. 1874 ರಲ್ಲಿ ಸ್ಥಾಪಿತವಾದ ಇದು ವರ್ಣಚಿತ್ರಗಳಿಂದ ಶಿಲ್ಪಗಳು ಮತ್ತು ನಾಣ್ಯಗಳಿಂದ ಕುಂಬಾರಿಕೆಗಳವರೆಗಿನ ಹಳೆಯ-ಹಳೆಯ ಕಲಾಕೃತಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಇದು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ.

ಕುಸುಮ್ ಸರೋವರ್

ಕುಸುಮ್ ಸರೋವರ್

ಕುಸುಮ ಸರೋವರ ಮಥುರಾದ ಹಿಂದಿನ ಯುಗದ ಬಗ್ಗೆ ನೀವು ಸಾಕಷ್ಟು ಕಲಿಯಬಹುದಾದ ಮತ್ತೊಂದು ಸೌಂದರ್ಯವೆಂದರೆ, ಕುಸುಮ್ ಸರೋವರ್ ಒಂದು ಐತಿಹಾಸಿಕ ಮರಳುಗಲ್ಲಿನ ಸ್ಮಾರಕವಾಗಿದೆ ಮತ್ತು ಇದನ್ನು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ತಾಣವೆಂದು ಪರಿಗಣಿಸಲಾಗಿದೆ.

ಸ್ಮಾರಕದ ಪಕ್ಕದಲ್ಲಿರುವ ನಾರದ ಕೊಳವು ಋಷಿ ನಾರದರು ಸಾವಿರಾರು ವರ್ಷಗಳ ಹಿಂದೆ ಹಲವಾರು ಭಕ್ತಿ ಪದ್ಯಗಳನ್ನು ಬರೆದ ಸ್ಥಳವಾಗಿದೆ. ಇತಿಹಾಸ, ಆಧ್ಯಾತ್ಮಿಕತೆ ಮತ್ತು ಪ್ರಕೃತಿಯನ್ನು ಏಕಕಾಲದಲ್ಲಿ ಆನಂದಿಸಲು ಇದು ಪರಿಪೂರ್ಣ ಸ್ಥಳವಲ್ಲವೇ?

ಇನ್ನಿತರ ದೇವಾಲಯಗಳು ಮತ್ತು ಪ್ರವಾಸಿ ಆಕರ್ಷಣೆಗಳು

ಮೇಲೆ ನೀಡಲಾದ ಸ್ಥಳಗಳಲ್ಲದೆ, ನೀವು ವಿಶ್ರಮ್ ಘಾಟ್, ಕೃಷ್ಣ ಬಲರಾಮ್ ಮಂದಿರ, ಬಿರ್ಲಾ ಮಂದಿರ, ಬಂಕೆ ಬಿಹಾರಿ ಮಂದಿರ, ರಾಧಾ ರಾಮನ್ ದೇವಸ್ಥಾನ ಮತ್ತು ಜಾಮಾ ಮಸೀದಿಯಂತಹ ಇತರ ಸುಂದರ ಸ್ಥಳಗಳನ್ನು ಸಹ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X