Search
  • Follow NativePlanet
Share
» »ಪುಲಿಕಾಟ್ ನ ಹಳೇಯ ಸರೋವರ ಮತ್ತು ಪಕ್ಷಿಧಾಮಗಳಲ್ಲಿ ಆನಂದಿಸಿ.

ಪುಲಿಕಾಟ್ ನ ಹಳೇಯ ಸರೋವರ ಮತ್ತು ಪಕ್ಷಿಧಾಮಗಳಲ್ಲಿ ಆನಂದಿಸಿ.

ಸಮುದ್ರತಡಿಯ ಪಟ್ಟಣವಾದ ತಮಿಳುನಾಡಿನಲ್ಲಿ ವಿಶ್ರಾಂತಿ ಪಡೆಯಿರಿ ಮತ್ತು ಇಲ್ಲಿಯ ಅನೇಕ ಬಗೆಯ ಪಕ್ಷಿ ಜೀವ ವೈವಿಧ್ಯಗಳು ಮತ್ತು ನಯನ ಮನೋಹರ ಸೌಂದರ್ಯತೆಯನ್ನು ಹೊಂದಿರುವ ಪುಲಿಕಾಟ್ ಸರೋವರದಲ್ಲಿ ಆನಂದಿಸಿ.

By Manjula Balaraj Tantry

ಚೆನ್ನೈ ನಗರವು ತನ್ನ ಸುತ್ತಲೂ ಮಾನವ ನಿರ್ಮಿತ ಅದ್ಬುತ ಸೌಂದರ್ಯಗಳು ಮತ್ತು ಭವ್ಯವಾದ ಇತಿಹಾಸಗಳವರೆಗೆ ಇಂದು ಹೊಂದಿದೆ. ಮತ್ತು ಚೆನೈನಿಂದ ಹೋಗಬಹುದಾದ ಒಂದು ಉತ್ತಮವಾದ ರಜಾತಾಣವೆಂದರೆ ಅದು ಪುಲಿಕಾಟ್. ತನ್ನ ಸುತ್ತಲೂ ಪ್ರಶಾಂತ ವಾತಾವರಣವನ್ನು ಪುಲಿಕಾಟ್ ಸರೋವರವು ಹೊಂದಿದೆ ಮತ್ತು ಪುರಾತನ ಸ್ಮಾರಕಗಳಿಂದ ಬರುವ ಪ್ರತಿಧ್ವನಿಗಳು ಈ ಪುಟ್ಟ ಪಟ್ಟಣದ ದೃಢೀಕರಣವನ್ನು ಸೂಚಿಸುತ್ತವೆ.

ದಕ್ಷಿಣ ಭಾರತದ ಕೋರಮಂಡಲ ತೀರದಲ್ಲಿರುವ, ಪುಲಿಕಾಟ್ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಹಿಂದೆ ಪೋರ್ಚುಗೀಸರು ಮತ್ತು ಡಚ್ಚರ ಪ್ರಧಾನ ಕಚೇರಿಯಾಗಿತ್ತು. ಈಗ ಈ ಕಡಲ ತಡಿಯ ಪಟ್ಟಣವು ತನ್ನ ಪುಲಿಕಾಟ್ ಸರೋಮರ ಮತ್ತು ಪುಲಿಕಾಟ್ ಪಕ್ಷಿಧಾಮಗಳಿಂದಾಗಿ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ.

ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಅಭಯಾರಣ್ಯದ ಸುತ್ತಲೂ ಚಿರಪರಿಚಿತವಾದ ಹಾಗೂ ಬೆರಗುಗೊಳಿಸುವ ಸರೋವರ ಮತ್ತು ವಲಸೆ ಹಕ್ಕಿಗಳ ಅದ್ಭುತವಾದ ನೋಟವನ್ನು ನೋಡುತ್ತಾರೆ. ಅಲ್ಲದೆ ಇಲ್ಲಿ ಪುರಾತನ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನೂ ಕೂಡಾ ಪ್ರತಿವರ್ಷವೂ ಅಸಂಖ್ಯಾತ ಪ್ರವಾಸಿಗರು ನೋಡುತ್ತಾರೆ.

ನೀವು ಅದ್ಬುತವಾದ ಪ್ರಕೃತಿ ಮತ್ತು ಐತಿಹಾಸಿಕ ಸೌಂದರ್ಯತೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಅಥವ ಅವುಗಳ ಕಡೆಗೆ ಪ್ರಯಾಣ ಬೆಳೆಸಲು ನೀವು ಆಯೋಜಿಸುತ್ತಿರುವಿರಾದಲ್ಲಿ ಈ ಕಡಲತಡಿಯ ಪಟ್ಟಣವನ್ನು ಕೂಡಾ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

ಪುಲಿಕಾಟ್ ಭೇಟಿ ನೀಡಲು ಉತ್ತಮ ಸಮಯ

ಪುಲಿಕಾಟ್ ಭೇಟಿ ನೀಡಲು ಉತ್ತಮ ಸಮಯ

PC:Manvendra Bhangui

ನವೆಂಬರ್ ನಿಂದ ಮಾರ್ಚ್ ತಿಂಗಳುಗಳವರೆಗೆ ಇಲ್ಲಿಯ ಹವಾಮಾನ ಹಾಗೂ ವಾತಾವರಣದ ಪರಿಸ್ಥಿತಿಗಳು ಅನುಕೂಲಕರವಾಗಿರುವುದರಿಂದ ಇಲ್ಲಿ ಹಲವಾರು ಪ್ರಭೇದದ ಪಕ್ಷಿಗಳನ್ನು ಇಲ್ಲಿಯ ಪಕ್ಷಿಧಾಮದ ಸುತ್ತಮುತ್ತ ನೋಡಬಹುದಾದ ಕಾರಣ ಈ ಸಮಯದಲ್ಲಿ ಇಲ್ಲಿಗೆ ಭೇಟಿಕೊಡುವುದು ಸೂಕ್ತವಾಗಿದೆ. ಬೇಸಿಗೆಯಲ್ಲಿ ಈ ಸ್ಥಳಕ್ಕೆ ಭೇಟಿಕೊಡುವುದನ್ನು ಆದಷ್ಟು ತಪ್ಪಿಸಿಕೊಳ್ಳಿ ಏಕೆಂದರೆ ಇಲ್ಲಿ ಉಷ್ಣಾಂಶ ಮತ್ತು ತೇವಾಂಶ ಪರಿಸ್ಥಿತಿಗಳು ಅನುಕೂಲವಾಗಿಲ್ಲದಿರುವುದರಿಂದ ಪಟ್ಟಣದಲ್ಲಿ ಸುತ್ತಾಡಲು ಸೂಕ್ತವಾಗಿರುವುದಿಲ್ಲ.

ಪುಲಿಕಾಟ್ ತಲುಪುವುದು ಹೇಗೆ

ಪುಲಿಕಾಟ್ ತಲುಪುವುದು ಹೇಗೆ

MAP

ಚೆನ್ನೈನಿಂದ ಹೆಚ್ಚು ಕಡಿಮೆ 56 ಕಿ.ಮೀ ಅಂತರದಲ್ಲಿರುವ ಪುಲಿಕಾಟ್ ರಸ್ತೆಗಳ ಮೂಲಕ ಸುಲಭವಾಗಿ ತಲುಪಬಹುದು. ಅಲ್ಲದೆ ಸ್ಥಳೀಯ ರೈಲು ಮೂಲಕವೂ ಚೆನ್ನೈನಿಂದ ಪೊನ್ನೇರಿಗೆ ಹೋಗಬಹುದು ಅಲ್ಲಿಂದ ಪುಲಿಕಾಟ್ ಗೆ ಬಸ್ಸಿನ ಮೂಲಕ ಪ್ರಯಾಣಿಸಬಹುದು. ರಸ್ತೆ ಮೂಲಕ ಪುಲಿಕಾಟ್ ಗೆ ಪ್ರಯಾಣವು ಹೆಚ್ಚು ಸೂಕ್ತವಾಗಿದ್ದು ಇದು ರೈಲು ಪ್ರಯಾಣಕ್ಕಿಂತ ಕಡಿಮೆ ಸಮಯವನ್ನು ತಲುಪಲು ತೆಗೆದುಕೊಳ್ಳುತ್ತದೆ ಅಲ್ಲದೆ ಇದು ಹೆಚ್ಚು ಆರಾಮದಾಯಕ ಕೂಡಾ.

ರಸ್ತೆ ಮೂಲಕ ಪ್ರಯಾಣಿಸುವುದಾದಲ್ಲಿ ನೀವು ಸರಕಾರಿ ಬಸ್ಸುಗಳು , ಖಾಸಗಿ ಬಸ್ಸುಗಳು ಅಥವಾ ಬಾಡಿಗೆ ಟ್ಯಾಕ್ಸಿಗಳ ಮೂಲಕವೂ ಚೆನ್ನೈ ನಿಂದ ಪುಲಿಕಾಟ್ ಗೆ ಪ್ರಯಾಣ ಮಾಡಬಹುದು . ಇದು ಸುಮಾರು ನಿಮ್ಮ ಗಮ್ಯಸ್ಥಾನಕ್ಕೆ ತಲುಪಲು ಸುಮಾರು 2 ತಾಸು ತೆಗೆದುಕೊಳ್ಳುತ್ತದೆ. ಎವರೆಸ್ಟ್ ಮತ್ತು ವೆಪೆರಿ ಇಲ್ಲಿಯ ಕೆಲವು ಬಸ್ಸು ನಿಲ್ದಾಣಗಳು ಇಲ್ಲಿ ನೀವು ಸುಲಭವಾಗಿ ಬಸ್ಸು ಹತ್ತಬಹುದು.

ಮಾರ್ಗ 1 - ಚೆನ್ನೈ - ವಲ್ಲೂರ್ - ಕಟ್ಟುರ್ - ಪುಲಿಕಾಟ್

ಮಾರ್ಗ 2 - ಚೆನ್ನೈ - ವಿಜಯನಲ್ಲೂರ್ - ಪೊನ್ನೇರಿ - ಪುಲಿಕಾಟ್

ಮಾರ್ಗ 2 ಕ್ಕೆ ಹೋಲಿಸಿದರೆ ಕಡಿಮೆ ಸಮಯ ತೆಗೆದುಕೊಳ್ಳುವ ಕಾರಣ ಮಾರ್ಗ -1 ಸೂಕ್ತವಾಗಿರುತ್ತದೆ.

ಚೆನ್ನೈ ನಿಂದ ಪುಲಿಕಾಟ್ ಗೆ ಪ್ರವಾಸ

ಚೆನ್ನೈ ನಿಂದ ಪುಲಿಕಾಟ್ ಗೆ ಪ್ರವಾಸ

PC- Pranayraj1985

ನೀವು ಪುಲಿಕಾಟ್ ನಲ್ಲಿ ಇಡೀ ದಿನವನ್ನು ಕಳೆಯ ಬಯಸುವಿರಾದಲ್ಲಿ ಬೆಳಿಗ್ಗೆ ಬೇಗ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿದರೆ ಬೆಳಗ್ಗಿನ ತಂಪಾದ ಹವಾಮಾನ ವನ್ನು ಆನಂದಿಸಬಹುದು ಹಾಗೂ ಪುಲಿಕಾಟ್ ಗೆ ಸರಿಯಾದ ಸಮಯದಲ್ಲಿ ತಲುಪಬಹುದು. ತಂಪಾದ ಗಾಳಿ ಮಧ್ಯೆ ಬೆಳಿಗ್ಗೆ ಸೂರ್ಯೋದಯದ ಸುವಾಸನೆ ಅನುಭವಿಸುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಪುಲಿಕಾಟ್ ಗೆ ಹೋಗುವ ದಾರಿಯಲ್ಲಿ ಕೆಲವು ಸುಂದರವಾದ ಭೂದೃಶ್ಯಮತ್ತು ಹಸಿರುಮಯ ಸಣ್ಣ ಸಣ್ಣ ಬೆಟ್ಟಗಳನ್ನು ಸುತ್ತಲೂ ಕಾಣಬಹುದು.

ನೀವು ರಾತ್ರಿ ತಂಗಲು ಬಯಸಿದ್ದು ಸರೋವರ ಮತ್ತು ಪಕ್ಷಿಧಾಮಕ್ಕೆ ಮಾತ್ರ ಭೇಟಿ ನೀಡುವುದಲ್ಲದೆ ಅಲ್ಲಿಯ ಇನ್ನಿತರ ಸುಂದರವಾದ ಸ್ಥಳಗಳನ್ನು ನೋಡಬಯಸುವಿರಾದರೆ ಖಂಡಿತವಾಗಿಯೂ ಇಲ್ಲಿಯ ಪುರಾತರ ದೇವಾಲಯಗಳು ಮತ್ತು ಸ್ಮಾರಕಗಳಿಗೂ ಭೇಟಿ ಕೊಡಿ. ಇವು ನಿಮಗೆ ಕಡಲತಡಿಯ ಪಟ್ಟಣದ ವಿಸ್ತಾರವಾದ ಇತಿಹಾಸದ ಚಿತ್ರಣವನ್ನು ನೀಡುತ್ತದೆ.

ನೀವು ಪುಲಿಕಾಟ್ ಗೆ ಹೋಗುವ ದಾರಿಯಲ್ಲಿ ವಲ್ಲೂರು ಮತ್ತು ಕಟ್ಟೂರ್ ನಲ್ಲಿ ಉಪಹಾರಕ್ಕೆ ನಿಲ್ಲಬಹುದು ಮತ್ತು ಇಲ್ಲಿಯ ಬಾಯಿ ನೀರೂರಿಸುವ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು.

ಪುಲಿಕಾಟ್ ನಲ್ಲಿ ಭೇಟಿ ನೀಡುವ ಸ್ಥಳಗಳು

ಈ ಸಣ್ಣ ಐತಿಹಾಸಿಕ ಸ್ಥಳದಲ್ಲಿ ಅನೇಕ ಭೇಟಿ ನೀಡುವ ಮತ್ತು ಆನಂದಿಸಬಹುದಾದಂತಹ ಸ್ಥಳಗಳಿವೆ. ಇಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಪುಲಿಕಾಟ್ ಸರೋವರ ಪುಲಿಕಾಟ್ ಪಕ್ಷಿಧಾಮ ಡಚ್ಚರ ಸ್ಮಶಾನ, ಆದಿನಾರಾಯಣ ಪೆರುಮಾಳ್ ದೇವಾಲಯ ಇತ್ಯಾದಿಗಳು ಸೇರಿವೆ.

ಪುಲಿಕಾಟ್ ಸರೋವರ

ಪುಲಿಕಾಟ್ ಸರೋವರ

PC- McKay Savage

ಎರಡನೇ ಅತಿದೊಡ್ಡ ಉಪ್ಪುನೀರಿನ ಸರೋವರವಾಗಿದ್ದು ಇದು ಇಲ್ಲಿಗೆ ಭೇಟಿ ಕೊಡುವ ಮತ್ತು ಇಲ್ಲಿಯ ಹರಿಯುವ ನೀರಿನ ಸದ್ದಿನ ಜೊತೆಯಲ್ಲಿ ಶಾಂತಿಯನ್ನು ಪಡೆಯ ಬಯಸುವ ಎಲ್ಲಾ ಪ್ರಯಾಣಿಗರು ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ಜೀವವೈವಿಧ್ಯದಲ್ಲಿ ಸಮೃದ್ಧವಾಗಿರುವ ಪುಲಿಕಾಟ್ ಸರೋವರ, ದೊಡ್ಡ ಪ್ರಮಾಣದ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ ಮತ್ತು ಹಲವಾರು ಮೀನುಗಾರರಿಗೆ ಸಹ ಆದಾಯದ ಗಮನಾರ್ಹ ಮೂಲವಾಗಿದೆ.

ಶ್ರೀಹರಿಕೋಟದಿಂದ ಹಾಗೂ ಬಂಗಾಳಕೊಲ್ಲಿಯಿಂದ ಪ್ರತ್ಯೇಕಿಸಲ್ಪಟ್ಟ ಈ ಸರೋವರವು ಕೆಲವು ಎಕರೆ ಪ್ರದೇಶಗಳಲ್ಲಿ ಹರಡಿಕೊಂಡಿದ್ದು ವಲಸೆ ಬಂದ ಹಕ್ಕಿಗಳಿಗೆ ಸಂತೋಷವನ್ನು ನೀಡುತ್ತದೆ . ಇಂತಹ ನೈಸರ್ಗಿಕ ಸೌಂದರ್ಯತೆ ಇರುವ ಸ್ಥಳಕ್ಕೆ ಖಂಡಿತವಾಗಿಯೂ ಭೇಟಿ ನೀಡಲೇ ಬೇಕು.

ಇದನ್ನೂ ಓದಿ: ಪುಲಿಕಾಟ್ ಲೇಕ್ ಭಾರತದ ಎರಡನೆಯ ಅತಿದೊಡ್ಡ ಲಗೂನ್ ಯಾಕೆ?

ಇದು ಪುಲಿಕಾಟಿನ ಇನ್ನೊಂದು ಪ್ರಮುಖ ಪ್ರವಾಸಿ ಸ್ಥಳವಾಗಿದ್ದು, ಈ ಅಭಯಾರಣ್ಯದ ಸೌಂದರ್ಯವನ್ನು ಆನಂದಿಸಲು ಇಷ್ಟವಿಲ್ಲದಿದ್ದರೂ, ಇಲ್ಲಿಯ ವೈವಿಧ್ಯಮಯವಾದ ಪಕ್ಷಿಗಳ ಆಕರ್ಷಣೆಯು ನಿಮ್ಮ ಪ್ರತೀ ಸಮಯವನ್ನು ಸುಂದರಗೊಳಿಸುತ್ತದೆ.ಆಕರ್ಷಣೆಯ ಕೇಂದ್ರವಾಗಿರುವ ಪ್ರಮುಖ ಜಾತಿಗಳಲ್ಲಿ ಫ್ಲೆಮಿಂಗೋಗಳು, ಪೆಲಿಕನ್ ಗಳು, ಪೇಂಟ್ ಕೊಕ್ಕರೆ, ಇತ್ಯಾದಿ ಸೇರಿವೆ.

ಇದನ್ನೂ ಓದಿ. ಭಾರತದ ಕಡಿಮೆ ಪ್ರಚಾರಕ್ಕೆ ಒಳಗಾಗಿರುವ 7 ಪಕ್ಷಿಧಾಮಗಳ ಬಗ್ಗೆ ಹಾಗೂ ನೀವು ಪಕ್ಷಿ ಪ್ರಿಯರಾಗಿದ್ದಲ್ಲಿ ಮತ್ತು ಅವುಗಳ ವೈವಿಧ್ಯಮಯ ಜಾತಿಗಳ ಬಗ್ಗೆ ಆಕರ್ಷಿತರಾಗಿದ್ದಲ್ಲಿ ನೀವು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬಹುದು .

ಡಚ್ ಸ್ಮಶಾನ

ಡಚ್ ಸ್ಮಶಾನ

PC- McKay Savage

ನೀವು ಈ ಪಟ್ಟಣದ ಇತಿಹಾಸವನ್ನು ತಿಳಿಯಬಯಸುವಿರಾದರೆ ನಿಮ್ಮ ಪಟ್ಟಿಯಲ್ಲಿ ಡಚ್ಚರ ಸ್ಮಶಾನವು ಖಂಡಿತವಾಗಿಯೂ ಸೇರುತ್ತದೆ. 1622 ರ ಸಮಯದ ಈ ಸ್ಥಳವು ಈಗ ಒಂದು ಪ್ರಮುಖ ಪುರಾತತ್ವ ಸ್ಥಳವಾಗಿದ್ದು, ಭಾರತದ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಅಡಿಯಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.

ಪುಲಿಕಾಟ್ ಮಾರುಕಟ್ಟೆಯ ಹಿಂದೆ ಇರುವ ಈ ಸ್ಮಶಾನದ ಸಮಾಧಿಯ ಮಧ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಮತ್ತು ಅವಶೇಷಗಳ ಅಡಿಯಲ್ಲಿ ಸಮಾಧಿ ಮಾಡಲಾದ ಈ ನಗರದ ಅದ್ಭುತ ಇತಿಹಾಸವನ್ನು ಅನ್ವೇಷಿಸಿ.

ಶತಮಾನಗಳ-ಹಳೆಯ ಪಾಳುಬಿದ್ದ ದೇವಾಲಯಗಳು ಮತ್ತು ಲೈಟ್ ಹೌಸ್ ನಂತಹ ಡಚ್ ​​ಕಟ್ಟಡಗಳು ಸೇರಿದಂತೆ ಹಲವಾರು ಇತರ ಐತಿಹಾಸಿಕ ಸ್ಮಾರಕಗಳನ್ನು ಪುಲಿಕಾಟ್ ನಲ್ಲಿ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X