Search
  • Follow NativePlanet
Share
» »ವಿಶಾಖಪಟ್ಟಣಂನಿಂದ ಕೆಲವೇ ದೂರದಲ್ಲಿರುವ ಚಿಂತಪಲ್ಲಿಗೆ ಭೇಟಿ ನೀಡಿ

ವಿಶಾಖಪಟ್ಟಣಂನಿಂದ ಕೆಲವೇ ದೂರದಲ್ಲಿರುವ ಚಿಂತಪಲ್ಲಿಗೆ ಭೇಟಿ ನೀಡಿ

ವಾರಾಂತ್ಯದಲ್ಲಿ ಭೇಟಿ ಕೊಡ ಬಯಸುವ ಪ್ರಯಾಣಿಕರಿಗೆ ವಿಶಾಖಪಟ್ಟಣಂ ನ ಸುತ್ತಮುತ್ತ ಅಸಂಖ್ಯಾತ ಆಕರ್ಷಣೀಯ ತಾಣಗಳಿವೆ. ಇದು ಐತಿಹಾಸಿಕ ಸ್ಥಳಗಳಿಂದ ಹಿಡಿದು ನೈಸರ್ಗಿಕ ಸ್ಥಳಗಳವರೆಗೆ ಪಟ್ಟಿ ಮಾಡಬಹುದಾಗಿದೆ. ಈ ಬೃಹತ್ ನಗರದ ಸುತ್ತಮುತ್ತ ನೀವು ಎಲ್ಲಾ ವಿಧದ ತಾಣಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಕೆಲವು ಎಲ್ಲಾ ಪ್ರವಾಸಿಗರಿಂದ ಜನಪ್ರಿಯತೆಯನ್ನು ಗಳಿಸಿದ್ದರೆ ಇನ್ನು ಕೆಲವು ಆಫ್ಬೀಟ್ ಪ್ರಯಾಣಿಕರಲ್ಲಿ ಪ್ರಸಿದ್ದಿಯನ್ನು ಪಡೆದಿದೆ ಮತ್ತು ಇನ್ನು ಕೆಲವು ಸ್ಥಳೀಯರಿಂದ ಜನಪ್ರಿಯತೆಯನ್ನು ಗಳಿಸಿದ್ದಾಗಿದೆ. ಅಂತಹುದೇ ಒಂದು ಸ್ಥಳಗಳಲ್ಲಿ ಸ್ಥಳಿಯ ಪ್ರವಾಸಿಗರಿಂದ ಹೆಚ್ಚಾಗಿ ಭೇಟಿ ಕೊಡಲ್ಪಡುವ ತಾಣವೆಂದರೆ ಅದು ಚಿಂತಪಲ್ಲಿ.

ವಾರಾಂತ್ಯ ಕಳೆಯಲು ಸೂಕ್ತ ತಾಣ

ವಾರಾಂತ್ಯ ಕಳೆಯಲು ಸೂಕ್ತ ತಾಣ

PC:IM3847

ಈ ಸ್ಥಳವು ದಟ್ಟವಾದ ಕಾಡುಗಳನ್ನು ಹೊಂದಿದ್ದು ಸೊಂಪಾದ ಹಸಿರು ಮತ್ತು ಸುಂದರವಾದ ತೊರೆಗಳನ್ನು ಹೊಂದಿದ್ದು ವಿಶಾಖಪಟ್ಟಣಂ ನಿಂದ ಭೇಟಿ ಕೊಡಬಹುದಾದ ಒಂದು ಉತ್ತಮವಾದ ಮತ್ತು ಆಕರ್ಷಣೀಯವಾದ ತಾಣವೆನಿಸಿದೆ. ಆದುದರಿಂದ ನೀವು ವಿಶಾಖಪಟ್ಟಣಂ ನ ಸುತ್ತ ಮುತ್ತ ನಿಮ್ಮ ವಾರಾಂತ್ಯವನ್ನು ಜಲಪಾತಗಳು ಮತ್ತು ಹಸಿರು ಸಸ್ಯವರ್ಗಗಗಳ ಜೊತೆಗೆ ಕಳೆಯಲು ಯಾವುದಾದರೂ ಸ್ಥಳಗಳನ್ನು ಹುಡುಕುತ್ತಿದ್ದಲ್ಲಿ ನೀವು ಚಿಂತಾಪಲ್ಲಿಗೆ ಭೇಟಿ ಕೊಡುವ ಬಗ್ಗೆ ಯೋಚಿಸುವುದು ಹೆಚ್ಚು ಸೂಕ್ತ. ಈ ಕೆಳಗೆ ಚಿಂತಪಲ್ಲಿಯ ಆಹ್ಲಾದಕರ ಪರಿಸರ ಮತ್ತು ಅಲ್ಲಿಗೆ ತಲುಪುವ ಬಗ್ಗೆ ಮಾಹಿತಿ ಇದೆ ಓದಿ ತಿಳಿಯಿರಿ.

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

ಚಿಂತಪಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ

ಚಿಂತಪಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯ

PC: Av9

ಚಿಂತಪಲ್ಲಿಯಲ್ಲಿ ಅನುಕೂಲಕರವಾದ ಹವಾಮಾನವು ವರ್ಷವೀಡೀ ಇರುವುದರಿಂದ ಇದು ಯಾವುದೇ ಸಮಯದಲ್ಲೂ ಭೇಟಿ ನೀಡಬಹುದಾದಂತಹ ಸ್ಥಳವಾಗಿದೆ. ಆದರು ಇದು ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡಲ್ಪಡುತ್ತದೆ. ಅಂದರೆ ಇದು ನವೆಂಬರ್ ತಿಂಗಳಿನಿಂದ ಜನವರಿ ವರೆಗೆ ಈ ಸಮಯದಲ್ಲಿ ಇಲ್ಲಿಯ ಹವಾಮಾನವು ಸುಂದರವಾಗಿರುತ್ತದೆ ಮತ್ತು ಸುತ್ತಮುತ್ತಲೂ ಹಸಿರಿನಿಂದ ತುಂಬಿರುತ್ತದೆ. ಆದುದರಿಂದ ಈ ಸಮಯವು ಚಿಂತಪಲ್ಲಿಗೆ ಭೇಟಿ ನೀಡಲು ಹೆಚ್ಚು ಸೂಕ್ತವಾದುದು ಎನ್ನಬಹುದು.

ಚಿಂತಪಲ್ಲಿಯ ಮತ್ತು ಅದರ ಸುತ್ತಮುತ್ತಲಿನ ಮಾಹಿತಿ

ಚಿಂತಪಲ್ಲಿಯ ಮತ್ತು ಅದರ ಸುತ್ತಮುತ್ತಲಿನ ಮಾಹಿತಿ

PC:IM3847

ಚಿಂತಪಲ್ಲಿಯು ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿದೆ ಮತ್ತು ಇದು ರಾಜ್ಯದ ಕಡಿಮೆ ಅನ್ವೇಷಿತ ವಾರಾಂತ್ಯದ ತಾಣಗಳಲ್ಲೊಂದಾಗಿದೆ. ಆದರೆ ನೀವು ಇಲ್ಲಿ ಪ್ರಕೃತಿಯ ಹೊಸದಾದ ಸೌಂದರ್ಯದ ಸ್ಪರ್ಶದ ಅನುಭವವನ್ನು ಹೊಂದಬಹುದಾಗಿದೆ. ಇದು ಕೇವಲ ಸ್ಥಳೀಯ ಪ್ರವಾಸಿಗರಲ್ಲಿ ಜನಪ್ರಿಯತೆ ಗಳಿಸಿದ್ದರೂ ಕೂಡಾ ಇದು ಆಫ್ಬೀಟ್ ಪ್ರವಾಸಿಗರಿಂದಲು ಕೂಡ ಜನಪ್ರಿಯತೆಯನ್ನು ಗಳಿಸುತ್ತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಆಹ್ಲಾದಕರವಾದ ಹವಾಮಾನ, ಹಸಿರು ಪರಿಸರ, ನಿಮ್ಮನ್ನು ತಲ್ಲಣಗೊಳಿಸುವ ಜಲಪಾತಗಳು ಮತ್ತು ಸುಮಧುರವಾದ ಪ್ರಕೃತಿ ಇವೆಲ್ಲವನ್ನು ಹೊಂದಿರುವ ಈ ಸ್ಥಳವನ್ನು ವಿಶಾಖಪಟ್ಟಣಂ ನ ಸುತ್ತಮುತ್ತಲು ಎಲ್ಲಾ ಕಡೆಯೂ ಇಂತಹ ಸುಂದರವಾದ ತಾಣವನ್ನು ಕಾಣಲು ಸಾಧ್ಯವಿಲ್ಲ.

ಚಿಂತಾಪಲ್ಲಿಗೆ ನೀವು ಭೇಟಿ ನೀಡಬೇಕು ಏಕೆ?

ಚಿಂತಾಪಲ್ಲಿಗೆ ನೀವು ಭೇಟಿ ನೀಡಬೇಕು ಏಕೆ?

PC:IM3847

ಚಿಂತಾಪಲ್ಲಿಯು ಯಾವ ಪ್ರವಾಸಿಗರು ಜನಸಂದಣಿ ಇಲ್ಲದೇ ಇರುವ ಮತ್ತು ಶಾಂತಿಯುತವಾದ ಪರಿಸರದ ಅನುಭವವನ್ನು ಪಡೆಯಲು ಬಯಸುತ್ತಾರೋ ಅಂತಹವರಿಗಾಗಿ ಹೇಳಿ ಮಾಡಿಸಿದ ಸ್ಥಳದಂತಿದೆ. ಆದುದರಿಂದ ನೀವು ಇಂತಹ ಪ್ರವಾಸಿಗರ ಪಟ್ಟಿಯಲ್ಲಿ ಇದ್ದಲ್ಲಿ ನೀವು ಈ ಸುಂದರ ಜಗತ್ತಿನ ಅನುಭವವನ್ನು ಪಡೆಯಲು ತಪ್ಪಿಸಿಕೊಳ್ಳಲೇ ಬಾರದು.

ಚಿಂತಪಲ್ಲಿ ಜಲಪಾತವು ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ ಮತ್ತು ಇಲ್ಲಿ ಅತ್ಯಂತ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳವಾಗಿದೆ. ನೀವು ಇಲ್ಲಿಯ ಸುತ್ತಮುತ್ತಲಿನ ಪ್ರದೇಶಗಳ ಅನ್ವೇಷಣೆ ಕೂಡಾ ಮಾಡಬಹುದಾಗಿದೆ. ಮತ್ತು ಇಲ್ಲಿರುವ ಲಂಬಾಸಿಂಗಿ ಗೆ ಭೇಟಿ ಕೊಡಿ ಇದು ಇನ್ನೊಂದು ವಿಶಾಖಪಟ್ಟಣಂ ನಿಂದ ಹೋಗಬಹುದಾದ ವಾರಾಂತ್ಯದ ತಾಣವಾಗಿದ್ದು ಇದು ಚಿಂತಪಲ್ಲಿಯಿಂದ ಸುಮಾರು 25 ಕಿ.ಮೀ ಅಂತರದಲ್ಲಿದೆ. ಶಿವ ದೇವರ ದೇವಾಲಯ ಮತ್ತು ಸಾಯಿ ಬಾಬಾ ದೇವಾಲಯ ಇತ್ಯಾದಿಗಳು ಇಲ್ಲಿಯ ಇನ್ನಿತರ ಆಸಕ್ತಿದಾಯಕ ಸ್ಥಳಗಳು.

ಚಿಂತಪಲ್ಲಿಗೆ ತಲುಪುವುದು ಹೇಗೆ?

ಚಿಂತಪಲ್ಲಿಗೆ ತಲುಪುವುದು ಹೇಗೆ?

PC:Adityamadhav83

ವಾಯು ಮಾರ್ಗ: 125 ಕಿ.ಮೀ ದೂರದಲ್ಲಿರುವ ವಿಶಾಖಪಟ್ಟಣಂ ವಿಮಾನ ನಿಲ್ದಾಣ ಚಿಂತಪಲ್ಲಿಗೆ ಹತ್ತಿರವಿರುವ ವಿಮಾನ ನಿಲ್ದಾಣವಾಗಿದೆ. ಆದುದರಿಂದ ನೀವು ವಿಶಾಖಪಟ್ಟಣಂ ಗೆ ವಿಮಾನದ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ ನಂತರ ಅಲ್ಲಿಂದ ಬಾಡಿಗೆ ಕ್ಯಾಬ್ ಮೂಲಕ ಚಿಂತಾಪಲ್ಲಿಗೆ ಪ್ರಯಾಣ ಮಾಡಬಹುದಾಗಿದೆ.

ನೀವು ರೈಲಿನ ಮೂಲಕ ಪ್ರಯಾಣ ಮಾಡಲು ನೋಡುತ್ತಿದ್ದಲ್ಲಿ, ವಿಶಾಖಪಟ್ಟಣಂಗೆ ನೇರವಾಗಿ ರೈಲು ಹಿಡಿಯುವುದು ಉತ್ತಮ. ನಂತರ ಅಲ್ಲಿಂದ ಕ್ಯಾಬ್ ಮೂಲಕ ಚಿಂತಪಲ್ಲಿಗೆ ಪ್ರಯಾಣ ಮಾಡಬಹುದು. ಇದು ನಿಮಗೆ ಚಿಂತಾಪಲ್ಲಿಯನ್ನು ತಲುಪಲು ರೈಲ್ವೇ ನಿಲ್ದಾಣದಿಂದ ರಸ್ತೆ ಮೂಲಕ ಪ್ರಯಾಣಿಸಲು ಸುಮಾರು 3 ಗಂಟೆಗಳ ಸಮಯವನ್ನು ತೆಗೆದುಕೊಳ್ಳುವುದು.

ರಸ್ತೆಯ ಮೂಲಕ: ಚಿಂತಪಲ್ಲಿ ಎಲ್ಲಾ ಇತರ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಮತ್ತು ಆದ್ದರಿಂದ ನೀವು ರಸ್ತೆಯ ಮೂಲಕ ಅದನ್ನು ಸುಲಭವಾಗಿ ತಲುಪಬಹುದು. ಚಿಂತಪಲ್ಲಿಗೆ ನೇರ ಬಸ್ ಇಲ್ಲದಿರುವುದರಿಂದ, ಒಂದು ಕ್ಯಾಬ್ ಅನ್ನು ಬಾಡಿಗೆಗೆ ತೆಗೆದುಳ್ಳಬಹುದು ಅಥವಾ ನಿಮ್ಮ ಸ್ವಂತ ವಾಹನದಿಂದ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X