Search
  • Follow NativePlanet
Share
ಮುಖಪುಟ » ಸ್ಥಳಗಳು» ಕುಮರಕೊಮ್

ಕುಮರಕೊಮ್ - ಮರುಳುಗೊಳಿಸುವ ಹಿನ್ನೀರಿನ ತೀರದಲ್ಲಿ ರಜೆಯನ್ನು ಕಳೆಯಿರಿ.

36

ಕುಮರಕೊಮ್ ಎಂಬುದು ಕೇರಳದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇದು ಒಂದು ನಯನ ಮನೋಹರವಾದ ದ್ವೀಪಗಳ ಸಮೂಹವಾಗಿದ್ದು, ವೆಂಬನಾಡ್ ಸರೋವರದಲ್ಲಿ (ಇದನ್ನು ಕೇರಳದ ಅತಿದೊಡ್ಡ ತಿಳಿನೀರಿನ ಸರೋವರವೆಂದ ಪರಿಗಣಿಸಲಾಗಿದೆ) ನೆಲೆಗೊಂಡಿದೆ. ಕುಮರಕೊಮ್ ತನ್ನ ಪ್ರಶಾಂತ ವಾತಾವರಣ ಮತ್ತು ನಿರ್ಮಲವಾದ ನೀರಿನಿಂದಾಗಿ ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಕೊಟ್ಟಾಯಂ ಜಿಲ್ಲೆಯಿಂದ 16 ಕಿ.ಮೀ ದೂರದಲ್ಲಿರುವ ಈ ಯಾತ್ರಾ ಸ್ಥಳವು ಹಿನ್ನೀರು ಪ್ರವಾಸೋದ್ಯಮಕ್ಕಾಗಿ ವಿಶ್ವಖ್ಯಾತಿಯನ್ನು ಗಳಿಸಿದೆ. ಸುತ್ತಲು ಜಲಧಾರೆಗಳಿಂದ ಮತ್ತು ಹಚ್ಚ ಹಸಿರಿನ ವನಸಿರಿಯಿಂದ ಸುತ್ತುವರೆದಿರುವ ಕುಮರಕೊಮ್ ಪರ್ಯಾಯ ದ್ವೀಪವು ಪ್ರವಾಸಿಗರನ್ನು ತನ್ನ ಪ್ರಶಾಂತವಾದ ಹಾಗು ಮುದನೀಡುವಂತಹ ತೀರಕ್ಕೆ ಕೈಬೀಸಿ ಕರೆಯುತ್ತದೆ.

ಅತ್ಯಾಕರ್ಷಕವಾದ ಸಸ್ಯ ಸಂಪತ್ತು ಮತ್ತು ಅದ್ಭುತವಾದ ಪ್ರಾಣಿ ಸಂಪತ್ತು

ಈ ಪಾಂತ್ಯವು ಅಲ್ಲಲ್ಲಿ ಎಡೆಬಿಡದೆ ಬೆಳೆದಿರುವ ತಾಳೆಮರಗಳಿಗೆ, ತೆಂಗಿನ ತೋಪುಗಳಿಗೆ ಮತ್ತು ಗದ್ದೆಗಳಿಗೆ ಹೆಸರುವಾಸಿಯಾಗಿದ್ದು, ನೋಡುಗರಿಗೆ ನಯನ ಮನೋಹರವಾದ ದೃಶ್ಯವೈಭವವನ್ನು ಒದಗಿಸುತ್ತದೆ. ಸಿಹಿನೀರಿನ ಸರೋವರಗಳ ಬಳಿಯಲ್ಲಿ ದಟ್ಟವಾದ ವನಸಿರಿ ತನ್ನ ಹಚ್ಚ ಹಸಿರಿನಿಂದಾಗಿ ನಿಮ್ಮನ್ನು ಪುಳಕಿತಗೊಳಿಸುತ್ತದೆ. ಮಳೆಗಾಲ ಪ್ರಾರಂಭವಾದೊಡನೆ ಇಡೀ ಪ್ರಾಂತ್ಯವು ಹಸಿರಿನ ಉಡುಗೆಯನ್ನು ಹಾಸಿ ಹೊದ್ದಂತೆ ಕಂಗೊಳಿಸುತ್ತಿರುತ್ತದೆ.

ಕುಮರಕೊಮ್ ಕೇರಳದ ಅತ್ಯಂತ ಪ್ರಸಿದ್ಧವಾದ ಪಕ್ಷಿಧಾಮವನ್ನು ಹೊಂದಿದ್ದು, ಪಕ್ಷಿ ವೀಕ್ಷಕರಿಗೆ ಸ್ವರ್ಗ ಸದೃಶ್ಯವೆನ್ನುವಂತಹ ತಾಣವಾಗಿದೆ. ಈ ಪಕ್ಷಿಧಾಮವು ಸೈಬೀರಿಯನ್ ಕೊಕ್ಕರೆಗಳಂತಹ ವಲಸೆ ಹಕ್ಕಿಗಳಿಗೆ ತಾತ್ಕಾಲಿಕವಾದ ನೆಲೆಯನ್ನು ಕಲ್ಪಿಸುತ್ತದೆ. ನೀವು ಈ ಪಕ್ಷಿಗಳನ್ನು ಅಪರೂಪಕ್ಕೊಮ್ಮೆ ಇಲ್ಲಿ ಕಾಣಬಹುದು. ಇದೆಲ್ಲದರ ಜೊತೆಗೆ ಈ ಪ್ರಾಂತ್ಯದಲ್ಲಿ ಸಮುದ್ರದ ಮೀನುಗಳು ಯಥೇಚ್ಛವಾಗಿ ಕಂಡುಬರುತ್ತವೆ. ಅವುಗಳಲ್ಲಿ ಕರಿಮೀನು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.

ವಿಶಿಷ್ಟವಾದ ಸಂಸ್ಕೃತಿ ಮತ್ತು ಅನುಪಮವಾದ ಆರ್ಥಿಕತೆ

ಮೀನುಗಾರಿಕೆ ಮತ್ತು ಕೃಷಿಯ ಜೊತೆಗೆ ಇಲ್ಲಿನ ಪ್ರವಾಸೋದ್ಯಮವು ಇಲ್ಲಿನ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಮೀನಚಿಲ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕಾಲುವೆಗಳು ಮತ್ತು ನಾಲೆಗಳು  ನೀರಾವರಿಗು ಹಾಗು ಸಾರಿಗೆಗೆ, ಎರಡಕ್ಕು ಅನುಕೂಲಕರವಾಗಿದ್ದು, ಕುಮರಕೊಮನ್ನು ಒಂದು ಅದ್ಭುತ ಪ್ರವಾಸಿ ಕೇಂದ್ರವನ್ನಾಗಿ ಮಾಡಿವೆ. ಇವೆಲ್ಲವು ಸೇರಿ ಒಂದು ವಿಭಿನ್ನ ಆರ್ಥಿಕತೆಯ ವ್ಯವಸ್ಥೆಯನ್ನು ಇಲ್ಲಿ ನಿರ್ಮಿಸಿವೆ.

ಕುಮರಕೊಮ್ ದೇಶದ ಒಳಗಿನ ಮತ್ತು ಹೊರಗಿನ ಪ್ರವಾಸಿಗರ ಗಮನವನ್ನು ಸೆಳೆದಿದ್ದು ಒಂದು ಪುಸ್ತಕದಿಂದ : ಅದು ಅರುಂಧತಿ ರಾಯ್ ಅವರು ಬರೆದಿರುವ ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಎಂಬ ಪುಸ್ತಕದಿಂದ. ಇದು ಬೂಕರ್ ಪ್ರಶಸ್ತಿ ಮತ್ತು ಆಧುನಿಕ ಯುಗದ ಅತಿ ಹೆಚ್ಚು ಮಾರಾಟವಾದ ಪುಸ್ತಕ ಎಂಬ ಹೆಗ್ಗಳಿಕೆಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಐಮನಮ್ ಎಂಬ ಹಳ್ಳಿಯು ಈ ಕಾದಂಬರಿಯ ಪ್ರಮುಖ ನೆಲೆಯಾಗಿದ್ದು, ಇದು ಕುಮರಕೊಮ್ ಬಳಿಯಲ್ಲಿ ಇದೆ. ಈ ಪುಸ್ತಕ ಪ್ರಕಾಶನವಾದ ಮೇಲೆ ಈ ಊರು ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿತು.    ದೋಣಿ ಮನೆಗಳು :ಸರಿಸಾಟಿಯಿಲ್ಲದ ಪ್ರವಾಸಿ ಅನುಭವ

ಕುಮರಕೊಮ್ ಯಾವ ಕಾರಣಕ್ಕಾಗಿ ಇನ್ನಿತರ ಪ್ರವಾಸಿ ತಾಣಗಳಿಗಿಂತ ಭಿನ್ನವಾಗುತ್ತದೆ ಎಂದರೆ, ಅದು ಇಲ್ಲಿನ ದೋಣಿ ಮನೆಗಳು. ಲಕ್ಷಾಂತರ ಪ್ರವಾಸಿಗರು ಇಲ್ಲಿನ ದೋಣಿ ಮನೆಗಳಲ್ಲಿ ಕಾಲಕಳೆಯುತ್ತ ಹಿನ್ನೀರಿನ ಅಂದವನ್ನು ಮತ್ತು ಪ್ರಶಾಂತ ಪರಿಸರದ ಸೊಬಗನ್ನು ಸವಿಯಲು ಆಗಮಿಸುತ್ತಿರುತ್ತಾರೆ. ಪೂರ್ತಿ ದಿನದ ದೋಣಿ ಮನೆಯ ಪ್ರಯಾಣ ಮತ್ತು ರಾತ್ರಿ ಪೂರ್ತಿಯ ಪ್ರಯಾಣ ಹೀಗೆ ವಿವಿಧ ಪ್ಯಾಕೇಜುಗಳು ಲಭ್ಯವಿದೆ. ಪ್ರವಾಸಿಗರು ತಮ್ಮ ಜೇಬಿಗೆಟುಕುವ ಯಾವುದಾದರು ಪ್ಯಾಕೇಜನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ದೋಣಿ ಮನೆಗಳು ಆಧುನಿಕ ಸೌಂದರ್ಯ ಮತ್ತು ಸೌಕರ್ಯಗಳನ್ನೆಲ್ಲ ತನ್ನಲ್ಲಿ ಹೊಂದಿರುವ, ಮರದ ಹಲಗೆಗಳಿಂದ ನಿರ್ಮಾಣಗೊಂಡಿರುವ ಪುಟ್ಟ ಐಶಾರಾಮಿ ಹಡಗುಗಳಾಗಿವೆ. ಇವುಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ, ಒಂದರಿಂದ ಮೂರರವರೆಗಿನ ಮಲಗುವ ಕೋಣೆಗಳು, ಶೌಚಾಲಯಗಳು, ಅಡುಗೆಮನೆಗಳು, ಉಪ್ಪರಿಗೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಇನ್ನಿತರ ಮನೋರಂಜನೆಯ ಅಂಶಗಳನ್ನು ಒಳಗೊಂಡಿರುತ್ತವೆ. ಈ ದೋಣಿಮನೆಗಳು ಕಾರ್ಪೋರೇಟ್ ಸಮಾವೇಶಗಳಿಗೆ, ರಜಾದಿನಗಳನ್ನು ಕಳೆಯಲು ಮತ್ತು ಮಧುಚಂದ್ರವನ್ನು ಕಳೆಯಲು ಹೇಳಿ ಮಾಡಿಸಿದ ತಾಣಗಳಾಗಿವೆ. ಪ್ರಸ್ತುತ ಈ ದೋಣಿ ಮನೆಗಳು ಪ್ರಪಂಚದ ಅನುಪಮವಾದ ಪ್ರವಾಸಿ ಅನುಭವಗಳನ್ನೊದಗಿಸುವ ತಾಣಗಳಾಗಿವೆ.

ಕುಮರಕೊಮ್ ಓಣಮ್ (ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳುಗಳಲ್ಲಿ ಆಚರಿಸಲ್ಪಡುತ್ತದೆ) ಹಬ್ಬದ ಸಂದರ್ಭದಲ್ಲಿ ನಡೆಯುವ ಅದ್ವಿತೀಯ ದೋಣಿ ಓಟಕ್ಕಾಗಿ  ಪ್ರಸಿದ್ಧಿಯನ್ನು ಪಡೆದಿದೆ. ಒಡಿ- ವಲ್ಲಮ್, ಕೊಚು- ಒಡಿ ವಲ್ಲಮ್, ಚುರುಲನ್ ವಲ್ಲಮ್ ಇರುಟ್ಟುಕುತ್ತಿ ವಲ್ಲಮ್ ಮತ್ತು ಚುಂದನ್ ವಲ್ಲಮ್ ಎಂಬ ವಿವಿಧ ಗಾತ್ರದ ಮತ್ತು ಆಕಾರಗಳ ದೋಣಿಗಳು ಇಲ್ಲಿನ ಓಟದ ಪಂದ್ಯದಲ್ಲಿ ಪಾಲ್ಗೋಳ್ಳುತ್ತವೆ. ವಿಜೇತರಿಗೆ ಶ್ರೀ ನಾರಾಯಣ ಎವರ್ ರೋಲಿಂಗ್ ಟ್ರೋಫಿಯನ್ನು ನೀಡಲಾಗುತ್ತದೆ.

ರುಚಿಗಳ ಸ್ವರ್ಗ

ಕುಮರಕೊಮಿನ ಆಹಾರಶೈಲಿಯು ಕೇರಳದ ಸಾಂಪ್ರದಾಯಿಕ ಸ್ವಾದಗಳನ್ನು ಹೊಂದಿದ್ದು, ಆಹಾರ ಪ್ರಿಯರ ಬಾಯಿಯಲ್ಲಿ ನೀರೂರಿಸುವಂತಹ ಅನುಭವವನ್ನೊದಗಿಸುತ್ತದೆ. ಈ ಪ್ರಾಂತ್ಯದ ಸಮುದ್ರ ಖಾದ್ಯಗಳ ಬಗೆಗಳು ಊಹೆಗು ನಿಲುಕದಷ್ಟು ಸ್ವಾದಿಷ್ಟಕರವಾಗಿರುತ್ತವೆ. ಹಾಗಾಗಿ ಪ್ರವಾಸಿಗರು ಇಲ್ಲಿನ ಆಹಾರಗಳ ರುಚಿ ನೋಡುವಷ್ಟು ಸಮಯವನ್ನು ಮೀಸಲಿಡಬೇಕಾದುದು ಅತ್ಯಾವಶ್ಯಕ. ಕರಿಮೀನ್ ಪೊಲ್ಲಿಚತು, ಚೆಮ್ಮೀನ್ ಫ್ರೈ, ಸಿಗಡಿ ಉಲರ್ತಿಯತು, ಮೀನಿನ ಮೋಯಿಲಿ ಮತ್ತು ಏಡಿ ಫ್ರೈಗಳು ಇಲ್ಲಿನ ಬಾಯಿಯಲ್ಲಿ ನೀರೂರಿಸುವ ಖಾದ್ಯಗಳಾಗಿದ್ದು, ಪ್ರವಾಸಿಗರು ಇವುಗಳನ್ನು ಮರೆಯದೆ ರುಚಿ ನೋಡಬೇಕಾದವುಗಳಾಗಿವೆ.

ಪಲಪ್ಪಮ್, ಮಾಂಸದ ಸ್ಟ್ಯೂ, ಕೇರಳ ಕೋಳಿ ಫ್ರೈ, ಬಾತು ಕೋಳಿ ರೋಸ್ಟ್, ದನದ ಮಾಂಸದ ಪ್ರೈ, ಪುಟ್ಟು- ಕಡಲ, ಕಪ್ಪ – ಮೀನು ಮತ್ತು ಕರಿಮೀನ್ ಮಪ್ಪಗಳು ಕುಮರಕೊಮಿನ ಊಟದ ಮೇಜುಗಳಿಗೆ ಒಂದು ವಿಶಿಷ್ಟವಾದ ಸ್ಪರ್ಶವನ್ನು ಒದಗಿಸುತ್ತವೆ. ಪ್ರಸಿದ್ಧ  ಯಾತ್ರಾಸ್ಥಳವಾಗಿರುವ ಕುಮರಕೊಮಿನಲ್ಲಿ ಒಳ್ಳೆಯ ರೆಸಾರ್ಟ್ ಗಳು, ಮಿತವ್ಯಯದ ಹೋಟೆಲ್ಲುಗಳು ಮತ್ತು ಗೃಹ ವಾಸ್ತವ್ಯಗಳು ಲಭ್ಯವಿವೆ. ಪ್ರವಾಸಿಗರು ಇಲ್ಲಿನ ರೆಸಾರ್ಟ್ ಮತ್ತು ಗೃಹ ವಾಸ್ತವ್ಯಗಳಲ್ಲಿ ಉಳಿದುಕೊಂಡು, ಈ ಪ್ರಾಂತ್ಯದ ಮಂತ್ರಮುಗ್ಧಗೊಳಿಸುವಂತಹ ಸೌಂದರ್ಯವನ್ನು ಆಸ್ವಾದಿಸುತ್ತ, ಇಲ್ಲಿನ ಸಾಂಪ್ರದಾಯಿಕ ಆಹಾರಗಳ ರುಚಿಯನ್ನು ಸವಿಯುತ್ತ ತಮ್ಮನ್ನೆ ತಾವು ಮರೆಯಬಹುದು.

ಭವ್ಯವಾದ ಪ್ರವಾಸಿ ತಾಣಗಳು

ತನ್ನಲ್ಲಿರುವ  ಹಿನ್ನೀರಿನ ಸರೋವರ ಮತ್ತು ದೋಣಿ ಮನೆಗಳಿಗೆ ಹೆಸರುವಾಸಿಯಾಗಿರುವ ಕುಮರಕೊಮ್ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿದೆ. ಈ ಊರು ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಕೇರಳ ಸರ್ಕಾರವು ಇದನ್ನ ವಿಶೇಷ ಪ್ರವಾಸೋದ್ಯಮ ವಲಯವನ್ನಾಗಿ ಘೋಷಿಸಿದೆ. ಇಲ್ಲಿನ ಅದ್ಭುತ ಜಲ ಪ್ರಪಂಚದಲ್ಲಿ ವೆಂಬನಾಡ್ ಕೆರೆ, ಅರುವಿಕ್ಕುಳಿ ಜಲಪಾತ, ಕುಮರಕೊಮ್ ಹಿನ್ನೀರು  ಮತ್ತು ಕುಮರಕೊಮ್ ಬೀಚುಗಳು ಸೇರಿವೆ.

ಬೇ ಐಲ್ಯಾಂಡ್ ಡ್ರಿಫ್ಟ್ ವುಡ್ ವಸ್ತುಸಂಗ್ರಹಾಲಯ, ಜಾಮ ಮಸೀದಿ ಮತ್ತು ಪಾಥಿರಮನ್ನಲ್ ಗಳು ಇಲ್ಲಿರುವ ಇನ್ನಿತರ ಆಸಕ್ತಿದಾಯಕವಾದ ಪ್ರವಾಸಿ ಸ್ಥಳಗಳಾಗಿವೆ.  ಈ ಊರು ಕೇವಲ ಪ್ರವಾಸಿ ತಾಣಗಳಿಗಷ್ಟೆ ಅಲ್ಲದೆ ಧಾರ್ಮಿಕ ತಾಣಗಳಿಗು ಹೆಸರುವಾಸಿಯಾಗಿದೆ. ಅಲ್ಲದೆ ಈ ಊರಿಗೆ ಸಮೀಪದಲ್ಲಿ ಹಲವಾರು ಚರ್ಚುಗಳು ಮತ್ತು ದೇವಾಲಯಗಳು ಇವೆ. ತಿರುನಕ್ಕರ ಮಹಾದೇವ ದೇವಾಲಯ, ಎಟ್ಟುಮನೂರ್ ಮಹಾದೇವ ದೇವಾಲಯ, ಚೆರಿಯಪಲ್ಲಯ ಸೆಂಟ್, ಮೇರೀಸ್ ಚರ್ಚ್,  ಅತಿರಂಪುಳದ ಸೆಂಟ್.ಮೇರೀಸ್ ಚರ್ಚ್ ಮತ್ತು ವೈಕೊಮ್ ಮಹಾದೇವ ದೇವಾಲಯ.

ಉತ್ತಮ ಸಂಪರ್ಕ ಮತ್ತು ಉತ್ತಮ ವಾತಾವರಣದಿಂದ ಕೂಡಿದ ಸ್ಥಳ

ಕುಮರಕೊಮಿಗೆ ದೇಶದ ಯಾವುದೇ ಮೂಲೆಯಿಂದ ರಸ್ತೆ, ರೈಲು ಮತ್ತು ವಿಮಾನದ ಮೂಲಕ ಆರಾಮವಾಗಿ ತಲುಪಬಹುದು. ನಿಮ್ಮ ಕೈಗೆಟುಕುವ ದರದಲ್ಲಿ ಪ್ರವಾಸದ ಪ್ಯಾಕೇಜುಗಳು ಲಭ್ಯವಿದೆ . ಮಳೆಗಾಲದಲ್ಲಿ ಕುಮರಕೊಮಿನಲ್ಲಿ ವಿಪರೀತ ಮಳೆಯಾಗುತ್ತದೆ. ಸಮಶೀತೋಷ್ಣವಲಯದ ಹವಾಗುಣವನ್ನು ಹೊಂದಿರುವ ಕುಮರಕೊಮ್ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುವ ಪ್ರವಾಸಿ ತಾಣವಾಗಿದೆ.ಅತ್ಯಾಕರ್ಷಕ ಸರೋವರಗಳು, ಬಾಯಿಯಲ್ಲಿ ನೀರೂರಿಸುವ ಖಾದ್ಯಗಳು, ನಯನ ಮನೋಹರವಾದ ತಾಣಗಳು, ಬೆರಗಾಗಿಸುವ ದೋಣಿಮನೆಗಳು ಮತ್ತು ಮಂತ್ರ ಮುಗ್ಧಗೊಳಿಸುವಂತಹ ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಕುಮರಕೊಮ್ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುತ್ತದೆ.

ಕುಮರಕೊಮ್ ಪ್ರಸಿದ್ಧವಾಗಿದೆ

ಕುಮರಕೊಮ್ ಹವಾಮಾನ

ಉತ್ತಮ ಸಮಯ ಕುಮರಕೊಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕುಮರಕೊಮ್

  • ರಸ್ತೆಯ ಮೂಲಕ
    ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ( ಕೆ ಎಸ್ ಆರ್ ಟಿ ಸಿ) ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಕೊಟ್ಟಾಯಂ ನಿಂದ ಕುಮರಕೊಮಿಗೆ ದೊರೆಯುತ್ತವೆ. ಸುವಿಹಾರಿ ಬಸ್ಸುಗಳು ಬೆಂಗಳೂರು , ಕೊಯಮತ್ತೂರು, ಕೊಚ್ಚಿ, ತಿರುವನಂತಪುರಂ ಮತ್ತು ಚೆನ್ನೈ ನಂತಹ ಪ್ರಮುಖ ದಕ್ಷಿಣ ಭಾರತದ ನಗರಗಳಿಂದ ಕುಮರಕೊಮಿಗೆ ಹೋಗಲು ದೊರೆಯುತ್ತವೆ. ಅಲ್ಲದೆ ಪ್ರವಾಸಿಗರು ಖಾಸಗಿ ಪ್ರವಾಸಿ ಆಯೋಜಕರಿಂದ ಪ್ರವಾಸದ ಪ್ಯಾಕೇಜ್ ಪಡೆದು ಸಹ ಕುಮರಕೊಮಿಗೆ ಹೋಗಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲಿನ ಮೂಲಕ ಕುಮರಕೊಮ್ ತಲುಪಲು ಬಯಸುವವರು ಕೊಟ್ಟಾಯಂನಲ್ಲಿ ಇಳಿದು, ಅಲ್ಲಿಂದ ಕುಮರಕೊಮಿಗೆ ಬರಬೇಕಾಗುತ್ತದೆ. ಕೊಟ್ಟಾಯಂ ನಿಲ್ದಾಣ ಇಲ್ಲಿಂದ 15 ಕಿ.ಮೀ ದೂರದಲ್ಲಿದೆ. ಈ ನಿಲ್ದಾಣವು ಚೆನ್ನೈ, ಬೆಂಗಳೂರು, ಹೈದರಾಬಾದ್, ದೆಹಲಿ ಮತ್ತು ಮುಂಬಯಿಯಂತಹ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕೊಟ್ಟಾಯಂನಿಂದ ಕುಮರಕೊಮಿಗೆ ಟ್ಯಾಕ್ಸಿಗಳು ಮತ್ತು ಬಸ್ಸುಗಳು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ನೆಡುಂಬಸ್ಸೆರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಆಗಮಿಸುವವರಿಗೆ ಅನುಕೂಲಕರವಾದ ವಿಮಾನ ನಿಲ್ದಾಣವಾಗಿದೆ. ಇದು ಕುಮರಕೊಮಿನಿಂದ 80 ಕಿ.ಮೀ ದೂರದಲ್ಲಿದೆ. ಕೊಚ್ಚಿ ವಿಮಾನ ನಿಲ್ದಾಣವು ಭಾರತದ ಇತರ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಕುಮರಕೊಮ್ ತಲುಪಲು ಇಲ್ಲಿಂದ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri