Search
  • Follow NativePlanet
Share
» »ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ಕೋಲಾರದ ತಾಯಿ ಚೌಡೇಶ್ವರಿ ಮಹಿಮೆಯನ್ನು ಕಂಡಿದ್ದೀರಾ?

ಇಲ್ಲಿನ ಜನರು ಈ ದೇವಿಯನ್ನು ಬಲವಾಗಿ ನಂಬುತ್ತಾರೆ. ಬೇವಿನ ಮರದಡಿಯಲ್ಲಿರುವ ಈ ಚೌಡೇಶ್ವರಿ ವಿಗ್ರಹದಿಂದ ಅನೇಕರು ಒಳಿತನ್ನು ಕಂಡಿದ್ದಾರೆ. ಇಲ್ಲಿ ನಂಬಿ ನಡೆದವರು ಉತ್ತಮರಾಗಿದ್ದಾರೆ. ಒಳ್ಳೆ ವಿಚಾರಕ್ಕೆ ಬೇಡಿದರೆ ಅವರ ಆಸೆ ಈಡೇರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.ಅಂತಹ ದೇವಿಯ ದೇವಾಲಯದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: Ashok reddy

ಕೋಲಾರ ಜಿಲ್ಲೆಯ ಬೆಗ್ಗಲಿ ಹೊಸಳ್ಳಿ ಗ್ರಾಮದ ಬಳಿ . ಇಲ್ಲಿದೆ ಚೌಡೇಶ್ವರಿ ಮಂದಿರ. ಕೋಲಾರದಿಂದ ಟೇಕಲ್‌ಗೆ ಹೋಗುವ ರಸ್ತೆಯಲ್ಲಿ 7-8 ಕಿ.ಮೀ ಹೋದರೆ ಬೆಗ್ಗಲಿ ಹೊಸಳ್ಳಿ ಗ್ರಾಮ ಸಿಗುತ್ತದೆ. ಇಲ್ಲೇ ಸಮೀಪದಲ್ಲಿದೆ ಚೌಡೇಶ್ವರಿ ದೇವಾಲಯ.

 ಸಪ್ತಮಾತೃಕೆಯರು

ಸಪ್ತಮಾತೃಕೆಯರು

ಶತಮಾನಕ್ಕೆ ಸಂಬಂಧಿಸಿದ ಚೌಡೇಶ್ವರಿ ವಿಗ್ರಹ ಹಾಗೂ ಸಪ್ತಮಾತೃಕೆಯರ ವಿಗ್ರಹವು ಇಲ್ಲೇ ಒಂದು ಸಣ್ಣ ಮಂಟಪದಲ್ಲಿತ್ತು. ಶಿಥೀಲಾವಸ್ಥೆಯಲ್ಲಿದ್ದರಿಂದ ಆ ಮಂಟಪವನ್ನು ಒಡೆದು ಹೊಸ ಮಂದಿರ ನಿರ್ಮಾಣ ಮಾಡಬೇಕೆಂದು ಯೋಚಿಸಿದರು. ಆದರೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಇತ್ತು.

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಬೇವಿನ ಮರದಡಿ

ಬೇವಿನ ಮರದಡಿ


ಕೊನೆಗೆ ಬೈಯಣ್ಣ ಎನ್ನುವ ವ್ಯಕ್ತಿ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರು. ಕೊನೆಗೆ ಬೈಯಣ್ಣನಿಗೆ ಕನಸಿನಲ್ಲಿ ತಾಯಿ ಚೌಡೇಶ್ವರಿ ದೇವಾಲಯ ನಿರ್ಮಿಸಲು ಕನಸಿನಲ್ಲಿ ಬಂದಿತು.ಅದರಂತೆಯೇ ಹೊಸ ಮಂದಿರವನ್ನುನಿರ್ಮಿಸಲು ಪ್ರಾರಂಭಿಸಲಾಯಿತು.ಹಳೆ ಮಂಟವನ್ನುಕೆಡವಲಾಯಿತು. ಚೌಡೇಶ್ವರಿ ಹಾಗೂ ಸಪ್ತಮಾತ್ರಿಕೆಯರ ವಿಗ್ರಹವನ್ನು ಧರ್ಮಸ್ಥಳದ ನೇತ್ರಾವತಿಯಲ್ಲಿ ಹರಿಯ ಬಿಡಲು ನಿರ್ಧರಿಸಿ.ಆ ಕಲ್ಲುಗಳನ್ನು ತೆಗೆದು ಬೇವಿನ ಮರದಡಿಯಲ್ಲಿಡಲಾಯಿತು.

ಮಂದಿರದೊಳಗೆ ಹೋಗದ ಉತ್ಸವ ಮೂರ್ತಿ

ಮಂದಿರದೊಳಗೆ ಹೋಗದ ಉತ್ಸವ ಮೂರ್ತಿ

ಹೊಸ ವಿಗ್ರವನ್ನು ಗರ್ಭಗುಡಿಯಲ್ಲಿಡಲಾಯಿತು. ಆದರೆ ಉತ್ಸವ ಮೂರ್ತಿಯನ್ನು ಮಂದಿರದೊಳಗೆ ಇಡಲು ಸಾಧ್ಯವಾಗಲಿಲ್ಲ. ಪ್ರಶ್ನೆ ಇಟ್ಟಾಗ ಚೌಡೇಶ್ವರಿ ವಿಗ್ರಹ ಹಾಗೂ ಸಪ್ತ ಮಾತ್ರಿಕೆಯರ ವಿಗ್ರಹವನ್ನು ನೀರಿನಲ್ಲಿ ಬಿಡಬಾರದೆಂದು ಹೇಳಲಾಯಿತು. ಮತ್ತೆ ಆ ವಿಗ್ರಹವನ್ನು ಮೂಲಸ್ಥಾನದಲ್ಲೇ ಇಡಲಾಯಿತು.

 ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ ! ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !

ಚೌಡೇಶ್ವರಿ ಮಂದಿರ

ಚೌಡೇಶ್ವರಿ ಮಂದಿರ

ಈ ಕಲ್ಲಿಗೆ ಪೂಜೆ ಮಾಡಲು ಪ್ರಾರಂಭಿಸಿದ ನಂತರ ಪಕ್ಕದಲ್ಲೇ ಇರುವ ಹೊಸ ಮಂದಿರದಲ್ಲಿ ನಿರ್ಮಿಸಲಾಗಿರುವ ಚೌಡೇಶ್ವರಿ ಮಂದಿರದಿಂದ ಅಚ್ಚರಿಗಳು, ಅದ್ಭುತಗಳು ನಡೆಯಲು ಪ್ರಾರಂಭವಾಯಿತು.ಇಲ್ಲಿನ ಶಕ್ತಿಯಿಂದಾಗಿ ಸಹಸ್ರಾರು ಜನರು ಒಳಿತು ಕಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X