Search
  • Follow NativePlanet
Share
» »ಆ ಸಮಯದಲ್ಲಿ ತಿರುಪತಿ ವೆಂಕಟೇಶ್ವರನಿಗೆ ಶಕ್ತಿ ಇರುವುದಿಲ್ಲ...

ಆ ಸಮಯದಲ್ಲಿ ತಿರುಪತಿ ವೆಂಕಟೇಶ್ವರನಿಗೆ ಶಕ್ತಿ ಇರುವುದಿಲ್ಲ...

ಪ್ರಸ್ತುತ ಪ್ರಪಂಚ ವ್ಯಾಪಕವಾಗಿರುವ ಹಿಂದು ಭಕ್ತರು ಮುಖ್ಯವಾಗಿ ತಿರುಪತಿಯಲ್ಲಿನ ವೆಂಕಟೇಶ್ವರನ ಬಾಲಾಲಯಂ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅಷ್ಟಕ್ಕೂ ಆ ಕಾರ್ಯಕ್ರವನ್ನು ಏಕೆ ಮಾಡುತ್ತಾರೆ? ಹೇಗೆ ಮಾಡುತ್ತಾರೆ? ಆ ಸಮಯದಲ್ಲಿ ಭಕ್ತರನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅನುಮತಿಯನ್ನು ನೀಡುತ್ತಾರೆಯೇ? ಅಥವಾ ಇಲ್ಲವೇ? ಒಂದು ವೇಳೆ ನೀಡಿದರೆ ಯಾವ ಸಮಯದಲ್ಲಿ ಆ ದರ್ಶನ ಭಾಗ್ಯವನ್ನು ಕಲ್ಪಿಸುತ್ತಾರೆ? ಎಂಬೆಲ್ಲಾ ಪ್ರಶ್ನೆಗಳು ಭಕ್ತರ ಬಾಯಲ್ಲಿ ಚರ್ಚಿಸುವುದು ಸಾಮಾನ್ಯವಾದದ್ದು.

ಅಷ್ಟೇ ಅಲ್ಲದೆ ಉಳಿದ ದಿನಗಳಿಗೆ ಹೋಲಿಸಿದರೆ ವಾರಾಂತ್ಯದಲ್ಲಿ ಎಂದರೆ ವೀಕೆಂಡ್ ಸಮಯದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಲು ಹೆಚ್ಚು ಮಂದಿ ಭಕ್ತರು ಹೋಗುತ್ತಿರುತ್ತಾರೆ. ಆದರೆ ಆ ಮಹಾ ಸಂಪ್ರೋಕ್ಷಣೆ ಕೂಡ ಅದೇ ಸಮಯದಲ್ಲಿ ನಡೆಯುವುದರಿಂದ ತಮ್ಮ ಪ್ರಯಾಣಗಳು ವಾಯಿದೆ ಹಾಕಿಕೊಳ್ಳಬೇಕೆ ಇಲ್ಲವೇ ? ಎಂಬುದು ಪ್ರವಾಸಿಗರ ಪ್ರಶ್ನೆಯಾಗಿ ಉಳಿದಿದೆ. ಇದೆಲ್ಲದರ ಉತ್ತರವನ್ನು ಲೇಖನದ ಮೂಲಕ ಪಡೆಯಿರಿ.

 ೧. 12 ವರ್ಷಕ್ಕೆ ಒಮ್ಮೆ

೧. 12 ವರ್ಷಕ್ಕೆ ಒಮ್ಮೆ

PC:YOUTUBE

ನದಿಗಳಿಗೆ ಪ್ರತಿ 12 ವರ್ಷಕ್ಕೆ ಒಮ್ಮೆ ಪುಷ್ಕರಣಿಯ ಹಾಗೆ ತಿರುಮಲದಲ್ಲಿ ನ ಶ್ರೀ ವೆಂಕಟೇಶ್ವರ ಸ್ವಾಮಿಗೂ ಕೂಡ ಅಷ್ಟ ಬಂಧನ ಬಾಲಾಲಯ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ. ಸಾಧಾರಣವಾಗಿ ಪ್ರತಿ ವೈಷ್ಣವ ದೇವಾಲಯದಲ್ಲಿ 12 ವರ್ಷಕ್ಕೆ ಒಮ್ಮೆ ಇದನ್ನು ನಿರ್ವಹಿಸುತ್ತಾರೆ.

೨. ವಿಗ್ರಹ ಪ್ರತಿಷ್ಠಾಪನೆ

೨. ವಿಗ್ರಹ ಪ್ರತಿಷ್ಠಾಪನೆ

PC:YOUTUBE

ದೇವಾಲಯದ ನಿರ್ಮಾಣದಲ್ಲಿ ಪ್ರಧಾನವಾದದ್ದು ವಿಗ್ರಹ ಪ್ರತಿಷ್ಠಾಪನೆ. ತದನಂತರ ಶಾಸ್ತ್ರೋಕ್ತವಾಗಿ ಜೀರ್ಣೋದ್ಧಾರ ಮಾಡುತ್ತಾರೆ. ಸಜೀವವಾಗಿರುವ ಒಂದು ದೇವತಾ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದೇವೆ ಎಂಬ ಭಾವವನ್ನು ಭಕ್ತರಿಗೆ ಉಂಟಾಗುವಂತೆ ಮಾಡುತ್ತಾರೆ. ಅಂದರೆ ವಿಗ್ರಹದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುತ್ತಿದ್ದಾರೆ ಎಂಬಂತೆ ಉಂಟು ಮಾಡುತ್ತಾರೆ.

೩. ಅನೇಕ ಉಪಚಾರಗಳು

೩. ಅನೇಕ ಉಪಚಾರಗಳು

PC:YOUTUBE

ಇನ್ನು ತಿರುಮಲದಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪ್ರತಿದಿನ ಅನೇಕ ರೀತಿಯ ಉಪಚಾರಗಳು ನೈವೇದ್ಯಗಳು ನಡೆಯುತ್ತಿರುತ್ತವೆ. ಈ ಸಮಯದಲ್ಲಿ ಕೆಲವು ಪದಾರ್ಥಗಳು ಭೂಮಿಯ ಮೇಲೆ ಬಿದ್ದು ಮಾಲಿನ್ಯವಾದರೆ ಅದು ಗರ್ಭಗುಡಿಗೆ ಹೋಗದೆ ಇರದು. ಇದರಿಂದ ಕೆಲವು ಬಾರಿ ಗರ್ಭಗುಡಿಯಲ್ಲಿ ಮಾಲಿನ್ಯವಾಗುವ ಅವಕಾಶವಿರುತ್ತದೆ.

೪. ಆಚಾರವಾಗಿ ಭಾವಿಸಿ

೪. ಆಚಾರವಾಗಿ ಭಾವಿಸಿ

PC:YOUTUBE

ಇದನ್ನು ಆಚಾರವಾಗಿ ಭಾವಿಸಿ 12 ವರ್ಷಕ್ಕೆ ಒಮ್ಮೆ ಗರ್ಭಗುಡಿಯಲ್ಲಿ ಅರ್ಚಕರೇ ಅವುಗಳನ್ನು ನಿರ್ವಹಿಸುತ್ತಾರೆ. ಈ ಕ್ರಮದಲ್ಲಿ ಮೊದಲು ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹದ ಪಾದಗಳಿಗೆ ಪದ್ಮ ಪೀಠದ ಮಧ್ಯದಲ್ಲಿರುವ ಭಾಗವನ್ನು ಲೇಪನದಿಂದ ಅಷ್ಟ ಬಂಧನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ.

೫. ಎಂಟು ಬಗೆಯ ವಸ್ತುಗಳಿಂದ

೫. ಎಂಟು ಬಗೆಯ ವಸ್ತುಗಳಿಂದ

PC:YOUTUBE

ಈ ಕಾರ್ಯಕ್ರಮದಲ್ಲಿನ ಭಾಗವಾಗಿ ಎಂಟು ಬಗೆಯ ವಸ್ತುಗಳಿಂದ ತಯಾರು ಮಾಡಿದ ಚೂರ್ಣವನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹದ ಕೆಳಗೆ ಇಡುತ್ತಾರೆ.ಆ ಚೂರ್ಣದಲ್ಲಿ ಅನೇಕ ವಿಧದ ಪದಾರ್ಥವನ್ನು ಕಲಸಿ ಮಾಡಿರುತ್ತಾರೆ.

೬. ಆಯಾ ಪ್ರದೇಶದಲ್ಲಿ ಇರುತ್ತಾರೆ

೬. ಆಯಾ ಪ್ರದೇಶದಲ್ಲಿ ಇರುತ್ತಾರೆ

PC:YOUTUBE

ಆ ವಸ್ತುಗಳ ಮಿಶ್ರಣವನ್ನು ಮೂಲವಿಗ್ರಹದ ಜೊತೆಗೆ ಆಧಾರ ಪೀಠ, ಪಾದಪೀಠ ಹಾಗೂ ಮೂಲ ವಿಗ್ರಹದ ಮೇಲಿನ ಭಾಗದಮೇಲಿರುವ ರಂದ್ರದಲ್ಲಿ ಈ ಚೂರ್ಣವನ್ನು ಒತ್ತುತ್ತಾರೆ. ಕಾಲಕ್ರಮೇಣ ಈ ಮಿಶ್ರಣವು ಕರಗಿ ಹೋಗುವುದು ಅಥವಾ ಬಣ್ಣ ಬದಲಾಗುವುದರಿಂದ ಮೂಲ ವಿಗ್ರಹದಲ್ಲಿನ ಶಕ್ತಿಯ ಕಡಿತಗೊಳ್ಳುತ್ತದೆ.

೭. ಶಕ್ತಿಯನ್ನು ಹೊಂದುವುದಕ್ಕೆ

೭. ಶಕ್ತಿಯನ್ನು ಹೊಂದುವುದಕ್ಕೆ

PC:YOUTUBE

ತಿರುಗಿ ಆ ಶಕ್ತಿಯನ್ನು ಹೊಂದುವುದಕ್ಕೋಸ್ಕರವೇ ಅಷ್ಟ ಬಂಧನ ಬಾಲಾಯನ ಮಹಾ ಸಂಪ್ರೋಕ್ಷ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ. ಈ ಮಹಾ ಸಂಪ್ರೋಕ್ಷಣೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ೧೯೫೮ ರಲ್ಲಿ ಪ್ರಾರಂಭವಾಯಿತು. ಕೊನೆಯದಾಗಿ 2006 ಎಲ್ಲಿ ನಡೆಯಿತು. ಮತ್ತೆ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ.

೮. ಒಟ್ಟು 29 ದಿನಗಳು

೮. ಒಟ್ಟು 29 ದಿನಗಳು

PC:YOUTUBE

ಒಟ್ಟು ಆಗಸ್ಟ್ 11 ರಿಂದ 15 ನೇ ತಾರೀಕಿನವರೆಗೆ ಅಂದರೆ ಐದು ದಿನಗಳ ಕಾಲ ಒಟ್ಟು 29 ಗಂಟೆಗಳ ಸಮಯ ಮಾತ್ರವೇ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶಿಸಲು ಅನುಮತಿ ನೀಡುತ್ತಾರೆ. ಆ ಸಮಯದಲ್ಲಿ 15 ಸಾವಿರ ಮಂದಿ ದರ್ಶಿಸಿ ಕೊಳ್ಳಬಹುದು. ಆದ್ದರಿಂದ ನೀವು ತಿರುಪತಿಗೆ ಆ ಸಮಯದಲ್ಲಿ ಪ್ರಯಾಣ ಮಾಡಬೇಕು ಎಂದು ಕೊಂಡಿರುವ ವಾಯಿದೆ ಹಾಕುವುದು ಉತ್ತಮ.

೯. ಆ ದಿನಗಳಲ್ಲಿ

೯. ಆ ದಿನಗಳಲ್ಲಿ

PC:YOUTUBE

12ನೇ ದಿನಾಂಕ ಭಾನುವಾರ ನಾಲ್ಕು ಗಂಟೆಯ ಸಮಯ, 13ನೇ ದಿನಾಂಕ ಸೋಮವಾರ ಸಂಜೆ 5 ಗಂಟೆಯ ಸಮಯ, ಹದಿನಾಲ್ಕನೇ ದಿನಾಂಕ ಮಂಗಳವಾರ ಐದು ಗಂಟೆಯ ಸಮಯ, 15ನೇ ದಿನಾಂಕ ಬುಧವಾರದಂದು 6 ಗಂಟೆಯ ಸಮಯದಲ್ಲಿ ಮಾತ್ರವೇ ಭಕ್ತರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುತ್ತಾರೆ.

೧೦. ನೂತನವಾಗಿ ನಿರ್ಮಿಸಿದ ಹಾಗೆ

೧೦. ನೂತನವಾಗಿ ನಿರ್ಮಿಸಿದ ಹಾಗೆ

PC:YOUTUBE

ಈ ಕಾರ್ಯಕ್ರಮದಲ್ಲಿ ಮೂಲ ವಿಗ್ರಹ ದೊಳಗೆ ಮತ್ತೆ ಮೂಲ ವಿಗ್ರಹದೊಳಗೆ ನೂತನವಾಗಿ ನಿರ್ಮಿಸಿದ ಹಾಗೆ ಎಂದು ಹೇಳುತ್ತಾರೆ. ಅಷ್ಟ ಬಂಧನ ಬಾಲಾಯನ ಮಹಾ ಸಂಪ್ರೋಕ್ಷಣೆ ಆಗಸ್ಟ್ 11 ರಿಂದ 15 ನೇ ದಿನಾಂಕದ ವರೆಗೂ ನಡೆಯುತ್ತದೆ. ಇದರಲ್ಲಿ ಆಗಸ್ಟ್ 11 ನೇ ಶನಿವಾರದ ದಿನದಂದು ಒಟ್ಟು 9 ಗಂಟೆಗಳ ಕಾಲ ದರ್ಶನದ ಅವಕಾಶವನ್ನು ಕಲ್ಪಿಸುತ್ತಾರೆ.

೧೧. ಅಲ್ಲಿಗೆ ಕುಂಭವನ್ನು ಇಡುತ್ತಾರೆ

೧೧. ಅಲ್ಲಿಗೆ ಕುಂಭವನ್ನು ಇಡುತ್ತಾರೆ

PC:YOUTUBE

ಅಲ್ಲಿ ಸ್ವಾಮಿಯ ಶಕ್ತಿಯ ಆವಾಹನೆ ಮಾಡಿದ ಕುಂಭವನ್ನು ಇಡುತ್ತಾರೆ. ಮೂವಿ ವಿಗ್ರಹಕ್ಕೆ ನಿತ್ಯವೂ ನಿರ್ವಹಿಸುವ ಪೂಜಾ ಕಾರ್ಯಕ್ರಮಗಳನ್ನು ಈ ಕುಂಭಕ್ಕೆ ಸಮರ್ಪಿಸುತ್ತಾರೆ . ಕೊನೆಯ ದಿನದಂದು ಮಹಾ ಸಂಪ್ರೋಕ್ಷಣೆಯಿಂದ ಸ್ವಾಮಿಯ ಶಕ್ತಿಯನ್ನು ಮತ್ತೆ ಮೂಲ ವಿಗ್ರಹಕ್ಕೆ ಕಳುಹಿಸುತ್ತಾರೆ.

೧೨. ಮೂರು ವಿಭಾಗಗಳು

೧೨. ಮೂರು ವಿಭಾಗಗಳು

PC:YOUTUBE

ಈ ಬಾಲಾಲಯ ಅಷ್ಟ ಬಂಧನ ಮಹಾ ಸಂಪ್ರೋಕ್ಷಣೆ ಕಾರ್ಯಕ್ರಮವನ್ನು ಮೂರು ವಿಭಾಗಗಳಾಗಿ ನಿರ್ವಹಿಸುತ್ತಾರೆ. ಮೊದಲು ಶ್ರೀ ವೆಂಕಟೇಶ್ವರ ಸ್ವಾಮಿಯ ಮೂಲ ವಿಗ್ರಹದಲ್ಲಿರುವ ಶಕ್ತಿಯನ್ನು ಕುಂಭದಲ್ಲಿ ಆಹ್ವಾನ ಮಾಡಿಕೊಳ್ಳುತ್ತಾರೆ. ವೆಂಕಟೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿಯೇ ಇರುವ ಹಳೆಯ ಕಲ್ಯಾಣ ಮಂಟಪದಲ್ಲಿ ಪ್ರತ್ಯೆಕವಾಗಿ 24 ಯಾಗಗಳನ್ನು ಏರ್ಪಾಟು ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more