Search
  • Follow NativePlanet
Share
» »ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ಕಲಿಯುಗ ದೈವವಾದ ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ಶ್ರೀಮನ್ನಾರಾಯಣನ ದಶಾವತಾರಗಳಿವೆ. ಅಂತಹ ವಿಭಿನ್ನವಾದ ದೇವಾಲಯವು ಆಂಧ್ರಪ್ರದೇಶದ ಅಮರಾವತಿಯಲ್ಲಿದೆ. ಪ್ರಪಂಚದಲ್ಲಿ ಇಂತಹ ವಿಗ್ರಹವು ಬೇರೆಲ್ಲೂ ಇಲ್ಲ ಎಂದು ಹೇಳಲಾಗುತ್ತದೆ. ಆಗಮ ಶಾಸ್ತ್ರದಿಂದ ನಿರ್ಮಿತವಾದ ಆ ವಿಗ್ರಹವು 11 ಅಡಿ ಎತ್ತರದಲ್ಲಿದೆ. ಪಾದದಿಂದ ಸೊಂಟದವರೆಗೆ ವರಾಹ, ಕೂರ್ಮ, ಮತ್ತ್ಯ ರೂಪದಲ್ಲಿ ಉಳಿದ ಏಳು ಅವತಾರಗಳು ಸೂಕ್ಷ್ಮವಾದ ಹಾಗೂ ಸುಂದರವಾದ ಕೆತ್ತನೆಗಳಿಂದ ಕೂಡಿದೆ. ಇಷ್ಟು ವಿಶಿಷ್ಟವಾದ ವಿಗ್ರಹವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಆವಿಷ್ಕರಿಸಿದರು.

ಈ ವಿಗ್ರಹ ಹಾಗೂ ಶಿಲ್ಪಿಯ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ನೇಟಿವ್ ಪ್ಲಾನೆಟ್ ನ ಮೂಲಕ ತಿಳಿದುಕೊಳ್ಳೋಣ.

 1. ಪ್ರಪಂಚದಲ್ಲಿ ಬೇರೆಲ್ಲೂ ಕಾಣದ ವಿಗ್ರಹ

1. ಪ್ರಪಂಚದಲ್ಲಿ ಬೇರೆಲ್ಲೂ ಕಾಣದ ವಿಗ್ರಹ

PC:YOUTUBE

ಇಂತಹ ವಿಭಿನ್ನವಾದ ವಿಗ್ರಹವು ಪ್ರಪಂಚದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಗುರುತಿಸಲಾಗಿದೆ. ಈ ವಿಶಿಷ್ಟವಾದ ವಿಗ್ರಹವು ಆಂಧ್ರಪ್ರದೇಶ ರಾಜ್ಯದ ಅಮರಾವತಿಯಲ್ಲಿ ಕಾಣಬಹುದು.

2. ದಶಾವತಾರ ವಿಗ್ರಹ

2. ದಶಾವತಾರ ವಿಗ್ರಹ

PC:YOUTUBE

ವೆಂಕಟೇಶ್ವರ ಸ್ವಾಮಿಯ ದಶಾವತಾರವನ್ನು ಹೊಂದಿರುವ ವಿಗ್ರಹವನ್ನು ಇಲ್ಲಿ ಕಾಣಬಹುದು. ಕಲಿಯುಗದ ಪ್ರತ್ಯಕ್ಷ ದೇವರೆಂದು ಆರಾಧಿಸುವ ಶ್ರೀನಿವಾಸನನ್ನು ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.

3. ವಿಶೇಷವಾದ ವಿಗ್ರಹ

3. ವಿಶೇಷವಾದ ವಿಗ್ರಹ

PC:YOUTUBE

ಒಂದು ಮೂರ್ತಿಯಲ್ಲಿ ದಶಾವತಾರ ರೂಪವನ್ನು ಹೊಂದಿರುವ ಏಕೈಕ ವಿಗ್ರಹ ಇದೊಂದೇ ಎಂದೇ ಹೇಳಬಹುದು. ಇಂತಹ ವಿಶಿಷ್ಟವಾದ ವಿಗ್ರಹವು ಭಾರತ ದೇಶದಲ್ಲಿಯೇ ಅಲ್ಲದೆ ಪ್ರಪಂಚದಲ್ಲಿಯೇ ಇದೊಂದೇ ಎಂದೇ ಹೇಳಬಹುದು.

4. ಎಲ್ಲಿದೆ ?

4. ಎಲ್ಲಿದೆ ?

PC:YOUTUBE

ಗುಂಟೂರು, ವಿಜಯವಾಡ ಸಮೀಪದ ದಾರಿಯಲ್ಲಿರುವ ನಾಗಾರ್ಜುನ ವಿಶ್ವವಿದ್ಯಾಲಯ ಎದುರು ಸುವಿಶಾಲ ಸ್ಥಳದಲ್ಲಿ ಈ ಶ್ರೀಮನ್ನಾರಾಯಣನ ದೇವಾಲಯವಿರುವುದನ್ನೂ ಕಾಣಬಹುದು.

5. ವಿಶಾಲವಾದ ಸ್ಥಳದಲ್ಲಿ ದೇವಾಲಯ

5. ವಿಶಾಲವಾದ ಸ್ಥಳದಲ್ಲಿ ದೇವಾಲಯ

PC:YOUTUBE

ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯಕ್ಕೆ ನಾಲ್ಕು ಉಪ ದೇವಾಲಯಗಳು ಕೂಡ ಇದೆ.

6. ಉಪ ದೇವಾಲಯಗಳು

6. ಉಪ ದೇವಾಲಯಗಳು

PC:YOUTUBE

ಶ್ರೀಮನ್ನಾರಾಯಣನ ದೇವಾಲಯದ ಜೊತೆಗೆ ನಾಲ್ಕು ಉಪ ದೇವಾಲಯಗಳು ಕೂಡ ಇದೆ ಅವುಗಳೆಂದರೆ, ಮಹಾಲಕ್ಷ್ಮಿ ದೇವಾಲಯ, ಗಣಪತಿ ದೇವಾಲಯ, ಗರುಡ ಹಾಗೂ ಆಳ್ವರ್ ದೇವಾಲಯಗಳು ಇರುವುದನ್ನು ಕಾಣಬಹುದು. ಆದ್ದರಿಂದಲೇ ಈ ಕ್ಷೇತ್ರವನ್ನು "ದಶಾವತಾರ ಶ್ರೀನಿವಾಸ ಕ್ಷೇತ್ರ" ಎಂದು ಕೂಡ ಕರೆಯುತ್ತಾರೆ.

7. ಆಗಮ ಶಾಸ್ತ್ರದ ಪ್ರಕಾರ

7. ಆಗಮ ಶಾಸ್ತ್ರದ ಪ್ರಕಾರ

PC:YOUTUBE

ದೇವಾಲಯವನ್ನು ಆಗಮಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ವಿಗ್ರಹವನ್ನು ತಯಾರು ಮಾಡಿದ ಶಿಲ್ಪಿ ಯಿಂದ ಹಿಡಿದು ಪ್ರತಿಯೊಬ್ಬರೂ ಕೂಡ ಆಗಮ ಶಾಸ್ತ್ರವನ್ನು ಅನುಸರಿಸಿದ್ದಾರೆ.

8. ಶಿಲ್ಪಿ

8. ಶಿಲ್ಪಿ

PC:YOUTUBE

ಶಿಲ್ಪಿಯಾದ ರಮಣರು ಮೊದಲು ಶ್ರೀಮನ್ನಾರಾಯಣನ ವಿಗ್ರಹದ ಚಿತ್ರವನ್ನು ಬಿಡಿಸಿದರು. ಅದನ್ನು ಕರ್ನೂಲ್ ಜಿಠಿಲ್ಲೆಯ ಹಳ್ಳ ಗಡ್ಡಕ್ಕೆ ಸೇರಿದ ಶಿಲ್ಪಿ ಸುಬ್ರಹ್ಮಣ್ಯ ಆಚಾರಿಗಳು ಈ ದೇವಾಲಯವನ್ನು ಕಲ್ಲಿನಿಂದ ನಿರ್ಮಿಸಿದರು.

9. ಧ್ವಜಸ್ಥಂಬ ಸಮೀಪದಲ್ಲಿ

9. ಧ್ವಜಸ್ಥಂಬ ಸಮೀಪದಲ್ಲಿ

PC:YOUTUBE

ವೆಂಕಟೇಶ್ವರ ಸ್ವಾಮಿಯ ಎದುರಿನಲ್ಲಿರುವ ಧ್ವಜ ಸ್ತಂಭದ ಮುಂದೆ ಗಣಪತಿ ಹಾಗೂ ಗರುಡ ಆಳ್ವರ್ ಉಪ ದೇವಾಲಯಗಳಿವೆ. ಆ ದೇವಾಲಯಗಳ ಮೂರ್ತಿಗಳು ಅತ್ಯಂತ ರಮಣೀಯವಾಗಿವೆ.

10. ದಶಾವತಾರಗಳು

10. ದಶಾವತಾರಗಳು

PC:YOUTUBE

ಮಹಾ ವಿಷ್ಣುವಿನ ದಶಾವತಾರವಾದ ಶ್ರೀನಿವಾಸ, ನರಸಿಂಹ , ವರಹ ಮುಖವನ್ನು ಹೊಂದಿ, ವಾಮನ, ಪರಶುರಾಮ , ರಾಮ, ಬಲರಾಮ, ಕಲ್ಕಿ ಅವತಾರಗಳು ಆಯುಧಗಳಾಗಿ ಮತ್ಸ್ಯ, ಕೂರ್ಮ ಅವತಾರಗಳು ದೇಹದ ರೂಪವನ್ನು ಹೊಂದಿರುವ ವಿಶಿಷ್ಟವಾದ ಏಕಶಿಲಾ ವಿಗ್ರಹವೇ ಈ ದಶಾವತಾರ ವೆಂಕಟೇಶ್ವರ ವಿಗ್ರಹವಾಗಿದೆ

11. ಯಾರು ನಿರ್ಮಿಸಿದರು

11. ಯಾರು ನಿರ್ಮಿಸಿದರು

PC:YOUTUBE

ತಿರುಪತಿ ಶ್ರೀ ವೆಂಕಟೇಶ್ವರನ ಪರಮಭಕ್ತನಾದ ರಮೇಶ್ ಪ್ರಪಂಚದಲ್ಲಿಯೇ ವಿಭಿನ್ನವಾದ ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ಕೊಂಡಿದ್ದರು. ಅವಧೂತ ದತ್ತ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ದೇವಾಲಯದ ನಿರ್ಮಾಣ ಹಾಗೂ ವಿಗ್ರಹ ಕೆತ್ತನೆ ನಡೆಯಿತು. ಪ್ರಸ್ತುತ ಇದೊಂದು ಅತ್ಯುತ್ತಮ ಪ್ರವಾಸಿ ಹಾಗೂ ಆಧ್ಯಾತ್ಮಿಕ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more