Search
  • Follow NativePlanet
Share
» »ಭಾರತದಲ್ಲಿಯ ಈ ಅತ್ಯಾಕರ್ಷಕ ರಾಜ್ಯಗಳ ಅನ್ವೇಷಣೆ ಮಾಡಿ!

ಭಾರತದಲ್ಲಿಯ ಈ ಅತ್ಯಾಕರ್ಷಕ ರಾಜ್ಯಗಳ ಅನ್ವೇಷಣೆ ಮಾಡಿ!

29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂದ ಭಾರತವು ಪ್ರಪಂಚದ ಅತ್ಯಂತ ವರ್ಣರಂಜಿತ ಮತ್ತು ರೋಚಕ ದೇಶಗಳಲ್ಲೊಂದೆನಿಸಿದೆ. ಇದರ ಸೌಂದರ್ಯತೆಯ ಮತ್ತು ಜೀವಂತಿಕೆಯ ಅಗಾಧತೆಯನ್ನು ಎಷ್ಟು ಹಾಡಿ ಹೊಗಳಿದರೂ ಸಾಲದು. ಈ ದೇಶದಲ್ಲಿ ಸೌಂದರ್ಯತೆ ಮತ್ತು ಶ್ರೇಷ್ಠತೆಯನ್ನು ಉಳಿಸಿಕೊಳ್ಳುವಂತಹ ಅನೇಕ ವಿಷಯಗಳು ಶಾಶ್ವತವಾಗಿ ಇವೆ. ಆದುದರಿಂದ ಭಾರತವು ಪ್ರಪಂಚದ ಸುಂದರ ದೇಶಗಳ ಪಟ್ಟಿಗಳಲ್ಲಿರುವುದು ಅಚ್ಚರಿಯ ವಿಷಯವೇನಲ್ಲ.

ಆದರೆ ಹೌದು ಭಾರತದಲ್ಲಿ ಇನ್ನೂ ಕೆಲವು ಭೂಭಾಗಗಳು ತಮ್ಮಲ್ಲಿ ಅತ್ಯಂತ ಸೌಂದರ್ಯತೆಗಳನ್ನು ಹೊಂದಿದ್ದು ಬೆಳಕಿಗೆ ಬರಬೇಕಾಗಿವೆ ಹಾಗೂ ಇವುಗಳು ಇನ್ನೂ ಕಡಿಮೆ ಪ್ರಚಾರಕ್ಕೆ ಒಳಪಟ್ಟಿವೆ. ಭಾರತದಲ್ಲಿಯ ಇನ್ನೂ ಕೆಲವು ರಾಜ್ಯಗಳಲ್ಲಿ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಬಹುದಾಗಿವೆ ಮತ್ತು ಅವುಗಳಲ್ಲಿಯ ಕಣ ಕಣಗಳಲ್ಲಿಯೂ ತುಂಬಿರುವ ವಿಷಯಗಳು ಹಾಗೂ ಅದ್ಬುತಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಹಾಗಾದರೆ, ಈ ರಾಜ್ಯಗಳಿಗೆ ಪ್ರಯಾಣಿಸಿ ಅವುಗಳನ್ನು ಹೆಚ್ಚು ಬೆಳಕಿಗೆ ತಂದು ಅವರ ಅತ್ಯಾಕರ್ಷಕ ಗುಣಲಕ್ಷಣಗಳನ್ನು ಪ್ರದರ್ಶಿಸಬಾರದೇಕೆ?

ಹಾಗಿದ್ದಲ್ಲಿ ನಾವು ಭಾರತದ ಕೆಲವು ಅತ್ಯಾಕರ್ಷಕ ಹಾಗೂ ಅದ್ಬುತವಾದಂತಹ ರಾಜ್ಯಗಳ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಈ ವರ್ಷ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಈ ಸ್ಥಳಗಳನ್ನು ಸೇರಿಸಿಕೊಳ್ಳಿ.

1) ತ್ರಿಪುರ

1) ತ್ರಿಪುರ

ಈಶಾನ್ಯ ಭಾರತದ ಗುಡ್ಡಗಾಡು ರಾಜ್ಯವಾದ ತ್ರಿಪುರವು ಏಳು ಸೋದರಿ ರಾಜ್ಯಗಳಲ್ಲಿ ಒಂದಾಗಿದೆ. 95% ರಷ್ಟು ಸರಾಸರಿ ಸಾಕ್ಷರತೆಯೊಂದಿಗೆ, ಇದು ಭಾರತದ ಅತ್ಯಂತ ಸಾಕ್ಷರತೆಯನ್ನು ಹೊಂದಿದ ರಾಜ್ಯವಾಗಿದೆ. ಸಾಂಸ್ಕೃತಿಕ ವೈವಿಧ್ಯತೆ ಮತ್ತು ಜನಪದ ಕಲೆಯೊಂದಿಗೆ ಮಂತ್ರಮುಗ್ದರನ್ನಾಗಿಸುವಂತಹ ಬೆಟ್ಟಗಳು ಮತ್ತು ಕಣಿವೆಗಳು ಹಾಗೂ ಸೊಂಪಾದ ಬಯಲು ಪ್ರದೇಶಗಳನ್ನು ಈ ಸುಂದರವಾದ ಸಣ್ಣ ರಾಜ್ಯವು ತನ್ನಲ್ಲಿ ಹೊಂದಿದೆ.

ನೀವೇನಾದರೂ ಶಾಂತಿ ಪ್ರಿಯ ಪ್ರಯಾಣಿಗರಾಗಿದ್ದಲ್ಲಿ ಖಂಡಿತವಾಗಿಯೂ ಈ ಮೌನ ಹಾಗೂ ಶಾಂತಿಯುತವಾದ ರಾಜ್ಯದಲ್ಲಿಯ ಪ್ರಕೃತಿಯ ಮಡಿಲಿನಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಬಹುದು ಮತ್ತು ಇಲ್ಲಿಯ ಎಲ್ಲೆಂದರಲ್ಲಿ ಕಾಣುವ ಹಸಿರುಮಯ ವಾತಾವರಣದಲ್ಲಿ ಆನಂದಿಸಿ..

ಇಲ್ಲಿಗೆ ಭೇಟಿ ಕೊಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್ ನಿಂದ- ಮಾರ್ಚ್ ವರೆಗೆ.

2) ಜಾರ್ಕಂಡ್

2) ಜಾರ್ಕಂಡ್

ಸುಂದರ ದೃಶ್ಯಾವಳಿಗಳನ್ನು ಹೊಂದಿರುವ ಹಾಗೂ ನೈಸರ್ಗಿಕ ಕಾಡುಗಳಿಂದ ಆವೃತಗೊಂಡಿರುವ ಇನ್ನೊಂದು ಸುಪ್ತ ರಾಜ್ಯವೆಂದರೆ ಅದು ಜಾರ್ಕಂಡ್. ಇದನ್ನು ಅರಣ್ಯಗಳ ಭೂಮಿ ಎಂದೂ ಕರೆಯಲಾಗುತ್ತದೆ. ಇನ್ನೂ ಅನಾವರಣಗೊಳ್ಳಬೇಕಾದ ಸ್ಥಿತಿಯಲ್ಲಿರುವ ಈ ರಾಜ್ಯವು ಕಾಡುಗಳಿಂದ ಆವೃತವಾಗಿದ್ದು, ಈ ಕಾಡುಗಳಲ್ಲಿ ಅಳಿವಂಚಿನಲ್ಲಿರುವ ಭಾರತದ ಅಪರೂಪದ ಹಲವಾರು ಪ್ರಭೇದಗಳನ್ನು ಕಾಣಬಹುದಾಗಿದೆ.

ವಾಣಿಜ್ಯೀಕರಣದಿಂದ ದೂರವಿರುವ ಜಾರ್ಕಂಡ್ ಇನ್ನೂ ತನ್ನಲ್ಲಿಯ ನೈಸರ್ಗಿಕ ಹಾಗೂ ಅದ್ಬುತ ಚಿತ್ರಣವನ್ನು ತನ್ನಲ್ಲಿ ಕಾಪಾಡಿಕೊಂಡು ಬಂದಿದೆ. ಕಾಡುಗಳು ಮತ್ತು ಬೆಟ್ಟಗಳಿಂದ ಸುತ್ತುವರೆದಿರುವ ಈ ಭೂಮಿಯನ್ನು ನೋಡ ಬಯಸಿದಲ್ಲಿ ಖಂಡಿತವಾಗಿಯೂ ಭೇಟಿ ನೀಡಿ. ಹಾಗೂ ಅದರ ಆಕರ್ಷಣೆಯನ್ನು ಆನಂದಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ.

ಇಲ್ಲಿ, ಹೊಂಡ್ರೂನಂತಹ ಸುಂದರವಾದ ಜಲಪಾತಗಳ ಜೊತೆಗೆ ಇಲ್ಲಿಯ ಜನರ ಸಾಂಪ್ರದಾಯಿಕ ಜೀವನಶೈಲಿಯನ್ನು ಕೂಡಾ ಅನ್ವೇಷಿಸಬಹುದು. ಈ ಸ್ಥಳವು ಅನೇಕ ಚಾರಣಿಗರು ಮತ್ತು ಪ್ರಕೃತಿ ಪ್ರೇಮಿಗಳಿಗೆ ಪ್ರಿಯವಾದ ಸ್ಥಳವಾಗಿದೆ.

ಭೇಟಿ ಕೊಡಲು ಯೋಗ್ಯವಾದ ಸಮಯ- ನವೆಂಬರ್ ನಿಂದ ಮಾರ್ಚ್ ವರೆಗೆ

3) ನಾಗಾಲ್ಯಾಂಡ್

3) ನಾಗಾಲ್ಯಾಂಡ್

ಈಶಾನ್ಯ ಭಾರತದ ಈ ಪರ್ವತಗಳ ರಾಜ್ಯವು ಸಮೃದ್ಧ ಜೀವವೈವಿಧ್ಯತೆಯನ್ನು ಹೊಂದಿದೆ. ಈ ರಾಜ್ಯವು ನಿಮ್ಮ ಮುಂದಿನ ಭೇಟಿಯ ತಾಣವಾಗಬಹುದು. ತಮ್ಮದೇ ಆದ ಭಾಷೆ ಮತ್ತು ಪದ್ಧತಿಗಳನ್ನು ಹೊಂದಿರುವ ಇಲ್ಲಿ ಒಟ್ಟು 16 ಸ್ಥಳೀಯ ನಾಗ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ.

ಶ್ರೀಮಂತ ವೈವಿಧ್ಯಮಯ ಸಾಂಸ್ಕೃತಿಕ ಜೀವನ ಶೈಲಿ ಮತ್ತು ಸಮೃದ್ದ ಸಸ್ಯವರ್ಗವನ್ನ ಹೊಂದಿರುವ ಈ ರಾಜ್ಯವು ಇನ್ನೂ ತನ್ನ ಸೌಂದರ್ಯತೆಯನ್ನು ಹಾಗೆಯೇ ಕಾಪಾಡಿಕೊಂಡು ಬಂದಿದೆ. ನೀವು ಶತಮಾನಗಳಷ್ಟು ಹಳೆಯ ಬುಡಕಟ್ಟು ಜನಾಂಗದವರ ನಡುವೆ ಜೀವನವನ್ನು ಆನಂದಿಸ ಬಯಸಿದಲ್ಲಿ, ಹಾಗೂ ಅವರ ಪದ್ದತಿ ಮತ್ತು ದೈನಂದಿನ ಜೀವನ ಶೈಲಿಗಳನ್ನು ಕಲಿಯ ಬಯಸಿದಲ್ಲಿ ನಿಸ್ಸಂದೇಹವಾಗಿಯೂ ಈ ಸ್ಥಳವು ನಿಮಗೆ ಸೂಕ್ತವಾದುದಾಗಿದೆ.

4) ಅರುಣಾಚಲ ಪ್ರದೇಶ

4) ಅರುಣಾಚಲ ಪ್ರದೇಶ

ಆರ್ಕಿಡ್ ಸ್ಟೇಟ್ ಆಫ್ ಇಂಡಿಯಾ ಎಂದೂ ಕರೆಯಲ್ಪಡುವ ಈ ರಾಜ್ಯವು ಏಳು ಸಹೋದರಿ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವಾಗಿದೆ. ಇದು ತನ್ನ ನೈಸರ್ಗಿಕ ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಇದು ಪ್ರಕೃತಿ ಪ್ರೇಮಿಗಳ ಸ್ವರ್ಗವೆಂದು ಹೇಳಲಾಗುತ್ತದೆ. ಜಲಪಾತಗಳಿಂದ ಬೆಟ್ಟಗಳವರೆಗೆ ಮತ್ತು ಸೊಂಪಾದ ಬಯಲುಗಳಿಂದ ಹಿಡಿದು ಶ್ರೀಮಂತ ಕಾಡುಗಳವರೆಗೆ ಎಲ್ಲವನ್ನೂ ಅರುಣಾಚಲ ಪ್ರದೇಶದಲ್ಲಿ ಕಾಣಬಹುದಾಗಿದೆ.

ಈ ನೈಸರ್ಗಿಕ ಸ್ವರ್ಗವನ್ನು ಭೇಟಿ ಮಾಡದೇ ಇರಲು ಸಾಧ್ಯವಿಲ್ಲ ಮತ್ತು ಅದರ ಅದ್ಭುತ ನೋಟಗಳಿಂದ ಆಶ್ಚರ್ಯಚಕಿತರಾಗದೇ ಇರಲು ಸಾಧ್ಯವಿಲ್ಲ. ಹಲವಾರು ಆಳವಾದ ಕಣಿವೆಗಳಿಂದ ಹಿಡಿದು ಹಳೆಯ ಸ್ಮಾರಕಗಳವರೆಗೆ, ಎಲ್ಲವನ್ನೂ ಹೊಂದಿರುವ ಅರುಣಾಚಲ ಪ್ರದೇಶವು ಈಶಾನ್ಯ ಭಾರತದ ಅದ್ಭುತ ಪ್ರದೇಶವಾಗಿದೆ.

ಈ ರಾಜ್ಯವು ಚೀನಾದೊಂದಿಗೆ ಹಲವಾರು ಸಂಘರ್ಷಗಳನ್ನು ಹೊಂದಿದ್ದರೂ ಸಹ, ಇದರ ಸಂಪನ್ಮೂಲಗಳ ಶ್ರೀಮಂತಿಕೆ ಯಾವುದರಲ್ಲಿಯೂ ಕಡಿಮೆಯಿಲ್ಲ.ಆದುದರಿಂದ ಈ ಸ್ಥಳಕ್ಕೆ ಭೇಟಿ ನೀಡಿ ಅದರ ಬಗ್ಗೆ ಇನ್ನಷ್ಟು ಅನ್ವೇಷಿಸಬಾರದೇಕೆ? ಆದುದರಿಂದ ಈ ಅದ್ಭುತ ಕಣಿವೆಯ ಪ್ರವಾಸಕ್ಕೆ ತಯಾರಾಗಿ

ಭೇಟಿ ಕೊಡಲು ಉತ್ತಮ ಸಮಯ- ವರ್ಷವಿಡೀ ಭೇಟಿ ನೀಡಬಹುದಾಗಿದೆ.

5) ಛತ್ತೀಸ್ಗಡ

5) ಛತ್ತೀಸ್ಗಡ

ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಿತಿಯನ್ನು ಕಂಡುಹಿಡಿಯಲು ಸಾಕಷ್ಟು ಸ್ಥಳಗಳಿವೆ ಮತ್ತು ಅನೇಕ ರಹಸ್ಯಗಳನ್ನು ಒಳಗೊಂಡ ಅನೇಕ ಸ್ಥಳಗಳಿವೆ. ನಕ್ಸಲರಿಗೆ ಕುಖ್ಯಾತವಾದ ಈ ರಾಜ್ಯವು ಪ್ರತಿ ಹಂತದಲ್ಲೂ ಅಚ್ಚರಿಗಳನ್ನು ಒಳಗೊಂಡಿದೆ. ಸಿರ್ಪುರದ ಪ್ರಾಚೀನ ಅವಶೇಷಗಳಿಂದ ಹಿಡಿದು ಕೈಲಾಶ್ ಗುಹೆಗಳವರೆಗೆ ಛತ್ತೀಸ್ಗಡವು ತನ್ನಲ್ಲಿಗೆ ಭೇಟಿ ಕೊಡುವವರನ್ನು ಬೆರಗುಗೊಳಿಸುವಲ್ಲಿ ಎಂದಿಗೂ ಹಿಂದೆ ಸರಿದಿಲ್ಲ. ಅಷ್ಟೇ ಅಲ್ಲ ಇಲ್ಲಿ ರಾಮದೇವರು ತನ್ನ ವನವಾಸದ ಅವಧಿಯಲ್ಲಿ ಹೆಚ್ಚಿನ ಸಮಯವನ್ನು ಇಲ್ಲಿ ಕಳೆದಿರುವ ಸ್ಥಳವಾಗಿದೆ.

ಕೋಸಾ ರೇಷ್ಮೆ ಮತ್ತು ಮೇಣದ ಕಲೆಗೂ ಈ ಸ್ಥಳವು ಹೆಸರುವಾಸಿಯಾಗಿದೆ.ಹಳೆಯ ಕೋಟೆಗಳನ್ನು ಹೊಂದಿರುವ ಈ ಸುಂದರ ರಾಜ್ಯವು ಭಾರತದ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಛತ್ತೀಸ್ಗಡವು ಜಾರ್ಖಂಡ್‌ನಂತೆಯೇ ಅರಣ್ಯ ಪ್ರದೇಶವಾಗಿದ್ದು, ದೇಶಕ್ಕೆ ವಿದ್ಯುತ್ ಮತ್ತು ಉಕ್ಕಿನ ದೊಡ್ಡ ಮೂಲವಾಗಿದೆ.

ಇವುಗಳು ಭಾರತದಲ್ಲಿಯ ಆಕರ್ಷಕ ಮತ್ತು ಕಡಿಮೆ ಪ್ರಚಾರದಲ್ಲಿರುವ ರಾಜ್ಯಗಳಾಗಿವೆ. ಶ್ರೀಮಂತ ವೈವಿಧ್ಯತೆಗಳನ್ನು ತಮ್ಮಲ್ಲಿ ಹೊಂದಿರುವ ಭಾರತದ ಈ ಸುಂದರ ರಾಜ್ಯಗಳಿಗೆ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ನಿಮ್ಮ ರಜಾ ದಿನಗಳನ್ನು ಸಂತೋಷದಿಂದ ಕಳೆಯಲು ಯೋಜಿಸಿ. ಹಾಗೂ ಭಾರತದ ಮನೋರಂಜಿಸುವ ಈ ರಾಜ್ಯಗಳ ಅಪರೂಪದ ಲಕ್ಷಣಗಳನ್ನು ಅನುಭವಿಸುವ ಮತ್ತು ಇತಿಹಾಸದ ಕೆಲವು ಪುಟಗಳನ್ನು ಹಿಂದಕ್ಕೆ ತಿರುಗಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ

Read more about: india states
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X