• Follow NativePlanet
Share
» »ಇಲ್ಲಿ ರಾತ್ರಿ ಮಲಗಿದ್ದಾಗ ಬೆಡ್‌ಶೀಟ್ ಎಳೆಯುತ್ತಂತೆ ಅದೃಶ್ಯ ಶಕ್ತಿ !

ಇಲ್ಲಿ ರಾತ್ರಿ ಮಲಗಿದ್ದಾಗ ಬೆಡ್‌ಶೀಟ್ ಎಳೆಯುತ್ತಂತೆ ಅದೃಶ್ಯ ಶಕ್ತಿ !

Written By: Rajatha

ಭಾರತದಲ್ಲಿ ಬ್ರಿಟಿಷರ ಕಾಲದಲ್ಲಿ ಬಹಳಷ್ಟು ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಇದನ್ನು ಕೇವಲ ಬ್ರಿಟಿಷ್ ಅಧಿಕಾರಿಗಳು, ವೈಸರಾಯ್‌ಗಳು ಬಳಸುತ್ತಿದ್ದರು. ಇಂಗ್ಲೇಂಡ್‌ನಿಂದ ಭಾರತದ ಪರ್ಯಾಟನೆ ನಡೆಸಲು ಬರುವವರೂ ಈ ಹೋಟೆಲ್‌ನಲ್ಲೇ ತಂಗುತ್ತಿದ್ದರು. ಈಗಲೂ ಆ ಹೋಟೆಲ್‌ಗಳು ಕಾಣಸಿಗುತ್ತದೆ. ಬಹಳಷ್ಟು ಹೋಟೇಲ್‌ಗಳನ್ನು ಹೆರಿಟೇಜ್ ಎಂದು ಘೋಷಿಸಲಾಗಿದೆ. ಇನ್ನೂ ಕೆಲವು ಭೂತ ಬಂಗಲೆಗಳಾಗಿವೆ. ಬೆಂಗಳೂರಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಸ್ಪಾಟ್

ತನ್ನ ಸುಂದರತೆಯ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದ ಆ ಹೋಟೆಲ್‌ಗಳು ಇಂದು ಭಯಾನಕ ಅನುಭವವನ್ನು ನೀಡುತ್ತಿದೆ ಎನ್ನಲಾಗುತ್ತಿದೆ. ಈ ಹೋಟೆಲ್‌ನಲ್ಲಿ ಭೂತ ಪ್ರೇತಗಳು ಅಡ್ಡಾಡುತ್ತಿವೆ ಎನ್ನುವ ಮಾತು ಕೇಳಿಬರುತ್ತಿದೆ.  ಕಾಣೆಯಾಗಿ ಪ್ರತ್ಯಕ್ಷಗೊಳ್ಳುವ ಮಂದಿರದ ಬಗ್ಗೆ ಕೇಳಿದ್ದೀರಾ?

ಬ್ರಿಜ್ ರಾಜ ಭವನ್

ಬ್ರಿಜ್ ರಾಜ ಭವನ್

ಕೋಟಾ ಬ್ರಿಜ್ ರಾಜಭವನ ರಾಜಸ್ಥಾನದ ಕೋಟಾ ಪ್ರದೇಶದಲ್ಲಿದೆ. ಈ ಹೋಟೆಲ್‌ನ ಇತಿಹಾಸ ಕೂಡಾ ಬ್ರಿಟಿಷರ ಜೊತೆ ಸೇರಿಕೊಂಡಿದೆ. ಇಲ್ಲಿ ಮೇಜರ್ ಚಾರ್ಲ್ಸ್ ಬರ್ಟನ್ ಎನ್ನುವ ಬ್ರಿಟಿಷ್ ಅಧಿಕಾರಿ ನೆಲೆಸುತ್ತಿದ್ದ. ಇಲ್ಲಿನ ರಹಸ್ಯ ಆತನಿಗೆ ಸಂಬಂಧಪಟ್ಟಿದ್ದು. ಇದನ್ನು ೧೯ ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ೧೮೫೭ರಲ್ಲಿ ಚಾರ್ಲ್ಸ್ ಬರ್ಟನ್ ಹಾಗೂ ಆತನ ಫ್ಯಾಮಿಲಿಯನ್ನು ಅದೇ ಹೋಟೆಲ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇಲ್ಲಿ ಇಂದಿಗೂ ಮೇಜರ್‌ನ ಆತ್ಮ ತಿರುಗಾಡುತ್ತಿದೆ ಎನ್ನಲಾಗುತ್ತದೆ.

ಮಾರ್ಗನ್ ಹೌಸ್

ಮಾರ್ಗನ್ ಹೌಸ್

ಪಶ್ಚಿಮ ಬಂಗಾಳದಲ್ಲಿರುವ ಕಾಲಿಪೊಂಗ್ ಎನ್ನುವ ಹಿಲ್ ಸ್ಟೇಶನ್‌ನಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್‌ನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದು. ಇದು ಹಳೆಯದಾಗುತ್ತಾ ಹೋದಂತೆ ಅನೇಕ ರಹಸ್ಯಮಯ ಕಥೆಗಳು ಜೋಡಿಸುತ್ತಾ ಹೋಗುತ್ತಿದೆ. ಇಲ್ಲಿ ತಂಗಲು ಬಂದವರು ಏನಾದರೊಂದು ವಿಚಿತ್ರ ಘಟನೆಗಳು ಎದುರಾಗುತ್ತಿದ್ದವು. ೧೯೩೦ರಲ್ಲಿ ಜಾರ್ಜ್ ಮಾರ್ಗನ್ ಇದನ್ನು ನಿರ್ಮಿಸಿದ್ದನು. ಅವರ ಪತ್ನಿ ಲೇಡಿ ಮಾರ್ಗನ್ ಸಾವನ್ನಪ್ಪಿದ ನಂತರ ಈ ರೀತಿಯ ಘಟನೆಗಳು ಅನುಭವಕ್ಕೆ ಬಂದಿವೆ.

ಹೋಟೆಲ್ ಸ್ವಾಯಿ

ಹೋಟೆಲ್ ಸ್ವಾಯಿ

ಉತ್ತರಾಖಂಡದಲ್ಲಿರುವ ಹೋಟೆಲ್ ಸ್ವಾಯಿ, ಭಾರತದ ಐತಿಹಾಸಿಕ ಹೋಟೆಲ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇದನ್ನು 1902ರಲ್ಲಿ ನಿರ್ಮಿಸಲಾಗಿತ್ತು. ಇದು ಬಹಳ ಸುಂದರ ಹೋಟೆಲ್ ಆಗಿದ್ದು. ಇಲ್ಲಿ ರಾಜ ಮಹಾರಾಜರನ್ನು ಒಳಗೊಂಡಂತೆ ರಾಜಕಾರಣಿಗಳು ಉಳಿಯುತ್ತಿದ್ದರು. ಇಲ್ಲಿ ಯಾವುದೋ ಬ್ರಿಟಿಷ್ ಲೇಡಿಯ ಆತ್ಮ ತಿರುಗುತ್ತಿದೆ ಎನ್ನಲಾಗುತ್ತದೆ.1911ರಲ್ಲಿ ಈ ಮಹಿಳೆ ಈ ಹೋಟೆಲ್‌ನಲ್ಲಿ ತಂಗಲು ಬಂದಿದ್ದಳು. ಆದರೆ ನಿಗೂಢ ರೀತಿಯಲ್ಲಿ ಆಕೆಯ ಹತ್ಯೆಯಾಗಿತ್ತು ಎನ್ನಲಾಗುತ್ತದೆ. ಇಲ್ಲಿನ ಕೊಠಡಿಯಲ್ಲಿ ಚಿತ್ರ ವಿಚಿತ್ರ ಸದ್ದು ಕೇಳಿಬರುತ್ತದೆ ಎನ್ನುತ್ತಾರೆ ಸ್ಥಳೀಯರು.

ರಾಜ್‌ ಕಿರಣ್ ಹೋಟೆಲ್

ರಾಜ್‌ ಕಿರಣ್ ಹೋಟೆಲ್

ಲೋನಾವ್‌ಲಾದಲ್ಲಿ ಈ ಹೋಟೆಲ್ ಇದೆ. ಈ ಹೋಟೆಲ್‌ನಲ್ಲಿ ಅಸಾಮಾನ್ಯ ಘಟನೆಗಳು ನಡೆಯುತ್ತವೆ ಎನ್ನಲಾಗುತ್ತದೆ. ಈ ಹೋಟೆಲ್‌ನ ರಿಸೆಪ್ಷನ್‌ನ ಹಿಂದುಗಡೆ ಒಂದು ಕೋಣೆ ಇದೆ. ಅಲ್ಲಿ ಆತ್ಮವಿದೆ ಎನ್ನಲಾಗುತ್ತದೆ. ಆ ಕೋಣೆಯಲ್ಲಿ ಯಾರೂ ಉಳಿಯಲು ಕೇಳುವುದಿಲ್ಲ. ಈ ಕೋಣೆಯಲ್ಲಿ ರಾತ್ರಿ ಹೊತ್ತು ಮಲಗಿದಾಗ ಯಾವುದೋ ಅದೃಶ್ಯ ಶಕ್ತಿ ಬೆಡ್‌ಶೀಟ್ ಎಳೆಯುತ್ತದೆ ಎನ್ನುತ್ತಾರೆ ಅಲ್ಲಿ ಉಳಿದವರು.

ತಾಜ್ ಹೋಟೆಲ್

ತಾಜ್ ಹೋಟೆಲ್

PC- Rajarshi MITRA
ಮುಂಬೈನಲ್ಲಿರುವ ತಾಜ್ ಹೋಟೆಲ್‌ನಲ್ಲೂ ಅನೇಕ ರಹಸ್ಯಮಯ ಕಥೆಗಳಿವೆ. ಇಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಅನೇಕ ಚಿತ್ರ ವಿಚಿತ್ರ ಘಟನೆಯ ಅನುಭವವಾಗಿದೆ. ಇಲ್ಲಿನ ಐದನೇ ಮಹಡಿಯಲ್ಲಿ ಒಬ್ಬ ವಾಸ್ತುಕಾರ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗುತ್ತದೆ.

Read more about: mumbai india

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ