Search
  • Follow NativePlanet
Share
» »ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು

ಮಳೆಗಾಲದ ಅತಿ ಪ್ರಿಯವಾದ ಪ್ರವಾಸಿಗರ ತಾಣ - ಚಿಕ್ಕಮಗಳೂರು

By Vijay

ಚಿಕ್ಕಮಗಳೂರು ಅತಿ ಜನಪ್ರಿಯವಾದ ಮತ್ತು ಅಚ್ಚುಮೆಚ್ಚಿನ ಪ್ರವಾಸಿಗರ ತಾಣವಾಗಿದೆ ಅಂದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಚಿಕ್ಕಮಗಳೂರು ಕರ್ನಾಟಕದ ಅತಿ ಸುಂದರವಾದ ಮತ್ತು ರಮಣೀಯವಾದ ಸ್ಥಳವಾಗಿ ಹೆಸರನ್ನು ಪಡೆದಿದೆ. ನಿಸರ್ಗ ಮಾತೆಯು ಇಲ್ಲಿ ಕಾಲೂರಿ ಕೂತಿದ್ದಾಳೆ ಎಂದರೇ ಅದು ಅತಿಶಯವಾಗದು. ಎಲ್ಲ ರಾಜ್ಯದಿಂದಲೂ ಪ್ರವಾಸಿಗರು ಈ ರಮಣೀಯವಾದ ಜಾಗವನ್ನು ಕಣ್ಣ್ತುಂಬಿಕೊಳ್ಳಲು ಬರುತ್ತಾರೆ ಮತ್ತು ಮುಳ್ಳಯ್ಯನಗಿರಿ ಈಗ ಟ್ರೆಕಿಂಗ್ ಪ್ರಿಯರಿಗೆ ಸಿಕ್ಕಿರುವ ಮತ್ತೊಂದು ಅತ್ತ್ಯುತ್ತಮವಾದ ಜಾಗವಾಗಿದೆ. ಇಲ್ಲಿಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರನ್ನು ಬೆಕ್ಕಸ ಬೆರಗುಗೊಳಿಸುವ ಈ ಚಿಕ್ಕಮಗಳೂರು ಮಳೆಗಾಲದಲ್ಲಿ ಓರ್ವ ಸುಂದರ ಕನ್ಯಾ ಮಣಿಯಂತೆ ಸಿಂಗರಿಸಿಕೊಳ್ಳುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

Chikkamagalur

ಛಾಯಾಚಿತ್ರಣ : Brunda Nagaraj

ಚಿಕ್ಕಮಗಳೂರು, ಆ ಹೆಸರಿನಲ್ಲೇ ಏನೋ ಒಂದು ವಿಶೇಷತೆ ಇದೆ ಎನ್ನಿಸುತ್ತದೆ, ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ, ಕಲ್ಲತ್ತಗಿರಿ ಜಲಾಶಯ, ಝರಿ ಜಲಾಶಯ, ಬೆಳವಾಡಿ ವೀರನಾರಾಯಣನ ದೇವಸ್ಥಾನ, ಬೇಳೂರು, ಕೆಮ್ಮಣ್ಣುಗುಂಡಿ ಹಾಗು ಹಳೇಬೀಡು ಚಿಕ್ಕಮಗಳೂರಿನ ಪ್ರಸಿದ್ಧವಾದ ಆಕರ್ಷಣೆಗಳು.

Kemmanagundi

ಛಾಯಾಚಿತ್ರಣ : Brunda Nagaraj

ತನುಮನವನ್ನು ಸೆಳೆಯುವ ಈ ಸುಂದರ ಸ್ಥಳಕ್ಕೆ ಒಮ್ಮೆ ಭೇಟಿ ಕೊಟ್ಟು ಎತ್ತರವಾದ ಮುಳ್ಳಯ್ಯನಗಿರಿಯಲ್ಲಿ ಮೋಡದ ಮಧ್ಯೆಯಲ್ಲಿ ತೇಲುವಂತಹ ಒಂದು ಅನುಭವವನ್ನು ನಿಮ್ಮದಾಗಿಸಿಕೊಳ್ಳಿ. ಬೆಟ್ಟದ ತುದಿಯಲ್ಲಿ ಕೂತಿರುವ ಮುಳ್ಳಯ್ಯನನ್ನು ಕಾಣಲು ಮರೆಯದಿರಿ. ಮುಳ್ಳಯ್ಯನಗಿರಿಯಲ್ಲಿ ದಾರಿ ಬಹು ಸಣ್ಣದಾಗಿರುವುದರಿಂದ ಕಾರ್ಗಳಲ್ಲಿ ಅಥವಾ ದೊಡ್ಡವಾದ ವಾಹನಗಳನ್ನು ತೆಗೆದುಕೊಂಡು ಹೋಗುವಾಗ ಸ್ವಲ್ಪ ಎಚ್ಚರವನ್ನು ವಹಿಸಿ. ಮುಳ್ಳಯ್ಯನಗಿರಿಯಲ್ಲಿ ಬಿಸಿ ಬಿಸಿ ಕಾಫಿಯನ್ನು ಸವಿಯಲು ಮರೆಯದಿರಿ. ಬೆಚ್ಚಗಿನ ಉಡುಪುಗಳನ್ನು ಧರಿಸಿಕೊಳ್ಳಿ, ಎತ್ತರವಾದ ಈ ಗುಡ್ಡವನ್ನು ಹತ್ತುವುದೇ ಒಂದು ರೋಚಕ ಅನುಭವ.

Chikkamagaluru

ಛಾಯಾಚಿತ್ರಣ : Brunda Nagaraj

ಕೆಮ್ಮಣ್ಣುಗುಂಡಿಯೆಯಲ್ಲಿ ಝೆಡ್-ಪಾಯಿಂಟ್ ವೀಕ್ಷಿಸಲು ಮರೆಯದಿರಿ, ಝರಿ ಜಲಪಾತದಲ್ಲಿ ಬಹಳ ಜಿಗಣೆಗಳ ಕಾಟವಿರುತ್ತದೆ ಆದುದರಿಂದ ಇಲ್ಲಿ ಎಚ್ಚರವಹಿಸುವುದು ಸ್ವಲ್ಪ ಅನಿವಾರ್ಯವಾಗುತ್ತದೆ. ಬೇಲೂರ್, ಹಳೇಬೀಡು, ಬೆಳವಾಡಿಯ ದೇವಸ್ಥಾನಗಳಲ್ಲಿ ಕೆತ್ತಿರುವ ಕಲಾಶಿಲ್ಪಿಯ ಕಲೆಗಳನ್ನು ಹೊಗಳದೇ ಇರುವುದು ಖಂಡಿತ ಸಾಧ್ಯವಾಗದು. ಇಲ್ಲಿರುವ ಪ್ರತಿಯೊಂದು ಶಿಲೆಯನ್ನು ಸಹ ಶಿಲ್ಪಿಯು ಬಹಳ ಏಕಾಗ್ರತೆಯಿಂದ ಕೆತ್ತಿರುವುದು ಕಂಡು ಬರುತ್ತದೆ. ಈ ಸುಂದರವಾದ ದೇವಾಲಯಗಳು ನಮ್ಮ ಕಣ್ಣುಗಳಿಗೆ ಅತಿ ಹಿತವನ್ನುಂಟು ಮಾಡುತ್ತದೆ. ಹೊಯ್ಸಳ ಶಯ್ಲಿಯಲ್ಲಿ ಕಟ್ಟಲಾಗಿರುವ ಈ ದೇವಾಲಯಗಳು ನಮ್ಮ ರಾಜ್ಯದ ಹಿರಿಮೆಯನ್ನು ಹಾದಿ ಹೊಗಳುವುದು ನಾವು ಇಲ್ಲಿ ಕಾಣಬಹುದು.

Chikkamagaluru

ಛಾಯಾಚಿತ್ರಣ : Brunda Nagaraj

ದತ್ತಪೀಠವೆಂದೇ ಪ್ರಸ್ಸಿದ್ಧಿಯನ್ನು ಹೊಂದಿರುವ ಬಾಬಬುಡನಗಿರಿಯು ಸಹ ಒಂದು ಸುಂದರವಾದ ತಂಗುದಾಣ.ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಈ ಸುಂದರವಾದ ಚಿಕ್ಕಮಗಳೂರಿಗೆ ಜೀವನದಲ್ಲೊಮ್ಮೆ ಭೇಟಿ ಕೊಡಲು ಮರೆಯದಿರಿ.

ಮಳೆಗಾಲದಲ್ಲಿ ಈ ಸುಂದರವಾದ ಚಿಕ್ಕಮಗಳೂರು ಹೇಗೆ ಕಾಣುತ್ತದೆ ಎಂದು ನೋಡುವ ಆಸೆಯಿದೆಯೇ? ನಮ್ಮ ಜೋಡೀ ಈ ಛಾಯಚಿತ್ತ್ರಗಳನ್ನು ವೀಕ್ಷಿಸುತ್ತಲೇ ನಿಮ್ಮ ಪ್ರವಾಸಕ್ಕೆ ತಯಾರು ಮಾಡಿಕೊಳ್ಳಿ.

ನಿಮ್ಮ ಅಭಿಪ್ರಾಯವನ್ನು ನಮಗೆ ಈ ಕೆಳಕಂಡ "ಕಾಮೆಂಟ್ಸ್" ಜಾಗದಲ್ಲಿ ತಿಳಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X