Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಶಾಖಪಟ್ಟಣ » ಹವಾಮಾನ

ವಿಶಾಖಪಟ್ಟಣ ಹವಾಮಾನ

ಮಾನ್ಸೂನ್ ತಿಂಗಳ ನಂತರದ ದಿನಗಳು ಮತ್ತು ಚಳಿಗಾಲದ ಋತುವಿನಲ್ಲಿ ಅಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಕಾಲವು ವಿಶಾಖಪಟ್ಟಣದ ಭೇಟಿಗೆ  ಅತ್ಯುತ್ತಮ ಸಮಯ. ಈ ಕಾಲದಲ್ಲಿ ಹವಾಮಾನ ತುಂಬಾ ಆಹ್ಲಾದಕರವಾಗಿರುತ್ತದೆ. ಅಲ್ಲದೇ ದೀಪಾವಳಿ ಮತ್ತು ನವರಾತ್ರಿ ಗಳಂತಹ ಪ್ರಮುಖ ಹಬ್ಬಗಳನ್ನು ಈ ಸಮಯದಲ್ಲಿ ಆಚರಿಸಲಾಗುತ್ತದೆ. ನಗರದ ವಾತಾವರಣ ಚಳಿಗಾಲದ ತಿಂಗಳುಗಳಲ್ಲಿ ಅತಿ ರೋಮಾಂಚಕವಾಗಿದ್ದು ವಿಶಾಖಪಟ್ಟಣದಲ್ಲಿ ಆಚರಿಸುವ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಹಬ್ಬವಾದ ವಿಸಖಾ ಉತ್ಸವವೂ ಕೂಡ ಈ ಅವಧಿಯಲ್ಲೆ ಜರುಗುತ್ತದೆ.

ಬೇಸಿಗೆಗಾಲ

ವಿಶಾಖಪಟ್ಟಣದಲ್ಲಿ ಬೇಸಿಗೆ ಮಾರ್ಚ್ ನಿಂದ ಮೇ  ತಿಂಗಳವರೆಗೆ ಇರುತ್ತದೆ. ಈ ಕಾಲದಲ್ಲಿ ತಾಪಮಾನ 45 ° ಡಿಗ್ರಿ  ಸೆಲ್ಶಿಯಸ್ ನಷ್ಟಿದ್ದು, ಆರ್ದ್ರತೆ ಕೂಡ ಅತ್ಯಂತ ಹೆಚ್ಚಾಗಿರುತ್ತದೆ. ವರ್ಷದಲ್ಲಿ ಈ ಸಮಯವು ಅತ್ಯಂತ ಅಹಿತಕರವಾಗಿದ್ದು ಪ್ರವಾಸಿ ಚಟುವಟಿಕೆಗಳಿಗೆ ಅಷ್ಟೇನೂ ಸೂಕ್ತವಲ್ಲ.

ಮಳೆಗಾಲ

ವಿಶಾಖಪಟ್ಟಣದಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಾನ್ಸೂನ್ ಅವಧಿಯಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಈ ಮಳೆ ಪ್ರವಾಸಿಗರಿಗೆ  ಸ್ವಲ್ಪ ಅಡಚಣೆಯನ್ನುಂಟು ಮಾಡುತ್ತದೆ. ಆದರೆ, ಇಂತಹ  ಭಾರೀ ಮಳೆಯಿಂದಾಗಿ  ತಾಪಮಾನದಲ್ಲಿ ಇಳಿಕೆ ಉಂಟಾಗಿ ಹವಾಮಾನ ಹೆಚ್ಚು ಅಹ್ಲಾದಕರವಾಗುತ್ತದೆ.

ಚಳಿಗಾಲ

ಚಳಿಗಾಲವು ವಿಶಾಖಪಟ್ಟಣಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳವರೆಗಿರುವ ಚಳಿಗಾಲದಲ್ಲಿ ತಾಪಮಾನವು ಸಾಮಾನ್ಯವಾಗಿ 18 ° ಡಿಗ್ರಿ  ಸೆಲ್ಶಿಯಸ್ ನಿಂದ 30 ° ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ. ಈ ಸಮಯದಲ್ಲಿ ವಾತಾವರಣವು ಬಹಳ ಆಹ್ಲಾದಕರವಾಗಿರುತ್ತದೆ. ನವರಾತ್ರಿ, ದೀಪಾವಳಿ ಮತ್ತು  ಪ್ರಸಿದ್ಧ ವಿಸಖಾ ಉತ್ಸವ್ ಗಳಂತಹ ಪ್ರಮುಖ ಹಬ್ಬಗಳನ್ನು ಈ ತಿಂಗಳಲ್ಲೇ  ಆಚರಿಸಲಾಗುತ್ತದೆ.