» »ಅಹಮ್ಮದಾಬಾದಿನಿಂದ ಕೋಟೆಗಳ ನಗರ ಪಟಾನ್ ವ ಕಡೆಗೆ

ಅಹಮ್ಮದಾಬಾದಿನಿಂದ ಕೋಟೆಗಳ ನಗರ ಪಟಾನ್ ವ ಕಡೆಗೆ

Posted By: Manjula Balaraj Tantry

ಪಟೋಲಾ ನಗರಕ್ಕೆ ಎಂದಾದರೂ ಭೇಟಿ ನೀಡಿರುವಿರ? ಇಲ್ಲವಾದಲ್ಲಿ ಈ ನಗರದ ಅತಿಥಿಯಾಗಿ. ಗುಜರಾತಿನ ಇತಿಹಾಸದ ಬಗ್ಗೆ ತಿಳಿಯಬೇಕಾದಲ್ಲಿ ಕೋಟೆಗಳ ನಗರವಾದ ಪಠಾಣ್ ಗೆ ಭೇಟಿ ಕೊಡಿ. 1000 ವರ್ಷಗಳಷ್ಟು ಹಳೆಯದಾದ ಹೆಸರುವಾಸಿಯಾದ ಸ್ಟೆಪ್ ವೆಲ್ ರಾಯ್ ಕಿ ವಾವ್ ಇದೆ ಅಲ್ಲದೆ ಪಠಾಣ್ ಇಲ್ಲಿಯ ಕೋಟೆಗಳು ಮತ್ತು ಟ್ಯಾಂಕ್ ಗಳ ಅವಶೇಷಗಳಿಗಾಗಿ ಪ್ರವಾಸಿಗರಲ್ಲಿ ಪ್ರಸಿದ್ದಿಯನ್ನು ಪಡೆದಿದೆ.

ಈ ವಾರಾಂತ್ಯದಲ್ಲಿ ಪಠಾಣ್ ನಲ್ಲಿದ್ದು ಈ ಪಟ್ಟಣದ ಐತಿಹಾಸಿಕ ದಂತ ಕಥೆಗಳನ್ನು ತಿಳಿದರೆ ಹೇಗಿರಬಹುದು? ಕೋಟೆಗಳ ನಗರವೆನಿಸಿರುವ ಪಠಾಣ್ ಚಾವ್ಡಾ ಸಾಮ್ರಾಜ್ಯದ ಅವಧಿಯ ಹೆಸರಾಂತ ಚಕ್ರವರ್ತಿಗಳಲ್ಲಿ ಒಬ್ಬರಾದ ವನ್ ರಾಜ್ ಚಾವ್ಡಾರ ಆಳ್ವಿಕೆಯ ಅವಧಿಯಲ್ಲಿ ಈ ಪಟ್ಟಣವು ದೊಡ್ಡ ರಾಜಕೀಯ ಕೇಂದ್ರವೆನಿಸಿದೆ.

8ನೇ ಶತಮಾನದ ಯುಗದಲ್ಲಿ ಪಠಾಣ್ ಸ್ಥಾಪನೆಯಾಯಿತು ಮತ್ತು ಅಂದಿನಿಂದ ಇದು ಚಾಲುಕ್ಯ ರಾಜವಂಶದ ಹಲವು ಆಡಳಿತಗಾರರ ಅಡಿಯಲ್ಲಿ ಮತ್ತು ನಂತರ ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.

ಇಂದು ಇದು ಗುಜರಾತಿನ ಪ್ರಮುಖ ನಗರಗಳಲ್ಲೊಂದಾಗಿದೆ ಮತ್ತು ಅನೇಕ ಐತಿಹಾಸಿಕ ಕಟ್ಟಡಗಳು ಮತ್ತು ವಾಸ್ತುಶಿಲ್ಪ ಅದ್ಬುತಗಳ ನೆಲೆಯಾಗಿದೆ. ಪಠಾಣ್ ಗೆ ಪಟೋಲಾ ನಗರವೆಂಬ ಹೆಸರಿನಿಂದ ಕೂಡಾ ಕರೆಯಲಾಗುತ್ತದೆ ಇದರ ಜೊತೆಗೆ ಇಲ್ಲಿ ರೇಷ್ಮೆಯಿಂದ ತಯಾರಾಗುವ ಪಟೋಲಾ ಸೀರೆಗಳಿಗೆ ಕೂಡಾ ಹೆಸರುವಾಸಿಯಾಗಿದೆ.

ಪಟೋಲಾ ಭೇಟಿ ಮಾಡಲು ಸೂಕ್ತ ಸಮಯ

ಪಟೋಲಾ ಭೇಟಿ ಮಾಡಲು ಸೂಕ್ತ ಸಮಯ

PC- Prayash Giria

ಅರೆ ಶುಷ್ಕ ಪ್ರದೇಶದಲ್ಲಿ ನೆಲೆಗೊಂಡಿರುವ ಪಠಾಣ್ ಬಿಸಿಯಾದ ತಾಪಮಾನವನ್ನು ಅನುಭವಿಸುತ್ತದೆ, ಆದುದರಿಂದ ಪಠಾಣ್ ಗೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳಿನ ಕೊನೆಯವರೆಗೆ ಬೇಸಿಗೆ ಸಮಯದಲ್ಲಿ ಇಲ್ಲಿಯ ಹವಾಗುಣ ಅನುಕೂಲಕರವಾಗಿಲ್ಲದೇ ಇರುವುದರಿಂದ ನಿಮಗೆ ಆರಾಮದಾಯಕವಾಗಿರಲಾರದು.

ಅಹಮದಾಬಾದಿನಿಂದ ಪಠಾಣ್ ತಲುಪುವುದು ಹೇಗೆ

ಅಹಮದಾಬಾದಿನಿಂದ ಪಠಾಣ್ ತಲುಪುವುದು ಹೇಗೆ

PC- Maps

ವಾಯು ಮಾರ್ಗ ಮೂಲಕ ನೀವು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಪ್ರಯಾಣಿಸಬಹುದು ಮತ್ತು ಅಲ್ಲಿಂದ ನೀವು ಬಾಡಿಗೆ ಕ್ಯಾಬ್ ಮಾಡಿಕೊಂಡು ಪಠಾಣ್ ಗೆ ಹೋಗಬಹುದು ಅಥವಾ ಕ್ಯಾಬ್ ಮೂಲಕ ಅಹಮದಾಬಾದ್ ಬಸ್ಸು ನಿಲ್ದಾಣಕ್ಕೆ ಹೋಗಬಹುದು. ಅಲ್ಲಿಂದ ಬಸ್ಸಿನ ಮೂಲಕ ಪಠಾಣ್ ಗೆ ಪ್ರಯಾಣಿಸಬಹುದು.

ರೈಲು ಮೂಲಕ: ಪಠಾಣ್ ದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಅನ್ಜಾದಲ್ಲಿ ಹತ್ತಿರದ ರೈಲು ನಿಲ್ದಾಣವಿದೆ. ನೀವು ಅಹ್ಮದಾಬಾದಿನಿಂದ ಅನ್ಜಾಕ್ಕೆ ರೈಲು ಹಿಡಿಯಬಹುದು ಮತ್ತು ನಂತರ ನೀವು ಪಠಾಣ್ ಗೆ ಕ್ಯಾಬ್ ತೆಗೆದುಕೊಳ್ಳಬಹುದು.

ರಸ್ತೆ ಮೂಲಕ: ಅಹಮದಾಬಾದ್ ಮತ್ತು ಇತರ ನಗರಗಳಿಂದ ರಸ್ತೆ ಮೂಲಕ ಪಠಾಣ್ ಗೆ ಸುಲಭವಾಗಿ ತಲುಪಬಹುದು. ನೀವು ಅಹ್ಮದಾಬಾದಿನಿಂದ ಪಟಾನ್ಗೆ ಕ್ಯಾಬ್ ತೆಗೆದುಕೊಳ್ಳಬಹುದು ಅಥವಾ ಬಸ್ ಅನ್ನು ಹಿಡಿಯಬಹುದು.

ನೀವು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರೆ, ನೀವು ಈ ಕೆಳಗಿನ ಮಾರ್ಗಗಳ ಮೂಲಕ ಹೋಗಬಹುದು:

ಮಾರ್ಗ 1: ಅಹಮದಾಬಾದ್ - ಕಲೋಲ್ - ಮೆಹ್ಸಾನಾ - ಪಠಾಣ್

ಮಾರ್ಗ 2: ಅಹಮದಾಬಾದ್ - ಗಾಂಧಿನಗರ - ಗೋಜರಿಯಾ - ಪಠಾಣ್

ನೀವು ಕಡಿಮೆ ಅವಧಿಯಲ್ಲಿ ಪಠಾಣ್ ತಲುಪಬೇಕೆಂದಿದ್ದಲ್ಲಿ ಮಾರ್ಗ 1 ಸೂಕ್ತವಾದುದಾಗಿದೆ. ಪಠಾಣ್ ಹೋಗುವ ದಾರಿಯಲ್ಲಿ, ಸುತ್ತಲಿನ ಸ್ಥಳಗಳ ಸೌಂದರ್ಯವನ್ನು ಕಳೆಯಲು ಈ ಕೆಳಗಿನ ಸ್ಥಳಗಳಲ್ಲಿ ನೀವು ನಿಲ್ಲಿಸಬಹುದು

ಕಲೋಲ್

ಕಲೋಲ್

ಗುಜರಾತಿನ ಗಾಂಧೀನಗರ ಜಿಲ್ಲೆಯಲ್ಲಿರುವ ಕಲೋಲ್ ಇಲ್ಲಿಯ ಸಣ್ಣ ಹಳ್ಳಿಯಾದ ತೋಮ್ ನ ಪಕ್ಷಿಧಾಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಯ ನೈಸರ್ಗಿಕ ಸೌಂದರ್ಯದ ಹೊರತಾಗಿಯೂ ಇಲ್ಲಿ ಅನೇಕ ಐತಿಹಾಸಿಕ ಸೌಂದರ್ಯತೆಯನ್ನು ಪ್ರತಿಬಿಂಬಿಸುವ ಶತಮಾನಗಳಷ್ಟು ಹಳೆಯದಾದ ಸ್ಟೆಪ್ ವೆಲ್ ಅನ್ನು ಹೊಂದಿದೆ. ಈ ಐತಿಹಾಸಿಕ ಗಡಿಯೊಳಗೆ ಇದ್ದು ಇಲ್ಲಿಯ ಸುಂದರವಾದ ಕ್ಷಣಗಳನ್ನು ವರ್ಣಮಯ ಪಕ್ಷಿಗಳ ಜೊತೆಗೆ ಕಳೆದರೆ ಹೇಗಿರಬಹುದು?

ಮೆಹ್ಸಾನ

ಮೆಹ್ಸಾನ

PC- Nizil Shah

ಮೆಹ್ಸಾನವು ಚಾವ್ಡಾ ರಾಜಮನೆತನದ ರಾಜರಿಂದ ರೂಪುಗೊಂಡ 15 ನೇ ಶತಮಾನದ ವಸಾಹತು ಆಗಿದೆ.ಗುಜರಾತಿನ ಪ್ರಾಚೀನ ಸೌಂದರ್ಯವನ್ನು ಕುರಿತು ಎಂದಾದರು ಅಚ್ಚರಿಗೊಂಡಿರುವಿರ?ಹಾಗಿದ್ದಲ್ಲಿ ಅದರ ವಾತಾವರಣವನ್ನು ಅನ್ವೇಷಿಸಲು ಮೆಹ್ಸಾನದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಮರೆಯಬೇಡಿ.

ಇದು ರಾಹ್ ಮಹಲ್ ಎಂದು ಕರೆಯಲ್ಪಡುವ ರಾಜಮನೆತನ ಮತ್ತು 17 ನೇ ಶತಮಾನದ ಸ್ಟೆಪ್ ವೆಲ್ ಬೊಟೆರ್ ಕೋಥಾ ನಿ ವಾವ್ ಎಂದು ಕರೆಯಲ್ಪಡುವ ಈ ಮಹ್ಸಾನಾ ದ ಅದ್ಬುತಗಳನ್ನು ನೋಡುವುದು ಖಚಿತವಾಗಿಯೂ ಮೌಲ್ಯಯುತವಾದುದಾಗಿದೆ.

ಪಟಾನ್ನಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು

ಪಟಾನ್ನಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳು

PC- Awara Diaries

ಏಳು ಹಂತದ ಮೆಟ್ಟಿಲುಗಳನ್ನು ಮತ್ತು 500 ಕ್ಕೂ ಹೆಚ್ಚು ಶಿಲ್ಪಗಳನ್ನು ಹೊಂದಿರುವ ರಾಣಿಕಿ ವಾವ್ ಚಾಲುಕ್ಯ ರಾಜವಂಶದ ಆಳ್ವಿಕೆಯಲ್ಲಿ ನಿರ್ಮಿಸಿದ ಪ್ರಾಚೀನ ಸ್ಟೆಪ್ ವೆಲ್ ಅನ್ನು ಹೊಂದಿದೆ ಮತ್ತು ಇದು ತನ್ನ ಅದ್ಭುತವಾದ ವಿನ್ಯಾಸ ಮತ್ತು ಸಂಕೀರ್ಣವಾದ ಮಾದರಿಗಳಿಗೆ ಹೆಸರುವಾಸಿಯಾಗಿದೆ.

ಸರಸ್ವತಿ ನದಿಯ ದಡದಲ್ಲಿರುವ ರಾಣಿಕಿ ವಾವ್ ಭಾರತದ ಅತೀ ಸ್ವಚ್ಚವಾದ ಸಾಂಪ್ರದಾಯಿಕ ಸ್ಥಳಗಳಲ್ಲೊಂದು ಎಂದು ಘೋಷಿಸಲಾಗಿದೆ. ಯುನೆಸ್ಕೊ ವಿಶ್ವ ಪರಂಪರೆ ತಾಣವಾಗಿರುವುದರಿಂದ, ವರ್ಷಪೂರ್ತಿ ಪಟಾನ್ ನಲ್ಲಿಯ ಇದು ಒಂದು ಪ್ರಮುಖ ಆಕರ್ಷಣೆಯಾಗಿದೆ.

ಸಹಸ್ರ ಲಿಂಗ ಟ್ಯಾಂಕ್(ತೊಟ್ಟಿ)

ಸಹಸ್ರ ಲಿಂಗ ಟ್ಯಾಂಕ್(ತೊಟ್ಟಿ)

PC- Rashmi.parab

ಸಹಸ್ರಲಿಂಗ ಟ್ಯಾಂಕ್ ಮೂಲಭೂತವಾಗಿ ಕೃತಕ ನೀರಿನ ಟ್ಯಾಂಕ್ ಆಗಿದ್ದು ಚಾಲುಕ್ಯ ರಾಜವಂಶದ ಆಳ್ವಿಕೆಯ ಸಮಯದಲ್ಲಿ ಇದನ್ನು ಸಾಮ್ರಾಜ್ಯದ ಅಗತ್ಯಗಳನ್ನು ಪೂರೈಸಲು ನಿರ್ಮಿಸಲಾಯಿತು. ಭಾರತದ ಪುರಾತತ್ವ ಶಾಸ್ತ್ರದ ಅಡಿಯಲ್ಲಿ ನಿರ್ವಹಿಸಲ್ಪಟ್ಟ ಈ ವಾಸ್ತು ಶಿಲ್ಪ ಸೌಂದರ್ಯತೆಯು ಕಲಾ ನೈಪುಣ್ಯತೆಯು ಆಧುನಿಕ ತಂತ್ರಜ್ನಾನವನ್ನು ಮತ್ತು ಯಂತ್ರಗಳನ್ನು ಬಳಸದೆಯೇ ನಿರ್ಮಿಸಲಾಗಿದೆ.

ಸರಸ್ವತಿ ನದಿಯ ಕಾಲುವೆಗೆ ಸಂಪರ್ಕ ಹೊಂದಿದ್ದರಿಂದ ಈ ಅದ್ಭುತವಾದ ನಿರ್ಮಿತ ತೊಟ್ಟಿಯು ಸಾಮ್ರಾಜ್ಯದ ಇತರ ಅಧಿಕಾರಿಗಳಿಗೆ ಸಾರಿಗೆ ವಿಧಾನವಾಗಿ ಸೇವೆ ಸಲ್ಲಿಸಿದೆ.ಆದುದರಿಂದ ಈ ಟ್ಯಾಂಕ್ ನ ಸೌಂದರ್ಯತೆಯನ್ನು ನೋಡಲು ಹೋದರೆ ಹೇಗೆ?

ಕೋಟೆಯ ಅವಶೇಷಗಳು

ಕೋಟೆಯ ಅವಶೇಷಗಳು

PC- Bernard Gagnon

ಕೋಟೆಯು ಸರಿಯಾದ ಕಾಳಜಿ ಮತ್ತು ನಿರ್ವಹಣೆ ಇಲ್ಲದೆ ಅವಶೇಷಗಳಾಗಿ ಪರಿವರ್ತಿತವಾಗಿದ್ದರೂ ಸಹ ಪಠಾಣ್ ಕೋಟೆಯ ಹಳ್ಳಿಗಾಡಿನ ಗೋಡೆಗಳು ಮತ್ತು ಕುಸಿದುಹೋದ ಛಾವಣಿಗಳು ಈಗಲೂ ಅದರ ಹಳೆಯ ಕಾಲದ ಗ್ಯಾಲರಿಗಳನ್ನು ಪ್ರದರ್ಶಿಸುತ್ತವೆ.ನೀವು ಖಂಡಿತವಾಗಿಯೂ ಅವಶೇಷಗಳನ್ನು ಅನ್ವೇಷಿಸುವ ಮತ್ತು ಅವರ ರಹಸ್ಯಗಳನ್ನು ಬಹಿರಂಗ ಪಡಿಸಲು ಇಚ್ಚಿಸಿದಲ್ಲಿ, ಪಠಾಣ್ ಕೋಟೆಯು ನಿಮಗಾಗಿ ಒಂದು ನಿರ್ದಿಷ್ಟ ಸ್ಥಳವಾಗಿದೆ.