Search
  • Follow NativePlanet
Share
» »ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ

ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ

By Manjula Balaraj Tantry

ಪೂರ್ವದ ಘಟ್ಟದ ​​ಸೌಂದರ್ಯವನ್ನು ಅದರ ಪರಿಶುದ್ಧ ರೂಪದಲ್ಲಿ ಕಂಡುಕೊಳ್ಳಲು ಬಯಸುವವರಿಗೆ ಯರ್ಕಾಡ್ ಪ್ರಯಾಣ ಒಂದು ಮೋಡಿಮಾಡುವ ತಾಣವಾಗಿದೆ. ಮಂಜು, ಮಳೆ ಮತ್ತು ಆರ್ದ್ರ ವಾತಾವರಣವು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ.

ಯರ್ಕಾಡ್ ತಮಿಳುನಾಡಿನಲ್ಲಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ಚೆನ್ನೈ ನಗರದಿಂದ ಯರ್ಕಾಡ್ ನ ಸುಂದರವಾದ ಭೂದೃಶ್ಯಕ್ಕೆ ರಸ್ತೆ ಮೂಲಕ ಪ್ರಯಾಣ ಮತ್ತು ನಡುವೆ ಸಿಗುವ ಸ್ಥಳಗಳು ಖಚಿತವಾಗಿಯೂ ನಿಮಗೆ ಮೋಜನ್ನುಂಟುಮಾಡುತ್ತದೆ.

ಯರ್ಕಾಡನ್ನು ಭೇಟಿ ಕೊಡಲು ಸೂಕ್ತ ಸಮಯ

ಯರ್ಕಾಡನ್ನು ಭೇಟಿ ಕೊಡಲು ಸೂಕ್ತ ಸಮಯ

PC: Varun Suresh

ಯೆರ್ಕಾಡ್ ಸಮುದ್ರ ಮಟ್ಟದಿಂದ 4,970 ಅಡಿ ಎತ್ತರದಲ್ಲಿದೆ.ಆದ್ದರಿಂದ ನಿಮ್ಮ ಭೇಟಿಯ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಒಯ್ಯಿರಿ. ಯರ್ಕಾಡಿಗೆ ಭೇಟಿ ಮಾಡಲು ಉತ್ತಮ ಸಮಯವೆಂದರೆ ಬೇಸಿಗೆಕಾಲ ಅದೂ ಮೇ ತಿಂಗಳಿಂದ ಜೂನ್ ತಿಂಗಳುಗಳವರೆಗೆ. ತಾಪಮಾನವು 16-30 ಡಿಗ್ರಿಗಳಷ್ಟು ಇರುವುದರಿಂದ ಪ್ರಕೃತಿಯೊಂದಿಗೆ ಪರಿಪೂರ್ಣವಾದ ಪ್ರಣಯಕ್ಕೆ ಆಹ್ಲಾದಕರ ವಾತಾವರಣವಿರುತ್ತದೆ.

ಮಾನ್ಸೂನ್ ಕಡಿಮೆಯಾಗುತ್ತಿದ್ದಂತೆ, ಶರತ್ಕಾಲದಲ್ಲಿ ಅದ್ಭುತವಾದ, ಸುಂದರವಾದ ಆರಂಭವನ್ನು ಹೊಂದುತ್ತವೆ ಆದರೆ ರಾತ್ರಿಗಳು ತಣ್ಣಗಾಗುವುದರಿಂದ ನಿಮ್ಮ ಜಾಕೆಟ್ ಗಳನ್ನು ನಿಮ್ಮೊಂದಿಗೆ ಒಯ್ಯುವುದು ಉತ್ತಮ

ಚೆನ್ನೈನಿಂದ ಯರ್ಕಾಡ್ ಗೆ ತಲುಪುವ ಬಗೆ ಹೇಗೆ?

ಚೆನ್ನೈನಿಂದ ಯರ್ಕಾಡ್ ಗೆ ತಲುಪುವ ಬಗೆ ಹೇಗೆ?

ಯರ್ಕಾಡ್ ಶೆವರಾಯ್ ಬೆಟ್ಟಗಳ ಮಧ್ಯೆ ಮತ್ತು ದಟ್ಟ ಮಧ್ಯದಲ್ಲಿ ಘಟ್ಟಗಳ ಹಸಿರು ಸೊಂಪಾದ ಸಸ್ಯಗಳ ನಡುವೆ ನೆಲೆಗೊಂಡಿದೆ. ಚೆನ್ನೈಗೆ ಯರ್ಕಾಡ್ ಸುಮಾರು 350-380 ಕಿ.ಮೀ. ಅಂತರದಲ್ಲಿದೆ ಇದು ಪ್ರಯಾಣ ಮಾಡುವ ಮಾರ್ಗಕ್ಕೆ ಅನುಗುಣವಾಗಿ ಇದೆ. ಮಾರ್ಗ ಮತ್ತು ರಸ್ತೆ ಎರಡೂ ಮಾರ್ಗಗಳ ಮೂಲಕ ಮಾರ್ಗವನ್ನು ಸುಲಭವಾಗಿ ತಲುಪಬಹುದು ಆದರೆ ರಸ್ತೆ ಮೂಲಕ ಪ್ರಯಾಣ ಅತ್ಯಂತ ಸೂಕ್ತವಾಗಿದೆ. ನೀವು ಈ ಕೆಳಗಿನ ಮಾರ್ಗಗಳಲ್ಲಿ ಒಂದನ್ನು ತೆಗೆದುಕೊಳ್ಳಬಹುದು.

ಮಾರ್ಗ 1: ಚೆನ್ನೈ - ತಿಂಡಿವಣಂ - ​​ಸೇಲಂ - ಯರ್ಕಾಡ್ ಮಾರ್ಗ

2: ಚೆನ್ನೈ - ಕೃಷ್ಣಗಿರಿ - ಸೇಲಂ - ಯರ್ಕಾಡ್

2: ಚೆನ್ನೈ - ಕೃಷ್ಣಗಿರಿ - ಸೇಲಂ - ಯರ್ಕಾಡ್

ಕೃಷ್ಣಗಿರಿ ಮಾರ್ಗದ ಮೂಲಕ ಪ್ರಯಾಣ ಮಾಡುವಾಗ ನಿಮಗೆ ಸುಂದರ ದೃಶ್ಯಗಳನ್ನು ನೋಡುವ ಅವಕಾಶ ಸಿಗುತ್ತದೆ. ಮತ್ತು ಇಲ್ಲಿಗೆ ಬೈಕ್ ಮೂಲಕ ಪ್ರಯಾಣ ಮಾಡುವುದು ಹೆಚ್ಚು ಆರಾಮದಾಯಕವಾಗಿರುತ್ತದೆ. ಚತುಷಥ ರಸ್ತೆಗಳು ನಿಮ್ಮ ಸವಾರಿಯನ್ನು ಪೂರ್ವಘಟ್ಟಗಳ ಜೊತೆಯಲ್ಲಿ ಪ್ರಯಾಣ ಆರಾಮದಾಯವಾಗಿ ಮಾಡಬಹುದು

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಸ್ಥಳೀಯ ಹಾಗೂ ಉತ್ತಮ ದಕ್ಷಿಣ ಭಾರತೀಯ ಭೋಜನದೊಂದಿಗೆ ನಿಮ್ಮನ್ನು ನೀವು ಸಂತೋಷಗೊಳಿಸಿಕೊಳ್ಳಿ

ನಿಮಗೆ ಸಿಗುವ ನಂತರದ ನಿಲುಗಡೆಯೆಂದರೆ ಅದು ಕೃಷ್ಣಗಿರಿ ಇದು ಸುಮಾರು 250 ಕಿ.ಮೀ ದೂರದಲ್ಲಿದೆ ಮತ್ತು ನಂತರ ಬರುವುದೇ ಧರ್ಮಪುರಿ. ಇದು ಹೆಚ್ಚು ಆದ್ಯತೆ ನೀಡಬಹುದಾದ ನಿಲುಗಡೆಯಾಗಿದೆ. ಈ ರಸ್ತೆಯು ಸೇಲಂ ಕಡೆಗೆ ಸಾಗುತ್ತದೆ, ಇದು ಯೆರ್ಕಾಡ್ನಿಂದ ಕೇವಲ 30 ಕಿಮೀ ದೂರದಲ್ಲಿದೆ.

ಕೃಷ್ಣಗಿರಿ

ಕೃಷ್ಣಗಿರಿ

PC: Mithun Kundu

ಮಾರ್ಗ 2ರಲ್ಲಿ ಪ್ರಯಾಣಿಸುವಾಗ ನಿಮ್ಮ ಮೊದಲ ನಿಲುಗಡೆ ಅದು ಕೃಷ್ಣಗಿರಿಯಾಗಿದ್ದು ಇದು ಇದು ರಾ.ಹೆ. 48ರ ಉದ್ದಕ್ಕೂ 259 ಕಿ.ಮೀ. ದೂರದಲ್ಲಿದೆ. ಕೃಷ್ಣಗಿರಿ ಭೇಟಿ ನೀಡಬಹುದಾದ ಒಂದು ಅದ್ಬುತವಾದ ಸ್ಥಳವಾಗಿದೆ. ಇಲ್ಲಿಯ ಅದ್ಬುತವಾದ ಕೆ ಆರ್ ಪಿ ಅಣೆಕಟ್ಟು ಮತ್ತು ಕೃಷ್ಣಗಿರಿ ಕೋಟೆ ನೀವು ನಿಮ್ಮ ಪ್ರಯಾಣ ಪಟ್ಟಿಯಲ್ಲಿ ಸೇರಿಸಲೇಬೇಕಾದ ಸ್ಥಳವಾಗಿದೆ.

ನೀವು ಉನ್ನತ ಶಾಂತಿ ಮತ್ತು ಭಕ್ತಿ ಯ ಜಾಗವನ್ನು ಹುಡುಕುತ್ತಿದ್ದ ಪಕ್ಷದಲ್ಲಿ ನೀವು ಶ್ರೀಕಟ್ಟುವೀರ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಬಹುದು. ಇಲ್ಲಿ ಆಹಾರಕ್ಕಾಗಿ ಹುಡುಕಾಡುವುದು ಕಷ್ಟಕರವಾದ ಕೆಲಸವಲ್ಲ. ಶ್ರೀ ಮಂಗಳಂ ಫುಡ್ ಕೋರ್ಟ್ ಮತ್ತು ಮಂಗಳಂ ರೆಸ್ಟೋರೆಂಟ್ ಅಂತಹ ಅನೇಕ ಕಡೆ ಸ್ಥಳೀಯ ಆಹಾರಗಳನ್ನು ಪೂರೈಸುತ್ತಾರೆ.

ಧರ್ಮಪುರಿ

ಧರ್ಮಪುರಿ

PC: Sankara Subramanian

ಕೃಷ್ಣಗಿರಿಯಿಂದ ನಿಮ್ಮ ನಂತರದ ನಿಲುಗಡೆಯೆಂದರೆ ಅದು ಧರ್ಮಪುರಿ. ಇದು ನಿಮ್ಮ ಹಿಂದಿನ ನಿಲುಗಡೆಯಿಂದ ಸುಮಾರು 45 ಕಿ.ಮೀ ಅಂತರದಲ್ಲಿದೆ. ವೈಟ್ಲಾ ಬೆಟ್ಟಗಳ ತಪ್ಪಲಿನಲ್ಲಿರುವ ಧರ್ಮಪುರಿ ತನ್ನ ಸುತ್ತಮುತ್ತಲಿನ ಪರಿಸರದಿಂದ ಏಕಾಂತ ಪ್ರಕೃತಿಯಲ್ಲಿರುವ ನಿಶ್ಯಬ್ಧ ಸ್ಥಳವಾಗಿದೆ.ಕಾವೇರಿ ನದಿಯಲ್ಲಿ ಗುಡುಗಿನ ಘರ್ಜನೆಯೊಂದಿಗಿ ಮೇಲಿಂದ ಕೆಳಗೆ ಧುಮುಕುವ ಭವ್ಯವಾದ ಹೊಗೆನಿಕಲ್ ಜಲಪಾತವು ಇಲ್ಲಿ ನೋಡಲೇ ಬೇಕಾದ ಸ್ಥಳವಾಗಿದೆ.

ಧರ್ಮಪುರಿ ಒಂದು ಐತಿಹಾಸಿಕ ಸ್ಥಳವಾಗಿದ್ದು ಸ್ವಾತಂತ್ರ್ಯಾ ನಂತರ ತಮಿಳುನಾಡಿನಲ್ಲಿ ರಚಿಸಲ್ಪಟ್ಟ ಮೊದಲ ಜಿಲ್ಲೆಯಾಗಿದೆ. ನಿಮ್ಮ ನಿಲುಗಡೆಯಿಂದ 7 ಕಿ.ಮೀ ಅಂತರದಲ್ಲಿರುವ ಚೆನ್ನರಾಯ ಪೆರುಮಾಳ್ ದೇವಾಲಯವು ಒಂದು ಹೊಯ್ಸಳ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಭವ್ಯ ದೇವಾಲಯವಾಗಿದ್ದು ಇದು ವಿಷ್ಣು ದೇವರಿಗೆ ಸಮರ್ಪಿತವಾಗಿದೆ.

ಸೇಲಂ

ಸೇಲಂ

ಧರ್ಮಪುರಿಯಿಂದ ನಿಮಗೆ ಸಿಗುವ ನಂತರ ನಿಲುಗಡೆಯೆಂದರೆ ಅದು ಸೇಲಂ ಇದು ರಾ.ಹೆ 44 ರಲ್ಲಿ ಸುಮಾರು 63 ಕಿ.ಮೀ ನ ಪ್ರಯಾಣವಾಗಿರುತ್ತದೆ. ಸೇಲಂ ಒಂದು ತುಂಬಾ ಸದಾನಿರತವಾಗಿರುವ ಸ್ಥಳವಾಗಿದ್ದು ಇದು ಹಿಂದು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಮತ್ತು ಹೆಸರಾಂತ ಜಾಮಾ ಮಸೀದಿ ಇದು ಇಲ್ಲಿದ್ದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಸೇಲಂಗೆ ನಿಮ್ಮ ಕುಟುಂಬದವರೊಂದಿಗೆ ಪ್ರಯಾಣಿಸುತ್ತಿದ್ದಲ್ಲಿ, ಇದು ಒಂದು ಉತ್ತಮವಾದ ಖರೀದಿ ಮಾಡುವ ಸ್ಥಳವಾಗಿದೆ.ಸ್ಥಳೀಯ ಮಾರುಕಟ್ಟೆಗಳೆಂದರೆ ಬಜಾರ್ ಸ್ಟ್ರೀಟ್, ಮತ್ತು ಚೈನಾ ಕಡೈ ಸ್ಟ್ರೀಟ್ ಮುಂತಾದ ಕಡೆ ಸ್ಥಳೀಯ ಹಾಗೂ ತುಂಬಾ ಬೇಡಿಕೆ ಇರುವ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ತಟ್ಟು ವಡೈ ಸೆಟ್ಟು ಎಂಬುದು ಸ್ಥಳೀಯ ಭಕ್ಷ್ಯವಾಗಿದೆ ಮತ್ತು ಅಲ್ಲಿನ ಇದೊಂದು ಬಗೆಯ ಚಾಟ್ ತಿನಿಸಾಗಿದ್ದು ಇದನ್ನು ಬೀಟ್ರೂಟ್, ತರಕಾರಿಗಳು ಮತ್ತು ಕ್ಯಾರೆಟ್ ನೊಂದಿಗೆ ಉಪಯೋಗಿಸಿ ಮಾಡಿರುತ್ತಾರೆ.

ಅಂತಿಮ ಗಮ್ಯಸ್ಥಾನ - ಯರ್ಕಾಡ್

ಅಂತಿಮ ಗಮ್ಯಸ್ಥಾನ - ಯರ್ಕಾಡ್

PC: Swarthika Palanisamy

ಸೇಲಂ ನಿಂದ 30 ಕಿ.ಮೀ ದೂರದಲ್ಲಿರುವ ನಿಮ್ಮ ಅಂತಿಮ ಗಮ್ಯಸ್ಥಾನವನ್ನು ತಲುಪಲು ನೀವು ಡೊಂಕಾದ ಪರ್ವತ ಹಾದಿಯಲ್ಲಿ ಮತ್ತು ತೇವಯುಕ್ತ ತಂಪಾದ ಗಾಳಿಯ ಮೂಲಕ ಸಾಗಬೇಕಾಗುತ್ತದೆ. ಯರ್ಕಾಡ್ ಬೆಳ್ಳಿ ಓಕ್ಸ್ ಮತ್ತು ಮೆಣಸು ಬಳ್ಳಿಗಳಿಂದ ಮೌನವಾಗಿ ಸುತ್ತುವರಿಯಲ್ಪಟ್ಟಿದ್ದುದರಿಂದ ಈ ಸ್ಥಳಕ್ಕೆ ಮತ್ತು ಸ್ಥಳೀಯ ಹೆಸರು ಯೆರ್-ಕಾಡು ಎಂಬ ಹೆಸರು ಬಂದಿದೆ.

ಮುಂಚೆ ಇದು ದೂರದಲ್ಲಿರುವ ಬುಡಗಟ್ಟು ತಾಣವಾಗಿದ್ದರು ಕೂಡಾ ನಂತರ ಇದನ್ನು ಬ್ರಿಟಿಷರು ಗಿರಿ ಪ್ರದೇಶವನ್ನು ಆಕರ್ಷಣೀಯ ಪ್ರದೇಶಗಳಾಗಿ ಅಭಿವೃದ್ದಿ ಪಡಿಸಿದರು ಅಲ್ಲದೆ ಅವರು ಅರೆಬಿಕಾ ಕಾಫಿ ತೋಟಗಳನ್ನು ಆ ಪ್ರದೇಶದಲ್ಲಿ ಸಿಟ್ರಸ್ ಹಣ್ಣುಗಳೊಂದಿಗೆ ಪರಿಚಯಿಸಿದರು.ಅಂದಿನಿಂದಲೂ ಇದು ಆಹ್ಲಾದಕರ ಹವಾಮಾನ ಮತ್ತು ಕ್ಯಾಥೋಲಿಕ್ ಮಿಷನರಿಗಳಿಗೆ ಹೆಸರುವಾಸಿಯಾಗಿದೆ.

ನೀವು ಯರ್ಕಾಡ್ ನಲ್ಲಿರುವಾಗ ಭೇಟಿ ನೀಡಬಹುದಾದ ಸ್ಥಳಗಳು

ಪವಿತ್ರ ಟ್ರಿನಿಟಿ ಚರ್ಚ್

ಪವಿತ್ರ ಟ್ರಿನಿಟಿ ಚರ್ಚ್

PC: Aruna

ನಿಮ್ಮ ವಾಹನವನ್ನು ಬದಿಗೆ ಹಾಕಿ ಅಲ್ಲಿಂದ ನೀವು ಇಲ್ಲಿಂದ ಕಿರಿದಾದ ಕಾಲುದಾರಿಗಳ ಉದ್ದಕ್ಕೂ ದೂರ ಅಡ್ಡಾಡಲು ಸಲಹೆ ನೀಡಲಾಗುತ್ತದೆ ಮತ್ತು ಇಲ್ಲಿ ನೀವು ವಸಾಹತು ಶಾಹಿ ವಾಸ್ತುಶಿಲ್ಪ ವಿನ್ಯಾಸಗಳನ್ನು ಕಾನ್ವೆಂಟ್ ಕಟ್ಟಡಗಳ ಮೇಲೆ ಮತ್ತು ಬ್ರಿಟಿಷ್ ಸ್ಮಶಾನವನ್ನು ಹೊಂದಿದ್ದ ಹೋಲಿ ಟ್ರಿನಿಟಿ ಚರ್ಚುಗಳಲ್ಲಿ ಕಾಣಬಹುದಾಗಿದೆ.ಈ ಸಮಾಧಿಯ ಮೇಲೆ ಕೆಲವು ಪ್ರಸಿದ್ಧ ಬ್ರಿಟಿಷ್ ಜನರಲ್ ಗಳ ಹೆಸರುಗಳಿರುವುದನ್ನು ಕಾಣಬಹುದು ಇದು ಈ ನಿಶ್ಯಬ್ದ ಕಣಿವೆಯಲ್ಲಿ ಸಂಗ್ರಹವಾಗಿರುವ ಐತಿಹಾಸಿಕ ಕಲಾಕೃತಿಗಳ ಒಂದು ನೋಟವನ್ನು ನೀಡುತ್ತದೆ.

ಗ್ರ್ಯಾಂಜ್ ಬಂಗಲೆ

ಗ್ರ್ಯಾಂಜ್ ಬಂಗಲೆ

ಹತ್ತಿರದ ಗ್ರ್ಯಾಂಜ್ ಬಂಗಲೆ ಸ್ವಾತಂತ್ರ್ಯದ ಪೂರ್ವದ ಯುದ್ಧ ಕಾಲಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ 1857ರ ದಂಗೆಯ ಸಂದರ್ಭದಲ್ಲಿ ಇದನ್ನು ವಶಪಡಿಸಿಕೊಳ್ಳುವ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು.ರಾಬರ್ಟ್ ಕ್ಲೈವ್ನ ಕಣ್ಣುಗಳನ್ನೂ ಕೂಡ ಈ ಸ್ಥಳದ ಸೌಂದರ್ಯವು ನಿಸ್ಸಂದೇಹವಾಗಿ ಸೆಳೆಯಲ್ಪಟ್ಟಿತ್ತು. ಅವರು ಇಲ್ಲಿ ವಾಸಿಸಲೇ ಬೇಕೆನ್ನುವ ಒಂದು ನಿರ್ಧಾರಕ್ಕೆ ಬಂದು ವಾಸಿಸುತ್ತಿದ್ದರು ಮತ್ತು ನಂತರದಲ್ಲಿ ತಪ್ಪಾಗಿ ಕೆಲಸ ಮಾಡಿದ್ದಕ್ಕೆ ಗನ್ನಿಂದ ತಾನೇ ಶೂಟ್ ಮಾಡಲು ಪ್ರಯತ್ನಿಸಿದರು!

ಸ್ಥಳೀಯ ಮಾರುಕಟ್ಟೆಗಳು

ಸ್ಥಳೀಯ ಮಾರುಕಟ್ಟೆಗಳು

ಸ್ಥಳೀಯ ಮಾರುಕಟ್ಟೆಯಲ್ಲಿ ನಡೆಯುವಾಗ ನೀವು ಜೋಳದ , ಮೆಣಸಿನಕಾಯಿ ಬಜ್ಜಿಗಳನ್ನು ಸವಿಯಬಹುದು ಮತ್ತು ಜೇನುತುಪ್ಪದಲ್ಲಿ ನೆನೆಸಿರುವ ಸಿಹಿ ಅಂಜೂರದ ಹಣ್ಣುಗಳನ್ನು ಸವಿಯಬಹುದು. ಇಲ್ಲಿ ಹೇರಳವಾಗಿ ಸಿಗುವ ಕಸ್ಟರ್ಡ್ ಆಪಲ್ ಗಳನ್ನು ತಿನ್ನಲು ಮರೆಯದಿರಿ. ನಂತರ ನೀವು ಸುಲಭವಾಗಿ ನಿಮ್ಮ ದಿನದ ವಿಶ್ರಾಂತಿ ಪಡೆಯಲು ಒಂದು ಸರೋವರದ ಸುತ್ತ ಪೆಡಲ್ ದೋಣಿಯಲ್ಲಿ ಕುಳಿತು ತೇಲಬಹುದು.

ಬಟಾನಿಕಲ್ ಗಾರ್ಡನ್

ಬಟಾನಿಕಲ್ ಗಾರ್ಡನ್

ಮರುದಿನ ಬೆಳಗ್ಗೆ ಬಟಾನಿಕಲ್ ಗಾರ್ಡನ್ನು ಭೇಟಿ ಮಾಡಲು ಮರೆಯದಿರಿ. ಸ್ಥಳೀಯ ಹಕ್ಕಿಗಳು ಮತ್ತು ಹೂಬಿಡುವ ಕರಿಂಜಿಗ ಹೂವುಗಳು ಕಣ್ಣಿಗೆ ಸಂತೋಷವನ್ನು ನೀಡಬಹುದು.ಇಲ್ಲಿಂದ ಮಣ್ಣಿನ ಕಾಫಿ ತೋಟ ಪ್ರದೇಶದ ಸುತ್ತಲೂ ಅಡ್ಡಾಡಬಹುದು ಮತ್ತು ಕಾಫಿಯ ಬಲವಾದ ಸುವಾಸನೆಯೊಂದಿಗೆ ನಿಮ್ಮನ್ನು ಪುನಶ್ಚೇತನಗೊಳಿಸಿಕೊಳ್ಳಬಹುದು. ಈ ಪ್ರದೇಶವು ಖಂಡಿತವಾಗಿ ಒಂದು ನಿಲುಗಡೆಯ ಪ್ರದೇಶವಾಗಿದ್ದು , ಇಲ್ಲಿಗೆ ಮತ್ತೆ ಮತ್ತೆ ಭೇಟಿ ಮಾಡಲು ಎಂದಿಗೂ ಮರೆಯುವುದಿಲ್ಲ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more