• Follow NativePlanet
Share
» »ಚೆನ್ನೈನಿಂದ ಮೇಘಮಲೈಗೆ - ಸಮೃದ್ಧ ಹಸಿರು ಸೌಂದರ್ಯದಲ್ಲಿ ನಿಮ್ಮನ್ನು ನೀವು ಮುಳುಗಿಸಿಕೊಳ್ಳಿ

ಚೆನ್ನೈನಿಂದ ಮೇಘಮಲೈಗೆ - ಸಮೃದ್ಧ ಹಸಿರು ಸೌಂದರ್ಯದಲ್ಲಿ ನಿಮ್ಮನ್ನು ನೀವು ಮುಳುಗಿಸಿಕೊಳ್ಳಿ

Posted By: Manjula Balaraj Tantry

ನಾವೆಲ್ಲರೂ ನಮ್ಮ ಸುತ್ತಲೂ ಒಂದು ಒಳ್ಳೆಯ ಪ್ರಕೃತಿಯನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ನಮಗೆ ಶಾಂತಿ ಇರಬೇಕೆಂದರೆ ಎಲ್ಲಾ ವಿಧದಲ್ಲಿಯೂ ನಮಗೆ ಒಂದು ಉತ್ತಮವಾದ ಸೌಕರ್ಯಗಳ ಮತ್ತು ಸೌಲಭ್ಯಗಳ ಹೊರತಾಗಿ ಸಾಧ್ಯವಿಲ್ಲ. ಈ ಆಶ್ರಯಗಳನ್ನು ಪಡೆಯಲು ನಾವು ನಮ್ಮ ಮಿತಿಯನ್ನು ಮೀರುತ್ತೇವೆ ಮತ್ತು ನಮ್ಮ ಮನಸ್ಸು ಮತ್ತು ಆತ್ಮದ ಶಾಂತಿಗಾಗಿ ಹುಡುಕಾಡುತ್ತಿರುತ್ತೇವೆ.

ಪ್ರವಾಸಿಗರಿಗೆ ಒಂದು ಉತ್ತಮ ಸೌಕರ್ಯವಲಯವನ್ನು ಕಲ್ಪಿಸುವಲ್ಲಿ ಮೇಘಮಲೈ ಒಂದು ಉತ್ತಮವಾದ ಸ್ಥಳವಾಗಿದ್ದು ಇಲ್ಲಿಯ ಪ್ರವಾಸಿಗರಿಗೆ ಒಂದು ಸಂಪೂರ್ಣ ರೀತಿಯ ಪ್ಯಾಕೇಜ್ ನೀಡುವಲ್ಲಿ ಹೆಸರುವಾಸಿಯಾಗಿದೆ. ಚಹಾ ಎಸ್ಟೇಟ್ ಗಳಿಂದ ಹಿಡಿದು ಏಲಕ್ಕಿ ತೋಟಗಳು, ಮತ್ತು ಸಮೃದ್ದ ಹಸಿರು ಬಯಲು ಪ್ರದೇಶಗಳು ಮಂಜಿನಿಂದ ಕೂಡಿದ ಬೆಟ್ಟಗಳು ಇತ್ಯಾದಿಗಳಿಂದ ಕೂಡಿದ ಈ ಅತಿವಾಸ್ತವಿಕ ಪ್ರದೇಶಗಳು ತಮ್ಮಲ್ಲಿ ಅನೇಕ ವಿಸ್ಮಯಗಳನ್ನು ಹೊಂದಿವೆ ಮತ್ತು ತನ್ಮೂಲಕ ರಜಾದಿನಗಳನ್ನು ಆನಂದಮಯವಾಗಿ ಕಳೆಯುವಂತೆ ಮಾಡುತ್ತವೆ. ತಮಿಳುನಾಡಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಪರ್ವತಗಳು ಹೈ ವೇವೀ ಪರ್ವತಗಳೆಂದೂ ಕರೆಯಲ್ಪಡುತ್ತವೆ. ಈ ಅದ್ಬುತವಾದ ಪರ್ವತ ಶ್ರೇಣಿಗಳು ಪ್ರವಾಸಿಗರಿಗೆ ಪ್ರಕೃತಿಯ ಒಂದು ಅದ್ಬುತ ಮೂಲ ರೂಪವನ್ನು ಒದಗಿಸಿಕೊಡುತ್ತವೆ.

ಮೇಘಾಮಲೈಗೆ ಭೇಟಿ ನೀಡಲು ಉತ್ತಮ ಸಮಯ

ಮೇಘಾಮಲೈಗೆ ಭೇಟಿ ನೀಡಲು ಉತ್ತಮ ಸಮಯ

ಮೇಘಮಲೈ ಮಧ್ಯವ್ಮ ವಲಯದ ಹವಾಗುಣವನ್ನು ಹೊಂದಿದೆ. ಆದುದರಿಂದ ಬೇಸಿಗೆಯು ಇಲ್ಲಿ ತುಂಬಾ ಬಿಸಿ ಇರುತ್ತದೆ. ಆದರೂ ನೀವು ಈ ಪಟ್ಟಣದಲ್ಲಿ ಹರಡಿರುವ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಬಯಸಿದಲ್ಲಿ ಇಲ್ಲಿಗೆ ಭೇಟಿ ನೀಡಬಹುದಾದ ಉತ್ತಮ ಸಮಯವೆಂದರೆ ಅದು ಚಳಿಗಾಲದಲ್ಲಿ. ಅದು ಅಕ್ಟೋಬರಿ ತಿಂಗಳಿನಿಂದ ಏಪ್ರಿಲ್ ಕೊನೆಯವರೆಗೆ ಈ ಸಮಯದಲ್ಲಿ ಇಲ್ಲಿ ಉಷ್ಣಾಂಶವು ಅನುಕೂಲಕರವಾಗಿರುತ್ತದೆ.


PC- Shivmirthyu

ಚೆನ್ನೈನಿಂದ ಮೇಘಾಮಲೈ ತಲುಪುವುದು ಹೇಗೆ?

ಚೆನ್ನೈನಿಂದ ಮೇಘಾಮಲೈ ತಲುಪುವುದು ಹೇಗೆ?

ವಾಯು ಮಾರ್ಗಗಳ ಮೂಲಕ: ನೀವು ಚೆನ್ನೈಗೆ ವಿಮಾನದ ಮೂಲಕ ಪ್ರಯಾಣ ಮಾಡಬೇಕೆಂದಿದ್ದರೆ ನೀವು ವಿಮಾನ ನಿಲ್ದಾಣದಿಂದ ಮೇಘಮಲೈಗೆ ಕ್ಯಾಬ್ ಮೂಲಕ ಪ್ರಯಾಣ ಮಾಡಬಹುದು ಅಥವಾ ಚೆನ್ನೈ ಪಟ್ಟಣಕ್ಕೆ ಹೋಗಬಹುದು.

ಅಲ್ಲಿಂದ ಮೇಘಮಲೈಗೆ ಬಸ್ಸಿನ ಮೂಲಕ ಚಿನ್ನಮನೂರ್ ಗೆ ಹೋಗಬಹುದು. ಅದು ಮೆಘಮಲೈ ನಿಂದ 25 ಕಿ.ಮೀ ದೂರದಲ್ಲಿದೆ. ನೀವು ಮಧುರೈಗೆ ನೇರವಾಗಿ ವಿಮಾನದಲ್ಲಿ ಹೋಗಬಹುದು ಮತ್ತು ನಂತರ ಅಲ್ಲಿಂದ ಚಿಕ್ಕಮನೂರ್ ಗೆ ಬಸ್ ಮೂಲಕ ಪ್ರಯಾಣ ಮಾಡಬಹುದು. ಚಿನ್ನಮನೂರ್ ಗೆ ಒಮ್ಮೆ ತಲುಪಿದ ಕೂಡಲೆ ಮೇಘಮಲೈಗೆ ಬಸ್ಸು ಮೂಲಕ ಪ್ರಯಾಣಿಸಬಹುದು.

ರೈಲು ಮೂಲಕ : ಚೆನ್ನೈನಿಂದ ಮೇಘಮಲೈಗೆ ರೈಲಿನ ನೇರ ಸಂಪರ್ಕವಿಲ್ಲ. ಆದುದರಿಂದ ನೀವು ಚೆನ್ನೈನಲ್ಲಿ ರೈಲು ಹತ್ತಿ ಶ್ರೀವಿಲ್ಲಿಪುತ್ತುರ್ ಅಥವಾ ಮದುರೈ ಗೆ ಹೋಗಬಹುದು ಮತ್ತು ನಂತರ ಅಲ್ಲಿಂದ ಬಸ್ಸಿನ ಮೂಲಕ ಮೇಘಮಲೈಗೆ ಪ್ರಯಾಣಿಸಬಹುದು.

ರಸ್ತೆಯ ಮೂಲಕ: ಚೆನ್ನೈನಿಂದ 550 ಕಿ.ಮೀ ದೂರದಲ್ಲಿರುವ ಮೇಘಾಮಲೈ ರಸ್ತೆಗಳ ಮೂಲಕ ಚೆನ್ನೈ ಮತ್ತು ಇತರ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ನೀವು ಚೆನ್ನೆಯಿಂದ ಮೇಘಮಾಲೈಗೆ ಕ್ಯಾಬ್ ಅನ್ನು ತೆಗೆದುಕೊಳ್ಳಬಹುದು ಅಥವಾ ಚೆನ್ನೈನಿಂದ ಚಿನ್ನಮನೂರಿಗೆ ನೇರವಾಗಿ ಬಸ್ ಅನ್ನು ಹಿಡಿದು ಹೋಗಬಹುದು ಅಲ್ಲಿಂದ ಮೇಘಾಮಲೈಗೆ ಸ್ಥಳೀಯ ಬಸ್ ಅನ್ನು ತೆಗೆದುಕೊಳ್ಳಬಹುದು.

ನೀವು ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಬೇಕೆಂದಿದ್ದರೆ ಈ ಕೆಳಗಿನ ಸಂಪರ್ಕಿಸುವ ಮಾರ್ಗಗಳನ್ನು ತೆಗೆದುಕೊಳ್ಳಬಹುದು

ಮಾರ್ಗ 1: ಚೆನ್ನೈ - ಚೆಂಗಲ್ಪಟ್ಟು - ರಂಜನಕುಡಿ - ತಿರುಚಿರಾಪಳ್ಳಿ - ಮೇಘಾಮಲೈ

ಆದರೂ ಮಾರ್ಗ 1ರ ಮೂಲಕ ಬೇಗ ತಲುಪಬಹುದಾದ ಕಾರಣ ಇದು ಹೆಚ್ಚು ಸೂಕ್ತವಾದುದಾಗಿದೆ.

ನೀವು ಮೇಘಮಲೈ ದಾರಿಯಲ್ಲಿ ಹೊರಟರೆ ಈ ಕೆಳಗಿನ ಕೆಲವು ಸ್ಥಳಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು.

1) ಚೆಂಗಲ್ಪಟ್ಟು

1) ಚೆಂಗಲ್ಪಟ್ಟು

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಒಂದು ಅತೀ ದೊಡ್ಡ ಪಟ್ಟಣ ಇದಾಗಿದ್ದು, ಚೆಂಗಲ್ಪಟ್ಟು ಒಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿಯ ಹೊರವಲಯದಲ್ಲಿರುವ ಕೊವಲಾಯ್ ಸರೋವರವು ಪ್ರಸಿದ್ದವಾಗಿದೆ. ಬೇಸಿಗೆ ಕಾಲದಲ್ಲಿ, ಕೊಲಾವಾಯ್ ಸರೋವರವು ಜಲಾಶಯದ ರೂಪದಲ್ಲಿ ಹತ್ತಿರದ ಪಟ್ಟಣಗಳು ​​ಮತ್ತು ನಗರಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರನ್ನು ಪೂರೈಸುವ ಮೂಲಕ ಕಾರ್ಯನಿರ್ವಹಿಸುತ್ತದೆ.

ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಸೂರ್ಯನ ವರ್ಣರಂಜಿತ ಕಿರಣಗಳಿಂದ ಚಿತ್ರಿಸಿದಂತಿರುವ ಸುತ್ತ ಮುತ್ತಲಿನ ಸೌಂದರ್ಯತೆಯ ವಾತಾವರಣವನ್ನು ನೀವು ಸವಿಯಬಹುದು.


PC- Sarath Kuchi

2) ರಂಜನ್ಕುಡಿ

2) ರಂಜನ್ಕುಡಿ

17 ನೇ ಶತಮಾನದ ಹೆಸರಾಂತ ಕೋಟೆ ಮತ್ತು ತನ್ನ ಪ್ರಕೃತಿ ಸೌಂದರ್ಯ ಮತ್ತು ಹಸಿರು ಸುತ್ತಮುತ್ತಲಿನ ವಾತಾವರಣಗಳಿಂದ ರಂಜನ್ ಕುಡಿ ತನ್ನ ನೈಸರ್ಗಿಕ ಅಂದವನ್ನು ಹೆಚ್ಚಿಸುತ್ತದೆ. ತಮಿಳುನಾಡಿನ ಪೆರಂಬಲೂರು ಪಟ್ಟಣದಲ್ಲಿದೆ, ರಂಜನಕುಡಿ ಕೋಟೆಯು ಭವ್ಯವಾದ ವಾಸ್ತುಶಿಲ್ಪ ಮತ್ತು ಗೋಡೆಗಳ ಮೇಲೆ ಕೆತ್ತಿದ ಸುಂದರವಾದ ವಿನ್ಯಾಸಗಳನ್ನು ಹೊಂದಿದೆ.

ಇದು ಕಡಿಮೆ ಪ್ರಚಾರಕ್ಕೆ ಒಳಗಾದ ಮತ್ತು ಅನ್ವೇಷಣೆಗೆ ಒಳಗಾದ ಕೋಟೆಯಾಗಿದ್ದು ಇದರ ಸೌಂದರ್ಯತೆಯನ್ನು ಇನ್ನೂ ಉಳಿಸಿಕೊಂಡಿದೆ. ಈ ಅದ್ಬುತವಾದ ಸ್ಥಳದಲ್ಲಿ ಒಂದು ವಿಶ್ರಾಂತಿ ತೆಗೆದು ಕೊಂಡರೆ ಹೇಗಿರುತ್ತದೆ ಇಲ್ಲಿಯ ಮಂತ್ರಮುಗ್ದಗೊಳಿಸುವ ಮತ್ತು ಪ್ರೇರೇಪಿಸುವ ಸೌಂದರ್ಯತೆಯನ್ನು ಸವಿಯದಿದ್ದರೆ ಹೇಗೆ?


PC- LOGANATHAN


3) ತಿರುಚಿರಾಪಳ್ಳಿ

3) ತಿರುಚಿರಾಪಳ್ಳಿ

ತಮಿಳುನಾಡಿನ ಪ್ರಮುಖ ನಗರಗಳಲ್ಲಿ ಒಂದಾದ ಇದು ಪ್ರವಾಸಿಗರಿಗೆ ಅಪಾರ ಆಸಕ್ತಿಕರ ಸ್ಥಳಗಳನ್ನು ಒದಗಿಸುತ್ತದೆ. ಇದು ಪ್ರಾಚೀನ ದೇವಾಲಯಗಳಿಂದ ಹಿಡಿದು ಆಧುನಿಕ ಕಟ್ಟಡಗಳವರೆಗೆ ಮತ್ತು ಐತಿಹಾಸಿಕ ಕೋಟೆಗಳಿಂದ ಹಿಡಿದು ಪ್ರಶಾಂತವಾದ ನದಿ ದ್ವೀಪಗಳವರೆಗೆ ಪ್ರವಾಸಿಗರಿಗೆ ಅನೇಕ ನೋಟದ ಉಡುಗೊರೆಗಳನ್ನು ನೀಡುತ್ತದೆ.

ರಾಕ್ ಪೋರ್ಟ್ (ಕಲ್ಲಿನ ಕೋಟೆ ) ಈ ನಗರದಲ್ಲಿರುವುದರಿಂದ ಈ ನಗರಕ್ಕೆ ಕಲ್ಲಿನಕೋಟೆಯ(ರಾಕ್ ಪೋರ್ಟ್) ನಗರವೆಂದು ಅಡ್ದ ಹೆಸರಿಂದ ಕರೆಯಲಾಗುತ್ತದೆ. ಈ ಸುಂದರ ನಗರವು ಟ್ರೈಸಿನೋಪಾಲಿ ಸಿಗಾರ್ಗೆ ಹೆಸರುವಾಸಿಯಾಗಿದೆ ರಂಗನಾಥಸ್ವಾಮಿ ದೇವಸ್ಥಾನ, ಕಾವೇರಿ ನದಿ, ಶ್ರೀರಂಗಂ ದ್ವೀಪ ಮತ್ತು ಇತರ ಹಲವು ಕಡೆಗಳಲ್ಲಿ ನಿಂತು ಅತ್ಯುತ್ತಮ ಕ್ಷಣಗಳನ್ನು ಕಳೆಯುವ ಅವಕಾಶವನ್ನು ಕಳೆದುಕೊಳ್ಳಬೇಡಿ.

ಮೇಘಮಲೈ ನಲ್ಲಿ ಭೇಟಿ ನೀಡಬಹುದಾದ ಸ್ಥಳಗಳು

ಒಮ್ಮೆ ನೀವು ಮೇಘಮಲೈನ ಗಡಿಯೊಳಗೆ ಪ್ರವೇಶಿಸಿದರೆ ಇಲ್ಲಿಯ ಎಲ್ಲಾ ಕಡೆ ಹರಡಿರುವ ಅಪ್ಪಟ ಸೌಂದರ್ಯತೆಗಳನ್ನು ನೋಡಿ ಅಚ್ಚರಿ ಪಡಲು ಸಿದ್ದರಾಗಿ. ಮೇಘಮಲೈನ ಹಸಿರು ತೋಟಗಳಲ್ಲಿ ದೈವಿಕತೆಯ ಮೂಲ ಸಾರವನ್ನು ಅನುಭವಿಸಬಹುದು ಇಲ್ಲಿಯ ಭೂದೃಶ್ಯ ಮತ್ತು ಪ್ರಕೃತಿಯ ನಯನ ಮನೋಹರ ದೃಶ್ಯಗಳ ಹೊರತಾಗಿಯೂ ನೀವು ಇಲ್ಲಿಯ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿಕೊಡಬಹುದು ಇಲ್ಲಿಗೆ ಭೇಟಿ ಕೊಡದಿದ್ದರೆ ನಿಮ್ಮ ಪ್ರವಾಸವು ಸಾರ್ಥಕವೆನಿಸುವುದಿಲ್ಲ.

PC- Raj

1) ಮೇಘಮಲೈ ವನ್ಯಜೀವಿ ಅಭಯಾರಣ್ಯ

1) ಮೇಘಮಲೈ ವನ್ಯಜೀವಿ ಅಭಯಾರಣ್ಯ

ಮೇಘಮಲೈನ ನಿತ್ಯಹರಿದ್ವರ್ಣದ ಕಾಡುಗಳ ಮಧ್ಯೆ ನೆಲೆಸಿರುವ ಈ ವನ್ಯಜೀವಿ ಧಾಮವು ತನ್ನದೇ ಆದ ಒಂದು ಪ್ರತ್ಯೇಕತೆ ಮತ್ತು ಸೌಂದರ್ಯಗೆಯನ್ನು ಹೊಂದಿದೆ. ಇದು ಅಸಂಖ್ಯಾತ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ, ಇದು ಆರಂಭದಿಂದಲೂ ಸಸ್ಯಗಳು ಮತ್ತು ಪ್ರಾಣಿಗಳ ಅತ್ಯುತ್ತಮ ಜಾತಿಗಳನ್ನು ಬೆಳೆಸುತ್ತಿದೆ.

ಅಪರೂಪದ ಸಸ್ಯ ವರ್ಗ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಇಲ್ಲಿ ಕಾಣಬಹುದು ಮತ್ತು ನೀವು ಇಲ್ಲಿ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು ಅಲ್ಲದೆ ಹಕ್ಕಿಗಳಾದ , ಬೂದು ವಾಗ್ಟೇಲ್ ಮತ್ತು ಮಚ್ಚೆಯುಳ್ಳ ಪಾರಿವಾಳಗಳಿಂದ ಹಿಡಿದು ನೀಲಗಿರಿ ತಹರ್ ಮತ್ತು ಸಾಮಾನ್ಯ ಐಯೋರಾ ಮುಂತಾದ ಪ್ರಾಣಿಗಳನ್ನೂ ಇಲ್ಲಿ ಕಾಣಬಹುದು.ಈ ವರ್ಣರಂಜಿತ ವನ್ಯಜೀವಿಗಳ ಆಶ್ಚರ್ಯ ಮತ್ತು ಜೀವನಶೈಲಿಯಿಂದ ತುಂಬಿದ ಸ್ಥಳಕ್ಕೆ ಬಗ್ಗೆ ಭೇಟಿ ಮಾಡುವುದು ಹೇಗಿರಬಹುದು?

PC- Srikaanth Sekar

2) ಮೇಘಮಲೈ ಜಲಪಾತ

2) ಮೇಘಮಲೈ ಜಲಪಾತ

ಮೇಘಮಲೈ ಪರ್ವತ ಶ್ರೇಣಿಗಳಿಂದ ಪ್ರಾರಂಭವಾಗುವ ಈ ಜಲಪಾತವು ತಂಪಾದ ಮತ್ತು ಹಳೇಯ ಜಲಪಾತವು ವರ್ಷದುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖವಾದ ಪ್ರವಾಸಿ ತಾಣವೆನಿಸಿದೆ. ಈ ಜಲಪಾತದ ಅದ್ಬುತ ಸೌಂದರ್ಯವನ್ನು ನೋಡಲು ಹೆಚ್ಚಾಗಿ ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಭೇಟಿಕೊಡುವುದು ಸೂಕ್ತ. ಕೆಲವು ಸಮಯದಲ್ಲಿ ಇಲ್ಲಿ ಜನರು ತಮ್ಮ ಇಡೀದಿನವನ್ನು ಇದರ ಆಕರ್ಷಕ ಸುತ್ತಮುತ್ತಲಿನಲ್ಲಿ ಕಳೆಯುವುದು ಕಂಡುಬರುತ್ತದೆ. ಹಸಿರು ಕಾಡುಗಳ ಮಧ್ಯೆ ಸ್ನಾನ ಮಾಡಲು ನೀವು ಬಯಸಿದರೆ, ಮೇಘಮಲೈ ಫಾಲ್ಸ್ ನಿಮ್ಮನ್ನು ಕರೆಯುತ್ತದೆ.


PC- McKay Savage

3) ಮನಲಾರು ಅಣೆಕಟ್ಟು

3) ಮನಲಾರು ಅಣೆಕಟ್ಟು

ಪರ್ವತದ ಅಣೆಕಟ್ಟಿನ ಸ್ವಚ್ಚವಾದ ನೀರಿನಲ್ಲಿ ಎಂದಾದರೂ ವಿಶ್ರಾಂತಿ ಪಡೆದಿರುವಿರ? ಇಲ್ಲವಾದಲ್ಲಿ ನಿಮಗಿಲ್ಲಿ ಒಂದು ಆ ಅವಕಾಶವಿದೆ. ಮನಲೂರು ಅಣೆಕಟ್ಟು ನಿರ್ಮಿಸಿದಂದಿನಿಂದಲೂ ಹತ್ತಿರದ ಪಟ್ಟಣಗಳು ​​ಮತ್ತು ಹಳ್ಳಿಗಳ ನೀರಿನ ಅಗತ್ಯತೆಗಳನ್ನು ಪೂರೈಸುತ್ತಿದೆ.

ಈ ನೈಸರ್ಗಿಕ ಅಣೆಕಟ್ಟಿಗೆ ಭೇಟಿ ನೀಡುವ ಪ್ರಮುಖ ಕಾರಣವೆಂದರೆ ಮಂಜುಗಡ್ಡೆಯ ಪರ್ವತಗಳು ಮತ್ತು ಪ್ರತಿಧ್ವನಿಸುವ ಕಣಿವೆಗಳ ಮಧ್ಯೆ ಇರುವ ಅಪ್ರತಿಮ ಸೌಂದರ್ಯತೆ. ನೀವು ಖಚಿತವಾಗಿಯೂ ಈ ಸೌಂದರ್ಯತೆಯ ಮಧ್ಯೆಯಲ್ಲಿ ನಿಮ್ಮನ್ನು ನೀವು ಕಳೆದುಕೊಳ್ಳುವಿರಿ.

PC- mprabaharan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ