Search
  • Follow NativePlanet
Share
» »ಚೆನ್ನೈನಿಂದ ಬಿ ಆರ್ ಬೆಟ್ಟಗಳ ಕಡೆಗೆ- ರಜಾದಿನಗಳಲ್ಲಿ ಕಾಡಲ್ಲಿರುವ ಒಂದು ಸೂಕ್ತವಾದ ಸ್ಥಳ

ಚೆನ್ನೈನಿಂದ ಬಿ ಆರ್ ಬೆಟ್ಟಗಳ ಕಡೆಗೆ- ರಜಾದಿನಗಳಲ್ಲಿ ಕಾಡಲ್ಲಿರುವ ಒಂದು ಸೂಕ್ತವಾದ ಸ್ಥಳ

ಚೆನ್ನೈ, ಬಿಆರ್ ಹಿಲ್ಸ್, ಈ ಪರಿಪೂರ್ಣ ವಾರಾಂತ್ಯದಲ್ಲಿ ವಿರಾಮವನ್ನು ತೆಗೆದುಕೊಳ್ಳಿ, ಅದು ನಿಮ್ಮನ್ನು ಕಾಡುಪ್ರದೇಶಕ್ಕೆ ಕರೆದೊಯ್ಯುತ್ತದೆ, ಮತ್ತು ಶಾಂತವಾದ ವಾತಾವರಣವನ್ನು ನೀವೇ ಕಂಡುಕೊಳ್ಳಿ.

By Manjula Balaraj Tantry

ಅಚ್ಚರಿಗೊಳಿದುವಂತಹ ಪರ್ವತ ಶ್ರೇಣಿಗಳನ್ನು ಹೊಂದಿರುವ ಬಿಳಿಗಿರಿರಂಗನ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟವು ಭಾರತದ ಕರ್ನಾಟಕ ರಾಜ್ಯದಲ್ಲಿದೆ ಮತ್ತು ಇದರ ಕಳಂಕರಹಿತ ಮತ್ತು ಅಪ್ರತಿಮ ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರಿಗೆ ಈ ಬೆಟ್ಟದ ಹೆಸರು ಒಂದು ಸಾಮಾನ್ಯವಾದುದಾಗಿದ್ದರೂ ಇದರ ಕೆಲವು ಹುದುಗಿರುವ ಹಾಗೂ ಅನ್ವೇಷಣೆ ಮಾಡಬೇಕಾದ ಸೌಂದರ್ಯತೆಯು ಇನ್ನೂ ಇದೆ.

ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವೆ ಶಾಂತಿಯುತವಾಗಿ ನೆಲೆಸಿರುವ ಬಿಳಿರಂಗನ ಬೆಟ್ಟವು ಸಂರಕ್ಷಿಸಲ್ಪಟ್ಟದೆ ಮತ್ತು ಹಲವಾರು ಜಾತಿಯ ಪ್ರಾಣಿಗಳು ಮತ್ತು ಸಸ್ಯಗಳನ್ನು ಬೆಳೆಸುತ್ತಿದೆ.ಈ ಅತಿದೊಡ್ಡ ಶ್ರೀಮಂತ ಕಾಡುಗಳಲ್ಲಿ ಕಾಣುವ ಪ್ರಮುಖ ವನ್ಯಜೀವಿಗಳೆಂದರೆ ಸಾಂಬರ್, ಚಿಟಲ್, ಕಂದು ಮೀನು ಗೂಬೆ, ಪಟ್ಟೆ ಹುಲಿ, ಗೌರ್ ಇತ್ಯಾದಿ.

ಇಲ್ಲಿ ವನ್ಯಜೀವಗಳಲ್ಲದೆ ಅನೇಕ ಪ್ರವಾಸಿ ತಾಣಗಳನ್ನು ಈ ಬೆಟ್ಟದ ಆಸುಪಾಸಿನಲ್ಲಿ ಕಾಣಬಹುದಾಗಿದೆ. ಅವುಗಳಲ್ಲಿ ದೇವಾಲಯಗಳು, ಹಳೆಯಕಾಲದ ಮರಗಳು ಇತಾದಿಗಳನ್ನು ಕಾಣಬಹುದಾಗಿದೆ. ಆದುದರಿಂದ ಬಿ ಆರ್ ಬೆಟ್ಟಗಳ ನಿಗೂಢ ಸೌಂದರ್ಯತೆಯಲ್ಲಿ ಕಾಲ ಕಳೆಯುವುದು ಹೇಗಿರಬಹುದು?

ಬಿ ಆರ್ ಬೆಟ್ಟಗಳಿಗೆ ಭೇಟಿಕೊಡಲು ಸರಿಯಾದ ಸಮಯ

ಬಿ ಆರ್ ಬೆಟ್ಟಗಳಿಗೆ ಭೇಟಿಕೊಡಲು ಸರಿಯಾದ ಸಮಯ

PC- the golden dawn

ಬಿ ಆರ್ ಬೆಟ್ಟಗಳ ಹೊರಹೊಮ್ಮುವ ಸೌಂದರ್ಯತೆಯಲ್ಲಿ ನಿಮ್ಮ ಉತ್ತಮ ಸಮಯವನ್ನು ಕಳೆಯಬೇಕೆಂದಿದ್ದಲ್ಲಿ, ಇಲ್ಲಿಗೆ ಭೇಟಿಕೊಡಲು ಉತ್ತಮ ಸಮಯವೆಂದರೆ ಅದು ಎಪ್ರಿಲ್ ತಿಂಗಳಿನಿಂದ ನವೆಂಬರ್ ತಿಂಗಳ ಅಂತ್ಯದವರೆಗೆ. ಅಥವಾ ಈ ತಿಂಗಳುಗಳ ಮಧ್ಯದಲ್ಲಿ, ಇಲ್ಲಿಯ ಕಾಡುಗಳಲ್ಲಿನ ನೈಸರ್ಗಿಕ ಸೌಂದರ್ಯತೆ ಮತ್ತು ಇಲ್ಲಿಯ ಹವಾಗುಣ ತಂಪು ಮತ್ತು ಆಹ್ಲಾದಕರವಿದ್ದು ಸುತ್ತಾಡಲು ಅನುಕೂಲಕರವಾಗಿರುತ್ತದೆ. ಬಿ ಆರ್ ಬೆಟ್ಟಗಳ ಕಾಡುಗಳು ಮತ್ತು ವನ್ಯ ಜೀವಿಗಳ ಮಧ್ಯೆ ನಿಮ್ಮನ್ನು ನೀವು ಕಳೆದುಕೊಳ್ಳಿ.

ಚೆನ್ನೈನಿಂದ ಬಿಆರ್ ಹಿಲ್ಸ್ ತಲುಪುವುದು ಹೇಗೆ?

ಚೆನ್ನೈನಿಂದ ಬಿಆರ್ ಹಿಲ್ಸ್ ತಲುಪುವುದು ಹೇಗೆ?

PC- Maps

ವಾಯುಮಾರ್ಗ ಮೂಲಕ : ಮೈಸೂರಿಗೆ ನೇರವಾಗಿ ವಿಮಾನದಲ್ಲಿ ಪ್ರಯಾಣಿಸಬಹುದು ಮತ್ತು ಅಲ್ಲಿಂದ ಕ್ಯಾಬ್ ಮೂಲಕ ಬಿಳಿರಂಗನ ಬೆಟ್ಟಕ್ಕೆ ಹೋಗಬಹುದು. ಬಿ ಆರ್ ಬೆಟ್ಟದಿಂದ ಮೈಸೂರು ವಿಮಾನ ನಿಲ್ದಾಣ 80 ಕಿ.ಮೀ ಅಂತರದಲ್ಲಿದೆ.

ರೈಲು ಮಾರ್ಗ: ಚೆನ್ನೈನಿಂದ ಬಿ. ಆರ್ ಬೆಟ್ಟಕ್ಕೆ ನೇರ ರೈಲು ಸಂಪರ್ಕ ಇಲ್ಲ.ಆದುದರಿಂದ ಚೆನ್ನೈನಿಂದ ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣ ಮಾಡಬಹುದು ಮತ್ತು ಅಲ್ಲಿಂದ ಕ್ಯಾಬ್ ಮೂಲಕ ಬಿ ಆರ್ ಬೆಟ್ಟಕ್ಕೆ ಹೋಗಬಹುದು.

ರಸ್ತೆಯ ಮೂಲಕ: ಚೆನ್ನೈನಿಂದ ಸುಮಾರು 500 ಕಿ.ಮೀ ದೂರದಲ್ಲಿರುವ ಬಿರ್ ಬೆಟ್ಟಕ್ಕೆ ಚೆನ್ನೈ ಮತ್ತು ಇತರ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ಚೆನ್ನೈನಿಂದ ಬಿ.ಆರ್ ಬೆಟ್ಟಕ್ಕೆ ಕ್ಯಾಬ್ ತೆಗೆದುಕೊಳ್ಳಬಹುದು

ನಿಮ್ಮ ಸ್ವಂತ ವಾಹನದಿಂದ ಪ್ರಯಾಣಿಸುವುದಾದಲ್ಲಿ ನೀವು ಈ ಕೆಳಗಿನ ಮಾರ್ಗಗಳ ಮೂಲಕ ಪ್ರಯಾಣಿಸಬಹುದು.

ಮಾರ್ಗ 1: ಚೆನ್ನೈ - ಕಾಂಚೀಪುರಂ - ವೆಲ್ಲೂರು - ಬೆಂಗಳೂರು - ಬಿಆರ್ ಬೆಟ್ಟ

ಮಾರ್ಗ 2: ಚೆನ್ನೈ - ಕಾಂಚೀಪುರಂ - ಚಿತ್ತೂರು - ಬೆಂಗಳೂರು - ಬಿಆರ್ ಹಿಲ್ಸ್

ಆದರೂ ಮಾರ್ಗ 1 ವೇಗವಾಗಿ ತಲುಪುವಂತಹುದು ಮತ್ತು ಅತ್ಯಂತ ಹಿತಕರವಾದುದಾಗಿದೆ

ನೀವು ಈ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ತಲುಪಬೇಕೆಂದಾದಲ್ಲಿ, ಮಾರ್ಗ 1 ರಲ್ಲಿ ಪ್ರಯಾಣಿಸುವುದು ಉತ್ತಮ. ಬಿಆರ್ ಬೆಟ್ಟಕ್ಕೆ ಒಮ್ಮೆ ನೀವು ಪ್ರಯಾಣ ಪ್ರಾರಂಭಿಸಿದರೆ ನೀವು ಈ ಕೆಳಗಿನ ಸ್ಥಳಗಳಿಗೆ ಭೇಟಿ ಕೊಡಬಹುದು ಮತ್ತು ಇಲ್ಲಿ ವಿಶ್ರಾಂತಿ ಪಡೆಯಬಹುದು.

1) ಕಾಂಚೀಪುರಂ

1) ಕಾಂಚೀಪುರಂ

PC- Girish Gopi

ತಮಿಳುನಾಡಿನ ಸುಂದರ ಹಾಗೂ ಧಾರ್ಮಿಕ ಕೇಂದ್ರಗಳಲ್ಲೊಂದಾದ ಕಾಂಚಿಪುರಂ ವೇಗಾವತಿ ನದಿ ಡಂಡೆಯ ಮೇಲಿದೆ.ಇದು ಕಾಂಚೀಪುರಂ ಸೀರೆಗಳಿಗೆ ಮತ್ತು ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ ಈ ಪಟ್ಟಣವು ಆಧ್ಯಾತ್ಮಿಕ ಮಹತ್ವವುಳ್ಳ ಪಟ್ಟಣವೆಂದೇ ಹೆಸರುವಾಸಿಯಾಗಿದೆ.

ಈ ಸ್ಥಳವು ಇಲ್ಲಿಯ ಐತಿಹಾಸಿಕ ಕಟ್ಟಡಗಳಲ್ಲಿರುವ ವಾಸ್ತುಶಿಲ್ಪ ಮತ್ತು ದೇವಾಲಯಗಳಲ್ಲಿ ಕಾಣುವ ಭವ್ಯವಾದ ವಿನ್ಯಾಸಗಳು ಮತ್ತು ಮಾದರಿಗಳಿಗೆ ಪ್ರವಾಸಿಗರಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಬಿ ಆರ್ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಈ ಧಾರ್ಮಿಕ ಮತ್ತು ರೇಷ್ಮೇ ಕೇಂದ್ರಗಳಲ್ಲಿ ಒಂದು ವಿರಾಮ ತೆಗೆದುಕೊಂಡರೆ ಹೇಗಿರುತ್ತದೆ?

2) ವೆಲ್ಲೂರು

2) ವೆಲ್ಲೂರು

PC- Soham Banerjee

ತಮಿಳುನಾಡಿನಲ್ಲಿ ಹೆಚ್ಚು ಭೇಟಿ ನೀಡಲ್ಪಡುವ ಸ್ಥಳವೆಂದರೆ ಅದು ವೆಲ್ಲೂರು. ಇದು ಇಲ್ಲಿಯ ಐತಿಹಾಸಿಕ ಮಹತ್ವ ಮತ್ತು ಬೆರಗುಗೊಳಿಸುವ ಸೌಂದರ್ಯತೆಯು ತನ್ನ ಮೂಲಭೂತ ಬೆಟ್ಟಗಳು ಮತ್ತು ಹಚ್ಚ ಹಸಿರಿನ ಕಾಡುಗಳ ತನಕವೂ ವ್ಯಾಪಿಸಿದೆ.

ಈ ಪಟ್ಟಣದ ಒಂದು ಕಡೆ ನೀವು ಪ್ರಾಚೀನ ದೇವಾಲಯಗಳು ಮತ್ತು ಹಳೆಯ ಕಟ್ಟಡಗಳನ್ನು ಅನ್ವೇಷಿಸಿದರೆ ಇನ್ನೊಂದು ಕಡೆ ನೀವು ಅದರ ಧಾರ್ಮಿಕ ಸ್ಥಳಗಳ ದೀರ್ಘಕಾಲಿಕ ಆಕರ್ಷಣೆಯ ಸುತ್ತಲೂ ನೀವು ಸಂಚರಿಸಬಹುದು. ಪ್ರಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಗಳ ಪರಿಪೂರ್ಣ ಮಿಶ್ರಣದಲ್ಲಿ ಸಂತೋಷಗೊಂಡರೆ ಹೇಗಿರುತ್ತದೆ?

3 ಬೆಂಗಳೂರು

3 ಬೆಂಗಳೂರು

PC- Ramnath Bhat

ಬಿ ಆರ್ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಲಿಕಾನ್ ವ್ಯಾಲಿ ಮತ್ತು ಉದ್ಯಾನನಗರಿಯಲ್ಲಿ ಒಂದು ವಿಶ್ರಾಂತಿ ತೆಗೆದುಕೊಂಡರೆ ಹೇಗಿರುತ್ತದೆ? ಸುಂದರವಾದ ಉದ್ಯಾನವನಗಳಿಂದ ಹಿಡಿದು ಐತಿಹಾಸಿಕ ಸ್ಮಾರಕಗಳವರೆಗೆ ಮತ್ತು ಬೆರಗುಗೊಳಿಸುವ ಸರೋವರಗಳಿಂದ ಹಿಡಿದು ನವೀನ ವಾಸ್ತುಶಿಲ್ಪಗಳವರೆಗೆ ಭಾರತದ ಈ ಹೈಟೆಕ್ ನಗರವು ತನ್ನ ಜೇಬಿನಲ್ಲಿ ಎಲ್ಲವನ್ನೂ ಹೊಂದಿದ್ದು ಇಲ್ಲಿಗೆ ಭೇಟಿ ಕೊಡುವವರನ್ನು ಮನೋರಂಜಿಸುತ್ತದೆ. ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ನೆಲೆಯಾಗಿದ್ದು ಇದು ಇಂದು ಭಾರತದ ಅತ್ಯಂತ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲೊಂದಾಗಿದೆ. ಇದು ವರ್ಷದಾದ್ಯಂತ ಭೇಟಿ ನೀಡಲ್ಪಡುವ ಪ್ರವಾಸಿ ಸ್ಥಳವಾಗಿದೆ.

ಬಿಳಿಗಿರಿ ರಂಗಸ್ವಾಮಿ ದೇವಾಲಯ

ಬಿಳಿಗಿರಿ ರಂಗಸ್ವಾಮಿ ದೇವಾಲಯ

PC-Hari Krishna

ಈ ದೇವಾಲಯವು ರಂಗನಾಥ ದೇವರಿಗೆ ಅರ್ಪಿತವಾಗಿದ್ದು, ಬಿ.ಆರ್ ಬೆಟ್ಟದ ಒಂದು ಪ್ರಮುಖ ಆಕರ್ಷಣೆಯಲ್ಲೊಂದಾಗಿದೆ. ಬಿಳಿಗಿರಿ ರಂಗಸ್ವಾಮಿ ದೇವಾಲಯವು ರಂಗನಾಥ ದೇವರ ಪ್ರತಿಮೆಯು ನಿಂತಿರುವ ಸ್ಥಿತಿಯಲ್ಲಿರುವ ಭಾರತದ ಏಕೈಕ ದೇವಾಲಯವಾಗಿದೆ. ಪ್ರತಿ ವರ್ಷ ಈ ಪ್ರಸಿದ್ದ ದೇವಾಲಯದಲ್ಲಿ ರಥೋತ್ಸವ ನಡೆಸಲಾಗುತ್ತದೆ ಇಲ್ಲಿ ಅನೇಕ ಹಿಂದು ಭಕ್ತರು ಮತ್ತು ಇನ್ನಿತರ ಉತ್ಸಾಹಿಗಳು ಈ ವೈಭವೋಪೇತ ಉತ್ಸವದಲ್ಲಿ ಸಂತೋಷದಿಂದ ಪಾಲ್ಗೊಳ್ಳುವುದನ್ನು ಕಾಣಬಹುದು.

ಬಿ ಆರ್ ಟಿ ವನ್ಯಜೀವಿ ಧಾಮ

ಬಿ ಆರ್ ಟಿ ವನ್ಯಜೀವಿ ಧಾಮ

PC- DineshkannambadI

ಪ್ರಕೃತಿ ಪ್ರಿಯರಿಗೆ ಬಿ ಆರ್ ಬೆಟ್ಟಗಳಲ್ಲಿರುವ ಪ್ರಮುಖ ಆಕರ್ಷಣೆಯೆಂದರೆ ಅದು ವನ್ಯಜೀವಿಧಾಮ ಅದುವೇ ಬಿಆರ್ ಟಿ ವನ್ಯಜೀವಿ ಧಾಮ. ಅಥವಾ ಬಿಳಿಗಿರಿ ರಂಗನಾಥಸ್ವಾಮಿ ಟೆಂಪಲ್ ವನ್ಯಜೀವಿ ಧಾಮವೆಂದೂ ಕರೆಯಲಾಗುತ್ತದೆ.

ಇದರ ನೈಸರ್ಗಿಕ ಸೌಂದರ್ಯತೆ ಮತ್ತು ಮೋಜಿನ ಸ್ಥಳಗಳನ್ನು ಹೊಂದಿರುವುದರಿಂದ ಕೆಲವು ವರ್ಷಗಳಿಂದ ಇದು ಒಂದು ಜನಪ್ರೀಯ ಪಿಕ್ನಿಕ್ ತಾಣವೆನಿಸಿದೆ.

ಶ್ರೀಮಂತ ಹಸಿರು ಕಾಡುಗಳ ಮಧ್ಯೆ ಇದು ವನ್ಯಜೀವಿಗಳ ಅದ್ಭುತ ನೋಟವನ್ನು ನೀಡುತ್ತದೆ ಮತ್ತು ಅದರ ಮರಗಳಿಂದ ರೂಪುಗೊಂಡ ದಟ್ಟವಾದ ಮೇಲಾವರಣದ ಅಡಿಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ.

ದೊಡ್ಡ ಸಂಪಿಗೆ ಮರ

ದೊಡ್ಡ ಸಂಪಿಗೆ ಮರ

PC- Zelda Richardson

ದೊಡ್ಡ ಸಂಪಿಗೆ ಮರವು ಬಿ ಆರ್ ಬೆಟ್ಟಗಳಲ್ಲಿರುವ ಬುಡಕಟ್ಟು ಜನಾಂಗದವರ ಪೂಜಿಸುವ ಸ್ಥಳವಾಗಿದೆ ಇದನ್ನು ದೊಡ್ಡ ಚಂಪಕ ಮರವೆಂದೂ ಕರೆಯಲಾಗುತ್ತದೆ. ಈ ಮರವು ಸಾವಿರಾರು ವರ್ಷಗಳಷ್ಟು ಹಳೆಯದೆಂದು ಪರಿಗಣಿಸಲಾಗಿದೆ. ಮತ್ತು ಬಿಆರ್ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಒಂದು ಪ್ರಮುಖ ಪ್ರವಾಸಿ ಸ್ಥಳವೆನಿಸಿದೆ. ಈ ಪ್ರಕೃತಿ ತಾಯಿಯ ಅದ್ಬುತ ಸೃಷ್ಟಿಗೆ ಭೇಟಿ ಏಕೆ ನೀಡಬಾರದು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X