Search
  • Follow NativePlanet
Share
» »2019 ರಲ್ಲಿ ಭಾರತದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲ್ಪಡುವ ಪ್ರಮುಖ 5 ಸ್ಥಳಗಳು

2019 ರಲ್ಲಿ ಭಾರತದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲ್ಪಡುವ ಪ್ರಮುಖ 5 ಸ್ಥಳಗಳು

By Manjula Balaraj Tantry

ಭಾರತದ ವೈವಿಧ್ಯತೆಗಳಲ್ಲಿ ಉತ್ಸವಗಳು ಕೂಡಾ ಸಂಸ್ಕೃತಿಯ ಒಂದು ಪ್ರಮುಖ ಅಂಗವಾಗಿದೆ. ಬಣ್ಣಗಳ ಹಬ್ಬವಾದ ಹೋಳಿಯು ಹೆಚ್ಚಾಗಿ ದೇಶದ ಎಲ್ಲಾ ಭಾಗಗಳಲ್ಲಿಯೂ ಆಚರಿಸಲ್ಪಡುವ ಮತ್ತು ಹೆಚ್ಚು ಕಾತರದಿಂದ ಕಾಯುವ ಹಬ್ಬವಾಗಿದೆ.

ಬರ್ಸಾನಾದ ಲಾತ್ಮಾರ್ ಹೋಳಿಯಿಂದ ಮಥುರಾ ಮತ್ತು ವೃಂದಾವನದ ಸಾಂಪ್ರದಾಯಿಕ ಹೋಳಿ ಮತ್ತು ಮುಂಬೈನ ಹೋಳಿಯ ಪಾರ್ಟಿಗಳವರೆಗೆ ಎಲ್ಲಾ ಕಡೆಯು ಹೋಳಿಯನ್ನು ವಿವಿಧ ರೀತಿಯಿಂದ ಆಚರಿಸುತ್ತಾರೆ. 2019ರ ಹೋಳಿಯನ್ನು ಸಂಭ್ರಮದಿಂದ ಆಚರಿಸಲು ಭಾರತದ ಪ್ರಮುಖ 5ಸ್ಥಳಗಳಿಗೆ ಪ್ರಯಾಣ ಮಾಡಿ

ಈ ಬಣ್ಣಗಳ ದೊಡ್ಡ ಉತ್ಸವವಾದ ಹೋಳಿಯು ಬಹು ನಿರಿಕ್ಷೆಯಿಂದ ಕಾಯುವ ಭಾರತದ ಹಬ್ಬವಾಗಿದೆ. ಎಲ್ಲಾ ವಿನೋದಾವಳಿ, ಉಲ್ಲಾಸ ಮತ್ತು ಉತ್ಸಾಹವನ್ನು ಈ ಹಬ್ಬವು ತರುತ್ತದೆ ಈ ಹಬ್ಬವು ಭಾರತದಲ್ಲಿ ವಸಂತ ಋತುವಿನ ಆಗಮನವನ್ನು ಸೂಚಿಸುತ್ತದೆ. ಹೋಳಿ ಹಬ್ಬದ ದಿನವನ್ನು ಜನರು ಕಾತರದಿಂದ ಎದುರು ನೋಡುತ್ತಿರುತ್ತಾರೆ ಈ ಹಬ್ಬವು ವಿನೋದ, ನಗು,ಆಟ ಕ್ಷಮಿಸುವ ಮತ್ತು ಮರೆತುಬಿಡುವ ಹಬ್ಬವಾಗಿದೆ.

ಫಾಲ್ಗುಣಿ ಮಾಸದಲ್ಲಿ (ಹಿಂದು ಕ್ಯಾಲೆಂಡರ್) ಆಚರಿಸಲಾಗುವ ಹೋಳಿಯನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಮಧ್ಯೆ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಉತ್ತರಭಾರತದಲ್ಲಿ ಹೋಳಿಯನ್ನು ವೈಭವ ಮತ್ತು ಪ್ರದರ್ಶನದಿಂದ ಆಚರಿಸಲಾದರೂ ಭಾರತದ ಇತರ ಭಾಗಗಳಲ್ಲಿಯೂ ಈ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಅನುಗುಣವಾಗಿ ದೇಶದಾದ್ಯಂತ ವಿವಿಧ ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಈ ಹಬ್ಬಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳು, ಪುರಾಣಗಳು ಮತ್ತು ಸಿದ್ದಾಂತಗಳನ್ನು ಹೊಣೆಯಲಾಗುತ್ತದೆ. ಪಾಶ್ಚಾತ್ಯ ದೇಶಗಳಲ್ಲಿಯೂ ಕೂಡಾ ಹೋಳಿಯು ಪ್ರಸಿದ್ದಿಯನ್ನು ಪಡೆಯುತ್ತಿದೆ. ಮತ್ತು ಯು ಎಸ್, ಯು ಕೆ , ಇಂಡೋನೇಷ್ಯಾ ಮತ್ತು ಮಾರಿಷಸ್ ನಲ್ಲಿಯೂ ಕೂಡಾ ಹೋಲಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅನೇಕ ವಿಶ್ವ ಪ್ರರ್ಯಟನಾಗಾರರು ವಿಶೇಷವಾಗಿ ಭಾರತಕ್ಕೆ ಭೇಟಿ ಕೊಡುವವರು ಹೋಳಿ ಹಬ್ಬದಲ್ಲಿ ಮತ್ತು ಭಾರತದ ಸಂಸ್ಕೃತಿಯಲ್ಲಿ ಭಾಗಿಯಾಗಲು ಇಚ್ಚಿಸುತ್ತಾರೆ.

ಈ ವರ್ಷ ಅಂದರೆ 2019 ರಲ್ಲಿ ಮಾರ್ಚ್ 20ಮತ್ತು 21ನೇ ತಾರೀಕಿನಂದು ಭಾರತದಲ್ಲಿ ಆಚರಿಸಲಾಗುತ್ತದೆ. 2019ರಲ್ಲಿ ಭಾರತದಲ್ಲಿ ಹೋಳಿಯನ್ನು ವೈಭವದಿಂದ ಆಚರಿಸುವ ಐದು ಪ್ರಮುಖ ಸ್ಥಳಗಳ ಬಗ್ಗೆ ಓದಿ. ಈ ಜಾಗಗಳು ಹೋಳಿ ಆಚರಣೆಯನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಆಚರಿಸುತ್ತವೆ.

ಬರ್ಸಾನಾ

ಬರ್ಸಾನಾ

PC: Narender

ಉತ್ತರಪ್ರದೇಶದಲ್ಲಿ ಆಚರಿಸಲ್ಪಡುವ ಬರ್ಸಾನಾ ಹೋಳಿ ಆಚರಿಸುವ ಒಂದು ಜನಪ್ರೀಯ ಸ್ಥಳವಾಗಿದೆ ಏಕೆಂದರೆ ಇಲ್ಲಿ ವಿಶೇಷವಾಗಿ ಹೋಳಿಯನ್ನು ಲಾತ್ಮಾರ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಇದನ್ನು ಪಾರಂಪರಿಕ ಲಾತ್ ಅಥವಾ ಕೋಲುಗಳಿಂದ ಆಡಲಾಗುತ್ತದೆ.

ಲಾತ್ಮಾರ್ ಹೋಳಿಯು ರಾಧಾ ಕೃಷ್ಣರ ದಂತ ಕಥೆಗಳಿಗೆ ಸಂಬಂಧಿಸಿದೆ. ಕೃಷ್ಣ ಪರಮಾತ್ಮನು ನಂದಗಾವ್ ನಿಂದ ಬರ್ಸಾನಾದಲ್ಲಿರುವ ತನ್ನ ಪ್ರೇಯಸಿ ರಾಧೆಯನ್ನು ಭೇಟಿ ಮಾಡಲು ಪ್ರಯಾಣಿಸಿದಾಗ ರಾಧೇ ಮತ್ತು ಗೋಪಿ ಅಥವಾ ಇತರ ಗೋಪಿಕಾ ಸ್ತ್ರೀಯರನ್ನು ತಮಾಷೆಗಾಗಿ ಲೇವಡಿ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ಕೃಷ್ಣನನ್ನು ಅಲ್ಲಿಂದ ಓಡಿಸಲು ಗೋಪಿಕಾ ಸ್ತ್ರೀಯರು ಲಾತ್ ಗಳನ್ನು ಬಳಸುತ್ತಿದ್ದರು ಎಂದು ನಂಬಲಾಗುತ್ತದೆ ಲಾತ್ಮಾರ್ ಹೋಳಿಯು ನಂದಾಗಾವ್ ಮತ್ತು ಬರ್ಸಾನಾದಲ್ಲಿ ಹೋಲಿಯ ದಿನಕ್ಕಿಂತ ಒಂದು ವಾರ ಮೊದಲೇ ಆಚರಿಸಲಾಗುತ್ತದೆ.

ಈ ವರ್ಷ ಅಂದರೆ 2018ರ ಲಾತ್ಮಾರ್ ಹೋಳಿಯು ಫ಼ೆಬ್ರವರಿ 24 ಕ್ಕೆ ಆಚರಣೆ ಮಾಡಲಾಗುತ್ತದೆ. ನಿಮಗೂ ಲಾತ್ಮಾರ್ ಹೋಲಿಯ ಪೆಟ್ಟು ಬೀಳಬಹುದು ಆದುದರಿಂದ ಜಾಗರೂಕರಾಗಿರಿ.

ಮಥುರಾ ಮತ್ತು ವೃಂದಾವನ

ಮಥುರಾ ಮತ್ತು ವೃಂದಾವನ

PC: J.S. Jaimohan

ಅವಳೀ ಪಟ್ಟಣಗಳಾದ ಮಥುರಾ ಮತ್ತು ವೃಂದಾವನ್ ಗೆ ಸಾಂಪ್ರದಾಯಿಕ ಹೋಳಿಯನ್ನು ಆಚರಿಸಲು ಭೇಟಿ ಕೊಡಿ. ದೇವಾಲಯಗಳೇ ಪ್ರಧಾನವಾಗಿರುವ ಈ ಪಟ್ಟಣವು ಶ್ರೀ ಕೃಷ್ಣ ಪರಮಾತ್ಮನು ಹುಟ್ಟಿದ ಮತ್ತು ಬೆಳೆದ ಸ್ಥಳವಾಗಿದೆ. ಕೃಷ್ಣನ ಗೌರವಾರ್ಥವಾಗಿ ಆಚರಿಸುವ ಹೋಳಿಯನ್ನುಸಾಮಾನ್ಯವಾಗಿ ಬೇರೆ ಸ್ಥಳಗಳಲ್ಲಿ ಆಚರಿಸಿದರೆ ಈ ಎರಡು ಅವಳಿ ಪಟ್ಟಣಗಳಲ್ಲಿ ಮತ್ತು ಇಲ್ಲಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹದಿನೈದು ದಿನಗಳಿಗಿಂತಲೂ ಹೆಚ್ಚಿನ ಸಮಯಗಳವರೆಗೂ ಆಚರಿಸಲಾಗುತ್ತದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಮಥುರಾ ಮತ್ತು ವೃಂದಾವನ್ ಗೆ ಭೇಟಿ ಕೊಟ್ಟರೆ ಇಲ್ಲಿಯ ವಿಶೇಷ ಪೂಜೆಗಳಲ್ಲಿ ಕೂಡಾ ಭಾಗವಹಿಸಬಹುದು ಮತ್ತು ಅನೇಕ ಸಾಂಸ್ಕೃತಿಕ ಪದ್ದತಿಗಳು ಮತ್ತು ಆಚರಣೆಗಳನ್ನು ಮಾಕನ್ ಚೋರ್ ಅಥವಾ ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುವ ಶ್ರೀಕೃಷ್ಣನ ಗೌರವಾರ್ಥವಾಗಿ ಆಚರಿಸುವುದನ್ನು ಕಾಣಬಹುದಾಗಿದೆ.

ಶಾಂತಿನಿಕೇತನ್

ಶಾಂತಿನಿಕೇತನ್

PC: Partho

ಬಸಂತ್ ಉತ್ಸವ್ ಅಥವ ವಸಂತ್ ಉತ್ಸವ ( ವಸಂತದ ಹಬ್ಬ) ಎಂದು ಕರೆಯಲಾಗುವ ಶಾಂತಿನಿಕೇತನ್ ಬೊಲ್ಪುರ್ ಮತ್ತು ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುವ ಈ ಹಬ್ಬವು ಪ್ರಖ್ಯಾತ ಕವಿ ರಬೀಂದ್ರನಾಥ ಟಾಗೋರ್ ಅವರಿಂದ ಪರಿಚಯಿಸಲಾಯಿತು.

ಈ ಹಬ್ಬವು ಒಂದು ಬಂಗಾಳಿ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೆನಿಸಿದೆ ಆದುದರಿಂದ ಬಸಂತ ಉತ್ಸವದ ಸಂದರ್ಭದಲ್ಲಿ ಈ ಸುಂದರವಾದ ಶಾಂತಿ ನಿಕೇತನದ ಪಟ್ಟಣಕ್ಕೆ ಕೇವಲ ಹೋಳಿ ಉತ್ಸವದಲ್ಲಿ ಮಾತ್ರವಲ್ಲದೆ ಇಲ್ಲಿನ ಬಂಗಾಳೀ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಪಾಲ್ಗೊಳ್ಳಲು ಭೇಟಿ ಕೊಡಲು ಸೂಕ್ತ ಸಮಯವಾಗಿದೆ.

ಪ್ರಕಾಶಮಾನವಾದ ಬೇಸಿಗೆಯಲ್ಲಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿದ ಶಾಂತಿನಿಕೇತನದ ರವೀಂದ್ರನಾಥ ಠಾಗೋರರಿಂದ ಸ್ಥಾಪಿತವಾದ ವಿಶ್ವಭಾರತೀ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಟಾಗೋರರ ಕೃತಿಗಳಿಗೆ ಹಾಡು ಮತ್ತು ನೃತ್ಯ ಮತ್ತು ಅನೇಕ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುತ್ತಾರೆ.

ಮುಂಬೈ

ಮುಂಬೈ

PC: Steven Gerner

ಆಚರಣೆಯ ವಿಷಯ ಬಂದಾಗ ಮುಂಬೈ ಹಿಂದೆ ಉಳಿಯಲು ಸಾಧ್ಯವೇ? ಜೀವಂತ ನಗರವಾದ ಮಹಾರಾಷ್ಟ್ರದ ಮುಂಬೈಯುಎಲ್ಲಾ ಉತ್ಸವಗಳನ್ನು ಆಚರಿಸುವ ಉತ್ಸಾಹಿಗಳು ಮತ್ತು ಉತ್ಸಾಹಕ್ಕಾಗಿ ಹೆಸರು ವಾಸಿಯಾದ ನಗರವಾಗಿದೆ. ಮುಂಬೈ ಯ ಹೋಳಿಯೂ ಸಹ ಈ ನಗರದ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿಸುವ ಸಂಗತಿಗಳಲ್ಲೊಂದಾಗಿದೆ.

ವೈಯಕ್ತಿಕ ಆಯ್ಕೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ನಗರದಾದ್ಯಂತ ಅನೇಕ ಸ್ಥಳಗಳಲ್ಲಿ ವರ್ಣರಂಜಿತ ಮತ್ತು ಸಂಗೀತ ಹೋಳಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಹೆಚ್ಚಿನ ಸ್ಥಳಗಳಲ್ಲಿ ಡಿಜೆ, ಆಹಾರ ಮಳಿಗೆಗಳು, ಮಳೆ ನೃತ್ಯ, ಮಾರುಕಟ್ಟೆಗಳು, ವಿನೋದ ಆಟಗಳು ಮತ್ತು ಮಕ್ಕಳು ಮತ್ತು ವಯಸ್ಕರಿಗೆ ಹೆಚ್ಚಿನ ಚಟುವಟಿಕೆಗಳು ಇರುತ್ತವೆ. ಆದುದರಿಂದ 2018ರ ಹೋಲಿಯ ಆಚರಣೆಯನ್ನು ಆಚರಿಸಲು ಎಲ್ಲಿಗೆ ಪ್ರಯಾಣ ಮಾಡಬೇಕೆಂದಿರುವಿರಿ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X