Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಹವಾಮಾನ

ಕರ್ನೂಲ್ ಹವಾಮಾನ

ಕರ್ನೂಲಿಗೆ ಭೇಟಿ ನೀಡಲು ಮಾನ್ಸೂನ್ ಮಳೆಯ ನಂತರ ಹಾಗೂ ಚಳಿಗಾಲದ ವೇಳೆ ಸೂಕ್ತವಾದದ್ದಾಗಿದೆ. ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ವಾತಾವರಣ ಹಿತಕರವಾಗಿರುತ್ತದೆ. ಈ ವೇಳೆಯಲ್ಲಿ ಪ್ರವಾಸಿ ಚಟುವಟಿಕೆಗಳು ಗರಿಗೆದರಿರುತ್ತವೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತಿಂಗಳವರೆಗೆ ಕರ್ನೂಲಿನಲ್ಲಿ ಬೇಸಿಗೆಯಿರುತ್ತದೆ. ಬೇಸಿಗೆ ದಿನದಲ್ಲಿ ಬಿಸಿ ಹೆಚ್ಚಿರುತ್ತದೆ ಮತ್ತು ಶುಷ್ಕವಾದ ಹವೆಯಿರುತ್ತದೆ. ಬೇಸಿಗೆಯ ಉಷ್ಣಾಂಶ 23 ಡಿಗ್ರಿಯಿಂದ 40 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ. ವಾತಾವರಣದ ಬಿಸಿ ಹೆಚ್ಚಿದ್ದು ಅಹಿತಕರವಾಗಿರುವುದರಿಂದ ಈ ಸಮಯದಲ್ಲಿ ಕರ್ನೂಲಿಗೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಇಲ್ಲಿ ಮಳೆಗಾಲವಿದ್ದು ಅತಿಯಾದ ಮಳೆ ಬೀಳುತ್ತದೆ. ಮಳೆಯಿಂದಾಗಿ ವಾತಾವರಣ ಬಿಸಿ ಕಡಿಮೆಯಾಗಿರುತ್ತದೆ. ಅತಿಯಾದ ಮಳೆಯನ್ನು ಇಷ್ಟ ಪಡವವರು ಈ ಸಮಯದಲ್ಲಿ ಕರ್ನೂಲಿಗೆ ಭೇಟಿ ನೀಡಬಹುದು.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರುವರಿ ವರೆಗೆ ಕರ್ನೂಲಿನಲ್ಲಿ ಚಳಿಗಾಲವಿರುತ್ತದೆ. ತಂಪಾದ, ಹಿತಕರವಾದ ವಾತಾವರಣದಲ್ಲಿ ಉಷ್ಣಾಂಶ 20 ಡಿಗ್ರಿಯಿಂದ 30 ಡಿಗ್ರಿಗೆ ಕುಸಿದಿರುತ್ತದೆ. ಕರ್ನೂಲಿಗೆ ಭೇಟಿ ನೀಡಲು ಇದು ಸೂಕ್ತ ಸಮಯ.