• Follow NativePlanet
Share
Menu
» »ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

Written By:

ಭಾರತ ದೇಶದ ಚರಿತ್ರೆಯಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ರಾಜರ ಆಳ್ವಿಕೆಗಳು ಎಂದಿಗೂ ಮರೆಯಲಾಗದಂಹುದು. ಎಷ್ಟೋ ಮಂದಿ ರಾಜರು ತಮ್ಮ ಉತ್ತಮವಾದ ಆಳ್ವಿಕೆಯಿಂದ ಹೆಸರುವಾಸಿಯಾದರೆ, ಮತ್ತೆ ಕೆಲವ ರಾಜರು ತಮ್ಮ ಕೆಟ್ಟ ಹಾಗು ಕ್ರೂರವಾದ ಆಳ್ವಿಕೆಯಿಂದ ಹೆಸರುವಾಸಿಯಾಗಿದ್ದಾರೆ. ಹೀಗೆ ಅನೇಕ ಮಂದಿ ಆಳ್ವಿಕೆಗಳು ನಮ್ಮ ಭಾರತದಾದ್ಯಂತ ನಡೆದಿವೆ. ಆದರೆ ಅವರ ಕಾಲದಲ್ಲಿ ಸಂಗ್ರಹಿಸಿದ ಧನ, ಸಂಪತ್ತು ಮಾತ್ರ ಅವರ ಜೊತೆ ಹೋಗಲಿಲ್ಲ. ಹಾಗಾಗಿ ದೊರೆತ ಪ್ರತಿಯೊಂದು ಗುಪ್ತನಿಧಿಯು ಸರ್ಕಾರದ ಅಧಿಕಾರಿಗಳು ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಕೆಲವು ನಿಧಿಗಳು ಮಾತ್ರ ಯಾರಿಗೂ ದೊರೆಯದೇ ರಹಸ್ಯವಾದ ನಿಧಿಗಳಾಗಿಯೇ ಉಳಿದಿವೆ.

ಹೀಗೆ ರಹಸ್ಯ ನಿಧಿಗಳನ್ನು ಹೊಂದಿರುವ ಒಂದು ಕೋಟೆಯನ್ನು ಸರ್ಕಾರವು ಕಂಡು ಹಿಡಿದ್ದಿದ್ದಾರೆ. ಕೆಲವು ಆಧಾರಗಳ ಪ್ರಕಾರ ಆ ಕೋಟೆಯಲ್ಲಿ ನಿಧಿಗಳಿವೆ ಎಂದು ಹೇಳಲಾಗಿದೆ. ಹಾಗಾದರೆ ಆ ಕೋಟೆ ಯಾವುದು? ಎಲ್ಲಿದೆ? ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ನೀವು ಇದುರೆವಿಗೂ ಎಲ್ಲಿದೆ ಎಂದು ಯೋಚಿಸುತ್ತಿರುವ ಆ ಕೋಟೆ ಬೇರೆಲ್ಲೂ ಇಲ್ಲ ನಮ್ಮ ಪಕ್ಕದ ರಾಜ್ಯವಾದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಆ ಕೋಟೆಯ ಹೆಸರು ಚೆನ್ನಂಪಲ್ಲಿ ಕೋಟೆ. ಸುಮಾರು 102 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಆ ಕೋಟೆಯು ನೋಡುವುದಕ್ಕೆ ಚಿಕ್ಕದಾಗಿದ್ದರು ಕೂಡ ಅದರ ಚರಿತ್ರೆ ಕೇಳಿದರೆ ಮಾತ್ರ ಆಸಲಿಗೆ ಈ ಕೋಟೆಗೆ ಇಷ್ಟು ದೊಡ್ಡ ಚರಿತ್ರೆ ಇದೆಯೇ ಎಂದು ಅಂದುಕೊಳ್ಳುತ್ತೀರಾ....

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಆಂಧ್ರ ಪ್ರದೇಶ ರಾಜ್ಯದಲ್ಲಿ ಕರ್ನೂಲ್ ನಗರ ದೊಡ್ಡದಾಗಿದೆ. ಭಾರಿ ಜನಸಂಖ್ಯೆ ಕೂಡ ಈ ನಗರ ಹೊಂದಿದೆ. 1953 ರಿಂದ 1956ರವರೆಗೆ ಕರ್ನೂಲು ಆಂಧ್ರ ಪ್ರದೇಶ ರಾಜ್ಯಕ್ಕೆ ರಾಜಧಾನಿಯಾಗಿ ಇತ್ತು. ಕರ್ನೂಲು ನಗರವು ಹಾಂದ್ರಿ ನದಿ, ತುಂಗಭದ್ರಾ ನದಿಗಳ ತೀರದಲ್ಲಿ ದಕ್ಷಿಣ ದಿಕ್ಕಿಗೆ ಇದೆ. ಕರ್ನೂಲು ಅತಿ ದೊಡ್ಡ ಜಿಲ್ಲೆಯಾಗಿದೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಇದು ಹೈದ್ರಾಬಾದ್‍ನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಹೈದ್ರಾಬಾದ್‍ನಿಂದ ಕಡಪ, ಚಿತ್ತೂರು, ಅನಂತಪುರಗಳಿಗೆ ಸೇರುವುದಕ್ಕೆ ಕರ್ನೂಲ್‍ನಿಂದಲೇ ಪ್ರಯಾಣಿಸಬೇಕಾಗಿರುವುದರಿಂದ ಇದನ್ನು ರಾಯಲಸೀಮ ಪ್ರವೇಶ ದ್ವಾರವೆಂದೂ ಕೂಡ ಹೇಳುತ್ತಾರೆ. ಈ ಪ್ರದೇಶವು ಪ್ರಕೃತಿಕ ಸೌಂದರ್ಯಕ್ಕೆ ಹಾಗು ಅತಿಥಿ ಸತ್ಕಾರಕ್ಕೆ, ಸಂಸ್ಕøತಿಗೆ ಪ್ರಸಿದ್ಧಿ ಪಡೆದಿದೆ. ಪ್ರವಾಸಿಗರಿಗೂ ಕೂಡ ಒಂದು ಉತ್ತಮವಾದ ಅನುಭೂತಿಯನ್ನು ನೀಡುತ್ತದೆ. ಈ ಪ್ರದೇಶವು ಒಂದು ಅದ್ಭುತವಾದ ಪ್ರವಾಸಿ ಕೇಂದ್ರವಾಗಿ ಮಾರ್ಪಾಟಾಗಿದೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಇಂದು ಚೆನ್ನಂಪಲ್ಲಿ ಕೋಟೆಯಲ್ಲಿಯೇ ಗುಪ್ತವಾದ ನಿಧಿಗಳು ಇವೆ ಎಂದು ಹುಡುಕಾಟ ಮಾಡುತ್ತಿದ್ದಾರೆ. ಈ ಕೋಟೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಪರಿಸ್ಥಿತಿಗಳ ಕುರಿತು ತಿಳಿದುಕೊಳ್ಳುವ ಮೊದಲು ಈ ಕೋಟೆಗೆ ಇರುವ ಚರಿತ್ರೆಯ ಬಗ್ಗೆ ತಿಳಿಯೋಣ. ಒಂದು ಕಾಲದಲ್ಲಿ ಚೆಂಗಂಪಲ್ಲಿಯನ್ನು ಆಳ್ವಿಕಾ ಮಾಡುತ್ತಿದ್ದ ರಾಜರಿಗೆ ಹಾಗೆಯೇ ಗುತ್ತಿ ರಾಜರ ನಡುವೆ ವಿಭೇದಗಳು ಏರ್ಪಟ್ಟವು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಹಾಗಾಗಿ ಚೆನ್ನಂಪಲ್ಲಿ ಕೋಟೆಯಲ್ಲಿ ಕೆಲವು ಸಾವಿರ ಕೆ.ಜಿ ಬಂಗಾರ ಆಭರಣಗಳು, ಮಾಣಿಕ್ಯಗಳು, ವಜ್ರ ವೈಡೂರೈಗಳು ಇವೆ ಎಂದು ತಿಳಿದುಕೊಂಡ ಗುತ್ತಿ ರಾಜರು ಹೇಗಾದರೂ ಮಾಡಿ ಅವುಗಳನ್ನು ವಶಪಡಿಸಿಕೊಳ್ಳಬೇಕು ಎಂದು ಚೆನ್ನಂಪಲ್ಲಿ ರಾಜರ ಮೇಲೆ ಅನೇಕ ಬಾರಿ ದಾಳಿಗಳನ್ನು ಮಾಡಿದರು. ಹೀಗಾಗಿ ಊರಿನ ಕೊನೆಯ ಒಂದು ರಾಮಾಲಯದ ಸಮೀಪದಲ್ಲಿ ಒಂದು ಬಾವಿಯಲ್ಲಿ ರಹಸ್ಯವಾಗಿ ಸ್ಥಾವರ ಏರ್ಪಟು ಮಾಡಿದರು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಆದರೆ ಗುತ್ತಿರಾಜರ ಸಾಲು-ಸಾಲು ದಾಳಿಯಿಂದ ಭಯಗೊಂಡ ಚೆನ್ನಂಪಲ್ಲಿ ರಾಜರು ನರಸಿಂಗನಾಯುಡು ತನ್ನ ಹತ್ತಿರದಲ್ಲಿರುವ ಬಂಗಾರವನ್ನು ಹೇಗಾದರೂ ಮಾಡಿ ಬಚ್ಚಿಡಬೇಕು ಎಂಬ ಉದ್ದೇಶದಿಂದ ಕೋಟೆಯ ಕೆಳಗೆ ಇರುವ 3 ರಹಸ್ಯವಾದ ಕೊಠಡಿಯಲ್ಲಿ ಬಂಗಾರವನ್ನು ಇಟ್ಟು ಅದರ ಮೇಲಿನ ಭಾಗದಲ್ಲಿ ಕಲ್ಲಿನ ಶಾಸನವನ್ನು ಬಂಡೆಯ ಮೇಲೆ ಕೆತ್ತನೆ ಮಾಡಿಸಿದನು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಆದರೆ ಆ ನಿಧಿಗಳಿಗೋಸ್ಕರ ಪ್ರಯತ್ನಿಸಿದ ಗುತ್ತಿರಾಜರು ಬಂಗಾರ ದೊರೆಯಲಿಲ್ಲವೆಂದೂ, ಅದು ಇಂದಿಗೂ ಆ ಕೋಟೆಯ ಕೆಳಗಿನ ಭಾಗದಲ್ಲಿ ಅಥವಾ ಗೋಡೆಯ ಮಧ್ಯೆ ಇದ್ದೇ ಇರುತ್ತದೆ ಎಂದು ಚರಿತ್ರೆಕಾರರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಕೋಟೆಯ ಚರಿತ್ರೆಯನ್ನು ತಿಳಿದುಕೊಂಡ ಕೆಲವರು ಮಾತ್ರ ಆ ಗ್ರಾಮಕ್ಕೆ ಸೇರಿದ ಕೆಲವರು ಸರ್ಕಾರದ ಕಣ್ಣು ತಪ್ಪಿಸಿ ರಹಸ್ಯವಾಗಿ ಆ ನಿಧಿಗಳ ಹುಡುಕಾಟಕ್ಕೆ ಪ್ರಯತ್ನಸಿದರು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಅದೇ ನಂಬಿಕೆಯಿಂದ ಒಂದು ಸಮಯದಲ್ಲಿ ಆ ಪ್ರದೇಶಕ್ಕೆ ಬಂದ ಒಬ್ಬ ಸ್ವಾಮೀಜಿ ಕೂಡ ಆ ಪ್ರದೇಶದಲ್ಲಿ ಗುಪ್ತನಿಧಿಗಳು ಇವೆ ಎಂದು ಹೇಳಿದನು. ಆ ಕಾರಣವಾಗಿ ನಿಧಿಗಳ ಹುಡುಕಾಟದಲ್ಲಿ ಪ್ರಯತ್ನವನ್ನು ಇನ್ನು ಹೆಚ್ಚು ಮಾಡಿದರು. ಅವರು ಆ ಪ್ರಯತ್ನ ಮಾಡುತ್ತಿರುವ ಸಂಗತಿಯು ಸರ್ಕಾರಕ್ಕೆ ತಿಳಿಯಿತು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಇನ್ನು ಒಂದು ಬಾರಿ ಆ ನಿಧಿಗಳಿಗೆ ಸಂಬಂಧಿಸಿದ ಚರಿತ್ರೆಯನ್ನು ತಿಳಿದುಕೊಂಡ ಸರ್ಕಾರದವರು ಪುರಾತ್ತತ್ವ ಶಾಸ್ತ್ರಕಾರರಿಂದ ನಿಖರವಾದ ಉತ್ತರವನ್ನು ತಿಳಿದುಕೊಂಡರು. ಇನ್ನು ಆ ಪುರಾತ್ತತ್ವ ಶಾಸ್ತ್ರಕಾರರು ಆ ಕೋಟೆಯಲ್ಲಿ ಖಚಿತವಾಗಿ ನಿಧಿಗಳು ಇರುತ್ತವೆ ಎಂದು ಹೇಳಿದ ಕಾರಣವಾಗಿ ಸರ್ಕಾರವು ಆ ನಿಧಿಗಳ ಹುಡುಕಾಟದಲ್ಲಿದೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಆದರೆ ಮೊದಲು ಅವರ ಪ್ರಯತ್ನವನ್ನು ಅಡ್ಡವಾಗಿ ನಿಂತ ಗ್ರಾಮಸ್ಥರು, ನಿಧಿಯು ದೊರಕಿದರೆ ಅದರಲ್ಲಿ 33% ಭಾಗದಷ್ಟು ಗ್ರಾಮಭಿವೃದ್ಧಿಗೆ ಬಳಸಬೇಕು ಎಂದು ಹೇಳಿದರು. ಇಂದು ಆ ಕೋಟೆಯ ಹುಡುಕಾಟದ ಸಮಯದಲ್ಲಿ ಸುತ್ತಲೂ ನೂರಾರು ಪೊಲೀಸರನ್ನು ಕೂಡ ಕಾವಲಿಗೆ ಇಟ್ಟಿದ್ದಾರೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಪ್ರಸ್ತುತ ರಾತ್ರಿ, ಹಗಲು ಎನ್ನದೇ ಗುಪ್ತ ನಿಧಿಗಳ ಹುಡುಕಾಟದಲ್ಲಿ ಇದ್ದಾರೆ. ಆದರೆ ಕೋಟೆಯಲ್ಲಿ ಹುಡುಕಾಟದ ಭಾಗವಾಗಿ 2 ಕಲ್ಲಿನ ಶಾಸನಗಳು, ಬಂಡೆಕಲ್ಲುಗಳು ಕಾಣಿಸಿಕೊಂಡಿವೆ. ಆ ಬಂಡೆ ಕಲ್ಲಿನ ಮೇಲೆ ಇರುವ ಗುರುತುಗಳೇ ಗುಪ್ತನಿಧಿಗಳಿಗೆ ಸೇರಿಕೊಳ್ಳುವ ಮ್ಯಾಪ್ (ನಕ್ಷೆ) ಎಂದು ಭಾವಿಸಿ ಅವುಗಳ ಆಧಾರವಾಗಿ ಹುಡುಕಾಟಗಳು ನಡೆಯುತ್ತಿವೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಹೀಗೆ ಹುಡುಕಾಟಗಳನ್ನು ಮತ್ತಷ್ಟು ಹೆಚ್ಚು ಮಾಡಿರುವ ಅಧಿಕಾರಿಗಳಿಗೆ ಕೆಲವು ಭಯಗೊಳಿಸುವ ರೀತಿಯಲ್ಲಿ ಕೆಲವು ಅಸ್ಥಿಪಂಜರಗಳು ಬೆಳಕಿಗೆ ಬಂದಿವೆ. ಆದರೆ ಪುರಾತನ ಕೋಟೆ ಚರಿತ್ರೆಗೆ ಇದು ಸಜೀವ ಸಾಕ್ಷಿ ಎಂದು ಭಾವಿಸಲಾಗುತ್ತಿದೆ. ಕೋಟೆಯಲ್ಲಿನ ಗುಪ್ತನಿಧಿಗೆ ಯಾವುದೋ ಒಂದು ಅದೃಶ್ಯ ಶಕ್ತಿ ಕಾವಲು ಕಾಯುತ್ತಿದೆ ಎಂದು ಕೂಡ ಅನುಮಾನ ವ್ಯಕ್ತ ಪಡಿಸಲಾಗುತ್ತಿದೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಅದೆನೇ ಇರಲಿ ಇಂದು ದೇಶವೆಲ್ಲಾ ಆಂಧ್ರ ಪ್ರದೇಶದ ಕರ್ನೂಲಿನ ಮೇಲೆ ಬಿದ್ದಿದೆ ಎಂದೇ ಹೇಳಬಹುದು. ಆ ಕೋಟೆಯಲ್ಲಿ ಒಂದು ವೇಳೆ ಗುಪ್ತನಿಧಿಗಳನ್ನು ಅಧಿಕಾರಿಗಳು ಗುರುತಿಸಿದರೆ ಆ ಕೋಟೆಯ ಚರಿತ್ರೆ ಅಜರಾಮರವಾಗುತ್ತದೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಕರ್ನೂಲಿಗೆ ಸುಲಭವಾಗಿ ವಿಮಾನ, ರೈಲ್ವೆ ಮತ್ತು ರಸ್ತೆ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಹೈದ್ರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನೂಲ್‍ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಕರ್ನೂಲು ನಗರದಿಂದ ಈ ವಿಮಾನ ನಿಲ್ದಾಣಕ್ಕೆ ಸುಮಾರು 3 ವರೆ ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗಿರುತ್ತದೆ. ಕರ್ನೂಲ್‍ಗೆ ಕರ್ನೂಲ್ ಪಟ್ಟಣ, ಅಧೋನಿ, ನಂದ್ಯಾಲ, ಧೋನ್ ಜಂಕ್ಷನ್ ಎಂಬ ನಾಲ್ಕು ರೈಲ್ವೆ ನಿಲ್ದಾಣಗಳಿವೆ. ಇವು ಭಾರತದೇಶದಲ್ಲಿನ ಎಲ್ಲಾ ಪ್ರಧಾನವಾದ ನಗರಗಳಿಂದ ಸಂಪರ್ಕ ಸಾಧಿಸುತ್ತವೆ.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಆಂಧ್ರ ಪ್ರದೇಶದ ನಗರಗಳಿಂದ ಹಾಗೆಯೇ ಬೆಂಗಳೂರು, ಚೆನ್ನೈ ನಗರಗಳಿಂದ ಬಸ್ಸುಗಳು ಕೂಡ ಸುಲಭವಾಗಿ ದೊರೆಯುತ್ತವೆ. ಕರ್ನೂಲಿನಲ್ಲಿ ಬೇಸಿಗೆಯ ಕಾಲದಲ್ಲಿ ಭೇಟಿ ನೀಡುವುದು ಅಷ್ಟು ಉತ್ತಮವಾದುದಲ್ಲ. ಬದಲಾಗಿ ಮಳೆಗಾಲದಲ್ಲಿ ತೆರಳಿದರೆ ಉತ್ತಮವಾದ ಕಾಲ ಎಂದೇ ಹೇಳಬಹುದು.

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?

ಅದರಲ್ಲಿಯೂ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳಲ್ಲಿ ಮಳೆಗಾಲ ನಂತರ ಬರುವ ಚಳಿಗಾಲದಲ್ಲಿ ಕರ್ನೂಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವಾಗಿದೆ. ಈ ಸಮಯದಲ್ಲಿ ವಾತಾರಣವು ಅತ್ಯಂತ ಆಹ್ಲಾದಕರವಾಗಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ