Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಪುರ್-ತ್ರಿಪುರಾ » ಹವಾಮಾನ

ಉದಯಪುರ್-ತ್ರಿಪುರಾ ಹವಾಮಾನ

ಅಕ್ಟೋಬರ್ ನಿಂದ ಮೇ ವರೆಗಿನ ಸಮಯ  ಉದಯಪುರ್ ನ್ನು ಭೇಟಿ ನೀಡಲು ಸೂಕ್ತ.  ಉದಯಪುರ್ ದೇವಸ್ಥಾನಗಳಿಗೆ ಪ್ರಸಿದ್ಧವಾದ ಕಾರಣ, ದೀಪಾವಳಿಯ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಈ ಸಮಯದಲ್ಲಿ ತ್ರಿಪುರ ಸುಂದರಿಯನ್ನು ಮದುಮಗಳಂತೆ ಅಲಂಕರಿಸಲಾಗುತ್ತಿದ್ದು, ತುಂಬಾ ದಿನಗಳ ವರೆಗೆಉತ್ಸವ ಮುಂದುವರೆಯುತ್ತದೆ.

ಬೇಸಿಗೆಗಾಲ

ಉದಯಪುರ್ ನಲ್ಲಿ ಬೇಸಗೆ ತಾಪಮಾನ ಹಾಗೂ ಶೈತ್ಯ ಹೆಚ್ಚಾಗಿದ್ದು, ಹವಾಮಾನ ತುಂಬಾ ಸೆಖೆಯಾಗಿರುತ್ತದೆ. ಮಾರ್ಚ್ ನಿಂದ ಮೇ ತಿಂಗಳ ಕೊನೆಯ ವರೆಗೆ ಇರುವ ಬೇಸಗೆ ಕಾಲದಲ್ಲಿ,  ಉದಯಪುರ್ ನ ದಾಖಲೆ ಗರಿಷ್ಟ ತಾಪಮಾನ 35 ಡಿಗ್ರಿ ಯಾಗಿರುತ್ತದೆ. ಶೈತ್ಯದಿಂದ ಇಲ್ಲಿ ಸುತ್ತಾಡುವುದು ಕಷ್ಟಕರವಾದುದರಿಂದ, ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ.

ಮಳೆಗಾಲ

ನೈಋತ್ಯ ಮಾರುತದ ಮಳೆಯು ಮೇ ತಿಂಗಳ ಮಧ್ಯದಿಂದ ಆರಂಭವಾಗುತ್ತದೆ.  ಉದಯಪುರ್ ನ ಮಳೆ ತಿಂಗಳುಗಳೆನ್ದರೆ ಮೇ ನಿಂದ ಅಕ್ಟೋಬರ್ ವರೆಗೆ. ಈ ಸಮಯದಲ್ಲಿ  ಉದಯಪುರ್ ಗೆ ಭೇಟಿ ನೀಡುತ್ತಿದ್ದರೆ, ಛತ್ರಿ ಕೊಂಡೊಯ್ಯಲು ಮರೆಯದಿರಿ.

ಚಳಿಗಾಲ

ತ್ರಿಪುರಾದ ಇತರ ಭಾಗಗಳಂತೆ  ಉದಯಪುರ್ ನಲ್ಲಿ ಚಳಿಗಾಲವು ಹಿತವಾಗಿರುತ್ತದೆ. ಇಲ್ಲಿನ ದಾಖಲೆ ಕನಿಷ್ಠ ತಾಪಮಾನವು 7 ಡಿಗ್ರೀಯಾಗಿದೆ. ಈ ಸಮಯದಲ್ಲಿ, ಇಲ್ಲಿನ ಭೇಟಿ ಉತ್ತಮ. ಚಳಿಗೆ ಧರಿಸುವ ಬೆಚ್ಚಗಿನ ಬಟ್ಟೆಗಳನ್ನು ನೀವು ಕೊಂಡೊಯ್ಯಬೇಕಾವುದು. ಚಳಿಗಾಲವು ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಇರುತ್ತದೆ.