Search
  • Follow NativePlanet
Share
» »ಬೆಂಗಳೂರಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಸ್ಪಾಟ್

ಬೆಂಗಳೂರಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸ್ಬೇಕಾ... ಹಾಗಾದ್ರೆ ಇಲ್ಲಿದೆ ಬೆಸ್ಟ್ ಸ್ಪಾಟ್

ಯಾವುದೇ ಕಪಲ್ ಆಗಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಲ್ಲಂತಲೂ ಸಖತ್ ಆಗಿ ಕಾಣಿಸ್ತಾರೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಈಗ ಟ್ರೆಂಡ್ ಆಗಿ ಬಿಟ್ಟಿದೆ. ಈಗಿನ ಕಾಲದ ಪ್ರತಿಯೊಬ್ಬರೂ ತಮ್ಮ ಮದುವೆಗೂ ಮುನ್ನ ಬ್ಯಾಚುಲರ್ ದಿನಗಳನ್ನು ಮಧುರವಾಗಿಸಲು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುತ್ತಾರೆ. ಬಹಳಷ್ಟು ಜನರಿಗೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಬೇಕೆನ್ನುವ ಆಸೆ ಇರುತ್ತದೆ ಆದರೆ ಅದಕ್ಕೆ ತಕ್ಕಂತಹ ಸ್ಥಳ ಸಿಗೋದಿಲ್ಲ. ನಿಮಗೂ ನಿಮ್ಮ ಮದುವೆಗೂ ಮೊದಲಿನ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಬೇಕೆಂಬ ಕನಸಿದ್ದಲ್ಲಿ ಇಲ್ಲಿದೆ ಕೆಲವು ಇಂಟರೆಸ್ಟಿಂಗ್ ಸ್ಥಳಗಳು.

ಲಾಲ್‌ಬಾಗ್

ಲಾಲ್‌ಬಾಗ್

PC: Ak995
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಲು ಲಾಲ್‌ಬಾಗ್ ಬೆಸ್ಟ್ ಸ್ಥಳ. ವಿಭಿನ್ನ ಬಣ್ಣಬಣ್ಣದ ಹೂಗಳು, ಹಚ್ಚ ಹಸಿರು, ಕೆರೆ , ಇಲ್ಲಿಯ ವಾತಾವರಣ, ಇವೆಲ್ಲಾ ಫೋಟೋ ಶೂಟ್‌ ಮಾಡಿಸಲು ಪರ್ಫೆಕ್ಟ್ ಸ್ಥಳವಾಗಿದೆ. ನೀವು ಔಟ್‌ಡೋರ್ ಶೂಟಿಂಗ್ ಇಷ್ಟ ಪಡುತ್ತೀರೆಂದಾರೆ ಲಾಲ್‌ಬಾಗ್ ಒಂದು ಉತ್ತಮ ಆಯ್ಕೆಯಾಗಿದೆ.

ಬೆಂಗಳೂರು-ಕನಕಪುರ ರಸ್ತೆ

ಬೆಂಗಳೂರು-ಕನಕಪುರ ರಸ್ತೆ

ಬೆಳಗ್ಗಿನ ಜಾವ ಫೋಟೋ ಶೂಟ್ ಮಾಡಿಸುವುದಾದರೆ ಬೆಂಗಳೂರು-ಕನಕಪುರ ರಸ್ತೆ ಒಂದು ಉತ್ತಮ ರೊಮ್ಯಾಂಟಿಕ್ ಸ್ಥಳವಾಗಿದೆ. ತುರಹಳ್ಳಿ ಕಾಡು, ತಲಗಟ್ಟಪುರ ಕೆರೆ, ಗಾರ್ಡನ್ ಕೂಡಾ ಕಾಣಸಿಗುತ್ತದೆ. ರೊಮ್ಯಾಂಟಿಕ್ ಕಪಲ್‌ಗಳಿಗೆ ಉತ್ತಮ ಸ್ಥಳವಾಗಿದ್ದು, ಪ್ರೈವೆಸಿಯೂ ಸಿಗುತ್ತದೆ.

 ಸಟೋರಿ

ಸಟೋರಿ

Pc: youtube

ಬೆಂಗಳೂರಿನಲ್ಲಿ ಫೋಟೋ ಶೂಟ್ ಮಾಡಲು ಸೂಕ್ತವಾದ ಫಾರ್ಮ್ ಹೌಸ್ ಇದಾಗಿದೆ. ಇಲ್ಲಿನ ಗಾರ್ಡನ್ ಹಾಗೂ ಸಾಕಷ್ಟು ಸ್ಥಳ ಉತ್ತಮ ಬ್ಯಾಗ್‌ಗ್ರೌಂಡ್‌ನ್ನು ನೀಡುತ್ತದೆ. ಇಲ್ಲಿ ಬೆಳಗ್ಗೆಯೂ ಫೋಟೋ ಶೂಟ್ ಮಾಡಬಹುದು. ಸಂಜೆಯೂ ಫೋಟೋ ಶೂಟ್ ಮಾಡಬಹುದು.
ಸ್ಥಳ: 100/1 ಹೆಚ್‌ಎಎಲ್ ವರ್ತೂರ್ ಮೈನ್ ರೋಡ್, ಸಿದ್ಧಾಪುರ, ವೈಟ್ ಫೀಲ್ಡ್

ರಾಮನಗರ

ರಾಮನಗರ

PC: youtube

ಬೆಟ್ಟಗಳಿಗಾಗಿಯೇ ಹೆಸರುವಾಸಿಯಾಗಿರುವ ರಾಮನಗರದಲ್ಲಿ ಅನೇಕ ಜಾತಿಯ ಪಕ್ಷಿಗಳು ಕಾಣಸಿಗುತ್ತದೆ. ಇಲ್ಲಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಕೂಡಾ ಇದೆ. ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮ ಫೋಟೋವನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ.

 ನಂದಿ ಹಿಲ್ಸ್

ನಂದಿ ಹಿಲ್ಸ್

ಫೋಟೋ ಶೂಟ್ ಮಾಡಿಸಲು ನಂದಿ ಹಿಲ್ಸ್ ಕೂಡಾ ಉತ್ತಮ ಆಯ್ಕೆಯಾಗಿದೆ. ಇಲ್ಲಿನ ಗುಹೆಗಳು, ಟಿಪ್ಪು ಸುಲ್ತಾನನ ಕೋಟೆ, ಬೋಗ ನಂದೀಶ್ವರ ದೇವಾಲಯ ಇವೆಲ್ಲಾ ನಿಮ್ಮ ಫೋಟೋಗೆ ಇನ್ನಷ್ಟು ಉತ್ತಮ ಬ್ಯಾಗ್‌ಗ್ರೌಂಡ್‌ನ್ನು ಒದಗಿಸುವುದು. ಒಂದು ವೇಳೆ ನೀವು ನಂದಿ ಹಿಲ್ಸ್‌ಗೆ ಫೋಟೋ ಶೂಟ್ ಮಾಡಿಸಲು ಹೋಗುವುದಾದರೆ ಬೆಳಗ್ಗೆ ಬೇಗನೆ ಹೋಗಿ ಇಲ್ಲವಾದರೆ ಅಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ.

ಐಟಿಸಿ ವಿಂಡ್ಸರ್ ಮ್ಯಾನರ್

ಐಟಿಸಿ ವಿಂಡ್ಸರ್ ಮ್ಯಾನರ್

PC: youtube

ಬೆಂಗಳೂರಿನಲ್ಲಿರುವ ಅತ್ಯಂತ ಐಷಾರಾಮಿ ಫೋಟೋ ಶೂಟ್ ಸ್ಪಾಟ್ ಇದಾಗಿದೆ. ಇಲ್ಲಿನ ವಾತಾವರಣವು ನಿಮ್ಮನ್ನು 19 ನೇ ಶತಮಾನಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ. ಜೊತೆಗೆ ನಿಮ್ಮ ಫೋಟೋ ಶೂಟ್‌ಗೆ ಹಳೆ ಕಾಲದ ಲುಕ್‌ನ್ನು ನೀಡುತ್ತದೆ. ಇಲ್ಲಿ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಫೋಟೋ ಶೂಟ್ ಮಾಡಿಸಬಹುದು. ನೀವು ಇಲ್ಲಿಗೆ ಫೋಟೋ ಶೂಟ್‌ಗೆ ಹೋಗುವ ಮೊದಲು ಅಲ್ಲಿನ ಆಡಳಿತಾಧಿಕಾರಿಗಳಲ್ಲಿ ಅನುಮತಿ ಪಡೆದಿದ್ದಾರೋ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ.

ಎಲಿಮೆಂಟ್ ರೆಸಾರ್ಟ್

ಎಲಿಮೆಂಟ್ ರೆಸಾರ್ಟ್

ಇದೊಂದು ಐಷಾರಾಮಿ ರೆಸಾರ್ಟ್ ಆಗಿದ್ದು, ಸುಂದರವಾಗಿ ಅಲಂಕರಿಸಲಾಗಿದೆ. ಫೋಟೋ ಶೂಟ್‌ಗೆ ಉತ್ತಮ ಆಯ್ಕೆಯಾಗಿದೆ. ಇಲ್ಲಿ ದಿನವಿಡೀ ಫೋಟೋ ಶೂಟ್ ಮಾಡಬಹುದು. ಈ ರೆಸಾರ್ಟ್ ಕನಕಪುರ ರಸ್ತೆಯಿಂದ 21 ಕಿ.ಮೀ ದೂರದಲ್ಲಿದೆ. ಆರ್ಟ್ ಆಫ್ ಲೀವಿಂಗ್‌ನ ಎದುರುಗಡೆ ಇದೆ.

 ಜೆಪಿ ನಗರ ಹೊರವಲಯ

ಜೆಪಿ ನಗರ ಹೊರವಲಯ

PC: Sujay.P.S
ಜೆಪಿ ನಗರದ ಹೊರವಲಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಇಲ್ಲಿನ ಹಸಿರು ತಾಣಗಳು ಫೋಟೋ ಶೂಟ್ ಮಾಡಲು ಉತ್ತಮವಾಗಿದೆ. ಅಲ್ಲದೆ ಜನನಿಬಿಡ ಪ್ರದೇಶವಲ್ಲವಾದರಿಂದ ನಿಮಗೆ ಬೇಕಾದಷ್ಟು ಪ್ರೈವೆಸಿ ಸಿಗುತ್ತದೆ.

ಸಿದ್ಧರಬೆಟ್ಟ

ಸಿದ್ಧರಬೆಟ್ಟ

PC: youtube
ಇದು ಮಧುಗಿರಿಯಲ್ಲಿದೆ. ಬೆಂಗಳೂರಿನಿಂದ ಸುಮಾರು ೧೦೪ ಕಿ,ಮೀ ದೂರದಲ್ಲಿದೆ. ಇಲ್ಲಿನ ಸುತ್ತಮುತ್ತಲಿನ ಹಚ್ಚ ಹಸಿರು, ಇಲ್ಲಿನ ವಾತಾವರಣ ಜನರನ್ನು ಫೋಟೊ ಶೂಟ್‌ಗೆ ತನ್ನತ್ತ ಸೆಳೆಯುತ್ತಿದೆ. ಗುಹೆಗಳು ಇವೆ. ನೀವು ಬೆಳಗ್ಗಿನ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಂಜಿನಿಂದ ಆವೃತವಾದ ವಾತಾವರಣ ಕಾಣಸಿಗುತ್ತದೆ. ನಿಮ್ಮ ಫೋಟೋಗಳೂ ಸುಂದರವಾಗಿ ಮೂಡಿ ಬರುತ್ತದೆ.

More News

Read more about: bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+