Search
  • Follow NativePlanet
Share
» »ಕುಂಭ ರಾಶಿಯ ವ್ಯಕ್ತಿಗಳಾ ನೀವು? ಹಾಗಾದ್ರೆ ಈ ವರ್ಷ ಎಲ್ಲಿಗೆ ತಿರುಗಾಡಬೇಕೆಂದಿದ್ದೀರಿ?

ಕುಂಭ ರಾಶಿಯ ವ್ಯಕ್ತಿಗಳಾ ನೀವು? ಹಾಗಾದ್ರೆ ಈ ವರ್ಷ ಎಲ್ಲಿಗೆ ತಿರುಗಾಡಬೇಕೆಂದಿದ್ದೀರಿ?

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜನವರಿ20ರಿಂದ ಫೆಬ್ರವರಿ18 ರವರೆಗೆ ಜನಿಸಿದವರು ಕುಂಭ ರಾಶಿಯ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರಿ, ಕಾಲ್ಪನಿಕ ಹಾಗೂ ಕುತೂಹಲಕಾರಿ ವ್ಯಕ್ತಿಗಳಾಗಿರುತ್ತಾರೆ. ಜೀವನದಲ್ಲಿ ತಮ್ಮದೇ ಆದ ಮೋಜಿನಲ್ಲಿ ತೊಡಗಿರುತ್ತಾರೆ. ಆನಂದವನ್ನು ಪಡೆಯುತ್ತಾರೆ. ಯಾವುದೇ ವಿಷ್ಯದಲ್ಲಾದರೂ ಬಹಳ ಆಸಕ್ತಿ ಹಾಗೂ ಕುತೂಹಲವನ್ನು ಹೊಂದಿರುತ್ತಾರೆ. ಶ್ರೀನಗರ ಹಾಗೂ ಕೇರಳದಂತಹ ಸ್ಥಳಗಳು ಈ ರಾಶಿಯ ವ್ಯಕ್ತಿಗಳಿಗೆ ಇಷ್ಟವಾಗುತ್ತದೆ.

ಮಕರ ರಾಶಿಯವರಿಗೆ ಇಷ್ಟವಾಗೋ ತಾಣಗಳಿವು

ಗಾಡ್ಸ್‌ ಓವ್ನ್ ಕಂಟ್ರಿ

ಗಾಡ್ಸ್‌ ಓವ್ನ್ ಕಂಟ್ರಿ

PC: Panavalli

ಗಾಡ್ಸ್‌ ಓವ್ನ್ ಕಂಟ್ರಿ ಎನ್ನುವ ಕೇರಳವು ತನ್ನ ಹಚ್ಚ ಹಸುರಿನ ಪ್ರಕೃತಿ ಸೌಂಡರ್ಯದಿಂದಾಗಿ ಎಲ್ಲಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿನ ಹದಿನಾಲ್ಕು ಜಿಲ್ಲೆಗಳಾದ ಕಾಸರ್ಗೋಡ್, ಕಣ್ಣೂರ್, ವಾಯ್ನಾಡ್, ಕೋಳಿಕೋಡ್, ಮಲಪ್ಪುರಮ್, ಪಾಲಕ್ಕಾಡ್, ತ್ರಿಶ್ಶುರ್, ಎರ್ನಾಕುಲಮ್, ಇಡುಕ್ಕಿ, ಕೊಟ್ಟಾಯಮ್, ಆಲಪ್ಪುಳಾ (ಅಲ್ಲೆಪ್ಪಿ), ಪತ್ನಾಮತಿಟ್ಟಾ, ಕೊಲ್ಲಮ್, ತಿರುವನಂತಪುರಂ ಪ್ರಸಿದ್ಧ ಆಕರ್ಷಣೀಯ ಪ್ರವಾಸಿ ತಾಣಗಳಾಗಿವೆ.

ಗುರುವಾಯೂರ್ ಕೃಷ್ಣ ದೇವಸ್ಥಾನ

ಗುರುವಾಯೂರ್ ಕೃಷ್ಣ ದೇವಸ್ಥಾನ

PC:Kish

ಕೇರಳದ ಪ್ರಸಿದ್ಧ ದೇವಸ್ಥಾನವೆಂದರೆ ಗುರುವಾಯೂರ್ ಕೃಷ್ಣ ದೇವಸ್ಥಾನ. ಇದಲ್ಲದೆ ಇಡಿ ಭಾರತದಲ್ಲೆ ಪ್ರಖ್ಯಾತಿ ಪಡೆದ ಮತ್ತೊಂದು ದೇವಸ್ಥಾನವೆಂದರೆ ಶಬರಿಮಲ ಅಯ್ಯಪ್ಪ ದೇಗುಲ. ತ್ರಿಶ್ಶುರಿನ ಐರಾನಿಕುಲಂ ಮಹಾದೇವ ದೇವಸ್ಥಾನ, ತಿರುವನಂತಪುರಂ ನ ಪದ್ಮನಾಭಸ್ವಾಮಿ ದೇವಸ್ಥಾನ, ತಿರುವಲ್ಲಾ ಶ್ರೀವಲ್ಲಭ ದೇವಸ್ಥಾನ ಕೇರಳದಲ್ಲಿ ನೋಡಬಹುದಾದ ಇತರೆ ಜನಪ್ರಿಯ ದೇವಸ್ಥಾನಗಳಾಗಿವೆ.

ಮುನ್ನಾರ್

ಮುನ್ನಾರ್

PC:Jinomunnar

ಇಡುಕ್ಕಿ ಜಿಲ್ಲೆಯಲ್ಲಿರುವ ಮುನ್ನಾರ್ ನಂಬಲಸಾಧ್ಯವಾದಷ್ಟು ಅದ್ಭುತವಾಗಿರುವ ಒಂದು ಮನಮೋಹಕ ಗಿರಿಧಾಮವಾಗಿದೆ. ಈ ಗಿರಿಧಾಮವು ಪಶ್ಚಿಮ ಘಟ್ಟದ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಮುನ್ನಾರ್ ವಿರಾಮ ಕಾಲ ಕಳೆಯುವ ಸ್ಥಳ ಎಂಬುದರ ಜೊತೆಗೆ ಪರಿಸರ ಪ್ರೇಮಿಗಳಿಗೆ ಬೇಕಾಗುವ ಎಲ್ಲಾ ಅಂಶಗಳನ್ನು ತನ್ನೊಳಗೆ ಒಳಗೊಂಡಿದೆ. ಮೇರೆ ಇಲ್ಲದ ಟೀ ತೋಟಗಳು, ಪ್ರಶಾಂತವಾದ ಕಣಿವೆಗಳು, ಏರಿ ಇಳಿದು ಸಾಗಿರುವ ಬೆಟ್ಟಗಳ ಸಾಲು, ಮುನ್ನಾರ್ ಸುತ್ತಮುತ್ತಲಿನ ಜಲಪಾತಗಳು ತಮ್ಮ ಜಲಧಾರೆಗಳಿಗೆ ಹಾಗು ಸುತ್ತಲಿನ ಹಸಿರ ಸಿರಿಯಿಂದಾಗಿ ಪರಿಸರ ಪ್ರಿಯರನ್ನು ಪುಳಕಿತಗೊಳಿಸುತ್ತದೆ.

ಶ್ರೀನಗರ

ಶ್ರೀನಗರ

PC:Dr. Basharat Alam Shah

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಶ್ರೀನಗರವು ಭಾರತದೇಶದ ಅತ್ಯ೦ತ ಪ್ರಸಿದ್ಧವಾಗಿರುವ ಪ್ರವಾಸೀ ತಾಣಗಳ ಪೈಕಿ ಒ೦ದಾಗಿರುತ್ತದೆ. ವಿಶಾಲ ಶ್ರೇಣಿಯ ಒಣಹಣ್ಣುಗಳು, ವಿಶಿಷ್ಟ ಹಾಗೂ ಮನಮೋಹಕ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳು, ಹಾಗೂ ಸ್ವಾಧಿಷ್ಟವಾದ ಕಾಶ್ಮೀರೀ ತಿನಿಸುಗಳಿಗೆ ಶ್ರೀನಗರವು ತವರೂರಾಗಿದೆ.

ಸಾಹಸ ಕ್ರೀಡೆಗಳಿಗೆ ಫೇಮಸ್

ಸಾಹಸ ಕ್ರೀಡೆಗಳಿಗೆ ಫೇಮಸ್

PC: Stuti chakraborty

ಪಾರಾಗ್ಲೈಡಿ೦ಗ್, ನದಿಯಲ್ಲಿನ ದೋಣಿವಿಹಾರ (ರಾಪ್ಟಿ೦ಗ್), ಸ್ಕೈಯಿ೦ಗ್, ಮೀನುಗಾರಿಕೆ (ಫಿಶಿ೦ಗ್), ಗಾಲ್ಫ್ ಕ್ರೀಡೆ, ಹಾಗೂ ಚಾರಣಕ್ಕಾಗಿ ಶ್ರೀನಗರವು ಪ್ರಸ್ತುತ ಅತ್ಯುತ್ತಮವಾದ ಹಾಗೂ ಸ೦ದರ್ಶಿಸಲೇಬೇಕಾದ ತಾಣಗಳ ಪೈಕಿ ಒ೦ದಾಗಿರುತ್ತದೆ. ಹಿಮಾಲಯ ಪರ್ವತದ ವೀಕ್ಷಣೆಗೆ, ಪ್ರಶಾ೦ತವಾಗಿರುವ ಸರೋವರಗಳಿಗಾಗಿ, ಕಲುಷಿತಗೊಳ್ಳದ ಪ್ರಾಕೃತಿಕ ಸೌ೦ದರ್ಯದ ಸವಿನೋಟಗಳಿಗಾಗಿ ಹೇಳಿಮಾಡಿಸಿದ ನಗರ ಇದಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Pkvan

ಶ್ರೀನಗರಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾದ ಕಾಲಾವಧಿಯು ಮಾರ್ಚ್ ತಿ೦ಗಳಿನಿ೦ದ ಅಕ್ಟೋಬರ್ ತಿ೦ಗಳುಗಳ ನಡುವಿನ ಕಾಲಾವಧಿಯಾಗಿರುತ್ತದೆ. ಈ ಕಾಲಾವಧಿಯಲ್ಲಿ ಹವಾಮಾನ ಪರಿಸ್ಥಿತಿಯು ಪೂರಕವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more