Search
  • Follow NativePlanet
Share
» »ಕಷ್ಟಗಳನ್ನು ಕರಗಿಸುವ ನವಗೃಹ ದೇವಾಲಯಗಳು!

ಕಷ್ಟಗಳನ್ನು ಕರಗಿಸುವ ನವಗೃಹ ದೇವಾಲಯಗಳು!

By Vijay

ಹಿಂದು ಪೌರಾಣಿಕ ಜ್ಯೋತಿಷ್ಯ ಶಾಸ್ತ್ರವು ತನ್ನದೆ ಆದ ವಿಶೇಷ ಸ್ಥಾನ-ಮಾನಗಳನ್ನು ಹೊಂದಿದೆ. ಇಂದಿಗೂ ಕೋಟಿ ಕೋಟಿ ಸಂಖ್ಯೆಯಲ್ಲಿ ಈ ಶಾಸ್ತ್ರವನ್ನು ಪಾಲಿಸುವವರಿದ್ದಾರೆ. ಮುಖ್ಯವಾಗಿ ಈ ಜ್ಯೋತಿಷ್ಯ ಶಾಸ್ತ್ರವು ಮನುಷ್ಯನ ಒಟ್ಟಾರೆ ಜೀವನದ ಪಯಣವನ್ನು ಸಂಕ್ಷಿಪ್ತವಾದ ರೂಪದಲ್ಲಿ ವಿವರಿಸುತ್ತದೆ ಎಂದು ಹೇಳಲಾಗುತ್ತದೆ.

ಅದರಂತೆ ಈ ಶಾಸ್ತ್ರದಲ್ಲಿ ಪ್ರಮುಖವಾಗಿ ನವಗೃಹಗಳ ಕುರಿತು ತಿಳಿಸಲಾಗಿದೆ. ಇದರ ಪ್ರಕಾರ, ಪ್ರತಿಯೊಬ್ಬ ಮನುಷ್ಯನು ಈ ಭೂಮಿಯಲ್ಲಿ ಜನಸಿದಾಗ ಆತ ಅಥವಾ ಆಕೆ ಜನಿಸಿದ ಸರಿಯಾದ ಸಮಯದಲ್ಲಿ ಸೌರ ಮಂಡಲದ ನವಗೃಹಗಳು ಆ ವ್ಯಕ್ತಿಯ ಮೇಲೆ ತನ್ನದೆ ಆದ ಪರಿಣಾಮ ಬೀರುತ್ತವೆ ಎನ್ನಲಾಗುತ್ತದೆ.

ಅದರಂತೆ ನವಗೃಹಗಳು ಪ್ರತಿಯೊಬ್ಬ ಮನುಷ್ಯನ/ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತವೆ ಎನ್ನಲಾಗಿದೆ. ಹಾಗಾಗಿ ನವಗೃಹಗಳಿಗೆ ಮುಡಿಪಾದ ದೇವಾಲಯಗಳು ಸಾಕಷ್ಟು ಮಹತ್ವ ಪಡೆದುಕೊಂಡಿವೆ. ಇಂದು ಸಾಮಾನ್ಯವಾಗಿ ಪ್ರತಿ ದೇವಾಲಯದಲ್ಲೂ ನವಗೃಹ ದೇಗುಲ ಅಥವಾ ಸನ್ನಿಧಿಯನ್ನು ಕಾಣುತ್ತೇವೆ.

ಆದರೂ, ನವಗೃಹಗಳ ಒಂದೊಂದು ದೇವತೆಗೂ ಮೀಸಲಾದ ಒಂದೊಂದು ದೇವಾಲಯಗಳು ಸ್ಥಿತವಿದ್ದು ಅವು ಅತಿ ಹೆಚ್ಚು ಜಾಗೃತ ಸ್ಥಳಗಳಾಗಿ ಭಕ್ತರನ್ನು ಆಕರ್ಷಿಸುತ್ತದೆ. ಯಾರು ಪ್ರತಿಯೊಂದು ಗೃಹಗಳು ನೆಲೆಸಿರುವ ಕ್ಷೇತ್ರಕ್ಕೆ ಭೇಟಿ ನೀಡಿ ನಿರ್ದಿಷ್ಟ ಸೇವೆಗಳನ್ನು ಸಲ್ಲಿಸುತ್ತಾರೊ ಅವರು ಜೀವನದಲ್ಲಿ ಎಲ್ಲ ಅಡೆ-ತಡೆಗಳಿಂದ ವಿಮುಕ್ತರಾಗುತ್ತಾರೆಂಬ ಪ್ರಬಲವಾದ ನಂಬಿಕೆಯಿದೆ.

ತಾಣಗಳು

ತಾಣಗಳು

ಹಾಗಾದರೆ ಬನ್ನಿ, ಪ್ರಸ್ತುತ ಲೇಖನದ ಮೂಲಕ ದಕ್ಷಿಣ ಭಾರತದಲ್ಲಿರುವ ಪ್ರಭಾವಶಾಲಿ ನವಗೃಹ ದೇವಾಲಯಗಳು ಯಾವುವು ಹಾಗೂ ಅವು ಎಲ್ಲೆಲ್ಲಿ ಸ್ಥಿತವಿದೆ ಎಂಬುದರ ತಿಳಿಯೋಣ.

ಚಿತ್ರಕೃಪೆ: Bernard Spragg. NZ

ಎಲ್ಲೆಲ್ಲಿ?

ಎಲ್ಲೆಲ್ಲಿ?

ಆ ಒಂಬತ್ತು ತಾಣಗಳೆಂದರೆ ತಿಂಗಳೂರು (ಚಂದ್ರ), ಅಲಂಗುಡಿ (ಗುರು), ತಿರುನಾಗೇಶ್ವರಂ (ರಾಹು), ಸೂರಿಯಾನರ್ ಕೋವಿಲ್ (ಸೂರ್ಯ), ಕಂಜನೂರ್ (ಶುಕ್ರ), ವೈತೀಶ್ವರನ್ ಕೋವಿಲ್ (ಮಂಗಳ), ತಿರುವೆಂಕಾಡು (ಬುಧ), ಕೀಳ್‍ಪೆರುಂಪಳ್ಳಂ (ಕೇತು), ತಿರುನಳ್ಳಾರ್ (ಶನಿ).

ಚಿತ್ರಕೃಪೆ: Iramuthusamy

ಆಧಾರ ಸ್ಥಳ

ಆಧಾರ ಸ್ಥಳ

ಈ ನವಗೃಹ ದೇವಸ್ಥಾನಗಳಿಗೆ ಕ್ರಮಬದ್ಧವಾಗಿ ತೆರಳಿ ದರ್ಶನ ಪಡೆಯುವುದು ಉತ್ತಮವೆಂದು ಹೇಳಲಾಗಿದೆ. ಅದರಂತೆ ತಮಿಳುನಾಡಿನ ಕುಂಭಕೋಣಂ ಪಟ್ಟಣವು ಒಂಬತ್ತು ನವಗ್ರಹಗಳ ತಾಣಗಳ ಪೈಕಿ ನಾಲ್ಕು ತಾಣಗಳಿಗೆ ಹತ್ತಿರವಿರುವುದರಿಂದ ಮೊದಲು ಅದನ್ನು ಆಧಾರ ತಾಣವನ್ನಾಗಿ ಮಾಡಿಕೊಳ್ಳಬೇಕು. ಮಹಾಮಹಂ ದೇವಾಲಯ, ಕುಂಭಕೋಣಂ.

ಚಿತ್ರಕೃಪೆ: rajaraman sundaram

ಚಂದ್ರ

ಚಂದ್ರ

ಮೊದಲಿಗೆ ಪ್ರಯಾಣವನ್ನು ಕುಂಭಕೋಣಂ ನಿಂದ ಪ್ರಾರಂಭಿಸಿ ಸ್ವಾಮಿ ಮಲೈ ಮೂಲಕ ಚಂದ್ರನಿಗೆ ಮೀಸಲಾದ ತಿಂಗಳೂರಿಗೆ ತಲುಪಬೇಕು. ಒಟ್ಟು ಪ್ರಯಾಣ ದೂರ ಸುಮಾರು 35 ಕಿ.ಮೀ ಗಳಷ್ಟು. ಈ ದೇವಸ್ಥಾನದಲ್ಲಿ ಸೋಮ ಅಥವಾ ಚಂದ್ರ ಅಧಿ ದೇವತೆಯಾದರೂ ಕೈಲಾಸನಾಥರ್ ಅಥವಾ ಶಿವನ ವಿಗ್ರಹವನ್ನು ಕಾಣಬಹುದು. ಮೊದಲನೇಯ ಗೃಹ ದರುಶನ ಪಡೆದು ಇಲ್ಲಿಂದ ಮತ್ತೆ ಕುಂಭಕೋಣಂಗೆ ಬರಬೇಕು.

ಚಿತ್ರಕೃಪೆ: Redtigerxyz

ಗುರು

ಗುರು

ಎರಡನೇಯ ತಾಣವಾದ ಅಲಂಗುಡಿಗೆ ನೀಡಮಂಗಳಂ ಮಾರ್ಗವಾಗಿ ತೆರಳಬೇಕು. ಇದು ಕುಂಭಕೋಣಂ ನಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಅಲಂಗುಡಿಯು ಗುರು ಗೃಹಕ್ಕೆ ಮೀಸಲಾದ ದೇವಾಲಯವನ್ನು ಹೊಂದಿದೆ. ಇಲ್ಲಿರುವ ದೇವಾಲಯ ಆಪತ್‍ಸಹಾಯೇಶ್ವರರ್ ದೇವಾಲಯ ಅಥವಾ ಗುರು ಸ್ಥಳಂ. ಗುರುವಿನ ದರುಶನವನ್ನು ಮಾಡಿ ಇಲ್ಲಿಂದ ಮತ್ತೆ ಕುಂಭಕೋಣಂಗೆ ಮರಳಬೇಕು.

ಚಿತ್ರಕೃಪೆ: Redtigerxyz

ರಾಹು

ರಾಹು

ಮೂರನೇಯ ತಾಣವಾದ ತಿರುನಾಗೇಶ್ವರಂಗೆ ಕೊಲ್ಲುಮಂಗುಡಿ ಮಾರ್ಗವಾಗಿ ತೆರಳಬೇಕು. ಇದು ಕುಂಭಕೋಣಂ ನಿಂದ ಪೂರ್ವ ದಿಕ್ಕಿಗೆ ಕೇವಲ 6 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ರಾಹುವಿಗೆ ಮೀಸಲಾದ ದೇವಸ್ಥಾನ. ದೇವಸ್ಥಾನವು ದೊಡ್ಡದಾಗಿದ್ದು, ದರುಶನಕ್ಕೆ 30 ನಿಮಿಷಗಳ ಸಮಯ ತಗುಲಬಹುದು. ಇಲ್ಲಿಂದ ಮತ್ತೆ ಕುಂಭಕೋಣಂಗೆ ಮರಳಬೇಕು.

ಚಿತ್ರಕೃಪೆ: Redtigerxyz

ಸೂರ್ಯ

ಸೂರ್ಯ

ನಾಲ್ಕನೇಯ ತಾಣವಾದ ಸೂರಿಯಾನರ್ ಕೋವಿಲ್ ಗೆ ತೆರಳಬೇಕು. ಇದು ಕುಂಭಕೋಣಂ ನ ಉತ್ತರ ದಿಕ್ಕಿಗೆ 15 ಕಿ.ಮೀ ದೂರದಲ್ಲಿದೆ. ತಂಜಾವೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನವು ಸೂರ್ಯನಿಗೆ ಸಮರ್ಪಿತವಾಗಿದೆ. ದೇವಸ್ಥಾನದಲ್ಲಿ ದರುಶನ ಪಡೆದು ಇಲ್ಲಿಂದ ಐದನೇಯ ತಾಣವಾದ ಕಂಜನೂರಿಗೆ ತೆರಳಬೇಕು. ಇದು ಇಲ್ಲಿಂದ ಕೇವಲ 3 ಕಿ.ಮೀ ಅಂತರದಲ್ಲಿ ನೆಲೆಸಿದೆ.

ಚಿತ್ರಕೃಪೆ: Redtigerxyz

ಶುಕ್ರ

ಶುಕ್ರ

ಸೂರಿಯಾನರ್ ನಿಂದ ಆಗ್ನೇಯ ದಿಕ್ಕಿಗೆ ಕಂಜನೂರ್ ಕೇವಲ 3 ಕಿ.ಮೀ ದೂರದಲ್ಲಿದ್ದು, ಶುಕ್ರನಿಗೆ ಮೀಸಲಾದ ದೇವಾಲಯ ಇದಾಗಿದೆ. ಇಲ್ಲಿ ಅಗ್ನೀಶ್ವರರ್ ಅಥವಾ ಶಿವನ ಮೂರ್ತಿಯಿದ್ದು ಪ್ರಧಾನ ದೇವತೆ ಶುಕ್ರವಾಗಿದೆ. ದರುಶನ ಪಡೆದು ನೇರವಾಗಿ ಇಲ್ಲಿಂದ ದಕ್ಷಿಣ ದಿಕ್ಕಿಗೆ ಸುಮಾರು 20 ಕಿ.ಮೀ ದೂರದಲ್ಲಿರುವ ಮೈಲಾಡುತುರೈಗೆ ಬರಬೇಕು.

ಚಿತ್ರಕೃಪೆ: Redtigerxyz

ಮಂಗಳ

ಮಂಗಳ

ಸಮಯಾವಕಾಶವಿದ್ದರೆ ಮೈಲಾಡುತುರೈನಲ್ಲಿ ಸ್ವಲ್ಪ ವಿರಮಿಸಿ ನಂತರ ಆರನೇಯ ತಾಣವಾದ ವೈತೀಶ್ವರನ್ ಕೋವಿಲ್ ಗೆ ಸಿರ್ಕಾಳಿ ಮಾರ್ಗವಾಗಿ ತೆರಳಬೇಕು. ಇದು ಮೈಲಾಡುತುರೈನಿಂದ ಕೇವಲ 13 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನು ಮಂಗಳ ಗೃಹಕ್ಕೆ ಸಮರ್ಪಿಸಲಾಗಿದೆ.

ಚಿತ್ರಕೃಪೆ: Redtigerxyz

ಬುಧ

ಬುಧ

ವೈತೀಶ್ವರನ್ ಕೋವಿಲ್ ನಿಂದ 5 ಕಿ.ಮೀ ದೂರದಲ್ಲಿರುವ ಸಿರ್ಕಾಳಿಗೆ ತೆರಳಿ ಅಲ್ಲಿಂದ ಆಗ್ನೇಯ ದಿಕ್ಕಿಗೆ 10 ಕಿ.ಮೀ ಚಲಿಸಿ ಏಳನೇಯ ತಾಣವಾದ ತಿರುವೆಂಕಾಡುಗೆ ತಲುಪಬೇಕು. ಬುಧ ಗೃಹಕ್ಕೆ ಸಮರ್ಪಿತವಾದ ಈ ದೇವಾಲಯದ ಆರಾಧಿಸಲ್ಪಡುವ ದೇವತೆ ಶ್ವೇತನಾರಾಯಣೇಶ್ವರರ್. ಬುಧನಿಗೆ ಪ್ರತ್ಯೇಕವಾಗಿರುವ ಸನ್ನಿಧಿಯನ್ನು ಈ ದೇವಾಲಯದಲ್ಲಿ ಕಾಣಬಹುದು.

ಚಿತ್ರಕೃಪೆ: Redtigerxyz

ಕೇತು

ಕೇತು

ಬುಧನ ದರುಶನದ ನಂತರ ತಿರುವೆಂಕಾಡುವಿನಿಂದ ನೈರುತ್ಯ ದಿಕ್ಕಿಗೆ ಧರ್ಮಕುಲಂ ಮುಖಾಂತರ 8 ಕಿ.ಮೀ ಚಲಿಸಿ ಎಂಟನೇಯ ತಾಣವಾದ ಕಿಳ್‍ಪೆರುಂಪಳ್ಳಂ ಗೆ ತೆರಳಬೇಕು. ಕೇತುವಿಗೆ ಸಮರ್ಪಿತವಾದ ದೇವಾಲಯ ಇದಾಗಿದೆ. ಇದನ್ನು ನಾಗನಾಥ ಸ್ವಾಮಿ ದೇವಾಲಯ ಅಥವಾ ಕೇತು ಸ್ಥಳಂ ಎಂದು ಕರೆಯುತ್ತಾರೆ. ಇದು ಮತ್ತೊಂದು ಪ್ರಸಿದ್ಧ ಸ್ಥಳ ಪೂಂಪುಹಾರ್ ನಿಂದ ಕೇವಲ 2 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: Redtigerxyz

ಶನಿ

ಶನಿ

ಕೇತುವಿನ ದರುಶನ ಪಡೆದು ನಂತರ ಕಿಳ್‍ಪೆರುಂಪಳ್ಳಂ ನಿಂದ ದಕ್ಷಿಣ ದಿಕ್ಕಿಗೆ ಸುಮಾರು 35 ಕಿ.ಮೀ ಚಲಿಸಿ ಪಾಂಡಿಚೆರಿಯ ಕಾರೈಕಾಲ್ ಗೆ ತೆರಳಬೇಕು. ಇಲ್ಲಿಂದ ಉತ್ತರ ದಿಕ್ಕಿಗೆ 6 ಕಿ.ಮೀ ಪಯಣಿಸಿದಾಗ ಒಂಬತ್ತನೇಯ ಗೃಹ ತಾಣವಾದ ತಿರುನಳ್ಳಾರ್ ಗೆ ತೆರಳಬೇಕು. ಇದು ನವಗ್ರಹಗಳಲ್ಲಿ ಪ್ರಭಾವಶಾಲಿಯಾದ ಶನಿ ಗೃಹಕ್ಕೆ ಸಂಭಂದಿಸಿದ ದೇವಾಲಯವಾಗಿದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Suraj Belbase

ಮುಕ್ತಾಯ

ಮುಕ್ತಾಯ

ಇಲ್ಲಿರುವ ದೇವಾಲಯವನ್ನು ದರ್ಬಾರಣ್ಯೇಶ್ವರ ದೇವಾಲಯ ಅಥವಾ ತಿರುನಳ್ಳಾರ್ ಶನೀಶ್ವರಂ ದೇವಾಲಯ ಎಂದು ಕರೆಯುತ್ತಾರೆ. ಇಲ್ಲಿಗೆ ನವಗ್ರಹಗಳ ಪ್ರವಾಸ ಸಂಪೂರ್ಣವಾಗುತ್ತದೆ.

ಚಿತ್ರಕೃಪೆ: Rsmn

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more