Search
  • Follow NativePlanet
Share
» »ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು

ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು

By Vijay

ಸ್ತ್ರೀ ರೂಪದ ಶಕ್ತಿ ದೇವತೆಗಳನ್ನು ಅಪಾರವಾಗಿ ಆರಾಧಿಸಲಾಗುತ್ತದೆ ಭಾರತದಲ್ಲಿ. ಯಾವ ಸ್ಥಳವೆ ಇರಲಿ ದೇವಿಗೆ ಮುಡಿಪಾದ ದೇವಾಲಯ ಒಂದಾದರೂ ಇರಲೇಬೇಕು. ಅಲ್ಲದೆ ಶಕ್ತಿ ದೇವಿಯಾಗಿ ದೇವಿಯ ಹಲವು ಅವತಾರಗಳ, ಪ್ರಕಾರಗಳ ವಿವಿಧ ದೇವಸ್ಥಾನಗಳಿರುವುದನ್ನು ಎಲ್ಲೆಡೆ ಕಾಣಬಹುದು.

ಶಕ್ತಿ ಸ್ವರೂಪಿಣಿಯ ಅದ್ಭುತ ದೇವಾಲಯಗಳು

ಭಾರತದಲ್ಲಿ ಆರಾಧಿಸಲಾಗುವ ಪ್ರಮುಖ ಶಕ್ತಿ ದೇವಿಗಳಲ್ಲಿ ರೇಣುಕಾ ದೇವಿಯೂ ಸಹ ಒಬ್ಬಳು. ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇಣುಕಾ ದೇವಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ ಹಾಗೂ ಈ ದೇವಿಗೆ ಮುಡಿಪಾದ ಸಾಕಷ್ಟು ದೇವಾಲಯಗಳು ಈ ಭಾಗಗಳಲ್ಲಿ ಕಂಡುಬರುತ್ತವೆ.

ಭಕ್ತರಿಂದ ಜಗದಂಬೆ ಎಂದೆ ಕರೆಯಲ್ಪಡುವ ರೇಣುಕಾ ದೇವಿಯ ಕೆಲವೆ ಕೆಲವು ಪ್ರಮುಖ ದೇವಾಲಯಗಳು ಹಾಗೂ ಕೆರೆಯ ಕುರಿತು ಈ ಲೇಖನದ ಮೂಲಕ ತಿಳಿಯಿರಿ. ರೇಣುಕಾ ದೇವಿಯು ಒಬ್ಬ ಪ್ರಭಾವಿ ಹಾಗೂ ಶಕ್ತಿಶಾಲಿ ದೇವಿ ಎಂಬ ಹೆಸರುಗಳಿಸಿರುವುದರಿಂದ ಈ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಅಪಾರ. ನಿಮಗೆ ಅವಕಾಶ ದೊರೆತರೆ ಖಂಡಿತವಾಗಿಯೂ ಭೇಟಿ ನೀಡಿ.

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಾಲೇಗಾಂವ್ ತಾಲೂಕಿನಲ್ಲಿರುವ ಚಾಂದ್ವಾಡ್ ಗ್ರಾಮವು ರೇಣುಕಾ ದೇವಿಯ ಮಂದಿರದಿಂದಾಗಿ ಹೆಚ್ಚು ಖ್ಯಾತಿಗಳಿಸಿದೆ. ಈ ಒಂದು ಸ್ಥಳದಲ್ಲೆ ರೇಣುಕಾ ದೇವಿಯ ಶಿರ ಭಾಗ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: Mannspaarth

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ದಂತಕಥೆಯ ಪ್ರಕಾರ, ಪರಶುರಾಮನು ಜಮದಗ್ನಿ ಋಷಿ ಮತ್ತು ರೇಣುಕಾ ದೇವಿಯ ಸಂತಾನ ಹಾಗೂ ತಂದೆಯ ಮಾತು ಮೀರದ ನಿಷ್ಠಾವಂತ ಪುತ್ರ. ಒಮ್ಮೆ ಪ್ರಸಂಗವೊಂದು ಜರುಗಿ ತಂದೆಯ ಆದೇಶದಂತೆ ತನ್ನ ತಾಯಿಯ ಶಿರವನ್ನೆ ಕಡಿಯಬೇಕಾಗುತ್ತದೆ. ಆ ರುಂಡಬಿದ್ದ ಸ್ಥಳವೆ ಇಂದಿನ ಚಾಂದ್ವಾಡ್ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: wikipedia

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಮಾಹೂರ್ ರೇಣುಕಾ ದೇವಿ ದೇವಾಲಯ : ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಮಾಹೂರ್ಗಡ್ ಅಥವಾ ಮಾಹೂರ್ ಪಟ್ಟಣವು ತನ್ನಲ್ಲಿರುವ ಶಕ್ತಿಶಾಲಿ ರೇಣುಕಾ ದೇವಿಯ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಈ ಸ್ಥಳದಲ್ಲೆ ದತ್ತಾತ್ರೇಯರು ಜನ್ಮ ತಳೆದರೆಂಬ ಪ್ರತೀತಿಯಿದೆ. ಮಹಾರಾಷ್ಟ್ರದಲ್ಲಿರುವ ಮೂರು ಶಕ್ತಿಪೀಠಗಳ ಪೈಕಿ ಇದು ಒಂದಾಗಿದೆ. ಕಥೆಯ ಪ್ರಕಾರ, ಈ ಒಂದು ಸ್ಥಳದಲ್ಲಿ ಪರಶುರಾಮನು ತನ್ನ ತಾಯಿಯ ರುಂಡ ಕಡಿದಾಗ ಅವಳ ದೇಹ ಭಾಗ ಬಿದ್ದಿತ್ತೆನ್ನಲಾಗಿದೆ.

ಚಿತ್ರಕೃಪೆ: V.narsikar

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಗಾಜಿನ ರೇಣುಕಾ ಮಂದಿರ : ಮಹಾರಾಷ್ಟ್ರದ ಪ್ರಖ್ಯಾತ ಧಾರ್ಮಿಕ ಆಕರ್ಷಣೆಯಾದ ಶನಿ ಶಿಂಗ್ನಾಪುರದ ಬಳಿಯೆ ರೇಣುಕಾ ದೇವಿಗೆ ಮುಡಿಪಾದ ಈ ಸುಂದರ ದೇವಾಲಯವಿದೆ. ಸ್ಥಳೀಯ ವಲಯದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಈ ದೇವಾಲಯವನ್ನು ಅಹ್ಮದ್ ನಗರದ ರೇಣುಕಾ ದರ್ಬಾರ್ ದೇವಾಲಯ ಎಮ್ದೆ ಕರೆಯಲಾಗುತ್ತದೆ.

ಚಿತ್ರಕೃಪೆ: Booradleyp1

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಈ ದೇವಾಲಯ ಸೊನೈ ಎಂಬ ಗ್ರಾಮದಲ್ಲಿದ್ದು ಈ ಗ್ರಾಮವು ಶನಿ ಶಿಂಗ್ನಾಪುರದಿಂದ ಇಪ್ಪತ್ತು ನಿಮಿಷಗಳ ಪ್ರಯಾಣಾವಧಿಯಷ್ಟು ದೂರದಲ್ಲಿದೆ.

ಚಿತ್ರಕೃಪೆ: Booradleyp1

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಕಾಡೇಗಾಂವ್ ರೇಣುಕಾ ಮಂದಿರ : ಪ್ರಭಾವಶಾಲಿ ದೇವಿ ಎಂದೆ ಸ್ಥಳೀಯವಾಗಿ ಗುರುತಿಸಲ್ಪಡುವ ರೇಣುಕಾ ದೇವಿಯ ಈ ದೇವಾಲಯವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್ ಎಂಬ ಪಟ್ಟಣದಲ್ಲಿದೆ.

ಚಿತ್ರಕೃಪೆ: Nagarick

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಶ್ರೀ ಎಲ್ಲಮ್ಮ ದೇವಿ ದೇವಾಲಯ : ಸಾಮಾನ್ಯವಾಗಿ ಕರ್ನಾಟಕದ ಉತ್ತರದಲ್ಲಿ ರೇಣುಕಾ ದೇವಿಯನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ ಹಾಗೂ ಎಲ್ಲಮ್ಮ ಎಂಬ ಹೆಸರಿನಿಂದಲೆ ಗುರುತಿಸಲಾಗುತ್ತದೆ. ಬಾದಾಮಿಯು ಬನಶಂಕರಿ ದೇವಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದರೂ ಇಲ್ಲಿ ಚಾಲುಕ್ಯರಿಂದ ನಿರ್ಮಾಣವಾದ ರೇಣುಕಾ ದೇವಿಯ ದೇವಸ್ಥಾನ ಐತಿಹಾಸಿಕ ಮಹತ್ವಪಡೆದ ದೇವಾಲಯವಾಗಿದೆ.

ಚಿತ್ರಕೃಪೆ: rajeshodayanchal

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಸವದತ್ತಿ ಎಲ್ಲಮ್ಮ : ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದ್ದು, ಬೆಳಗಾವಿಯ ಪೂರ್ವ ದಿಕ್ಕಿಗೆ (ಹೆಚ್ಚು ಕಡಿಮೆ ಆಗ್ನೇಯ) ಸುಮಾರು 78 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ/ ಎಲ್ಲಮನ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಹಾಗೂ ಎಲ್ಲಮ್ಮ ದೇವಿ ಒಂದೆಯಾದರೂ ಒಂದು ರೋಚಕ ಅಂಶವು ಇಬ್ಬರನ್ನೂ ಪ್ರತ್ಯೇಕಿಸುತ್ತದೆ. ಆ ಕಥೆಯ ಪ್ರಕಾರವಾಗಿ, ಪರಶುರಾಮ ತಂದೆಯ ಆದೇಶದಂತೆ ತನ್ನ ತಾಯಿಯ ಶಿರಚ್ಚೇದ ಮಾಡ ಹೊರಟಾಗ ಆಕೆಯು ಓಡಿ ಒಬ್ಬ ಕೆಳ ವರ್ಗದ ಮಹಿಳೆಯ ಹತ್ತಿರ ರಕ್ಷಣೆ ಬಯಸಿ ಬರುತ್ತಾಳೆ. ಆದರೆ ಪರಶುರಾಮ ಇಬ್ಬರ ರುಂಡಗಳನ್ನೂ ಕಡಿದು ನಂತರ ನಡೆದ ಘಟನೆಯಲ್ಲಿ ತಾಯಿಯನ್ನು ಮರಳಿ ಪಡೆದರೂ ರುಂಡಗಳನ್ನು ತಪ್ಪಾಗಿ ಬೇರೆ ಬೇರೆ ದೇಹಗಳ ಮೇಲೆ ಜೋಡಿಸುತ್ತಾನೆ. ಹೀಗಾಗಿ ರಕ್ಷಿಸಲು ಬಂದ ಮಹಿಳೆಯು ಎಲ್ಲಮ್ಮನಾಗಿರುವಳೆಂದು ಹೇಳಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Jkwikiuser

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಪಡೈವೀಡು ರೇಣುಗಾಂಬಾಳ್ ದೇವಾಲಯ : ಸ್ವಯಂಭು ಎಂದು ಹೇಳಲಾಗುವ ರೇಣುಕಾ ದೇವಿಯ ಈ ದೇವಾಲಯ ತಮಿಳುನಾಡಿನ ತೊಂಡೈನಾಡು ಭಾಗದಲ್ಲಿದೆ. ಇದೊಂದು ಮುಖ್ಯ ಶಕ್ತಿಸ್ಥಳವೆಂದು ಹೇಳಲಾಗುತ್ತದೆ. ತಿರುವಣ್ಣಾಮಲೈ ಜಿಲ್ಲೆಯ ಪಡವೇಡು ಅಥವಾ ಪಡೈವೀಡು ಗ್ರಾಮದಲ್ಲಿದೆ.

ಚಿತ್ರಕೃಪೆ: Ragunathanp

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ತೀರ್ಥ ಹಾಗೂ ದೇವಾಲಯ : ಹಿಮಾಚಲ ಪ್ರದೇಶ ರಾಜ್ಯದ ಸಿರ್ಮೌರ್ ಜಿಲ್ಲೆಯಲ್ಲಿರುವ ರೇಣುಕಾ ಕೆರೆ ಒಂದು ಕೌಟುಂಬಿಕ ಹಾಗೂ ಧಾರ್ಮಿಕ ಆಕರ್ಷಣೆಯಾಗಿದೆ. ಈ ಕೆರೆಯು ದಡದಲ್ಲಿರುವ ರೇಣುಕಾ ದೇವಾಲಯಕ್ಕೂ ಪ್ರಸಿದ್ಧವಾಗಿದೆ. ನವಂಬರ್ ಸಮಯದಲ್ಲಿ ಪ್ರಭೋದಿನಿ ಏಕಾದಶಿಯ ಸಂದರ್ಭದಲ್ಲಿ ಐದು ದಿನಗಳ ಕಾಲ ಇಲ್ಲಿ ಅದ್ದೂರಿಯಾಗಿ ಉತ್ಸವ ನಡೆಯುತ್ತದೆ.

ಚಿತ್ರಕೃಪೆ: Harvinder Chandigarh

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಈ ಜಾತ್ರೆಯು ರೇಣುಕಾ ದೇವಿಯ ಮಗ ಪರಶುರಾಮನು ತನ್ನ ತಾಯಿಯನ್ನು ಭೇಟಿ ಮಾಡಲು ಬರುವುದರ ಸಂಕೇತವಾಗಿದೆ. ಇನ್ನುಳಿದಂತೆ ದೇವಾಲಯ ಪಕ್ಕದ ಕೆರೆಯು ರೇಣುಕಾ ತೀರ್ಥ ಎಂದು ಗುರುತಿಸಲ್ಪಡುತ್ತದೆ. ಇದು ರಾಜ್ಯದ ಅತಿ ದೊಡ್ಡ ಕೆರೆಯಾಗಿದೆ ಹಾಗೂ ಇಲ್ಲಿ ದೋಣಿ ವಿಹಾರದ ಸೌಲಭ್ಯವಿದೆ.

ಚಿತ್ರಕೃಪೆ: Harvinder Chandigarh

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ಪುರಾಣಗಳ ಪ್ರಕಾರ ರೇಣುಕಾ ತೀರ್ಥ ವಿಷ್ಣುವಿನ ಆರನೇಯ ಅವತಾರವಾದ ಪರಶುರಾಮರ ಜನ್ಮಸ್ಥಾನವಾಗಿದ್ದು ಸಾಕಷ್ಟು ಪಾವಿತ್ರ್ಯತೆಯನ್ನು ಪಡೆದಿದೆ ಎನ್ನಲಾಗಿದೆ.

ಚಿತ್ರಕೃಪೆ: Swapnil Kashyap

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಎಲ್ಲಮ್ಮನ ದೇವಾಲಯಗಳು:

ರೇಣುಕಾ ಕೆರೆಯ ಒಂದ್ ಭಾಗದಲ್ಲೆ ಇನ್ನೊಂದು ಚಿಕ್ಕ ಕೊಳವಿದ್ದು ಅದನ್ನು ಪರಶುರಾಮರ ಸರೋವರ ಎಂದು ಕರೆಯಲಾಗುತ್ತದೆ. ಇದರ ಬಳಿ ಚಿಕ್ಕ ಬೆಟ್ಟವೊಂದಿದ್ದು ಅಲ್ಲಿ ಪರಶುರಾಮರು ಧ್ಯಾನ ಮಾಡುತ್ತಿದ್ದರೆನ್ನಲಾಗಿದೆ.

ಚಿತ್ರಕೃಪೆ: Harvinder Chandigarh

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X