Search
  • Follow NativePlanet
Share
» »ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು

ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು

By Vijay

ಆಂಜನೇಯ ಅಥವಾ ಹನುಮನು ಧೈರ್ಯ, ಶಕ್ತಿ ಹಾಗೂ ಬಲವನ್ನು ಕರುಣಿಸುವ ಪ್ರಮುಖ ದೇವ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಬಲು ಅಚ್ಚು ಮೆಚ್ಚಿನ ದೇವ ಆಂಜನೇಯ. ಅಂತೆಯೆ ಭಾರತದಾದ್ಯಂತ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹನುಮನಿಗೆ ಮುಡಿಪಾದ ದೇವಾಲಯಗಳನ್ನು ಕಾಣಬಹುದು.

ಎಕ್ಸ್ ಪೆಡಿಯಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

ಅದರಂತೆ ದಕ್ಷಿಣ ಭಾರತದಲ್ಲಿಯೂ ಸಹ ಹನುಮನಿಗೆ ಮುಡಿಪಾದ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ದೇಗುಲಗಳಿವೆ. ಆದರೆ ಸ್ಥಳ ಪ್ರಭಾವ, ದಂತಕಥೆ, ಪೌರಾಣಿಕತೆಯ ಹಿನ್ನಿಲೆಗಳಿಗೆ ಅನುಗುಣವಾಗಿ ಕೆಲ ಕ್ಷೇತ್ರಗಳು ಸಾಕಷ್ಟು ಮಹತ್ವ ಪಡೆದ ಸ್ಥಳಗಳಾಗಿದ್ದು ಹನುಮನ ದೇಗುಲಗಳನ್ನು ಹೊಂದಿದೆ. ಈ ಲೇಖನವು ಕೆಲವೆ ಕೆಲವು ಆಯ್ದ ದಕ್ಷಿಣ ಭಾರತದ ಹನುಮನ ದೇವಸ್ಥಾನಗಳ ಕುರಿತು ತಿಳಿಸುತ್ತದೆ.

ವಿಶೇಷ ಲೇಖನ : ಶಿವನ ಅನನ್ಯ ದೇವಸ್ಥಾನಗಳು

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಕೋರಂಟಿ ಹನುಮಾನ ಮಂದಿರ : ಕರ್ನಾಟಕದ ಕಲಬುರಗಿ (ಗುಲಬರ್ಗಾ) ಪಟ್ಟಣದಲ್ಲಿರುವ ಕೋರಂಟಿ ಆಂಜನೇಯನ ದೇವಸ್ಥಾನವು ನಗರದ ಪ್ರಮುಖ ದೇವಸ್ಥಾನವಾಗಿದೆ. 1957 ರಲ್ಲಿ ಚಿಕ್ಕದಾಗಿ ನಿರ್ಮಾಣವಾದ ಈ ದೇಗುಲವು ಕಾಲಕಳೆದಂತೆ ಅಪಾರ ಜನಪ್ರೀಯತೆಗಳಿಸಿ ಇಂದು ದೊಡ್ಡದಾದ ದೇವಸ್ಥಾನವಾಗಿದೆ. ಇದನ್ನು ಕೋರಂಟಿ ಗ್ಯಾರಂಟಿ ಹನುಮಾನ ದೇವಸ್ಥಾನ ಎಂದೂ ಸಹ ಕರೆಯಲಾಗುತ್ತದೆ ಕಾರಣ ಭಕ್ತರ ನಿವೇದಿಸಿಕೊಂಡ ಆಸೆಗಳು ಗ್ಯಾರಂಟಿ (ಖಂಡಿತವಾಗಿ) ಯಾಗಿ ಈಡೇರುತ್ತವೆ ಎಂದು ನಂಬಲಾಗಿದೆ. ನಗರದ ಪುಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ಬಳಿ ಈ ದೇವಸ್ಥಾನ ಸ್ಥಿತವಿದೆ.

ಚಿತ್ರಕೃಪೆ: SridharSaraf

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಬೆಳಗಾವಿಯ ಖಾನಾಪುರ ಬಳಿಯಿರುವ ಹಬ್ಬನಹಟ್ಟಿ ಎಂಬ ಗ್ರಾಮದಲ್ಲಿರುವ ನದಿಯ ತಟದ ಆಂಜನೇಯ ದೇವಸ್ಥಾನ. ಬೆಳಗಾವಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾಕಷ್ಟು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸುತ್ತಿರುತ್ತಾರೆ.

ಚಿತ್ರಕೃಪೆ: Smkeshkamat

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಪಟ್ಟಣದ ಹೃದಯ ಭಾಗದಲ್ಲಿ ನೆಲೆಸಿರುವ ಆಂಜನೇಯ ದೇವಸ್ಥಾನವು ಕೇವಲ ನಗರದಲ್ಲಿ ಮಾತ್ರವೆ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. ವಿಶೇಷವೆಂದರೆ ಇಲ್ಲಿನ ಆಂಜನೇಯ ಸ್ವಾಮಿಯನ್ನು ಕೇವಲ ಹಿಂದೂ ಧರ್ಮದವರು ಮಾತ್ರವಲ್ಲದೆ ಮುಸ್ಲಿಮ್, ಕ್ರಿಶ್ಚಿಯನ್ ಹಾಗೂ ಇತರರೂ ಸಹ ಪೂಜಿಸುತ್ತಾರೆ.

ಚಿತ್ರಕೃಪೆ: Vaikoovery

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ತುಮಕೂರು ನಗರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನವು ಬಹು ಪ್ರಮುಖವಾದ ದೇವಸ್ಥಾನವಾಗಿದೆ. ಈ ದೇವಸ್ಥಾನದ ಪ್ರವೇಶ ದ್ವಾರದಲ್ಲಿಯೆ 75 ಅಡಿಗಳಷ್ಟು ಎತ್ತರದ ಆಂಜನೇಯ ಬೃಹತ್ ಪ್ರತಿಮೆಯನ್ನು ಕಾಣಬಹುದು. ಈ ಪ್ರತಿಮೆಯನ್ನು 2005 ರಲ್ಲಿ ಉದ್ಘಾಟಿಸಲಾಯಿತು. ಇದು ಬೆಂಗಳೂರು - ಪುಣೆ ರಸ್ತೆಯ ಬದಿಯಲ್ಲಿ ನೆಲೆಸಿದ್ದು ಪ್ರವಾಸಿಗರ ಗಮನ ಸೆಳೆಯುತ್ತದೆ.

ಚಿತ್ರಕೃಪೆ: Manjeshpv

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಬುದ್ದಿನ್ನಿ ಬೃಂದಾವನದಲ್ಲಿರುವ ಹನುಮಾನ ಮಂದಿರ. ಬುದ್ದಿನ್ನಿ ಎನ್ನುವುದು ಒಂದು ಗ್ರಾಮದ ಹೆಸರಾಗಿದ್ದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಇಲ್ಲಿರುವ ಮಠವು ಕಣ್ವ ಮಠವನ್ನು ಪ್ರತಿನಿಧಿಸುತ್ತದೆ.

ಚಿತ್ರಕೃಪೆ: Subbyseeta13

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಆಂಧ್ರದ ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿರುವ ಪ್ರಸಿದ್ಧ ಶಿರಡಿ ಸಾಯಿ ದೇವಸ್ಥಾನ. ಈ ದೇವಸ್ಥಾನದ ಒಂದನೆಯ ಮಹಡಿಯಲ್ಲಿ ಸಾಯಿಯ ದೇವಸ್ಥಾನವಿದ್ದರೆ ನೆಲ ಮಹಡಿಯಲ್ಲಿ ಹನುಮನ ಮಂದಿರವನ್ನು ಕಾನಬಹುದಾಗಿದೆ.

ಚಿತ್ರಕೃಪೆ: Dr Murali Mohan Gurram

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಮೌನಗಿರಿ ಅಭಯ ಆಂಜನೇಯ ದೇವಸ್ಥಾನವು ಆಂಧ್ರ ಅನಂತಪುರ ನಗರದಲ್ಲಿದೆ. 36 ಅಡಿಗಳಷ್ಟು ಎತ್ತರದ ಈ ಸುಂದರ ಆಂಜನೇಯನ ಪ್ರತಿಮೆಯನ್ನು ಏಕ ಶಿಲೆಯಲ್ಲಿ ಕೆತ್ತಲಾಗಿದೆ. ಆಂಧ್ರ ಸಂಸ್ಕೃತಿ ಸಂಪ್ರದಾಯಗಳ ಛಾಪನ್ನು ಹೊಂದಿರುವ ಈ ದೇವಸ್ಥಾನವು ಸಾಕಷ್ಟು ಜನಮನ್ನಣೆ ಗಳಿಸಿದೆ.

ಚಿತ್ರಕೃಪೆ: Mounagiriashram

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ಕರ್ಮಾನ್ ಘಾಟ್ ನಲ್ಲಿರುವ ಆಂಜನೇಯನ ಈ ದೇವಸ್ಥಾನವು ನಗರದ ಆಂಜನೇಯನ ಭಕ್ತರ ಅತಿ ಪ್ರಮುಖ ದೇವಸ್ಥಾನವಾಗಿದೆ. 12 ನೇಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ನಗರದ ಅತಿ ಪ್ರಾಚೀನ ದೇವಸ್ಥಾನಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Sriharsha Rao

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಆಂಧ್ರದ ಚಿತ್ತೂರು ಜಿಲ್ಲೆಯ ಅರಗೊಂಡಾ ಹಳ್ಳಿಯಲ್ಲಿ ನೆಲೆಸಿರುವ ಅರ್ಧಗಿರಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನವು ಒಂದು ಪ್ರಸಿದ್ಧ ಕ್ಷೇತ್ರವಾಗಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಹನುಮನು ಸಂಜೀವಿನಿ ಬೆಟ್ಟವನ್ನು ಒಯ್ಯುತ್ತಿರುವಾಗ ಅದರ ಅರ್ಧ ಭಾಗವು ಈ ಸ್ಥಳದಲ್ಲಿ ಬಿದ್ದಿದುದರಿಂದ ಇದಕ್ಕೆ ಅರ್ಧಗಿರಿ ಎಂಬ ಹೆಸರು ಬಂದಿತು. ಹನುಮ ಜಯಂತಿಯ ಸಂದರ್ಭದಲ್ಲಿ ಸಾಕಷ್ಟು ಜನಸಾಗರ ಈ ದೇವಸ್ಥಾನಕ್ಕೆ ಹರಿದು ಬರುತ್ತದೆ.

ಚಿತ್ರಕೃಪೆ: Bhanutpt

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಸ್ಥಾನ : ಆಂಧ್ರದ ಅನಂತಪುರ ಜಿಲ್ಲೆಯ ಗುಂತಕಲ್ ನ ಕಾಸಾಪುರಂ ಬಳಿಯಿರುವ ಆಂಜನೇಯನ ಈ ದೇವಸ್ಥಾನವು ಬಹು ಪ್ರಖ್ಯಾತವಾಗಿದೆ. ರಾಜ್ಯದೆಲ್ಲೆಡೆಯಿಂದ ಹಾಗೂ ದಕ್ಷಿಣ ಭಾರತದ ಇತರೆ ಸ್ಥಳಗಳಿಂದ ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ.

ಚಿತ್ರಕೃಪೆ: Sravankumar gtl

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಬೆಂಗಳೂರಿನ ಮೈಸೂರು ರಸ್ತೆಯ ಮೇಲೆ ಸ್ಥಿತವಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವು ನಗರದ ಪ್ರಮುಖ ಆಂಜನೇಯ ದೇವಸ್ಥಾನಗಳ ಪೈಕಿ ಒಂದಾಗಿದೆ. ಸ್ಥಳೀಯವಾಗಿ ಆಡಲಾಗುವ ಭಾಷೆ ಪ್ರಕಾರ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದು ಎಂದು ನಂಬಲಾಗಿದ್ದು ಈ ಆಂಜನೇಯನನ್ನು ಪ್ರಾರ್ಥಿಸಿದಾಗ ಅದರಿಮ್ದ ಮುಕ್ತ ಹೊಂದಬಹುದೆಂದು ಹೇಳಲಾಗುತ್ತದೆ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: amanderson2

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

'ಕೆರೆ ಆಂಜನೇಯ ದೇವಸ್ಥಾನ'. ಇದು ಶೃಂಗೇರಿ ಮಠದ ಪಶ್ಚಿಮಕ್ಕಿದೆ. ಹನುಮ ದೇವರಿಗೆ ಸಮರ್ಪಿತ ಈ ದೇವಾಲಯ, ಶಂಕರಾಚಾರ್ಯರು ಕಟ್ಟಿಸಿದ ಏಕೈಕ ಹನುಮನ ಗುಡಿ ಎಂದೂ ನಂಬಲಾಗಿದೆ. ಪ್ರವಾಸಿಗರು ಈ ದೇವಾಲಯವನ್ನು 27 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ತಲುಪಬಹುದು. ತಲುಪುತಿದ್ದ ಹಾಗೆಯೇ, ಪ್ರವಾಸಿಗರು ದೈತ್ಯ ಹನುಮನ ವಿಗ್ರಹ ಹಾಗು ಶಿವ ಮತ್ತು ಗಣಪತಿಯರ ಗುಡಿಗಳನ್ನು ಕಾಣಬಹುದು. ದೇವಸ್ಥಾನದ ಒಳಗಡೆ ಸ್ಥಾಪಿತವಾಗಿರುವ ಹನುಮನ ವಿಗ್ರಹವು ಬಲಗೈಯಿಂದ ಆಶೀರ್ವದಿಸುವ ಭಂಗಿಯಲಿದ್ದು ಎಡಗೈ ನಲ್ಲಿ ತಾವರೆ ಹೂ ಹಿಡಿದಿರುವುದನ್ನು ಕಾಣಬಹುದು. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: David Davies

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ದ್ವೈತ ಪಂಥವನ್ನು ಪರಿಪಾಲಿಸಿದ ಶ್ರೀ ಗುರು ರಾಘವೇಂದ್ರರಿಗೆ ಒಂದೊಮ್ಮೆ ತಪಸ್ಸನ್ನಾಚರಿಸುತ್ತಿರುವಾಗ ಹನುಮನು ಐದು ಮುಖಗಳ ಅವತಾರವನ್ನು ತಾಳಿ ದರ್ಶನ ಕೊಟ್ಟ. ತದನಂತರ ಗುರು ರಾಯರು ಆ ಪಂಚಮುಖಿ ಆಂಜನೇಯನ ವಿಗ್ರಹವನ್ನು ಅವರು ಧ್ಯಾನಿಸುತ್ತಿದ್ದ ಬೆಟ್ಟದ ಗುಹೆಯ ಬಂಡೆಯೊಂದರ ಮೇಲೆ ಚಿತ್ರಿಸಿದರು. ಅದೇ ಕ್ಷೇತ್ರ ಇಂದು ಪಂಚಮುಖಿ ಆಂಜನೇಯ ಕ್ಷೇತ್ರವಾಗಿ ಪ್ರಖ್ಯಾತವಾಗಿದೆ. ಈ ಕ್ಷೇತ್ರವಿರುವುದು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ. ಪಂಚಮುಖಿ ಕುರಿತು ತಿಳಿಯಿರಿ.

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಆಂಜನೇಯನ ಗುಡಿಯು, ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಕಾರಣ ಕೆಲ ದಶಕಗಳ ಹಿಂದೆ ಇಲ್ಲಿನ ಎಡಭಾಗಕ್ಕೆ ಮಾರೇನ ಹಳ್ಳಿ, ಬಲಭಾಗಕ್ಕೆ ಸಾರಕ್ಕಿ, ಮುಂದೆ ತಾಯಪ್ಪನ ಹಳ್ಳಿ, ಅದರ ಪಕ್ಕದಲ್ಲಿ ಗುರಪ್ಪನ ಪಾಳ್ಯ - ಹೀಗೆ ಹೆಚ್ಚು ರಾಗಿ ಬೆಳೆಯುತ್ತಿದ್ದ ಗ್ರಾಮೀಣ ಪ್ರದೇಶ ಹೆಚ್ಚಾಗಿದ್ದುದದ್ರಿಂದ ಇದಕ್ಕೆ ಈ ಹೆಸರು ಬಂದಿತು. ಚಿಕ್ಕದಾದ ಗುಡ್ಡದ ಮೇಲೆ ನೆಲೆಸಿರುವ ಆಂಜನೇಯನು ಬೆಂಗಳೂರು ಜನರನ್ನು ಸದಾ ಆಕರ್ಷಿಸುತ್ತಿರುತ್ತಾನೆ.

ಚಿತ್ರಕೃಪೆ: Rkrish67

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಬೆಂಗಳೂರಿನ ಪಕ್ಷಿಮ ದಿಕ್ಕಿನಲ್ಲಿರುವ ಒಂದು ಬಡಾವಣೆ ಮಹಾಲಕ್ಷ್ಮಿ ಲೇ ಔಟ್. ಇದು ಸಾಮನ್ಯವಾಗಿ ದೇವಾಲಯಗಳಿಗೆ ಪ್ರಸಿದ್ದಿ ಪಡೆದಿದೆ. ಮೆಜಸ್ಟಿಕ್ ನಿಂದ ಆರು ಕಿ.ಮೀ ದೂರದಲ್ಲಿರುವ ಈ ಬಡಾವಣೆ ರಾಜಾಜಿ ನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗು ಬಸವೇಶ್ವರ ನಗರಗಳಿಂದ ಸುತ್ತುವರೆದಿದೆ. ಇಲ್ಲಿರುವ 22 ಅಡಿಗಳಷ್ಟು ಎತ್ತರದ ಒಂದೇ ಕಲ್ಲಿನಲ್ಲಿ ಕೆತ್ತಲಾದ ಆಂಜನೇಯನ ವಿಗ್ರಹವಿರುವ ಮಂದಿರವು ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅಲ್ಲದೆ ಇಲ್ಲಿ ಆವಾಗಾವಾಗ ಧಾರವಾಹಿ ಇಲ್ಲ ಸಿನಿಮಾ ಚಿತ್ರೀಕರಣ ನಡೆಯುತ್ತಲೇ ಇರುತ್ತದೆ.

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಕೇರಳದ ಮಲ್ಲಪುರಂ ಜಿಲ್ಲೆಯ ಅಲತಿಯೂರ್ ನಲ್ಲಿರುವ ಹನುಮನ ದೇವಾಲಯವು ಬಹು ಪ್ರಸಿದ್ದ ಕ್ಷೇತ್ರವಾಗಿದೆ. ಈ ದೇಗುಲದ ಮುಖ್ಯ ದೇವರು ರಾಮನಾದರೂ ಸಹ ಇದು ಆಂಜನೇಯ ದೇವಸ್ಥಾನವಾಗಿಯೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಐತಿಹ್ಯಗಳ ಪ್ರಕಾರ, ಹನುಮನ ಮೂರ್ತಿಯು ಸುಮಾರು 3000 ವರ್ಷಗಳ ಹಿಂದೆ ಸಪ್ತರ್ಷಿಗಳಲ್ಲೊಬ್ಬರಾದ ವಸಿಷ್ಠರಿಂದ ಪ್ರತಿಷ್ಠಾಪಿಸಲ್ಪಟ್ಟಿದೆ.

ಚಿತ್ರಕೃಪೆ: Pranchiyettan

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಯಾತ್ರಾರ್ಥಿಗಳೆ ಆಗಲಿ ಥವಾ ಪ್ರವಾಸಿಗರೆ ಆಗಲಿ ನಾಮಕ್ಕಲ್ಲಿನಲ್ಲಿ ನೋಡಲೇಬೇಕಾದ ಒಂದು ಪ್ರಮುಖ ಸ್ಥಳವೆಂದರೆ ಆಂಜನೇಯ ದೇವಸ್ಥಾನ. ಈ ದೇವಸ್ಥಾನವು1500 ವರ್ಷಗಳಷ್ಟು ಹಳೆಯದಾಗಿದ್ದು, ನಾಮಕ್ಕಲ್ ಕೋಟೆಯ ಕೆಳಗಿರುವ ಒಂದು ಪುರಾತನ ದೇವಸ್ಥಾನವಾಗಿದೆ. ಇದು 100 ಮೀಟರ್ ದೂರವಿರುವ ಶ್ರೀ ನರಸಿಂಹದೇವರ ದೇವಸ್ಥಾನದ ಎದುರು ನೆಲೆಗೊಂಡಿದೆ. ಈ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ಭಗವಾನ್ ಹನುಮಾನ್ ದೇವರ ಇನ್ನೊಂದು ಹೆಸರಿನ ಆಂಜನೇಯಮೂರ್ತಿಯ ವಿಗ್ರಹವು ಸುಮಾರು 13 ಅಡಿಗಳಷ್ಟು ಎತ್ತರವಿರುವುದು.

ಚಿತ್ರಕೃಪೆ: Booradleyp

ಹನುಮನ ವಿಶೇಷ ದೇವಸ್ಥಾನಗಳು:

ಹನುಮನ ವಿಶೇಷ ದೇವಸ್ಥಾನಗಳು:

ಅಂಜನಾದ್ರಿ ಆಂಜನೇಯ ದೇವಸ್ಥಾನ : ಈ ಬೆಟ್ಟದ ತುದಿಯಲ್ಲಿ ಆಂಜನೇಯನಿಗೆ ಸಮರ್ಪಿತವಾದ ದೇವಾಲಯವಿರುವುದರಿಂದ ಇದಕ್ಕೆ ಆಂಜನೇಯ ಬೆಟ್ಟವೆಂದು ಕರೆಯಲಾಗುತ್ತದೆ. ಭಗವಂತ ಹಣುಮಂತನು ಈ ಬೆಟ್ಟದಲ್ಲಿಯೆ ಜನ್ಮ ತಳೆದನು ಎಂದು ನಂಬಲಾಗಿದ್ದು ಆನೆಗೊಂದಿ ಪ್ರದೇಶದ ಕೇಂದ್ರ ಭಾಗದಲ್ಲಿ ಇದನ್ನು ಕಾಣಬಹುದು. ಅಂಜನಾ ದೇವಿಗೆ ಹುಟ್ಟಿದುದರಿಂದ ಹಣುಮಂತನಿಗೆ ಆಂಜನೇಯ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಕಲ್ಲಿನಲ್ಲಿ ಕೆತ್ತಲಾದ ಹಣುಮಂತನ ವಿಗ್ರಹವಿದ್ದು ಜೊತೆಗೆ ರಾಮ ಹಾಗು ಸೀತೆಯರ ದೇಗುಲಗಳನ್ನು ಕಾಣಬಹುದು. ಇದು ಹಂಪಿಯಲ್ಲಿದೆ.

ಚಿತ್ರಕೃಪೆ: Daniel Hauptstein

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X