Search
  • Follow NativePlanet
Share
» »ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹನುಮಂತ ಎಂದರೆ ಬಲಶಾಲಿಗೆ ಹಾಗು ಸ್ವಾಮಿ ಭಕ್ತಿಗೆ ತಕ್ಕ ದೇವತೆ. ಆತನ ಸ್ವಾಮಿ ನಿಷ್ಟೆ ಎಲ್ಲರಿಗೂ ಪ್ರಿಯವಾದುದು. ಆ ಶ್ರೀ ರಾಮ ಭಕ್ತನಾದ ಹನುಮಂತನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಜೀವಿಯಲ್ಲಿಯೂ ದೇವತೆಗಳನ್ನು ಕಾಣುವುದು ನ

ಹನುಮಂತ ಎಂದರೆ ಬಲಶಾಲಿಗೆ ಹಾಗು ಸ್ವಾಮಿ ಭಕ್ತಿಗೆ ತಕ್ಕ ದೇವತೆ. ಆತನ ಸ್ವಾಮಿ ನಿಷ್ಟೆ ಎಲ್ಲರಿಗೂ ಪ್ರಿಯವಾದುದು. ಆ ಶ್ರೀ ರಾಮ ಭಕ್ತನಾದ ಹನುಮಂತನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಜೀವಿಯಲ್ಲಿಯೂ ದೇವತೆಗಳನ್ನು ಕಾಣುವುದು ನಮ್ಮ ಹಿಂದೂ ಧರ್ಮದ ಸಂಸ್ಕøತಿ. ಆಂಜನೇಯನು ದುಷ್ಟರನ್ನು ನಿಗ್ರಹಿಸುವ ಶಿಷ್ಟರನ್ನು ರಕ್ಷಿಸುವ ಮಹಾ ಬಲಶಾಲಿಯಾಗಿರುವ ಅಂಜನಾಸುತನಾಗಿದ್ದಾನೆ.

ಯಾವುದೇ ದೇವರನ್ನು ಭಕ್ತಿಯಿಂದ ನಾವು ಆರಾಧನೆ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ದೇವರಿಗೆ ದಂಡನೆ ಮಾಡುವುದಿಲ್ಲ. ದೇವರು ಮಾನವರು ಮಾಡುವ ತಪ್ಪಿಗೆ ಕೆಲವು ದಂಡನೆಗಳನ್ನು ವಿಧಿಸುತ್ತಾನೆ. ಆದರೆ ದೇವರಿಗೆ ದಂಡನೆ ನೀಡಿರುವುದನ್ನು ನೀವು ಎಲ್ಲಿಯಾದರೂ ಕೇಳಿದ್ದೀರಾ?

ಹಾಗಾದರೆ ಬನ್ನಿ ಪ್ರಸ್ತುತ ಲೇಖನದಲ್ಲಿ ಆಂಜನೇಯ ಸ್ವಾಮಿಗೆ ಬೇಡಿಗಳಿಂದ ಕಟ್ಟಿ ಹಾಕಿದ್ದಾರೆ. ಹೀಗೆ ಬಂಧಿಸಲು ಕಾರಣವೇನು? ಎಂಬ ಹಲವಾರು ಪ್ರೆಶ್ನೆಗಳ ಬಗ್ಗೆ ಕುತೂಹಲಕಾರಿಯಾದ ಮಾಹಿತಿಯನ್ನು ಪಡೆಯೋಣ.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಅಸಲಿಗೆ ಈ ವಿಚಿತ್ರವಾದ ದೇವಾಲಯವಿರುವುದು ಒಡಿಶಾದಲ್ಲಿ. ಮೊದಲನೇಯದಾಗಿ ಒಡಿಶಾ ರಾಜ್ಯದಲ್ಲಿರುವ ಆಂಜನೇಯ ದೇವಾಲಯದ ಬಗ್ಗೆ ತಿಳಿಯೋಣ. ಒಡಿಶಾದಲ್ಲಿರುವ ಜಗನ್ನಾಥ ಪುರಿ ಕ್ಷೇತ್ರವು ಅಪಾರವಾಗಿ ಧಾರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿದೆ.

I, G-u-t

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಭಾರತ ದೇಶದಲ್ಲಿಯೇ ಅತ್ಯಂತ ಪ್ರಸಿದ್ಧವಾದ ದೇಶಗಳಲ್ಲಿ ಜಗನ್ನಾಥ ದೇವಾಲಯವು ಕೂಡ ಒಂದು. ಈ ಪುಣ್ಯಕ್ಷೇತ್ರದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದೆ. ಈ ದೇವಾಲಯವನ್ನು ದರಿಯಾ ಮಹಾವೀರ ದೇವಾಲಯ ಎಂದು ಕೂಡ ಕರೆಯುತ್ತಾರೆ.

Bpkp

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಪುರಿಯಲ್ಲಿ ನಡೆಯುವ ಜಗನ್ನಾಥನಿಗೆ ಸಂಬಂಧಿಸಿದ ರಥ ಯಾತ್ರೆಯು ಅತ್ಯಂತ ವಿಶೇಷವಾಗಿಯೂ ಮಹತ್ವದ್ದಾಗಿಯೂ ಇರುತ್ತದೆ. ಇದು ಮೂಲವಾಗಿ ಜಗನ್ನಾಥನು ಮಾವಸಿಯ ಸನ್ನಿಧಿಯ ಮೂಲಕ ಗುಂಡಿಚಾ ಎಂಬ ಮಂದಿರಕ್ಕೆ ಭೇಟಿ ನೀಡಿ ಕೆಲ ಸಮಯ ಅಲ್ಲಿಯೇ ತಂಗಿ ಮತ್ತೆ ಮರಳುವುದರ ಸಂಕೇತವಾಗಿದೆ.

Radeeh

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಇಲ್ಲಿ ನಡೆಯುವ ಉತ್ಸವವು ವಾರ್ಷಿಕವಾಗಿ ಪ್ರತಿ ಆಷಾಢ ಮಾಸದಲ್ಲಿ ನಡೆಯುವ ಹಬ್ಬವಾಗಿದೆ. ಅಂದರೆ ಜುಲೈ ತಿಂಗಳಲ್ಲಿ ಈ ಅದ್ಭುತವಾದ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.

I, G-u-t

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹೀಗೆ ಜಗನ್ನಾಥನು ಹಿಂತಿರುಗುವ ಜಾತ್ರೆಯನ್ನು "ಬಹುದಾ ಜಾತ್ರೆ" ಎಂದು ಕರೆಯುತ್ತಾರೆ. ಹಾಗೆಯೇ ಲಕ್ಷಾನನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಅದ್ಭುತವಾದ ಉತ್ಸವದಲ್ಲಿ ಜಗತ್ತಿನ ನಾನಾ ಭಾಗಗಳಿಂದ ಪಾಲ್ಲೊಳ್ಳುತ್ತಾರೆ.

Ilya Mauter

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಪುರಿಯಲ್ಲಿರುವ ಚಕ್ರನಾರಾಯಣನ ದೇವಾಲಯದ ಪಶ್ಚಿಮಕ್ಕೆ ಸುಭಾಸ್ ಬೋಸ್ ಎಂಬ ಚೌಕದಿಂದ ಪೆಂತಕತಾಗೆ ಸಂಪರ್ಕ ಕಲ್ಪಿಸುವ ಚಕ್ರತೀರ್ಥ ರಸ್ತೆಯ ಎಡ ಬದಿಯಲ್ಲಿ ಒಂದು ದರಿಯಾ ಮಹಾವೀರನ ದೇವಾಲಯವಿದೆ. ಸಾಮಾನ್ಯವಾಗಿ ದರಿಯಾ ಎಂದರೆ ಸಮುದ್ರ ಎಂಬರ್ಥವಿದೆ.

Indi Samarajiva

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಅಂದರೆ ಮಹಾವೀರನಾದ ಹನುಮನು ಸಮುದ್ರದಿಂದ ನಗರವನ್ನು ಕಾಪಾಡುತ್ತಿರುವ ಮಹಾನುಭಾವ ಎಂಬ ನಂಬಿಕೆ ಅಲ್ಲಿನ ಜನರದ್ದು, ಹಾಗಾಗಿಯೇ ಈ ಸ್ವಾಮಿಯನ್ನು ದರಿಯಾ ಮಹಾವೀರ ದೇವಾಲಯ ಎಂದು ಕರೆಯಲಾಗುತ್ತದೆ.

J'ram DJ

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹನುಂತನನ್ನು ಬೇಡಿಯಿಂದ ಬಂಧಿಸಿದ್ದಾರೆ ಇದರ ಸ್ಥಳ ಪುರಾಣವೇನೆಂದರೆ, ಒಂದೊಮ್ಮೆ ಜಗನ್ನಾಥ ಈ ಕ್ಷೇತ್ರದಲ್ಲಿ ನೆಲೆಸಿದ ನಂತರ ಅವನ ದರ್ಶನ ಕೋರಿ ಸಮುದ್ರ ದೇವನು ಈ ದೇವಾಲಯಕ್ಕೆ ಭೇಟಿ ನೀಡಿದನು.

vimal_kalyan

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆ ಸಮಯದಲ್ಲಿ ಸಮುದ್ರದ ನೀರು ಈ ಪ್ರದೇಶದಳಗೆಲ್ಲಾ ನುಗ್ಗಿ ಅಪಾರ ಹಾನಿಗಳುಂಟಾದವು. ಜನರು ಈ ಕುರಿತು ಜಗನ್ನಾಥನನ್ನು ಪ್ರಾರ್ಥಸಿದರು. ಜಗನ್ನಾಥನು ರಕ್ಷಕನಾದ ಆಂಜನೇಯನನ್ನು ಕುರಿತು ವಿಚಾರಿಸಿದಾಗ ಹನುಮನು ಅವನ ಅಪ್ಪಣೆ ಪಡೆಯದೆ ಅಯೋಧ್ಯೆಗೆ ತೆರಳಿರುವ ವಿಚಾರ ತಿಳಿಯಿತು.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಇದರಿಂದ ಕೋಪಿಗೊಂಡ ಜಗನ್ನಾಥನು, ಈ ಕ್ಷೇತ್ರವನ್ನು ಹಗಲು-ರಾತ್ರಿ ಕಾಯುವ ಜವಾಬ್ದಾರಿಯನ್ನು ಮರೆತು ಹೋಗಿದ್ದ ಹನುಮನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಇನ್ನು ಮುಂದೆ ಇಲ್ಲಿಯೇ ಸದಾ ನೆಲೆಸಿದ್ದು, ಈ ಕ್ಷೇತ್ರವನ್ನು ಸಮುದ್ರ ನೀರು ಸೇರದಂತೆ ಕಾಯಬೇಕು ಎಂದು ಹೇಳಿದನು.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹೀಗಾಗಿಯೇ ಆ ಹನುಮಂತನಿಗೆ "ಬೇಡಿ ಹನುಮಂತ" ಎಂದು ಕರೆಯುತ್ತಾರೆ. ಸ್ಥಳೀಯರ ಪ್ರಕಾರ ಈ ಸ್ಥಳದಲ್ಲಿ ಸಮುದ್ರ ತೀರದಲ್ಲಿದ್ದರೂ ಕೂಡ ಯಾವ ಬಿರುಗಾಳಿಯ ಸಂದರ್ಭದಲ್ಲೂ ಸಮುದ್ರ ನೀರು ಇಲ್ಲಿ ಹೊಕ್ಕಿಲ್ಲ ಎನ್ನಲಾಗುತ್ತಿದೆ.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

2ನೇಯದಾಗಿ ಆಂಧ್ರ ಪ್ರದೇಶದ ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರನ ದೇವಾಲಯದ ಆವರಣದಲ್ಲಿ ಬೇಡಿ ಆಂಜನೇಯನ ಸನ್ನಿಧಿಯನ್ನು ಕಾಣಬಹುದು. ಇದನ್ನು ಕೂಡ "ಬೇಡಿ ಆಂಜನೇಯ ಸ್ವಾಮಿ ದೇವಾಲಯ" ಎಂದು ಕರೆಯುತ್ತಾರೆ.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ವೆಂಕಟೇಶ್ವರ ಸ್ವಾಮಿ ಹಾಗು ಭೂ ವರಹಸ್ವಾಮಿಯ ನಂತರ ಇದಕ್ಕೆ ಹೆಚ್ಚಿನ ಮನ್ನಣೆಯನ್ನು ಪಡೆದಿದೆ. ಆ 2 ದೇವಾಲಯಗಳಲ್ಲಿಯೂ ನೈವೇದ್ಯ ಅರ್ಪಿಸಿದ ನಂತರ ಅದನ್ನು ಈ ದೇವಾಲಯಕ್ಕೆ ತರಲಾಗುತ್ತದೆ.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ವೆಂಕಟೇಶ್ವರ ಸ್ವಾಮಿ ದೇವಾಲಯದ ಸಮೀಪದಲ್ಲಿರುವ ಹನುಮಂತನಿಗೆ ಬೇಡಿ ಹಾಕಿರುವ ಕಾರಣವೇನು ಎಂದರೆ, ಹನುಮಂತನು ತನ್ನ ತರುಣಾವಸ್ಥೆಯಲ್ಲಿದ್ದಾಗ ಒಂಟೆಯೊಂದನ್ನು ಹುಡುಕಲು ತಿರುಮಲ ಕ್ಷೇತ್ರ ಬಿಟ್ಟು ಹೊರಡಲು ಸಜ್ಜಾಗಿದ್ದ.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಅವನ ಹಟ ಮಾರಿತನವನ್ನು ಸಹಿಸಲಾರದೆ ತಾಯಿ ಅಂಜನ ದೇವಿಯು ಆತನ ಕೈಗಳನ್ನು ಸರಪಣಿಗಳಿಂದ ಬಂಧಿಸಿ ತಾನು ಮರಳುವವರೆಗೆ ಎಲ್ಲಿಯೂ ಕದಲ ಬಾರದು ಎಂದು ಆದೇಶಿಸಿ ಆಕಾಶ ಗಂಗೆಯತ್ತ ಹೊರಟು ಹೋದಳು.

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹೀಗೆ ಹೊರ ಹೋದ ಅಂಜನಾ ದೇವಿ ಮತ್ತಿನೆಂದೂ ಮರಳಲಿಲ್ಲ ಎಂದು ನಂಬಲಾಗಿದೆ. ಹಾಗಾಗಿಯೇ ಇಂದಿಗೂ ಆಂಜನೇಯ ಸ್ವಾಮಿಯು ಸಂಕೋಲೆಯಿಂದ ಬಂಧಿಸಲ್ಪಟ್ಟಿದ್ದಾನೆ. ಹಾಗೆಯೇ ತನ್ನ ತಾಯಿಯ ಬರುವಿಕೆಗೆ ಕಾಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X