Search
  • Follow NativePlanet
Share
» »ವಾರಣಾಸಿ : ಆಧ್ಯಾತ್ಮಿಕ ರಾಜಧಾನಿಗೊಂದು ತೀರ್ಥಯಾತ್ರೆ

ವಾರಣಾಸಿ : ಆಧ್ಯಾತ್ಮಿಕ ರಾಜಧಾನಿಗೊಂದು ತೀರ್ಥಯಾತ್ರೆ

By Vijay

ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ. ಮಹಾ ಹಾಗೂ ಭಾರತದ ಅತಿ ಪವಿತ್ರ ನದಿಯಾದ ಗಂಗೆಯ ತಟದಲ್ಲಿ ನೆಲೆಸಿರುವ ವಾರಣಾಸಿಯು ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ಪಡೆದಿರುವ ಪ್ರಮುಖ ಧಾರ್ಮಿಕ ನಗರವಾಗಿದೆ. ಅಲ್ಲದೆ ಹಿಂದೂ ಧರ್ಮದಲ್ಲಿ ಹೇಳಲಾಗಿರುವ ಏಳು ಪವಿತ್ರ ನಗರಗಳ (ಸಪ್ತ ಪುರಿ) ಪೈಕಿ ವಾರಣಾಸಿಯು ಅತಿ ಪ್ರಮುಖವಾಗಿದೆ.

ಹಿಂದೂ ಸಂಪ್ರದಾಯ ಹಾಗೂ ಇತರೆ ಆಚರಣೆಗಳನ್ನು ಅತಿ ಹತ್ತಿರದಿಂದ ನೋಡಬಯಸುವ ಪ್ರತಿಯೊಬ್ಬನೂ ವಾರಣಾಸಿ ನಗರಕ್ಕೊಮ್ಮೆ ಭೇಟಿ ನೀಡುವುದು ಅತಿ ಉತ್ತಮವಾದ ಆಯ್ಕೆ ಎಂದೆ ಹೇಳಬಹುದು. ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗಿರುವಂತೆ ಈ ಕ್ಷೇತ್ರವು ಎಷ್ಟೊಂದು ಪುಣ್ಯದಾಯಕವಾಗಿದೆ ಎಂದರೆ ಯಾವೋಬ್ಬ ವ್ಯಕ್ತಿಯು ಇಲ್ಲಿ ಸಾವನ್ನು ಪಡೆದರೆ ಅಥವಾ ಸತ್ತ ವ್ಯಕ್ತಿಯ ಅಂತಿಮ ಕ್ರಿಯೆಯನ್ನು ಇಲ್ಲಿ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ಲಭಿಸಿ ಮೋಕ್ಷ ಪಡೆಯುತ್ತಾರೆ. ಅಲ್ಲದೆ, ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವಂತೆ ಈ ಕ್ಷೇತ್ರವು ಶಿವನ ಅತ್ಯಂತ ನೆಚ್ಚಿನ ತಾಣವಾಗಿದೆ. ಆದುದರಿಂದಲೊ ಏನೊ ಇಲ್ಲಿ ಆಧ್ಯಾತ್ಮಿಕತೆಯ ಕಂಪು ನಗರದ ತುಂಬೆಲ್ಲ ಪಸರಿಸಿರುವುದನ್ನು ಭೇಟಿ ನೀಡಿದ ಸಂದರ್ಭದಲ್ಲಿ ಅನುಭವಿಸಬಹುದಾಗಿದೆ.

ಇಂದಿಗೂ ಸಹ ಸಾಕಷ್ಟು ಪ್ರಮಾಣದಲ್ಲಿ ಧಾರ್ಮಿಕ ಆಚರಣೆಗಳು ಇಲ್ಲಿ ನಿತ್ಯ ಜರುಗುತ್ತಿರುತ್ತವೆ. ಪ್ರತಿಯೊಂದು ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಕಾಶಿಯ ಮಹಾರಾಜ ಕಾಶಿ ನರೇಶನ ಪೂಜೆಯು ಒಂದು ಭಾಗವಾಗಿರುವುದನ್ನು ಗಮನಿಸಬಹುದು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಭಾಗವಾದ ಸುಪ್ರಸಿದ್ಧ ಬನಾರಸ್ ಘರಾನಾ ಸ್ಥಾಪನೆಯಾಗಿದ್ದೆ ವಾರಣಾಸಿಯಲ್ಲಿ. ಅಲ್ಲದೆ ಭಾರತದ ಅತಿ ಪ್ರಮುಖ ಆಧ್ಯಾತ್ಮಿಕ ಗುರುಗಳು, ಕವಿಗಳು, ಲೇಖಕರು, ಸಂಗೀತಗಾರರು ಹೀಗೆ ಹಲವು ಸಮಾಜದ ಮಂಚೂಣಿ ವ್ಯಕ್ತಿಗಳು ವಾರಣಾಸಿಯಲ್ಲಿ ವಾಸಿಸಿದ್ದಾರೆ ಹಾಗೂ ವಾಸಿಸುತ್ತಲೂ ಇದ್ದಾರೆ.

ಈ ಶ್ರೀ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೇವಾಲಯಗಳನ್ನು ನೋಡಬಹುದಾಗಿದ್ದು ಕಾಶಿ ವಿಶ್ವನಾಥನ ದೇವಾಲಯ ಮೊದಲ ಪ್ರಮುಖ ದೇವಾಲಯವಾಗಿದೆ. ಲಿಂಗರೂಪಿ ವಿಶ್ವನಾಥನ ದರುಶನ ಪಡೆಯಲು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಿರುತ್ತಾರೆ. ಅಲ್ಲದೆ ಹಿಂದೂ ಧರ್ಮದಲ್ಲಿ ವ್ಯಕ್ತಿಯ ಸಾವಿನ ನಂತರದಲ್ಲಿ ನಿರ್ವಹಿಸಲಾಗುವ ಕರ್ಮಾಚರಣೆಗಳು ಇಲ್ಲಿರುವ ಹಲವಾರು ಘಾಟ್ (ನದಿ ದಂಡೆಗಳು) ಪ್ರದೇಶಗಳಲ್ಲಿ ವಿಧ್ಯುಕ್ತವಾಗಿ ಜರುಗುತ್ತಿರುವುದನ್ನು ನೋಡಬಹುದು.

ವಾರಣಾಸಿಯನ್ನು ಸಂಚಾರದ ಪ್ರಮುಖ ಮೂರು ಮಾಧ್ಯಮಗಳಾದ ವಾಯುಯಾನ, ರೈಲು ಮಾರ್ಗ ಹಾಗೂ ರಸ್ತೆ ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ನಗರ ಕೇಂದ್ರ ಪ್ರದೇಶವಾದ ಬಾಬಾತ್ಪೂರ್ ನಿಂದ 26 ಕಿ.ಮೀ ದೂರದಲ್ಲಿ ಲಾಲ್ ಬಹಾದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಬೆಂಗಳೂರು, ಕೊಲ್ಕತ್ತಾ, ದೆಹಲಿ, ಮುಂಬೈ ಮುಂತಾದ ಮಹಾನಗರಗಳಿಂದ ಇಲ್ಲಿಗೆ ವಿಮಾನಗಳು ಲಭ್ಯವಿದೆ. ವಾರಣಾಸಿ ರೈಲು ನಿಲ್ದಾಣವು ಒಂದು ಜಂಕ್ಷನ್ ಆಗಿದ್ದು ಬಹುತೇಕ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ರಸ್ತೆ ಸಂಪರ್ಕವು ಸುಲಲಿತವಾಗಿದ್ದು ಹಲವಾರು ಪ್ರಮುಖ ನಗರಗಳಿಂದ ಬಸ್ಸುಗಳು ಲಭ್ಯವಿದೆ.

ವಾರಣಾಸಿ:

ವಾರಣಾಸಿ:

ಇದು ಪವಿತ್ರ ಗಂಗಾ ನದಿಯನ್ನು ಪೂಜಿಸುವ ಆಚರಣೆಯಾಗಿದೆ. ಈ ಆಚರಣೆಗೆ ಗಂಗಾ ಆರತಿ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Arian Zwegers

ವಾರಣಾಸಿ:

ವಾರಣಾಸಿ:

ಗಂಗಾ ಸ್ನಾನಂ ತುಂಗಾ ಪಾನಂ ಎನ್ನುವಂತೆ ಗಂಗೆಯಲ್ಲಿ ಮಿಂದು ಪುಣ್ಯ ಪಡೆಯಲು ಗಂಗೆಯ ದಡದಲ್ಲಿ ಸೇರಿರುವ ಜನ ಸಮೂಹ.

ಚಿತ್ರಕೃಪೆ: Davi1974d

ವಾರಣಾಸಿ:

ವಾರಣಾಸಿ:

ಗಂಗೆಯಲ್ಲಿ ಸವಾರಿ ಮಾಡುತ್ತ ವಿವಿಧ ಘಾಟ್ ಪ್ರದೇಶಗಳಿಗೆ ತೆರಳುತ್ತಿರುವ ಭಕ್ತಾದಿಗಳು.

ಚಿತ್ರಕೃಪೆ: FlickreviewR

ವಾರಣಾಸಿ:

ವಾರಣಾಸಿ:

ಬಹುಶಃ ಎಲ್ಲೂ ಕಾಣದ ದೃಶ್ಯವಿದು. ದಹನ ಕ್ರಿಯೆಗೂ ಸರತಿಯಲ್ಲಿ ಕಾದು ಕುಳಿತಿರುವ ದೇಹಗಳು.

ಚಿತ್ರಕೃಪೆ: Mandy

ವಾರಣಾಸಿ:

ವಾರಣಾಸಿ:

ಅಲ್ಲಲ್ಲೆ ಇಂತಿಷ್ಟು ಜಾಗದಲ್ಲಿ ನೆರವೇರಿಸಲಾಗುವ ದಹನ ಕ್ರಿಯೆಗಳು. ವಿಶೇಷವಾಗಿ ಈ ರೀತಿಯ ಕ್ರಿಯೆಗಳು ಇಲ್ಲಿನ ಮಣಿಕರ್ಣಿಕಾ ಘಾಟ್ ಪ್ರದೇಶದಲ್ಲಿ ನಡೆಯುತ್ತದೆ.

ಚಿತ್ರಕೃಪೆ: Arian Zwegers

ವಾರಣಾಸಿ:

ವಾರಣಾಸಿ:

ವಾರಣಾಸಿಯ ಅಹಿಲ್ಯಾ ಘಾಟ್ ಪ್ರದೇಶದ ಒಂದು ನೋಟ.

ಚಿತ್ರಕೃಪೆ:Ken Wieland

ವಾರಣಾಸಿ:

ವಾರಣಾಸಿ:

ಸಾಂಪ್ರದಾಯಿಕತೆಯಲ್ಲೂ ಆಧುನಿಕತೆ ತಳುಕು ಹಾಕಿಂಡಿರುವ ಒಂದು ಉದಾಹರಣೆ.

ಚಿತ್ರಕೃಪೆ: Yosarian

ವಾರಣಾಸಿ:

ವಾರಣಾಸಿ:

ಗಂಗೆಯ ತಟದಲ್ಲಿ ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ಒಂದು ಕುಟುಂಬ.

ಚಿತ್ರಕೃಪೆ: Arian Zwegers

ವಾರಣಾಸಿ:

ವಾರಣಾಸಿ:

ಗಂಗೆಯಲ್ಲಿ ತರ್ಪಣ ಬಿಡುತ್ತಿರುವ ದಂಪತಿಗಳು.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಶಿವಾಲಾ ಘಾಟ್ ಪ್ರದೇಶದಲ್ಲಿ ಸಾಮೂಹಿಕ ಪುಣ್ಯ ಸ್ನಾನ.

ಚಿತ್ರಕೃಪೆ: Antoine Taveneaux

ವಾರಣಾಸಿ:

ವಾರಣಾಸಿ:

ಗಂಗಾ ನದಿ ತೀರದಗುಂಟ ಹಬ್ಬಿರುವ ವಿವಿಧ ಘಾಟ್ ಪ್ರದೇಶಗಳು.

ಚಿತ್ರಕೃಪೆ: Ekabhishek

ವಾರಣಾಸಿ:

ವಾರಣಾಸಿ:

ಬೆಳಗಿನ ಸಮಯದಲ್ಲಿ ವಾರಣಾಸಿಯಲ್ಲಿ ಕಂಡು ಬರುವ ದೃಶ್ಯ.

ಚಿತ್ರಕೃಪೆ: Tomer T

ವಾರಣಾಸಿ:

ವಾರಣಾಸಿ:

ವಾರಣಾಸಿಯ ಗಂಗಾ ನದಿಯ ಒಂದು ತೀರದಲ್ಲಿ ಎಮ್ಮೆಗೂ "ಪುಣ್ಯ" ಸ್ನಾನ.

ಚಿತ್ರಕೃಪೆ: Arian Zwegers

ವಾರಣಾಸಿ:

ವಾರಣಾಸಿ:

ವಾರಣಾಸಿಯ ದರಭಂಗಾ ಅರಮನೆಯ ಘಾಟ್ ಪ್ರದೇಶ.

ಚಿತ್ರಕೃಪೆ: McKay Savage

ವಾರಣಾಸಿ:

ವಾರಣಾಸಿ:

ಪುಣ್ಯ ಸ್ನಾನಕ್ಕೆಂದು ಇರುವ ವಾರಣಾಸಿಯ ಮತ್ತೊಂದು ಘಾಟ್ ಪ್ರದೇಶ. ಅಸ್ಸಿ ಘಾಟ್.

ಚಿತ್ರಕೃಪೆ: Nandanupadhyay

ವಾರಣಾಸಿ:

ವಾರಣಾಸಿ:

ಹೆಚ್ಚು ಜನದಟ್ಟನೆ ಹೊದುವ ವಾರಣಾಸಿಯ ದಶಶ್ವಮೇಧ ಘಾಟ್.

ಚಿತ್ರಕೃಪೆ: Ilya Mauter

ವಾರಣಾಸಿ:

ವಾರಣಾಸಿ:

ವಾರಣಾಸಿಯ ಲಲಿತಾ ಘಾಟ್ ಪ್ರದೇಶದ ಒಂದು ದೃಶ್ಯ.

ಚಿತ್ರಕೃಪೆ: Ilya Mauter

ವಾರಣಾಸಿ:

ವಾರಣಾಸಿ:

ವಾರಣಾಸಿಯ ಗಂಗಾ ತೀರದ ಮತ್ತೊಂದು ತಾಣ ಮುನ್ಶಿ ಘಾಟ್.

ಚಿತ್ರಕೃಪೆ: Marcin Białek

ವಾರಣಾಸಿ:

ವಾರಣಾಸಿ:

ಸಿಂಧಿಯಾ ಘಾಟ್ ಪ್ರದೇಶದ ಒಂದು ವಿಹಂಗಮ ನೋಟ.

ಚಿತ್ರಕೃಪೆ: Ilya Mauter

ವಾರಣಾಸಿ:

ವಾರಣಾಸಿ:

ವಾರಣಾಸಿಯ ತುಳಸಿ ಘಾಟ್.

ಚಿತ್ರಕೃಪೆ: Nandanupadhyay

ವಾರಣಾಸಿ:

ವಾರಣಾಸಿ:

ವಾರಣಾಸಿಯ ಗಂಗಾ ನದಿ ತೀರದಲ್ಲಿ ಬಟ್ಟೆ ಒಗೆಯುವುದರಲ್ಲಿ ನಿರತರಾದ ಅಗಸರು.

ಚಿತ್ರಕೃಪೆ: Dennis Jarvis

ವಾರಣಾಸಿ:

ವಾರಣಾಸಿ:

ವಾರಣಾಸಿಯ "ಧೋಬಿ ಘಾಟ್".

ಚಿತ್ರಕೃಪೆ: ampersandyslexia

ವಾರಣಾಸಿ:

ವಾರಣಾಸಿ:

ನಾಗ್ ನಥೈಯ್ಯಾ ವಾರಣಾಸಿಯಲ್ಲಿ ಆಚರಿಸಲಾಗುವ ಒಂದು ಧಾರ್ಮಿಕ ಉತ್ಸವವಾಗಿದ್ದು, ಕೃಷ್ಣನು ಕದಂಬ ವೃಕ್ಷದ ಮೇಲೆ ನಿಂತಿರುವುದನ್ನು ಕಾಣಬಹುದು.

ಚಿತ್ರಕೃಪೆ: Nandanupadhyay

ವಾರಣಾಸಿ:

ವಾರಣಾಸಿ:

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ವಿಶ್ವನಾಥನನ್ನು ದರ್ಶಿಸುತ್ತಿರುವುದನ್ನು ಕಾಣಬಹುದು.

ಚಿತ್ರಕೃಪೆ: Vibhijain

ವಾರಣಾಸಿ:

ವಾರಣಾಸಿ:

ವಾರಣಾಸಿಯಲ್ಲಿರುವ ಬುದ್ಧನ ಧಾಮೇಕ ಸ್ತೂಪ. ಬುದ್ಧನು ತನ್ನ ಮೊದಲ ಧರ್ಮ ಪ್ರವಚನವನ್ನು ಇಲ್ಲಿಯೆ ನೀಡಿದ ಎನ್ನಲಾಗಿದೆ.

ಚಿತ್ರಕೃಪೆ: Ken Wieland

ವಾರಣಾಸಿ:

ವಾರಣಾಸಿ:

ವಾರಣಾಸಿಯ ಮಾರುಕಟ್ಟೆ ಪ್ರದೇಶ. ಮನುಷ್ಯರು, ದನಗಳು ಜೊತೆ ಜೊತೆಯಾಗಿ...

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ತಾಮ್ರ, ಹಿತ್ತಾಳೆಯ ಪರಿಕರಗಳು ದೊರಕುವ ವಾರಣಾಸಿಯ ಗ್ರಂಥಿಗೆ ಅಂಗಡಿ.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಬನಾರಸ್ ಪಾನ್ ಸವೆದರಿಗಷ್ಟೆ ಗೊತ್ತು ಅದರ ರುಚಿ.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಭಾರತೀಯ ಸಾಂಪ್ರದಾಯಿಕ ಆಭರಣದಂಗಡಿಯಲ್ಲಿ ಖರೀದಿಯಲ್ಲಿ ನಿರತ ವಿದೇಶಿ "ಭಾರತೀಯ" ಮಹಿಳೆಯರು.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಬನಾರಸ್ ರೇಷ್ಮೆ ಸೀರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ವಾರಣಾಸಿಯ ಘಾಟ್ ಪ್ರದೇಶಗಳಲ್ಲಿ ಕಂಡುಬರುವ ನಾಗಾ ಸಾಧುಗಳು.

ವಾರಣಾಸಿ:

ವಾರಣಾಸಿ:

ನಾಗಾ ಸಾಧುಗಳನ್ನು ಸಿದ್ಧಿ ಪುರುಷರು ಎಂದು ಕರೆಯಲಾಗುತ್ತದೆ.

ವಾರಣಾಸಿ:

ವಾರಣಾಸಿ:

ನಾಗಾ ಸಾಧುಗಳು ಶಿವನ ಅಪ್ರತಿಮ ಆರಾಧಕರಾಗಿದ್ದಾರೆ. ಕಾಶಿಯು ಶಿವನ ನೆಚ್ಚಿನ ಸ್ಥಳವಾಗಿರುವುದರಿಂದ ಈ ಸಾಧುಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Ekabhishek

ವಾರಣಾಸಿ:

ವಾರಣಾಸಿ:

ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿರುವ ಮಹಿಳೆ.

ವಾರಣಾಸಿ:

ವಾರಣಾಸಿ:

ದೇವರ ಪೂಜೆಗೆಂದು ಹೂಮಾಲೆಗಳನ್ನು ಮಾರುತ್ತಿರುವ ಪುಟ್ಟ ಬಾಲಕಿ.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಕಾಶಿ ರಾಜರ ದೋಣಿ ವಿಹಾರ. ಇವರು ಕಾಶಿ ರಾಜನ ವಂಶಸ್ಥರು.

ಚಿತ್ರಕೃಪೆ: Nandanupadhyay

ವಾರಣಾಸಿ:

ವಾರಣಾಸಿ:

ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ.

ವಾರಣಾಸಿ:

ವಾರಣಾಸಿ:

ವಿದೇಶಿ ಶಿವಭಕ್ತನೊಬ್ಬ ಶಿವಲಿಂಗವನ್ನು ಆರಾಧಿಸುತ್ತಿರುವ ರೀತಿ.

ವಾರಣಾಸಿ:

ವಾರಣಾಸಿ:

ಸ್ಥಳೀಯವಾಗಿ ನಿರ್ಮಿಸಲಾಗುವ ವಾರಣಾಸಿ ಫ್ಯಾನುಗಳು.

ಚಿತ್ರಕೃಪೆ: Jorge Royan

ವಾರಣಾಸಿ:

ವಾರಣಾಸಿ:

ಗಂಗಾ ನದಿ ತೀರದಿ ಕಂಡುಬರುವ ಮನಮೋಹಕ ಸೂರ್ಯಾಸ್ತ.

ಚಿತ್ರಕೃಪೆ: orvalrochefort

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X