Search
  • Follow NativePlanet
Share
» »ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಮಹಿಷಾಸುರ ಸಂಹಾರಕ್ಕಾಗಿ ಅಯ್ಯಪ್ಪನಾಗಿ ನೆಲೆಸಿರುವ ಹರಿಹರಸುತನು ಶಬರಿಮಲೈನಲ್ಲಿ ನೆಲೆಸಿದ್ದಾನೆ. ವರ್ಷದಲ್ಲಿ ಕೆಲವು ದಿನಗಳು ಮಾತ್ರ ತೆರೆದಿರುವ ಈ ದೇವಾಲಯದ ದರ್ಶನಕ್ಕೆ ಭಕ್ತರು 41 ದಿನಗಳ ಕಾಲ ದೀಕ್ಷೆ ಮಾಡುತ್ತಾರೆ. ಕಠಿಣ ನಿಯಮದಿಂದ ದೀಕ್ಷೆ ಮಾಡಿ ಇಡುಮುಡಿಯಿಂದ ಬಂದು ಸ್ವಾಮಿಯನ್ನು ದರ್ಶಿಸಿಕೊಳ್ಳುತ್ತಾರೆ. ಸುತ್ತಲೂ ದಟ್ಟವಾದ ಅರಣ್ಯದಿಂದ ಕೂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರವೇ ಶಬರಿಮಲೈ. ಸಹಜಸಿದ್ಧವಾದ ಪ್ರಕೃತಿ ದತ್ತವಾದ ಪಂಬಾ ನದಿ ತೀರದಲ್ಲಿ ಪಶ್ಚಿಮ ಪರ್ವತ ಶ್ರೇಣಿಗಳಲ್ಲಿದೆ ಈ ಪುಣ್ಯಕ್ಷೇತ್ರ.

ಲಕ್ಷಾದಿ ಭಕ್ತ ಜನರು ಮಲಯಾಳಂ ಕ್ಯಾಲೆಂಡರ್ ಪ್ರಕಾರ ಮಂಡಲಕಲ ಕಾಲವಾದ ನವೆಂಬರ್‍ನಿಂದ ಡಿಸೆಂಬರ್‍ವರೆಗೆ ಈ ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಕಾಣಬಹುದು. ಭಾರತದೇಶದ ಮೂಲೆ-ಮೂಲೆಗಳಿಂದ ಭಕ್ತರು ತಮ್ಮ ತಮ್ಮ ಧರ್ಮದ ಯಾವುದೇ ಭೇದ-ಭಾವವಿಲ್ಲದೇ ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ಭೇಟಿ ನೀಡುತ್ತಾರೆ. ಈ ಸ್ವಾಮಿಯ ದೇವಾಲಯವನ್ನು ಎಷ್ಟು ಬಾರಿ ನಿರ್ಮಾಣ ಮಾಡಿದ್ದಾರೆ ಎಂಬುದು ನಿಮಗೆ ಗೊತ್ತ? ಹಾಗಾದರೆ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಈ ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಭೇಟಿ ನೀಡಬೇಕು ಎಂದು ಕೊಂಡಿರುವ ಭಕ್ತರು ತಪ್ಪದೇ 41 ದಿನಗಳ ಕಾಲ ಮಾಂಸಹಾರವನ್ನು ತ್ಯಜಿಸಬೇಕು. ಲೌಕಿಕ ಸುಖದಿಂದ ದೂರವಿರಬೇಕು. ಒಟ್ಟು ಅವರು ಬ್ರಹ್ಮಚರ್ಯೆಯನ್ನು ಪಾಲಿಸಬೇಕು. ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಹಚ್ಚ-ಹಸಿರಿನಿಂದ ಕೂಡಿದ ವೃಕ್ಷಗಳು, ಆಹ್ಲಾದಕರವಾದ ವಾತಾವರಣದ ಪ್ರಯಾಣವು ಪ್ರತಿಯೊಬ್ಬರಿಗೂ ಭಗವತ್ ಪ್ರೆರೇಪಿತ ಅನುಭವವನ್ನು ಅನುಭವಿಸುತ್ತಾರೆ. ಈ ಸುಂದರವಾದ ದೈವದ ಅನುಭವವು ತಮ್ಮ ಜೀವನದಲ್ಲಿ ಎಂದಿಗೂ ನೋಡದೇ ಇರುವ ಹಾಗು ಪಡೆಯದೇ ಇರುವ ಅನುಭವವೇ ಆಗಿದೆ. ಇದು ಕೇವಲ ಭಗವಂತನಿಗೆ ಸೇರುವ ಮಾರ್ಗವೇ ಅಲ್ಲದೇ ಕಠಿಣವಾದ ಮಾರ್ಗ ಕೂಡ ಆಗಿರುತ್ತದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಆದರೆ ಇಲ್ಲಿ ಇರುವ ವೃಕ್ಷಗಳ ನೆರಳಿನಲ್ಲಿ ವಿಶ್ರಮಿಸಿ ದಣಿವು ಹಾರಿಸಿಕೊಂಡು ಪ್ರಯಾಣವನ್ನು ಮುಂದೆವರೆಸಬಹುದು. ಪ್ರಪಂಚದಲ್ಲಿಯೇ ಅತಿ ದೊಡ್ಡ ಪುಣುಕ್ಷೇತ್ರವಾಗಿ ಹೆಸರು ಪಡೆದುಕೊಂಡಿರುವ ಈ ಶಬರಿಮಲೈಗೆ ಪ್ರತಿ ವರ್ಷ ಸುಮಾರು 45 ರಿಂದ 50 ಮಿಲಿಯನ್ ಭಕ್ತರು ಭೇಟಿ ನೀಡುತ್ತಿರುತ್ತಾರೆ. 18 ಬೆಟ್ಟಗಳ ಮಧ್ಯೆ ಇರುವ ಅಯ್ಯಪ್ಪ ಸ್ವಾಮಿ ದೇವಾಲಯ ನೋಡುವುದಕ್ಕೆ ಕಣ್ಣಿಗೆ ಹಬ್ಬದ ರೀತಿ ಇರುತ್ತದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಈ ದೇವಾಲಯ ಪರ್ವತ ಶ್ರೇಣಿಗಳ ಮಧ್ಯೆ ಹಾಗು ದಟ್ಟವಾದ ಅರಣ್ಯದ ಮಧ್ಯ ಇದೆ. ಈ ಅದ್ಭುತವಾದ ಪುಣ್ಯಕ್ಷೇತ್ರವು ಸಮುದ್ರ ಮಟ್ಟಕ್ಕೆ ಸುಮಾರು 1535 ಅಡಿ ಎತ್ತರದಲ್ಲಿದೆ. ಶಬರಿಮಲೈಯ ಸ್ಥಳ ಪುರಾಣದ ಮಹತ್ವ ನಿಮಗೆಲ್ಲಾ ತಿಳಿದಿರುವುದೇ. ಭಯಂಕರವಾದ ರಾಕ್ಷಸಿಯಾದ ಮಹಿಷಿಯ ಸಂಹಾರ ಮಾಡುವುದಕ್ಕೋಸ್ಕರ ಮಣಿಕಂಠನಾಗಿ ಭೂಮಿಗೆ ಇಳಿದು ಮಹಿಷಿಯನ್ನು ಕೊಂದನು. ತದನಂತರ ತನ್ನ ಬಾಣ ಬಿದ್ದ ಸ್ಥಳದಲ್ಲಿ ಧ್ಯಾನ ಮಾಡಲು ಅಯ್ಯಪ್ಪ ಸ್ವಾಮಿಯು ಅಲ್ಲಿಯೆ ನೆಲೆಸಿದ ಎಂದು ಪುರಾಣಗಳು ಹೇಳುತ್ತವೆ. ಶಬರಿಮಲೈ ದೇವಾಲಯವು ಅನೇಕ ಮಂದಿ ಭಕ್ತರಿಗೆ ಸಮಾನತೆಗೆ ಹಿಡಿದ ಕನ್ನಡಿಯಾಗಿದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಇದು ಭಕ್ತ ಜನರಿಗೆ ಮತ್ತೊಮ್ಮೆ ಒಳ್ಳೆಯದು ಎಂದಿಗೂ ಕೆಟ್ಟದ್ದನ್ನು ಜಯಿಸುತ್ತದೆ ಎಂದು, ಪ್ರತಿ ಬಾರಿಯು ನ್ಯಾಯವೇ ನಡೆಯುತ್ತದೆ ಎಂಬ ಸಂದೇಶವನ್ನು ಸಾರುತ್ತಿದೆ. ಧರ್ಮ, ಕುಲ, ವರ್ಣ ಇವುಗಳಲ್ಲಿ ಯಾವುದೇ ಭೇದ-ಭಾವವಿಲ್ಲದೇ ಇರುವ ದೇವಾಲಯಗಳಲ್ಲಿ ಶಬರಿಮಲೈ ಪುಣ್ಯಕ್ಷೇತ್ರವು ಒಂದು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಮಹಾವಿಷ್ಣುವಿನ ಒಂದು ಅವತಾರವಾದ ಪರಶುರಾಮ ಮಹರ್ಷಿ ಅಯ್ಯಪ್ಪ ಸ್ವಾಮಿ ವಿಗ್ರಹವನ್ನು ಶಬರಿಮಲೈನಲ್ಲಿ ಪ್ರತಿಷ್ಟಾಪಿಸಿದರು ಎಂದು ನಂಬಲಾಗಿದೆ. ಈ ಶಬರಿಮಲೈ ಸರ್ಕಾರದ ಅಡಿಯಲ್ಲಿ ಟಿ.ಡಿ.ಬಿ ಯ ನಿರ್ವಹಣೆಯಲ್ಲಿದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಅದರೆ ಸುಮಾರು 200 ವರ್ಷಗಳ ಹಿಂದೆ ಶಬರಿಮಲೈ ಯಾತ್ರೆ ಪ್ರಾರಂಭವಾದ ಹಾಗೆ ಪಂಢಲ ರಾಜವಂಶಿಕರು ರೆಕಾರ್ಡ್‍ನಲ್ಲಿದೆ. ಸುಮಾರು 4800 ರಿಂದ 500 ವರ್ಷಗಳ ಚರಿತ್ರೆಯನ್ನು ಹೊಂದಿರುವ ಪರಶುರಾಮರ ಆಯ್ಯಪ್ಪ ಸ್ವಾಮಿ ದೇವಾಲಯವು 1907 ಮತ್ತು 1909ರ ಮಧ್ಯೆಯಲ್ಲಿ ಅಗ್ನಿಗೆ ಆಹುತಿಯಾದ್ದರಿಂದ ದೇವಾಲಯವನ್ನು 2 ನೇ ಬಾರಿಗೆ ಪುನರ್ ನಿರ್ಮಾಣ ಮಾಡಿದರು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಿಲಾ ವಿಗ್ರಹಕ್ಕೆ ಬದಲಿಗೆ ಪಂಚಲೋಹದಿಂದ ಮಾಡಿದ ಸ್ವಾಮಿ ವಿಗ್ರಹವನ್ನು ತದನಂತರ ಪ್ರತಿಷ್ಟಾಪಿಸಿದರು. ಈ ವಿಗ್ರಹವು ಪ್ರತಿಷ್ಟಾಪಿಸಿದ ನಂತರ ಶಬರಿಮಲೈನಲ್ಲಿ ವೈಭವ ಹಿಮ್ಮಡಿಯಾಯಿತು. ಅಯ್ಯಪ್ಪ ದೇವಾಲಯವು 1930 ರವರೆಗೆ ಟ್ರಾವೆನ್ಕೋ ಸಂಸ್ಥಾನದೀಶರ ಅಧೀನದಲ್ಲಿಯೇ ಇತ್ತು ಆದರೆ 1935ರ ನಂತರ ಇದನ್ನು ಟ್ರಾವೆನ್ಕೋ ದೇವಾಲಯ ಬೋರ್ಡ್‍ಗೆ ಒಪ್ಪಿಸಿದರು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಅಂದಿನಿಂದ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಾ ಹೋಯಿತು. ಇದರಿಂದ ಅಂದಿನವರೆವಿಗೂ ಕೇವಲ ಮಕರಜ್ಯೋತಿಯ ಸಮಯದಲ್ಲಿ ಮಾತ್ರವೇ ತೆರೆಯುವ ದೇವಾಲಯವನ್ನು ಮಂಡಲಪೂಜೆಗೂ ಕೂಡ ತೆರೆಯುವುದಕ್ಕೆ ಪ್ರಾರಂಭಿಸಿದರು. ಪಂಬಾ ಪಾಜೆಕ್ಟ್ ನಿರ್ಮಾಣದಿಂದ ಭಕ್ತರ ಗುಂಪು ಕೂಡ ಹೆಚ್ಚಾಗುತ್ತಾ ಸಾಗಿತು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಹೋದದಂತೆ 1945 ರಿಂದ ವಿಷುಂ, ಓಣಂ ನಂತಹ ಮಳಯಾಳಿ ಹಬ್ಬಗಳಿಗೂ ದೇವಾಲಯವನ್ನು ತೆರೆಯಲು ಪ್ರಾರಂಭಿಸಿದರು. ಅಷ್ಟು ಅರಣ್ಯ ಪ್ರದೇಶವಾದ್ದರಿಂದ ಭಕ್ತರು ಗುಂಪು-ಗುಂಪುಗಳಾಗಿ ಭೇಟಿ ನೀಡುವುದಕ್ಕೆ ಪ್ರಾರಂಭ ಮಾಡಿದರು. ಆದರೆ ಮತ್ತೇ 1950 ರಲ್ಲಿ ದುಷ್ಕರ್ಮಿಗಳು ದೇವಾಲಯದಲ್ಲಿನ ಸ್ವಾಮಿಯ ವಿಗ್ರಹವನ್ನು ಧ್ವಂಸ ಮಾಡಿದರು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ದೇವಾಲಯದ ಬೋರ್ಡ್‍ರವರು ಪ್ರಸ್ತುತವಿರುವ ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು. ಶ್ರೀ ಅಯ್ಯಪ್ಪನ್, ಶ್ರೀ ನೀಲಕಂಠನ್ ಎಂಬುವವರು ಸ್ವಾಮಿಯ ಶಿಲ್ಪವನ್ನು ಮತ್ತೇ ತಯಾರು ಮಾಡಿದರು. 1951 ಜೂನ್ ತಿಂಗಳಿನಲ್ಲಿ ದೇವಾಲಯವನ್ನು 3 ಬಾರಿ ಪುನರ್ ಉದ್ಧರಣ ಮಾಡಿದ ನಂತರ ಅಂದಿನವರೆವಿಗೂ ಕೇರಳಕೇಳಿ ವಿಗ್ರಹವಾಗಿದ್ದ ಅಯ್ಯಪ್ಪ ಭಾರತೀಯಕೇಳಿಯಾಗಿ ಅನಂತರ ಭೂತಕೇಳಿಯಾಗಿ ಪ್ರಪಂಚ ವ್ಯಾಪ್ತಿಯಾಗಿ ಕೀರ್ತಿ ಪಡೆಯಿತು.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಪರಶುರಾಮನು ನಿರ್ಮಾಣ ಮಾಡಿದ ದೇವಾಲಯಕ್ಕಿಂತ ಪ್ರಸ್ತುತವಿರುವ ದೇವಾಲಯವು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಈ ವಿಧವಾಗಿ ಅಯ್ಯಪ್ಪಸ್ವಾಮಿ ದೇವಾಲಯವನ್ನು 3 ಬಾರಿ ಧ್ವಂಸವಾದ್ದರಿಂದ ತನ್ನ ಪ್ರಬಲ್ಯವನ್ನು ಕಳೆದುಕೊಳ್ಳದೇ ಇಂದಿಗೂ ಭಕ್ತರಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ ಅಯ್ಯಪ್ಪ ಸ್ವಾಮಿ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಪುಣ್ಯಕ್ಷೇತ್ರ ಶಬರಿಮಲೈ

ದೀಕ್ಷಾ ಕಾಲವು ನವೆಂಬರ್ ಮಧ್ಯದಲ್ಲಿ ಪ್ರಾರಂಭವಾಗಿ ಜನವರಿ ನಾಲ್ಕನೇ ವಾರದಲ್ಲಿ ಮುಗಿಯುತ್ತದೆ. ಜನವಾಸ ಇಲ್ಲದೇ ಇದ್ದರೂ ಕೂಡ ಶಬರಿಮಲೈ ಪಟ್ಟಣ ಸಮುದಾಯ ನಿರಂತರ ಯಾತ್ರಿಕರು ಭೇಟಿ ನೀಡುತ್ತಲೇ ಇರುತ್ತಾರೆ. ಶಬರಿಮಲೈನಲ್ಲಿ ಪ್ರಧಾನವಾಗಿ ನಡೆಸುವ ಪೂಜೆಗಳೆಂದರೆ ಅದು ಮಂಡಲ ಪೂಜೆ ಮತ್ತು ಮಕರಜ್ಯೋತಿ. ವವಾರ್ ಸ್ವಾಮಿ ಎಂದು ಕರೆಯಲಾಗುವ ಮುಸ್ಲಿಂ ಹೆಸರಿನ ಒಂದು ಮಂದಿರ ಕೂಡ ಇಲ್ಲಿದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಹಾಗಾಗಿಯೇ ಈ ಪ್ರದೇಶವನ್ನು ಧರ್ಮಗಳಿಗೆ ಅನುಗುಣವಾಗಿ ಅಲ್ಲದೇ ಸಮಾನತೆಗೆ ಪ್ರತೀಕವಾಗಿ ಈ ತೀರ್ಥಕ್ಷೇತ್ರವು ನೆಲೆಸಿದೆ. ಆಧ್ಯಾತ್ಮಿಕತೆ, ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಶಬರಿಮಲೈ ಯಾತ್ರೆ ಅದ್ಭುತವಾದ ಅನುಭೂತಿಯನ್ನು ಉಂಟು ಮಾಡುತ್ತದೆ. ಸಾವಿರ ಮಂದಿ ಪ್ರವಾಸಿಗರು ಭಕ್ತಿಯಿಂದ ಈ ಶಬರಿಮಲೈಗೆ ಭೇಟಿ ನೀಡುತ್ತಾರೆ. ವರ್ಷಕ್ಕೆ ಒಮ್ಮೆಯಾದರೂ ಈ ದೇವಾಲಯಕ್ಕೆ ಭಕ್ತರು ಭೇಟಿ ನೀಡುತ್ತಾರೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯ ದೃಶ್ಯ ಭಕ್ತರನ್ನು ಆಕರ್ಷಿಸುತ್ತದೆ. ಇದರ ಮಧ್ಯೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸೇರಿಕೊಳ್ಳುವುದು ವರ್ಣನಾತೀತವಾದ ಅನುಭೂತಿಯನ್ನು ಉಂಟು ಮಾಡುತ್ತದೆ. ಈ ಬೆಟ್ಟದ ಮೇಲೆ ತೆರಳು ಸುಮಾರು 3 ಕಿ.ಮೀ ಕಾಲ್ನಿಡಿಗೆಯಿಂದ ತೆರಳಬೇಕಾಗುತ್ತದೆ. ವಿವಿಧ ಬಗೆಯ ಪಕ್ಷಿಗಳು, ವೃಕ್ಷಗಳು ಮತ್ತು ಪ್ರಾಣಿಗಳನ್ನು ಹೊಂದಿರುವ ಅದ್ಭುತವಾದ ಪರ್ವತ ಸೌಂದರ್ಯದ ಮಾರ್ಗದ ಉದ್ದಕ್ಕೂ ಸುಂದರವಾದ ಅನುಭವವನ್ನು ಉಂಟು ಮಾಡುತ್ತದೆ.

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಶಬರಿಮಲೈ ದೇವಾಲಯವನ್ನು ಇಂದಿಗೆ ಎಷ್ಟು ಬಾರಿ ನಿರ್ಮಾಣ ಮಾಡಿದರು ಗೊತ್ತ?

ಪ್ರಕೃತಿಯನ್ನು ಆರಾಧಿಸುವವರಿಗೆ ಈ ಶಬರಿಮಲೈನ ಭೇಟಿ ಮಧುರವಾದ ಅನುಭೂತಿಯನ್ನು ಉಂಟು ಮಾಡದೇ ಇರದು. ಪ್ರಧಾನ ನಗರಗಳಿಗೆ ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸಂಪರ್ಕವನ್ನು ಹೊಂದಿರುವ ಪಂಬಾ ಪಟ್ಟಣದಿಂದ ಇಲ್ಲಿಗೆ ಸುಲಭವಾಗಿ ಸೇರಿಕೊಳ್ಳಬಹುದು. ಶಬರಿಮಲೈಗೆ ಭೇಟಿ ನೀಡುವ ಪ್ರವಾಸಿಗರು ಟೂರಿಸ್ಟ್ ಪ್ಯಾಕೆಜ್ ಮತ್ತು ಹೋಟೆಲ್‍ನ ಮೂಖಾಂತರ ವಸತಿಯನ್ನು ಪಡೆಯಬಹುದು.

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ರಸ್ತೆ ಮಾರ್ಗದ ಮೂಲಕ
ಕೇರಳದಲ್ಲಿರುವ ಎಲ್ಲಾ ಪ್ರಧಾನ ನಗರಗಳಿಂದ ಪಂಬ ಪಟ್ಟಣಕ್ಕೆ ಅನೇಕ ಬಸ್ಸುಗಳ ವ್ಯವಸ್ಥೆಗಳಿವೆ. ಕೇರಳ ಸ್ಟೇಟ್ ರೋಡ್ ಟ್ರಾನ್ಸ್ ಫೋರ್ಟ್ ಕಾರ್ಪೋರೇಷನ್ ಮೂಖಾಂತರ ಕೇರಳ ಪ್ರಭುತ್ವವು ಸಾರಿಗೆ ಶಾಖೆ ಕೊಟ್ಟಾಂಯಂ, ಚೆಂಗನ್ನೂರು ಮತ್ತು ತಿರುಮಲ ರೈಲ್ವೆ ಸ್ಟೇಷನ್‍ಗಳಿಗೆ ಬಸ್ಸುಗಳು ಇರುತ್ತವೆ. ಖಾಸಗಿ ಟ್ಯಾಕ್ಸಿಗಳು ಮತ್ತು ಟೂರಿಸ್ಟ್ ಪ್ಯಾಕೆಜ್‍ಗಳ ಮುಖಾಂತರ ಕೂಡ ಶಬರಿಮಲೈಗೆ ತೆರಳಬಹುದು

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ರೈಲ್ವೆಗಳ ಮೂಲಕ
ಪಂಬಾ ಪಟ್ಟಣಕ್ಕೆ ಸುಮಾರು 90 ಕಿ.ಮೀ ದೂರದಲ್ಲಿರುವ ಚೆಂಗನ್ನೂರ್ ರೈಲ್ವೆ ನಿಲ್ದಾಣವು, ಶಬಲಿಮಲೈಗೆ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ತಿರುವನಂತಪುರಕ್ಕೆ ಮತ್ತು ಕೊಟ್ಟಾಯಂನ ಮಾರ್ಗ ಮಧ್ಯದಲ್ಲಿ ಈ ಚೆಂಗನ್ನೂರ್ ಪ್ರಾಂತ್ಯ ಇರುವುದರಿಂದ ಭಾರತ ದೇಶದಲ್ಲಿನ ಎಲ್ಲಾ ಮುಖ್ಯವಾದ ರೈಲುಗಳು ಈ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತದೆ.

ಶಬರಿಮಲೈಗೆ ತೆರಳುವ ಬಗೆ ಹೇಗೆ?

ಶಬರಿಮಲೈಗೆ ತೆರಳುವ ಬಗೆ ಹೇಗೆ?

ವಾಯು ಮಾರ್ಗದ ಮೂಲಕ
ಕೊಚ್ಚಿ ಅಂತರ್‍ಜಾತಿಯ ವಿಮಾನ ನಿಲ್ದಾಣ ಮತ್ತು ತಿರುವನಂತಪುರಂ ಅಂತರ್‍ಜಾತಿಯ ವಿಮಾನ ನಿಲ್ದಾಣವು ಶಬರಿಮಲೈಗೆ ಸಮೀಪದಲ್ಲಿದೆ. ಶಬರಿಮಲೈನಿಂದ ತಿರುವನಂತಪುರಕ್ಕೆ 130 ಕಿ.ಮೀ ದೂರದಲ್ಲಿ, ಕೊಚ್ಚಿ ವಿಮಾನ ನಿಲ್ದಾಣದಿಂದ ಸುಮಾರು 190 ಕಿ.ಮೀ ದೂರದಲ್ಲಿದೆ. ಈ 2 ವಿಮಾನ ನಿಲ್ದಾಣಗಳಿಂದ ಪಂಬಾ ಪಟ್ಟಣಕ್ಕೆ ಟ್ಯಾಕ್ಸಿಗಳು ಲಭ್ಯವಿವೆ. ಪಂಬಾ ಪಟ್ಟಣದಿಂದ ಸುಲಭವಾಗಿ ಶಬರಿಮಲೈಗೆ ಸೇರಿಕೊಳ್ಳಬಹುದು.

ಶಬರಿಮಲೈನಲ್ಲಿ ಹೆಚ್ಚು ಪ್ರಚಾರದಲ್ಲಿರುವ ವಾವರ್ ಮಸೀದಿ ರಹಸ್ಯಗಳು...

ಶಿರಿಡಿಗೆ ತೆರಳುತ್ತಿದ್ದೀರಾ? ಹಾಗಾದರೆ ಈ ಪ್ರದೇಶಗಳನ್ನು ತಪ್ಪದೇ ಭೇಟಿ ನೀಡಿ ಬನ್ನಿ...

ಶಬರಿಮಲೈಗೆ ತೆರಳುತ್ತಿದ್ದೀರಾ?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more