Search
  • Follow NativePlanet
Share
» »ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್

ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್

ವಿಶಾಖಪಟ್ಟಣಂ ಸುತ್ತಾಡಬೇಕೆಂದಿರುವವರಿಗೆ ಶುಭಸುದ್ದಿ ಇದೆ . ಅದೇನೆಂದರೆ ವಿಶಾಖಪಟ್ಟಣಂನಲ್ಲಿ ಪ್ಲೋಟಿಂಗ್ ರೆಸ್ಟೋರೆಂಟ್ ಆರಂಭವಾಗಲಿದೆ. ಪ್ರವಾಸಿಗರು ಈ ತೇಲುವ ರೆಸ್ಟೋರೆಂಟ್‌ನ ಆನಂದವನ್ನು ಪಡೆಯಬಹುದು. ರಾಜ್ಯ ಸರ್ಕಾರವು ವಿಶೇಷವಾಗಿ ಪ್ರವಾಸೋಧ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ತೇಲುವ ರೆಸ್ಟೋರೆಂಟ್‌ನ್ನು ನಿರ್ಮಿಸಲು ಯೋಚಿಸಿದೆ. ಇದಕ್ಕಾಗಿ ಸರ್ಕಾರದ ಮುಂದೆ ಪ್ರಸ್ತಾಪವನ್ನು ಇಡಲಾಗಿದೆ. ಈ ಐಡಿಯಾ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದು.

 ತೇಲುವ ರೆಸ್ಟೋರೆಂಟ್

ತೇಲುವ ರೆಸ್ಟೋರೆಂಟ್

ತೇಲುವ ರೆಸ್ಟೋರೆಂಟ್ ಪ್ರಾಜೆಕ್ಟ್‌ನ್ನು ಶೀಘ್ರದಲ್ಲೇ ಶುರುಮಾಡಲು ವಿಶಾಖಪಟ್ಟಣದ ಬಂದರು ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಪ್ರಾಜೆಕ್ಟ್‌ ಜೊತೆಗೆ ಕ್ರೂಜ್ ಟೂರಿಸಂ ಹಾಗೂ ಐಎಎನ್‌ಎಸ್ ವಿರಾಟ್ ಮ್ಯೂಸಿಯಂನ್ನೂ ಸೇರಿಸಲಾಗಿದೆ.

ದೊಡ್ಡ ರೆಸ್ಟೊರೆಂಟ್‌ಗಳ ಅಧ್ಯಯನ

ದೊಡ್ಡ ರೆಸ್ಟೊರೆಂಟ್‌ಗಳ ಅಧ್ಯಯನ

ಈ ಪ್ರಾಜೆಕ್ಟ್‌ನ್ನುಪ್ರಾರಂಭಿಸಲು ವಿಶೇಷ ರೀತಿಯಲ್ಲಿ ವಿಶ್ವದಾದ್ಯಂತ ತೇಲುವ ರೆಸ್ಟೋರೆಂಟ್‌ನ್ನು ಅಧ್ಯಯನ ಮಾಡಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಿಂದ ವಿಶಾಖ ಪಟ್ಟಣಂನಲ್ಲಿ ಈ ರೀತಿಯ ತೇಲುವ ರೆಸ್ಟೋರೆಂಟ್‌ನ್ನು ನಿರ್ಮಿಸಲು ಸಾಧ್ಯವಾಗುತ್ತದೋ ಇಲ್ಲವೋ ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಲಂಡನ್‌ನ ಗುಡ್‌ ಹೋಟೆಲ್, ಸಿಂಗಾಪುರದ ರೆಸಾರ್ಟ್ ವಲ್ಡ್‌, ಮಾಲ್ಡೀವ್ಸ್‌ನ ಕಾನ್‌ರೈಡ್‌ ಹಾಗೂ ಉದಯಪುರದ ತಾಜ್‌ ಲೇಕ್‌ ಪ್ಯಾಲೆಸ್ ಕೂಡಾ ಸೇರಿಕೊಂಡಿದೆ.

ತೇಲುವ ಮ್ಯೂಸಿಯಂ

ತೇಲುವ ಮ್ಯೂಸಿಯಂ

PC: Chanakyathegreat

ಫ್ಲೋಟಿಂಗ್ ರೆಸ್ಟೋರೆಂಟ್‌ನ ಜೊತೆಗೆ ವಿಶಾಖಪಟ್ಟಣದಲ್ಲಿ ಒಂದು ತೇಲುವ ಮ್ಯೂಸಿಯಂನ್ನೂ ನಿರ್ಮಿಸಲಾಗುವುದು. ಅದಕ್ಕಾಗಿ ನೌಕಾಸೇನೆಯ ಐಎಎನ್‌ಎಸ್ ವಿರಾಟ್‌ನ್ನು ಆಯ್ಕೆ ಮಾಡಲಾಗಿದೆ. ಐಎಎನ್‌ಎಸ್ ವಿರಾಟ್‌ ಭಾರತೀಯ ನೌಕಾಸೇನೆಯ ಬಹಳ ಹಳೆಯ ಏರ್‌ಕ್ರಾಫ್ಟ್‌ ಕ್ಯಾರಿಯರ್ ಆಗಿದ್ದು. ಅದನ್ನು ಈಗ ತೇಲುವ ಮ್ಯೂಸಿಯಂ ಆಗಿ ಬದಲಿಸಲಾಗುವುದು. ಬೇಗನೇ ಈ ಮ್ಯೂಸಿಯಂಗೆ ಲೊಕೇಶಮ್‌ ನಿರ್ಧರಿಸಲಾಗುವುದು. ಈ ಪ್ರಾಜೆಕ್ಟ್‌ನ್ನು ಬಹುಬೇಗನೇ ಆರಂಭಿಸಲು ರಾಜ್ಯ ಸರ್ಕಾರವು ತೊಡಗಿದೆ.

ಪ್ರವಾಸಿಗರಿಗೆ ಮೂರನೇ ಗಿಫ್ಟ್

ಪ್ರವಾಸಿಗರಿಗೆ ಮೂರನೇ ಗಿಫ್ಟ್

ಪ್ಲೋಟಿಂಗ್ ರೆಸ್ಟೋರೆಂಟ್ ಹಾಗೂ ಮ್ಯೂಸಿಯಂ ಜೊತೆಗೆ ಬಹುಬೇಗನೇ ವಿಶಾಖಪಟ್ಟಣಂನ ಕ್ರೂಜ್ ಟೂರಿಸಂನ್ನೂ ಪ್ರಾರಂಭಿಸಲಾಗುವುದು. ಈ ಮೂಲಕ ಪ್ರವಾಸಿಗರು ವಿಶಾಖಪಟ್ಟಣಂನ ಸೌಂದರ್ಯದ ಆನಮದವನ್ನು ಪಡೆಯಬಹುದು. ಸರಕಾರ ಈ ಎಲ್ಲಾ ಪ್ರಾಜೆಕ್ಟ್‌ ರಾಜ್ಯ ಪ್ರವಾಸೋಧ್ಯಮವನ್ನು ಉತ್ತಮಗೊಳಿಸುವ ಸಲುವಾಗಿ ಆರಂಭಿಸುತ್ತಿದೆ.

ವಿಶಾಖಪಟ್ಟಣಂನ ಆಕರ್ಷಣೆ

ವಿಶಾಖಪಟ್ಟಣಂನ ಆಕರ್ಷಣೆ

PC:Krishna Potluri

ವಿಶಾಖಪಟ್ಟಣಂ ಸುತ್ತಾಡುವಾಗ ನೀವು ಇಲ್ಲಿನ ಪ್ರಮುಖ ಬೀಚ್‌ನ ಆನಂದವನ್ನು ಪಡೆಯಲೇ ಬೇಕು. ಯಾರಾದ ಸಮುದ್ರ ತಟವು ನಗರದ ಪ್ರಮುಖ ಪ್ರಸಿದ್ಧ ಸಮುದ್ರ ತೀರಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಮೂರು ಕಡೆಗಳಿಂದಲೂ ಶಾಂತ ಪರ್ವತಗಳಿಂದ ಸುತ್ತುವರಿದಿರುವ ಈ ಬೀಚ್‌ ತನ್ನ ಅದ್ಭುತ ದೃಶ್ಯಕ್ಕಾಗಿ ಪ್ರಸಿದ್ಧವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X