Search
  • Follow NativePlanet
Share
» »ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ

ಪ್ರಸಿದ್ಧಿ ಪಡೆಯುತ್ತಿರುವ ಘಾಟಿ ಸುಬ್ರಹ್ಮಣ್ಯ

By Vijay

ಸನಾತನ ಹಿಂದೂ ಧರ್ಮದಲ್ಲಿ ಸರ್ಪ ಅಂದರೆ ಹಾವುಗಳಿಗೆ ವಿಶೇಷವಾದ ಸ್ಥಾನ ಕಲ್ಪಿಸಲಾಗಿದೆ. ಇತರೆ ಆಕಳು, ಕೋತಿ, ಆನೆಗಳಂತೆ ಸರ್ಪಗಳನ್ನೂ ಸಹ ವಿಶೇಷವಾದ ಸಂದರ್ಭದಲ್ಲಿ ಪೂಜಿಸಲಾಗುತ್ತದೆ. ಅಂತೆಯೆ ಪ್ರಸಿದ್ಧ ಹಬ್ಬವಾದ ನಾಗರ ಪಂಚಮಿಯನ್ನೂ ಸಹ ವಿವಿಧ ರೂಪಗಳಲ್ಲಿ ದೇಶದಲ್ಲೆಲ್ಲ ಆಚರಿಸುವುದನ್ನು ನೋಡಬಹುದು.

ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಹಾಗೂ ಫ್ಲೈಟ್ ಬುಕ್ಕಿಂಗ್ ಮೇಲೆ 5000 ರೂ. ಮರಳಿ ಪಡೆಯಿರಿ

ಮತ್ತೊಂದು ವಿಷಯವೆಂದರೆ ಹಿಂದೂ ಧರ್ಮದಲ್ಲಿ ಒಬ್ಬ ವ್ಯಕ್ತಿಯ ಯಶಸ್ಸು, ಅಡೆ ತಡೆಗಳ ಹಿಂದೆ ಹೇಗೆ ಗೃಹಗತಿಗಳ ಪ್ರಭಾವವಿರುತ್ತದೆಂದು ನಂಬಲಾಗುತ್ತದೊ ಅದೇ ರೀತಿಯಲ್ಲಿ ಸರ್ಪ ದೋಷವೂ ಸಹ ತನ್ನ ಪರಿಣಾಮವನ್ನು ಬೀರುತ್ತದೆ ಎಂದು ಹಿಂದೂ ಭಕ್ತರು ಅಚಲವಾಗಿ ನಂಬಿರುವ ವಿಷಯವಾಗಿದೆ.

ವಿಶೇಷ ಲೇಖನ : ಕುಕ್ಕೆ ಶ್ರೀ ಸುಬ್ರಹ್ಮಣ್ಯನ ದರ್ಶನ

ಕೆಲ ಜ್ಯೋತಿಷಿ, ಪಂಡಿತರ ಪ್ರಕಾರ, ಸಾಮಾನ್ಯವಾಗಿ ಬಹುತೇಕರು ಸರ್ಪ ದೋಷಕ್ಕೆ ತುತ್ತಾಗಿರುತ್ತಾರಂತೆ. ಅದಕ್ಕನುಸಾರವಾಗಿ ಇಂತಹ ದೋಷಗಳಿದ್ದವರು ಜೀವನದಲ್ಲಿ ಸಾಕಷ್ಟು ನೋವುಗಳನ್ನು, ಅಡೆ-ತಡೆಗಳನ್ನು ಅನುಭವಿಸುತ್ತಾರಂತೆ. ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಸುಬ್ರಹ್ಮಣ್ಯಗಳಂತಹ ಶ್ರೀಕ್ಷೇತ್ರಗಳಿಗೆ ತೆರಳಿ ದೋಷ ಮುಕ್ತರಾಗಬಹುದೆಂದು ನಂಬಲಾಗಿದೆ.

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಸರ್ಪ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ ಪ್ರಖ್ಯಾತ ಸರ್ಪ ಕ್ಷೇತ್ರವಾದರೆ, ಘಾಟಿ ಸುಬ್ರಹ್ಮಣ್ಯವು ಬೆಂಗಳೂರಿಗೆ ಬಲು ಹತ್ತಿರದಲ್ಲಿರುವ ಸರ್ಪ ಕ್ಷೇತ್ರವಾಗಿದೆ. ಈ ಲೇಖನದ ಮೂಲಕ ಘಾಟಿಯ ಕುರಿತು ಚೊಕ್ಕಾಗಿ ತಿಳಿದುಕೊಳ್ಳಿ ಹಾಗೂ ಸರ್ಪಗಳ ಅಧಿ ದೇವತೆಯಾದ ಸುಬ್ರಮಣ್ಯನ ದರುಶನ ಪಡೆಯಲು ಯೋಜಿಸಿರಿ.

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 10 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರಗಳ ಪೈಕಿ ಒಂದಾಗಿರುವ ಘಾಟಿ ಸುಬ್ರಹ್ಮಣ್ಯಕ್ಕೆ ಸರ್ಪ ದೋಷ ನಿವಾರಣೆಗೆಂದು, ಸುಬ್ರಹ್ಮಣ್ಯನ ದರುಶನ ಪಡೆಯಲೆಂದು ಸಾಕಷ್ಟು ಜನ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಸುಬ್ರಹ್ಮಣ್ಯನನ್ನು ನಾಗನ ರೂಪದಲ್ಲಿ ಇಲ್ಲಿ ಆರಾಧಿಸಲಾಗುತ್ತದೆ.

ಚಿತ್ರಕೃಪೆ: Vedamurthy J

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಸುಂದರ ದಂತ ಕಥೆಯೊಂದು ಪ್ರಚಲಿತದಲ್ಲಿದೆ. ಅದರ ಪ್ರಕಾರ, ಬಹಳ ಹಿಂದೆ ವಿಳ್ಯದೆಲೆ ವ್ಯಾಪಾರಿಯೊಬ್ಬ ವ್ಯಾಪಾರಕ್ಕೆಂದು ಹೋಗುವಾಗ ಈ ಕ್ಷೇತ್ರದ ಮೂಲಕ ಹಾದು ಹೋಗುತ್ತಿದ್ದನಂತೆ. ಈ ಸ್ಥಳವು ಅವನ ಪ್ರಯಾಣ ಮಾರ್ಗದ ಮಧ್ಯದಲ್ಲಿದ್ದುದರಿಂದ ಇಲ್ಲಿ ಕಟ್ಟಿಕೊಂಡ ಬುತ್ತಿ ತಿಂದು ವಿರಮಿಸಲು ಇಲ್ಲಿ ತಂಗುತ್ತಿದ್ದ.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇಲ್ಲಿರುವ ಕುಮಾರತೀರ್ಥದ ಬಳಿ ಊಟ ಮಾಡಿ ಈಗ ಮೂಲಸ್ವಾಮಿ ಇರುವ ಬಲಭಾಗದಲ್ಲಿ ಏಳು ಹೆಡೆಗಳು ಉದ್ಭವಿಸಿರುವ ಶಿಲೆಯ ಮೇಲೆಯೇ ಮಲಗುತ್ತಿದ್ದನಂತೆ. ಹೀಗಿರುವಾಗ ಒಂದು ದಿನ ಅಪರಚಿತ ಧ್ವನಿಯೊಂದು "ಇದರ ಮೇಲೇಕೆ ಮಲಗಿರುವೆ ಏಳು ಏಳು" ಅಂದ ಹಾಗಾಗಿ ಅವನಿಗೆ ಎಚ್ಚರವಾಯಿತು. ಯಾರು ಕಾಣದಿದ್ದಾಗ ಇದೊಂದು ದುಷ್ಟ ಶಕ್ತಿಗಳ ಕೀಟಲೆ ಇರಬಹುದೆಂದು ಬಗೆದು ಮರಳಿ ಮಲಗಿದ.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇದು ಹೀಗೆ ಪುನರಾವರ್ತಿತಗೊಂಡರೂ ಅದರ ಕುರಿತು ಅವನು ದಿವ್ಯ ನಿರ್ಲಕ್ಷ್ಯವಹಿಸಿದ. ಒಂದು ದಿನ ಹೀಗೆ ವ್ಯಾಪಾರ ಮುಗಿಸಿ ವಿರಮಿಸುತ್ತ ಮಲಗಿದ್ದಾಗ ಕನಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಸ್ವತಃ ಪ್ರತ್ಯಕ್ಷನಾಗಿ, ತಾನು ಆತ ಮಲಗಿರುವ ಶಿಲೆಯಿಂದ 20 ಗಜಗಳಷ್ಟು ದೂರದಲ್ಲಿ ನೆಲೆಸಿರುವುದಾಗಿಯೂ, ನನ್ನ ಕುರಿತು ಬಳ್ಳಾರಿಯ ಸಂಡೂರಿನ ರಾಜರಿಗೆ ವಿಷಯ ತಿಳಿಸಬೇಕೆಂದೂ, ಆಗ ಅವರು ನನಗೆ ಗುಡಿ ಗೋಪುರ ಕಟ್ಟಿಸುವುದಾಗಿಯೂ ಹೇಳಿ ಅದೃಶ್ಯನಾದ.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಥಟ್ಟನೆ ಎಚ್ಚೆತ್ತ ವ್ಯಾಪಾರಿ ಬೆಚ್ಚಿ ಬಿದ್ದ ಹಾಗೂ ಏನೂ ತೋಚದಾದಾಗ ಅಲ್ಲಿ ಬರುತ್ತಿದ್ದ ಒಬ್ಬ ಬ್ರಾಹ್ಮಣನನ್ನು ತಡೆದು ನಡೆದ ಸರ್ವ ವಿಷಯವನ್ನು ಅರುಹಿದ. ಬ್ರಾಹಣನು ಚಕಿತಗೊಂಡು ತಾನು ಆ ಸ್ಥಳದಲ್ಲಿ ಬರಲು ಕ್ಷಣ ಮಾತ್ರದಲ್ಲಿ ಆತನಿಗೂ ಸ್ವಾಮಿಯ ದರ್ಶನವಾಗಿ ಹೋಯಿತು. ಇದರಿಂದ ಪ್ರಸನ್ನರಾದ ಇಬ್ಬರು ಅಂದೆ ಸಂಡೂರಿಗೆ ರಾಜನಿಗೆ ವಿಷಯ ತಿಳಿಸಲು ತೆರಳಿದರು.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇತ್ತ ಸಂಡೂರಿಗೆ ಬಂದು ರಾಜನನ್ನು ಕಂಡು ಎಲ್ಲ ವಿಷಯ ಹೇಳಲು, ರಾಜನು ಸದ್ಯ ತನಗೆ ಕಾರ್ಯಗಳು ಬಹಳಷ್ಟಿರುವುದರಿಂದ ತಕ್ಷಣವೆ ಬರಲಾಗದು, ಬೇಕಿದ್ದರೆ ಧನ ಕನಕಗಳನ್ನು ಕೊಡುವೆ ನೀವೆ ಗುಡಿ ಗೋಪುರವನ್ನು ನಿರ್ಮಿಸಿ ಎಂದು ಹೇಳಿ ಕಳುಹಿಸಿದನು. ಇದರಿಂದ ನೊಂದ ಆ ಇಬ್ಬರು ಮರಳಿ ತಮ್ಮೂರಿಗೆ ಹೊರಡುವ ಮುಂಚೆ ಅದೆ ಊರಿನ ಇನ್ನೊಬ್ಬ ಬ್ರಾಹ್ಮಣನ ಮನೆಯಲ್ಲಿ ವಸತಿ ಹೂಡಿದರು. ಅಂದು ರಾತ್ರಿ ರಾಜನ ಕನಸಿನಲ್ಲಿ ಸ್ವಾಮಿಯು ಉಗ್ರ ರೂಪದಲ್ಲಿ ದರುಶನ ನೀಡಿ, ತನ್ನ ಆದೇಶವನ್ನು ನಿರ್ಲಕ್ಷಿಸಿದುದರ ಕುರಿತು ಕೋಪಗೊಂಡನು.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇದರಿಂದ ದಿಢೀರನೆ ಎಚ್ಚೆತ್ತ ರಾಜನು ತಾನು ಎಂತಹ ತಪ್ಪು ಮಾಡುತ್ತಿರುವೆನೆಂದು ಗೊತ್ತಾಗಿ, ಸೈನಿಕರ ಸಹಾಯದಿಂದ ಆ ಇಬ್ಬರು ವ್ಯಾಪಾರಿ ಹಾಗೂ ಬ್ರಾಹ್ಮಣನನ್ನು ಕಂಡು ಹಿಡಿದು ಅವರ ಜೊತೆ ಘಾಟಿಯೆಡೆ ಪ್ರಯಾಣ ಬೆಳೆಸುತ್ತಾನೆ ಹಾಗೂ ಅಲ್ಲಿ ದೇವಸ್ಥಾನ, ಗೋಪುರ ನಿರ್ಮಿಸಿ ಆ ಇಬ್ಬರನ್ನು ಅದರ ನಿರ್ವಹಣೆಗಾಗಿ ನೇಮಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಆ ಬ್ರಾಹ್ಮಣ ಪೂಜಾರಿಯ ವಂಶಸ್ಥರೆ ಸ್ವಾಮಿಗೆ ಪೂಜೆಯನ್ನು ಮುಂದುವರೆಸುತ್ತ ಬಂದಿದ್ದಾರೆನ್ನಲಾಗಿದೆ.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇಲ್ಲಿರುವ ದೇವಾಲಯದ ಪ್ರಧಾನ ದೇವತೆ ಶ್ರೀ ಸುಬ್ರಹ್ಮಣ್ಯ. ದೇವಸ್ಥಾನದ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿ ಸ್ಥಿತವಿದ್ದು ಪ್ರಸ್ತುತ ಇದು, ಕರ್ನಾಟಕ ಸರಕಾರದ ಮುಜರಾಯಿ (ಧಾರ್ಮಿಕ ದತ್ತಿ) ಇಲಾಖೆಗೆ ಒಳಪಟ್ಟಿದೆ . ಇದು ನಾಗಗಳ ವಾಸಸ್ಥಾನವಾಗಿರುವುದರಿಂದ ಇಲ್ಲಿ ಸಲ್ಲಿಸಲಾಗುವ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುತ್ತದೆಂದು ನಂಬಲಾಗಿದೆ. ಹಾಗಾಗಿಯೆ ಇದೊಂದು ಪ್ರಸಿದ್ಧ ಸರ್ಪದೋಷ ನಿವಾರಣಾ ಕ್ಷೇತ್ರವಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.

ಚಿತ್ರಕೃಪೆ: Rejenish

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ರಾಜ್ಯ ಹಾಗೂ ದೇಶದ ಮೂಲೆ ಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಸರ್ಪಸಂಸ್ಕಾರ , ನಾಗಪ್ರತಿಷ್ಠೆ, ಆಶ್ಲೇಷಬಲಿಗಳಂತಹ ಇತರೆ ಹಲವಾರು ಪೂಜೆಗಳನ್ನು ಸಲ್ಲಿಸಲು ಬರುತ್ತಾರೆ. ಗರ್ಭಗುಡಿಯಲ್ಲಿ ಸುಬ್ರಹ್ಮಣ್ಯನ ಜೊತೆ ವಾಸುಕಿ ಹಾಗೂ ಆದಿಶೇಷನ ವಿಗ್ರಹಗಳಿವೆ. ಹುತ್ತದ ಮಣ್ಣನ್ನು ಪ್ರಸಾದವನ್ನಾಗಿ ಭಕ್ತರಿಗೆ ನೀಡಲಾಗುತ್ತದೆ. ಪುಷ್ಯ ಷಷ್ಟಿಯ ದಿನದಂದು ಬ್ರಹ್ಮೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಮಿಕ್ಕಂತೆ ನರಸಿಂಹ ಜಯಂತಯನ್ನೂ ಸಹ ಇಲ್ಲಿ ಆಚರಿಸಲಾಗುತ್ತದೆ. ಮಹಾ ಪ್ರಸಾದವು ಅಂದು ಲಭ್ಯವಿರುತ್ತದೆ.

ಚಿತ್ರಕೃಪೆ: www.itslife.in

ಘಾಟಿ ಸುಬ್ರಹ್ಮಣ್ಯ:

ಘಾಟಿ ಸುಬ್ರಹ್ಮಣ್ಯ:

ಇನ್ನೂ ಘಾಟಿಗೆ ತೆರಳುವುದು ಬಹಳ ಸುಲಭವಾಗಿದೆ. ಮೊದಲಿಗೆ ದೊಡ್ಡಬಳ್ಳಾಪುರಕ್ಕೆ ತೆರಳಬೇಕು. ಅಲ್ಲಿಂದ ಹತ್ತು ಕಿ.ಮೀ ದೂರವಿರುವ ಘಾಟಿಗೆ ಸಾರಿಗೆಯು ನಿರಂತರವಾಗಿ ಲಭ್ಯವಿರುತ್ತದೆ. ಇನ್ನೂ ದೊಡ್ಡಬಳ್ಳಾಪುರಕ್ಕೆ
ಬೆಂಗಳೂರಿನಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಮೂಲಕ ತಲುಪಬಹುದು. ನಿಮ್ಮದೆ ಸ್ವಂತ ವಾಹನವಿದ್ದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣವಿರುವ ದೇವನಹಳ್ಳಿಗೆ ತೆರಳಿ ಅಲ್ಲಿಂದ ಎಡ ತಿರುವು ಪಡೆದು ದೊಡ್ಡಬಳ್ಳಾಪುರಕ್ಕೆ ತಲುಪಬಹುದು. ಅಲ್ಲಿಂದ ಘಾಟಿ ಕೇವಲ ಹತ್ತು ಕಿ.ಮಿ.

ಚಿತ್ರಕೃಪೆ: www.itslife.in

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X